ಆಸ್ತಿ ಖರೀದಿ ಹಾಗೂ ನೋಂದಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು! ಯಾಕೆ ಗೊತ್ತಾ?

ರೈತರು ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳುವುದಕ್ಕಾಗಿ ಆರ್ಟಿಸಿ ಜೊತೆಗೆ ಆಧಾರ್ ಲಿಂಕ್ (Aadhaar link with RTC) ಮಾಡಿ ಕೊಳ್ಳುವುದು ಉಚಿತ ಎಂದು ಸರ್ಕಾರ ತಿಳಿಸಿದೆ.

Bengaluru, Karnataka, India
Edited By: Satish Raj Goravigere

ನೀವು ಸ್ವಂತ ಆಸ್ತಿ (own property) ಯಾಗಿ ಜಮೀನು ಮನೆ ಅಥವಾ ಇತರ ಯಾವುದೇ ಆಸ್ತಿ ಖರೀದಿ ಮಾಡಲು ಬಯಸಿದ್ದೀರಾ? ಹಾಗಾದ್ರೆ ನೀವು ನೋಂದಣಿ ಸಂದರ್ಭದಲ್ಲಿ ಇದೊಂದು ಕೆಲಸ ಮಾಡಲೇಬೇಕು. ಒಂದು ವೇಳೆ ಈ ಕೆಲಸ ಮಾಡದೆ ಇದ್ದಲ್ಲಿ ನೀವು ನಿಮ್ಮ ಜಮೀನಿಗೆ ಸಂಬಂಧಪಟ್ಟ ಹಾಗೆ ಸಮಸ್ಯೆಯನ್ನು ಅನುಭವಿಸಬೇಕಾಗಬಹುದು.

ಹೌದು, ಇದು ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ವಂಚನೆ ಎನ್ನುವುದು ಹೆಚ್ಚಾಗುತ್ತಿದೆ. ನಾವು ಎಷ್ಟೇ ಮುತುವರ್ಜಿಯಿಂದ ಇದ್ದರೂ ಕೂಡ ವಂಚಕರು ಮಾತ್ರ ಹೊಂಚು ಹಾಕಿ ಕುಳಿತು ನಮ್ಮ ಬೆನ್ನ ಹಿಂದೆಯೇ ಇಲ್ಲದ ಆಟ ನಡೆಸಿ ಬಿಡುತ್ತಾರೆ.

Aadhaar card should be linked for property purchase and registration, Do you know why

ರೈತರಿಗಾಗಿ ಕಮ್ಮಿ ಬೆಲೆಗೆ ಟ್ರ್ಯಾಕ್ಟರ್ ಬಿಡುಗಡೆ! ಆಕರ್ಷಕ ಫೀಚರ್, ಉತ್ತಮ ಮೈಲೇಜ್

ನಮಗೆ ಗೊತ್ತೇ ಆಗದೆ ಇರುವ ರೀತಿಯಲ್ಲಿ ನಮ್ಮ ಆಸ್ತಿಯನ್ನು ಕಬಳಿಸಿದರೆ ಆಶ್ಚರ್ಯವೇನು ಇಲ್ಲ. ಹಾಗಾಗಿ ವಂಚಿಸುವವರಿಂದ ಆದಷ್ಟು ದೂರ ಇರಲು ಸರ್ಕಾರವೂ ಕೂಡ ಜನರಿಗೆ ಎಚ್ಚರಿಕೆಯನ್ನು ಕೊಡುತ್ತದೆ.

ಸ್ವಂತ ಆಸ್ತಿ ಹೊಂದಿರುವವರು ಈ ಕೆಲಸ ಮಾಡುವುದು ಕಡ್ಡಾಯ!

ಸರ್ಕಾರ ಇದೀಗ ಹೊಸದೊಂದು ನಿಯಮವನ್ನು ಮಾಡಿದ್ದು ಹಳ್ಳಿಗಳಲ್ಲಿ ವಾಸವಾಗಿರುವ ರೈತರಿಗೂ (farmers) ಕೂಡ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಅದೇನೆಂದರೆ ನೀವು ನಿಮ್ಮ ಸ್ವಂತ ಜಮೀನು, ಮನೆ ಅಥವಾ ಇತರ ಯಾವುದೇ ಆಸ್ತಿ ಹೊಂದಿದ್ದರೂ ಕೂಡ ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ (Aadhaar Card link) ಆಗಿರಬೇಕು ಎಂದು ಸರ್ಕಾರ ತಿಳಿಸಿದೆ.

