ಇದೊಂದು ಕಾರ್ಡ್ ಇದ್ರೆ ಸಾಕು ಸರ್ಕಾರದಿಂದಲೇ ಸಿಗುತ್ತೆ ಎರಡು ಲಕ್ಷ ರೂಪಾಯಿ!

ಅಸಂಘಟಿತ ವಲಯ (non organised sector) ದಲ್ಲಿ ದುಡಿಯುವ ಕಾರ್ಮಿಕರಿಗಾಗಿ ಜಾರಿಗೆ ತಂದಿರುವ ಇ - ಶ್ರಮ ಕಾರ್ಡ್ (E -shram card) ಯೋಜನೆ

- - - - - - - - - - - - - Story - - - - - - - - - - - - -

ಸಮಾಜದಲ್ಲಿ ಹಣ ಇರುವವರು ಹೇಗಾದರೂ ಜೀವನ ನಡೆಸಬಹುದು. ಆದರೆ ಹಣ ಇಲ್ಲದೆ ಕಷ್ಟಪಟ್ಟು ದುಡಿಯುವ ಜನರು ಅಥವಾ ದಿನಗೂಲಿ ಮಾಡುವವರು, ಅಸಂಘಟಿತ ವಲಯದಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವವರು ಸರ್ಕಾರದ ಯೋಜನೆಗಳಿಂದ ಅಷ್ಟೇ ತಮ್ಮ ಆರ್ಥಿಕ ಜೀವನವನ್ನು ಸುಲಭವಾಗಿಸಿಕೊಳ್ಳಲು ಸಾಧ್ಯವಿದೆ.

ಇದಕ್ಕಾಗಿಯೇ ಸರ್ಕಾರ ಇಂಥವರಿಗಾಗಿ ಸಾಕಷ್ಟು ಉತ್ತಮ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಅಸಂಘಟಿತ ವಲಯ (non organised sector) ದಲ್ಲಿ ದುಡಿಯುವ ಕಾರ್ಮಿಕರಿಗಾಗಿ ಜಾರಿಗೆ ತಂದಿರುವ ಇ – ಶ್ರಮ ಕಾರ್ಡ್ (E -shram card) ಯೋಜನೆ ಒಂದು.

ಹೊಸ ಮನೆ ಕಟ್ಟಿಸುವಾಗ ಯಾವೆಲ್ಲಾ ಪರ್ಮಿಷನ್ ಬೇಕು ಗೊತ್ತಾ? ಇಲ್ಲಿದೆ ಮಾಹಿತಿ

If you have this card, you will get two lakh rupees from the government

ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಇ – ಶ್ರಮ ಕಾರ್ಡ್!

2020ರಲ್ಲಿ Covid – 19 ಎನ್ನುವ ಮಹಾಮಾರಿ ಇಡೀ ಪ್ರಪಂಚವನ್ನೇ ಆವರಿಸಿತ್ತು. ಇಂತಹ ಸಂದರ್ಭದಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವವರು, ಕಟ್ಟಡ ಕೆಲಸ ನಿರ್ಮಾಣದಲ್ಲಿ ತೊಡಗಿಕೊಂಡಿರುವವರು ಸಾಕಷ್ಟು ಆರ್ಥಿಕ ಸಮಸ್ಯೆಯನ್ನು ಅನುಭವಿಸಬೇಕಾಯಿತು.

ಇದೇ ಕಾರಣಕ್ಕೆ 2020ರಲ್ಲಿ ಕೇಂದ್ರ ಮೋದಿಜಿ ಸರ್ಕಾರ ಇ – ಶ್ರಮ ಕಾರ್ಡ್ ಯೋಜನೆಯನ್ನು ಪರಿಚಯಿಸಿತು. ಈ ಯೋಜನೆಯ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ಕಟ್ಟಡ ಕಾರ್ಮಿಕ ವರ್ಗದವರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡಲಾಗುತ್ತದೆ.

