ಸುಮಾರು 5.18 ಲಕ್ಷ ರೇಶನ್ ಕಾರ್ಡ್ ಗಳಿಗೆ ಸಿಗೋದಿಲ್ಲ ಅನ್ನಭಾಗ್ಯ ಸೌಲಭ್ಯ! ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ಯಾ?
ಸರ್ಕಾರದ ಸೌಲಭ್ಯವನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದ ನಂತರ ಸರ್ಕಾರ ಇಂಥವರನ್ನು ಪತ್ತೆ ಹಚ್ಚಿ, ಹೀಗೆ ಸುಳ್ಳು ದಾಖಲೆ ಇಂದ ಸರ್ಕಾರದ ಫಲ ಪಡೆಯುತ್ತಿದ್ದ ಸುಮಾರು 5.18 ಲಕ್ಷ ರೇಶನ್ ಕಾರ್ಡ್ ಗಳನ್ನು ಕ್ಯಾನ್ಸಲ್ (Ration Card Cancel) ಮಾಡಲಾಗಿದೆ.
ಈಗ ನಮ್ಮ ರಾಜ್ಯದ ಜನರು ರಾಜ್ಯ ಸರ್ಕಾರದ ಗ್ಯಾರಂಟಿ ಸೌಲಭ್ಯಗಳನ್ನು ಪಡೆಯಬೇಕು ಎಂದರೆ, ಅವರ ಬಳಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಇರುವುದು ಕಡ್ಡಾಯ ಆಗಿದೆ. ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಎಲ್ಲಾ ಥರದ ಸೌಲಭ್ಯಗಳು ಸಿಗುತ್ತದೆ.
ಆದರೆ ಸರ್ಕಾರದ ಸೌಲಭ್ಯ ಪಡೆಯುವ ಸಲುವಾಗಿ ಕೆಲವು ಜನರು ತಪ್ಪು ಮಾಹಿತಿಗಳನ್ನು ನೀಡಿ, ರೇಷನ್ ಕಾರ್ಡ್ ಇಂದ ಸರ್ಕಾರದ ಸೌಲಭ್ಯವನ್ನು (Govt Scheme) ಪಡೆಯುತ್ತಿದ್ದಾರೆ.
ಹಲವು ಜನರು ತಮ್ಮ ಮನೆಯ ಸದಸ್ಯರು ಮರಣ ಹೊಂದಿದ್ದರು ಕೂಡ, ಅವರ ಹೆಸರುಗಳನ್ನು ರೇಶನ್ ಕಾರ್ಡ್ ಇಂದ ಡಿಲೀಟ್ ಮಾಡಿಸದೆ, ಅನ್ನಭಾಗ್ಯ ಯೋಜನೆಯಿಂದ ಅಕ್ಕಿ ಜೊತೆಗೆ ಡಿಬಿಟಿ ಇಂದ 5 ಕೆಜಿಯ ಹಣ (Money to Bank Account) ಪಡೆಯುತ್ತಿದ್ದರು.
ಸರ್ಕಾರದ ಸೌಲಭ್ಯವನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದ ನಂತರ ಸರ್ಕಾರ ಇಂಥವರನ್ನು ಪತ್ತೆ ಹಚ್ಚಿ, ಹೀಗೆ ಸುಳ್ಳು ದಾಖಲೆ ಇಂದ ಸರ್ಕಾರದ ಫಲ ಪಡೆಯುತ್ತಿದ್ದ ಸುಮಾರು 5.18 ಲಕ್ಷ ರೇಶನ್ ಕಾರ್ಡ್ ಗಳನ್ನು ಕ್ಯಾನ್ಸಲ್ (Ration Card Cancel) ಮಾಡಲಾಗಿದೆ. ಈ ರೀತಿಯಲ್ಲಿ ಸರ್ಕಾರಕ್ಕೆ ಆಗುತ್ತಿದ್ದ ನಷ್ಟವನ್ನು ತಡೆಯಲಾಗಿದೆ.
