ಇನ್ಮುಂದೆ ಮನೆಯಲ್ಲೇ ಕುಳಿತು ಆಸ್ತಿ, ಜಮೀನು ನೋಂದಣಿ ಮಾಡಿಕೊಳ್ಳಿ! ಇಲ್ಲಿದೆ ಮಾಹಿತಿ
ರಾಜ್ಯ ಕಂದಾಯ ಇಲಾಖೆಗೆ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ತನ್ನ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಜೊತೆಗೆ ಹೊಸ ಹೊಸ ನಿಯಮಗಳನ್ನು ಕೂಡ ಜಾರಿಗೆ ತಂದಿದ್ದು, ಇದರಿಂದ ಜನರಿಗೆ ಒಂದಷ್ಟು ಅನುಕೂಲವೂ ಆಗಿದೆ ಎನ್ನಬಹುದು.
ಇತ್ತೀಚಿಗೆ ಬಹು ನಿರೀಕ್ಷಿತ ಕರ್ನಾಟಕ ತಿದ್ದುಪಡಿ ವಿಧೇಯಕ 2024 ಕ್ಕೆ ಅಂಗೀಕಾರ ಸಿಕ್ಕಿದೆ. ಈ ವಿದೇಯಕದಲ್ಲಿ ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಹೊಸ ವಿಚಾರಗಳನ್ನು ಸೇರಿಸಲಾಗಿದೆ.

ಇದೊಂದು ಕಾರ್ಡ್ ಇದ್ರೆ ಸಾಕು ಸರ್ಕಾರದಿಂದಲೇ ಸಿಗುತ್ತೆ ಎರಡು ಲಕ್ಷ ರೂಪಾಯಿ!
ಜನರು ಆಸ್ತಿ ನೋಂದಣಿಗಾಗಿ ಕಷ್ಟ ಪಡಬೇಕಿಲ್ಲ!
ವರ್ಷದ ಹೊಸ ವಿಧೇಯಕದ ಬಗ್ಗೆ ಮಾಹಿತಿ ನೀಡಿದ ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ, (revenue minister Krishna bairagowda) ಎಲ್ಲಾ ಕೆಲಸಗಳಲ್ಲಿಯೂ ಕೂಡ ಹೆಚ್ಚಿನ ಪಾರದರ್ಶಕತೆ (transparency);ತರಲು ಹಾಗೂ ಗ್ರಾಹಕರು ಸರ್ಕಾರಿ ಕಚೇರಿಗೆ ಹೋಗಿ ಅಲ್ಲಿ ಗೊಂದಲಗಳು ಸೃಷ್ಟಿ ಆಗುವ ಬದಲು ಮನೆಯಲ್ಲಿಯೇ ಕುಳಿತು ಆಸ್ತಿ ನೋಂದಣಿ (property registration) ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಾರೆ.
ನಾಗರಿಕ ಸೇವೆಯನ್ನು ಇನ್ನಷ್ಟು ಸರಳಗೊಳಿಸುವುದು, ಜನಸ್ನೇಹಿಯಾಗಿಸುವುದು ಹೊಸ ವಿಧೇಯಕದಲ್ಲಿ ತಿಳಿಸಲಾಗಿದೆ. ಹೊಸ ವಿಧೇಯಕದ ಪ್ರಕಾರ ಆಸ್ತಿ ನೋಂದಣಿ ವಿಚಾರದಲ್ಲಿ ಜನರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಾಗುವುದು. ಸಾಮಾನ್ಯವಾಗಿ ಆಸ್ತಿ ನೋಂದಣಿ ಮಾಡಿಸಿಕೊಳ್ಳಲು ಉಪ ನೋಂದಾವನಾಧಿಕಾರಿ ಕಚೇರಿಗೆ ಜನ ಹೋಗಬೇಕು. ಇನ್ನು ಈ ಕಚೇರಿಯಲ್ಲಿ ಜನರ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಸರ್ಕಾರ ಹೊಸ ನಿಯಮವನ್ನು ವಿಧೇಯಕದಲ್ಲಿ ತಿಳಿಸಿದೆ.
ಇನ್ನು ಮುಂದೆ ಆಸ್ತಿ ಮಾರಾಟಗಾರರು ಮತ್ತು ಆಸ್ತಿ ಖರೀದಿ ಮಾಡುವವರು ಒಟ್ಟಿಗೆ ಕುಳಿತು ತಂತ್ರಾಂಶಗಳ ಮೂಲಕ ಆನ್ಲೈನ್ ನಲ್ಲಿಯೇ ನೋಂದಣಿ ಪ್ರಕ್ರಿಯೆ ಮಾಡಿಕೊಳ್ಳಬಹುದು.