ಕೇವಲ 22,000ಕ್ಕೆ ಹೀರೋ ಡಿಲಕ್ಸ್ ಬೈಕ್ ಖರೀದಿಸಿ! 65km ಮೈಲೇಜ್, ಸಿಂಗಲ್ ಓನರ್

ಇ – ಶ್ರಮ ಕಾರ್ಡ್ ಯೋಜನೆಯ ಪ್ರಯೋಜನಗಳು! (Benefits of E- shram card)

ಈ ಯೋಜನೆಯ ಅಡಿಯಲ್ಲಿ ಕಾರ್ಮಿಕ ಸಮುದಾಯದವರು ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಮರಣದ ಸಮಯದಲ್ಲಿ ಅಂತ್ಯಸಂಸ್ಕಾರದ ಖರ್ಚು ವೆಚ್ಚಗಳನ್ನು ಕೂಡ ನಿಭಾಯಿಸಿಕೊಳ್ಳಲು ಸರ್ಕಾರ ಸಹಾಯಧನ ನೀಡುತ್ತದೆ. ಇನ್ನು ಅಪಘಾತ ವಿಮೆಯನ್ನು ಕೂಡ ಉಚಿತವಾಗಿ ಸರ್ಕಾರ ನೀಡುತ್ತಿದ್ದು ಈ ಯೋಜನೆಯಲ್ಲಿ ನೋಂದಾಯಿಸಿಕೊಂಡರೆ ವ್ಯಕ್ತಿ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದರೆ ಮನೆಯವರು ಎರಡು ಲಕ್ಷ ರೂಪಾಯಿಗಳ ವಿಮೆ ಪಡೆಯಬಹುದು. ಇನ್ನು ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯ ಉಂಟಾದರೆ, 1 ಲಕ್ಷ ರೂಪಾಯಿಗಳ ವಿಮಾ ಹಣ ಪಡೆಯಬಹುದು.

ಈ ಹಳೆಯ 100 ರೂಪಾಯಿ ನೋಟು ನಿಮ್ಮತ್ರ ಇದ್ರೆ ಸಿಗುತ್ತೆ 40 ಲಕ್ಷ ರೂಪಾಯಿ!

e-shram Cardಯಾರು ಇ – ಶ್ರಮ ಕಾರ್ಡ್ ಪಡೆದುಕೊಳ್ಳಬಹುದು?

ಯಾವುದೇ ಸಣ್ಣ ಪುಟ್ಟ ಅಂಗಡಿಗಳಲ್ಲಿ ಕೆಲಸ ಮಾಡುವವರು, ಸ್ವಿಗ್ಗಿ ಝೋಮ್ಯಾಟೋ ಮೊದಲಾದ ಕಂಪನಿಗಳಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವವರು, ಆಟೋ ಚಾಲಕರು, ಅಸಂಘಟಿತ ವಲಯದ ಕಾರ್ಮಿಕರು ಮೊದಲಾದವರು ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಬಹುದಾಗಿದೆ.

18ರಿಂದ 59 ವರ್ಷ ವಯಸ್ಸಿನ ಒಳಗಿನವರು ಇ – ಶ್ರಮ ಕಾರ್ಡ್ ಪಡೆದುಕೊಳ್ಳಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ವ್ಯಕ್ತಿಯ ಆಧಾರ್ ಸಂಖ್ಯೆ, ಮೊಬೈಲ್ ನಂಬರ್, ಪಾನ್ನ್ ಸಂಖ್ಯೆ ಹಾಗೂ ಬ್ಯಾಂಕ್ ಡೀಟೇಲ್ಸ್ ಇವು ನೋಂದಣಿ ಸಮಯದಲ್ಲಿ ಸಲ್ಲಿಸಬೇಕಾಗಿರುವ ದಾಖಲೆಗಳು.

ಇಂತಹ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಸಿಗಲಿದೆ 25,000 ಸ್ಕಾಲರ್ಶಿಪ್; ಅರ್ಜಿ ಸಲ್ಲಿಸಿ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ!

https://eshram.gov.in/ ಇದು ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿದ್ದು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ರಿಜಿಸ್ಟರ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಸರಿಯಾದ ಮಾಹಿತಿಯನ್ನು ನೀಡಿದ ನಂತರ ನಿಮ್ಮ ಮೊಬೈಲ್ ಗೆ ಒಂದು ಒಟಿಪಿ ಕಳುಹಿಸಲಾಗುತ್ತದೆ. ಅದನ್ನು ನಮೂದಿಸಿ. ಈಗ ಅಗತ್ಯ ಇರುವ ದಾಖಲೆಗಳ ಸ್ಕ್ಯಾನ್ ಕಾಪಿ ಸಬ್ಮಿಟ್ ಮಾಡಿದ್ರೆ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ.

ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ 9250 ರೂಪಾಯಿ

If you have this card, you will get two lakh rupees from the government

Related Stories