ಹೊಸ ರೇಷನ್ ಕಾರ್ಡ್ ಗೆ ಶೀಘ್ರದಲ್ಲೇ ಅರ್ಜಿಗಳ ಆಹ್ವಾನ! ಸರ್ಕಾರದಿಂದ ಅಧಿಕೃತ ಘೋಷಣೆ
ರೇಷನ್ ಕಾರ್ಡ್ ನಲ್ಲಿ ಹೆಸರು ಇರುವ, ಜೀವಂತವಾಗಿರುವ ವ್ಯಕ್ತಿಗಳಿಗೆ ಅನ್ನಭಾಗ್ಯ ಯೋಜನೆಯ (Annabhagya Yojana) ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ. ಆದರೆ ಸತ್ತು ಹೋದವರ ಹೆಸರನ್ನು ರೇಷನ್ ಕಾರ್ಡ್ ನಲ್ಲಿಯೇ ಬಿಟ್ಟು, ಅವರ ಹೆಸರಿನಲ್ಲಿ ಅನ್ನಭಾಗ್ಯ ಯೋಜನೆಯ ಸೌಲಭ್ಯ ಪಡೆಯುವ ಮೂಲಕ, ಸರ್ಕಾರಕ್ಕೆ ಮೋಸ ಮಾಡಿ, ನಷ್ಟ ಆಗುವ ಹಾಗೆ ಮಾಡುತ್ತಿದ್ದಾರೆ ಎಂದು ದೂರುಗಳು ಬಂದಿದ್ದವು.
ಹಾಗಾಗಿ ಸರ್ಕಾರವು ಜುಲೈ ಇಂದ ಆಗಸ್ಟ್ ವರೆಗು ಈ ಬಗ್ಗೆ ತನಿಖೆ ನಡೆಸಿ, ಅಂಥವರ ಹೆಸರನ್ನು ರೇಷನ್ ಕಾರ್ಡ್ ಇಂದ ಡಿಲೀಟ್ ಮಾಡಿದೆ.
ಜನರಿಗೆ ಅದಾಗಲೇ ಸರ್ಕಾರ ಈ ವಿಚಾರದ ಬಗ್ಗೆ ಮಾಹಿತಿ ನೀಡಿತ್ತು. ರೇಷನ್ ಕಾರ್ಡ್ ಇಂದ ಮರಣ ಹೊಂದಿದವರ ಹೆಸರನ್ನು ತೆಗೆದು ಹಾಕಬೇಕು ಎಂದು ತಿಳಿಸಿತ್ತು. ಆದರೆ ಹಲವು ಜನರು ಸರ್ಕಾರದ ಮಾತಿಗೆ ತಲೆಕೆಡಿಸಿಕೊಳ್ಳದೆ ಅವರ ಹೆಸರಲ್ಲು ಸೌಲಭ್ಯ ಪಡೆಯುತ್ತಿದ್ದರು.
ಈ ಮೋಸದ ಪ್ರಕರಣಗಳ ಬಗ್ಗೆ ಸರ್ಕಾರಕ್ಕೆ ಗೊತ್ತಾಗಿ, ದೂರು ಹೋಗಿದೆ. ಹಾಗಾಗಿ ಸರ್ಕಾರವು ಈ ವಿಚಾರದ ಬಗ್ಗೆ ಕ್ರಮ ತೆಗೆದುಕೊಂಡು ಜನನ ಮರಣ ನೋಂದಣಿ ಇಲಾಖೆಯ ಸಹಾಯ ಪಡೆದು, ಇ-ವಿಭಾಗದಿಂದ ಆಧಾರ್ ಕಾರ್ಡ್ ನ ಮಾಹಿತಿ ಕೂಡ ಪಡೆದು, ಸತ್ತಿರುವವರ ಹೆಸರನ್ನು ಡಿಲೀಟ್ ಮಾಡಿದೆ ಎಂದು ಅಧಿಕಾರಿಗಳಿಂದ ತಿಳಿದುಬಂದಿದೆ.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಸಿಹಿ ಸುದ್ದಿ! ಸಿಗಲಿದೆ ಇನ್ನಷ್ಟು ಬೆನಿಫಿಟ್
ಜನರು ಮಾಡಿದ ಈ ಕೆಲಸದಿಂದ ಸರ್ಕಾರಕ್ಕೆ ಸುಮಾರು 8 ಕೋಟಿ ರೂಪಾಯಿ ನಷ್ಟ ಆಗುತ್ತಿತ್ತು ಎಂದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಾರ್ವಜನಿಕ ವಿತರಣೆ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರಕುಮಾರ್ ಗಂಗ್ವಾರ್ ಮಾಹಿತಿ ನೀಡಿದ್ದಾರೆ.