ನಮ್ಮ ರಾಜ್ಯದಲ್ಲಿ 70ರಷ್ಟು ಸಣ್ಣ ರೈತರ ಸಂಖ್ಯೆ ಇದೆ. ಆದರೆ ಕೇಂದ್ರದ ಅಂಕಿ ಅಂಶಗಳಲ್ಲಿ ಈ ಸಂಖ್ಯೆ ಕೇವಲ 44% ನಷ್ಟು ಮಾತ್ರ. ಇದಕ್ಕೆ ಮುಖ್ಯವಾಗಿರುವ ಕಾರಣ ರೈತರು ತಮ್ಮ ಭೂ ದಾಖಲೆಗಳನ್ನು ಆಧಾರ್ ಜೊತೆಗೆ ಲಿಂಕ್ ಮಾಡಿಕೊಳ್ಳದೆ ಇರುವುದು.

ಇನ್ಮುಂದೆ ಮನೆಯಲ್ಲೇ ಕುಳಿತು ಆಸ್ತಿ, ಜಮೀನು ನೋಂದಣಿ ಮಾಡಿಕೊಳ್ಳಿ! ಇಲ್ಲಿದೆ ಮಾಹಿತಿ

Link Aadhaar card with property documentsಇದರಿಂದಾಗಿ ಇಂತಹ ರೈತರು ಸಾಕಷ್ಟು ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರೈತರು ಈ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳುವುದಕ್ಕಾಗಿ ಆರ್ಟಿಸಿ ಜೊತೆಗೆ ಆಧಾರ್ ಲಿಂಕ್ (Aadhaar link with RTC) ಮಾಡಿ ಕೊಳ್ಳುವುದು ಉಚಿತ ಎಂದು ಸರ್ಕಾರ ತಿಳಿಸಿದೆ.

ಕೇವಲ 22,000ಕ್ಕೆ ಹೀರೋ ಡಿಲಕ್ಸ್ ಬೈಕ್ ಖರೀದಿಸಿ! 65km ಮೈಲೇಜ್, ಸಿಂಗಲ್ ಓನರ್

ಆರ್ ಟಿ ಸಿ ಜೊತೆಗೆ ಆಧಾರ್ ಲಿಂಕ್ ಮಾಡಿಸಿ!

ಸ್ವಂತ ಜಮೀನು ಆಸ್ತಿ ಹೊಂದಿರುವ ರೈತರು ಆದಷ್ಟು ಬೇಗ ತಮ್ಮ ಆರ್ ಟಿ ಸಿ ಜೊತೆಗೆ ಆಧಾರ್ ಲಿಂಕ್ ಮಾಡಿಸಿಕೊಡಲು ಸರ್ಕಾರ ಆದೇಶ ನೀಡಿದೆ. ಇನ್ನೂ ರೈತರು ತಮ್ಮ ಜಮೀನಿನ ವಿವರಗಳನ್ನು ಹಾಗೂ ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು https://landrecords.karnataka.gov.in/service4 ಸರ್ಕಾರದ ಈ ಅಧಿಕೃತ ವೆಬ್ಸೈಟ್ ನಲ್ಲಿ ನಮೂದಿಸುವ ಮೂಲಕ ಲಿಂಕ್ ಮಾಡಿಕೊಳ್ಳಬಹುದು.

ಈ ಹಳೆಯ 100 ರೂಪಾಯಿ ನೋಟು ನಿಮ್ಮತ್ರ ಇದ್ರೆ ಸಿಗುತ್ತೆ 40 ಲಕ್ಷ ರೂಪಾಯಿ!

ಯಾವುದೇ ಸರ್ಕಾರಿ ಕಚೇರಿಗೂ ಅಲೆಯದೆ ಮನೆಯಲ್ಲಿಯೇ ಆನ್ಲೈನ್ ಮೂಲಕ ರೈತರು ತಮ್ಮ ಜಮೀನಿನ ಪಹಣಿ ಮತ್ತು ಆಧಾರ್ ಲಿಂಕ್ ಮಾಡಿಸಿಕೊಳ್ಳಬಹುದು ರೈತರು ಮಾತ್ರವಲ್ಲದೆ ಸ್ವಂತ ಆಸ್ತಿ ಹೊಂದಿರುವ ಪ್ರತಿಯೊಬ್ಬರು ಕೂಡ ಆಧಾರ್ ಲಿಂಕ್ ಮಾಡಿಸಿಕೊಂಡರೆ ಹೆಚ್ಚು ಒಳ್ಳೆಯದು.

Aadhaar card should be linked for property purchase and registration, Do you know why