ಹೊಸ ಮನೆ ಕಟ್ಟಿಸುವಾಗ ಯಾವೆಲ್ಲಾ ಪರ್ಮಿಷನ್ ಬೇಕು ಗೊತ್ತಾ? ಇಲ್ಲಿದೆ ಮಾಹಿತಿ
ಈ ಹಿಂದೆ ಆಸ್ತಿ ನೋಂದಣಿಗಾಗಿ ಆಸ್ತಿ ಮಾರಾಟ ಮಾಡುವವರು ಆಸ್ತಿ ಖರೀದಿ ಮಾಡುವವರು ಹಾಗೂ ಇದಕ್ಕೆ ಬೇಕಾದ ಸಾಕ್ಷ ಒದಗಿಸುವವರನ್ನು ಕರೆದುಕೊಂಡು ಉಪ ನೋಂದಾವಣೆ ಅಧಿಕಾರಿ ಕಚೇರಿಗೆ ಜನರು ಅಲೆದಾಡಬೇಕಿತ್ತು. ಇದರಿಂದ ಹೆಚ್ಚು ಸಮಯ ವ್ಯರ್ಥವಾಗುತ್ತಿತ್ತು. ಜೊತೆಗೆ ಜನರು ಹಣವನ್ನು ಕೂಡ ಹೆಚ್ಚು ಕಳೆದುಕೊಳ್ಳಬೇಕಿತ್ತು.
ಅಷ್ಟೇ ಅಲ್ಲದೆ ಸರ್ಕಾರಿ ಕಚೇರಿಯಲ್ಲಿ ಜನರ ದಟ್ಟಣೆಯಿಂದಾಗಿ ಪಾರದರ್ಶಕ ಕೆಲಸ ನಡೆಸಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಆನ್ಲೈನ್ ಆಸ್ತಿ ರಿಜಿಸ್ಟ್ರೇಷನ್ ನಿಯಮವನ್ನು ಜಾರಿಗೆ ತಂದಿರುವುದಾಗಿ ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ಕೇವಲ 22,000ಕ್ಕೆ ಹೀರೋ ಡಿಲಕ್ಸ್ ಬೈಕ್ ಖರೀದಿಸಿ! 65km ಮೈಲೇಜ್, ಸಿಂಗಲ್ ಓನರ್
ಪೇಪರ್ ಖಾತ ನೋಂದಣಿ ರದ್ದು!
ವಿಧೇಯಕದಲ್ಲಿ ತಿಳಿಸಿರುವ ಇನ್ನೊಂದು ನಿಯಮ ಎಂದರೆ ಇನ್ನು ಪೇಪರ್ ಖಾತ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಇಲ್ಲ. ಇನ್ನು ಮುಂದೆ ಇ- ಆಸ್ತಿ ಆಗಿದ್ದರೆ ಮಾತ್ರ ನೋಂದಣಿಗೆ ಅವಕಾಶ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇದಕ್ಕಾಗಿ ಹೌಸಿಂಗ್ ಬೋರ್ಡ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕಾವೇರಿ ಡೇಟಾಬೇಸ್ ನಿಂದ ಅಸಲಿ ಖಾತಾ ಪರಿಶೀಲನೆ ನಡೆಸಿ ನಂತರ ನೋಂದಾವಣೆ ಮಾಡಿಕೊಳ್ಳಲು ಪರವಾನಿಗೆ ನೀಡಲಾಗುವುದು. ಈ ರೀತಿ ಆಸ್ತಿ ನೋಂದಣಿ (Property Registration) ವಿಚಾರದಲ್ಲಿ ಇನ್ನು ಮುಂದೆ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಸರ್ಕಾರ ಈ ಹೊಸ ವಿಧೇಯಕ ಜಾರಿಗೆ ತಂದಿದೆ ಎನ್ನಬಹುದು.
ಈ ಹಳೆಯ 100 ರೂಪಾಯಿ ನೋಟು ನಿಮ್ಮತ್ರ ಇದ್ರೆ ಸಿಗುತ್ತೆ 40 ಲಕ್ಷ ರೂಪಾಯಿ!
register property and land in Online, Here is the information