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಖುಷಿಯಲ್ಲಿ ಜನತೆ
ರೇಷನ್ ಕಾರ್ಡ್ ಇಂದ ಮರಣ ಹೊಂದಿರುವವರ ಹೆಸರನ್ನು ತೆಗೆಸುವ ಅವಕಾಶ ಇದ್ದಿದ್ದು ಜನರಿಗೆ ಮಾತ್ರ, ಪಡಿತರ ಅಂಗಡಿಯಲ್ಲಿ ಅವರೇ ಹೋಗಿ ಸತ್ತವರ ಡೆತ್ ಸರ್ಟಿಫಿಕೇಟ್ ಕೊಟ್ಟು ಹೆಸರನ್ನು ಡಿಲೀಟ್ ಮಾಡಿಸಬೇಕಿತ್ತು, ಆದರೆ ಎಲ್ಲರೂ ಈ ಕೆಲಸ ಮಾಡುತ್ತಿರಲಿಲ್ಲ.
ಇಲಾಖೆಗೆ ಹೆಸರನ್ನು ಡಿಲೀಟ್ ಮಾಡುವ ಅನುಮತಿ ಕೂಡ ಇಲ್ಲ. ಪ್ರಸ್ತುತ ಇರುವ 1.09 ಕೋಟಿ ಬಿಪಿಎಲ್ ಕಾರ್ಡ್ ಗಳಲ್ಲಿ 3.69 ಕೋಟಿ ಜನರು ಇದರ ಫಲ ಪಡೆಯುತ್ತಿದ್ದರು. ಈಗಾಗಲೇ 97.61 ಲಕ್ಷ ರೇಷನ್ ಕಾರ್ಡ್ ಗಳಿಗೆ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಆಗಿದೆ. ಒಟ್ಟು ಇದ್ದ 4.42ಕೋಟಿ ಬಿಪಿಎಲ್ ಕಾರ್ಡ್ ಫಲಾನುಭವಿಗಳಲ್ಲಿ 5.18 ಲಕ್ಷ ಜನರ ಹೆಸರನ್ನು ತೆಗೆದುಹಾಕಲಾಗಿದೆ.
ಬೆಳಗಾವಿಯಲ್ಲಿ 36,999 ಜನರ ಹೆಸರು ಡಿಲೀಟ್ ಆಗಿದೆ, ತುಮಕೂರಿನಲ್ಲಿ 30,384 ಜನರ ಹೆಸರು ಡಿಲೀಟ್ ಆಗಿದೆ,
ರಾಜ್ಯದ ಇಂತಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸಿಗಲಿದೆ 20,000 ಸ್ಕಾಲರ್ಶಿಪ್, ಇಂದೇ ಅರ್ಜಿ ಸಲ್ಲಿಸಿ
ಮೈಸೂರಿನಲ್ಲಿ 26,606 ಜನರ ಹೆಸರು, ಮಂಡ್ಯದಲ್ಲಿ 21,005 ಜನರ ಹೆಸರು, ಕೊಡಗಿನಲ್ಲಿ 3905 ಜನರ ಹೆಸರು, ಯಾದಗಿರಿಯಲ್ಲಿ 7951 ಜನರ ಹೆಸರು, ಉಡುಪಿಯಲ್ಲಿ 9639 ಜನರ ಹೆಸರು ಡಿಲೀಟ್ ಆಗಿದೆ.
About 5.18 lakh ration cards do not get Annabhagya Scheme facility
Follow us On
Google News |