ರಾಜ್ಯದ ಇಂತಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸಿಗಲಿದೆ 20,000 ಸ್ಕಾಲರ್ಶಿಪ್, ಇಂದೇ ಅರ್ಜಿ ಸಲ್ಲಿಸಿ
10ನೇ ತರಗತಿಯನ್ನು ಮೇಲಿನ ಪರ್ಸೆಂಟೇಜ್ ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 11 ಮತ್ತು 12ನೇ (PUC) ತರಗತಿಯನ್ನು ಓದಲು ಪ್ರತಿವರ್ಷ 10 ಸಾವಿರ ರೂಪಾಯಿಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ.
ರಾಜ್ಯದಲ್ಲಿ ಓದುತ್ತಿರುವ ಹಲವು ವಿದ್ಯಾರ್ಥಿಗಳು (Students) ಅತ್ಯುತ್ತಮ ವಿದ್ಯಾಭ್ಯಾಸ ಪಡೆದುಕೊಳ್ಳಬೇಕು ಎನ್ನುವ ಕಾರಣಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ.
ಇನ್ನು ಹಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಬಹಳ ಮುಂದಿರುತ್ತಾರೆ. ಆದರೆ ಹಣಕಾಸಿನ ತೊಂದರೆಯಿಂದಾಗಿ ತಮ್ಮ ವಿದ್ಯಾಭ್ಯಾಸ (Education) ಸಂಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ (Scholarship) ರೂಪದಲ್ಲಿ ಹಣ ಸಿಕ್ಕರೆ ಅದರಿಂದ ಉತ್ತಮ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ರಾಜ್ಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಕೂಡ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರದಿಂದ ಹಲವಾರು ವಿದ್ಯಾರ್ಥಿ ವೇತನ ಯೋಜನೆಗಳು ಜಾರಿಯಲ್ಲಿ ಇವೆ
ಅವುಗಳಲ್ಲಿ ವಿದ್ಯಾಧನ ವಿದ್ಯಾರ್ಥಿವೇತನ, ಅಬ್ದುಲ್ ಕಲಾಂ ಆರ್ಥಿಕ ನೆರವು ಯೋಜನೆ, ಶೈಕ್ಷಣಿಕ ಬಡ್ಡಿ ಮರುಪಾವತಿ ಯೋಜನೆ, ಸಯಾಜಿ ರಾವ್ ಗಾಯಕ್ವಾಡ್ ಸಾರಥಿ ವಿದ್ಯಾರ್ಥಿ ವೇತನ ಯೋಜನೆಗಳು ಜಾರಿಯಲ್ಲಿ ಇವೆ.
ಸರೋಜಿನಿ ದಾಮೋದರನ್ ಪ್ರತಿಷ್ಠಾನದಿಂದ ವಿದ್ಯಾಧನ್ ವಿದ್ಯಾರ್ಥಿ ವೇತನ (Vidyadhan Scholarship) ವನ್ನು ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಇದು ಅಖಿಲ ಭಾರತ ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನವಾಗಿದ್ದು, ಉನ್ನತ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ಸರೋಜಿನಿ ದಾಮೋದರಂ ಪ್ರತಿಷ್ಠಾನ 1999 ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ದೆಹಲಿ ರಾಜ್ಯಗಳು ಸೇರಿದಂತೆ 27 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ ಸುಮಾರು 4700 ವಿದ್ಯಾರ್ಥಿಗಳು ವಿದ್ಯಾಧನ ವಿದ್ಯಾರ್ಥಿ ವೇತನ ಪಡೆದುಕೊಂಡಿದ್ದಾರೆ.
ವಿದ್ಯಾಧನ ವಿದ್ಯಾರ್ಥಿವೇತನ ಪಡೆದುಕೊಳ್ಳುವುದು ಹೇಗೆ?
ಒಬ್ಬ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು. ವಿದ್ಯಾರ್ಥಿ 2023ರಲ್ಲಿ 10ನೇ ತರಗತಿಯಲ್ಲಿ ಶೇಕಡ 85 ಅಥವಾ 9 CGPA 75% ಅಥವಾ 7 CGPA ಜೊತೆಗೆ ಉತ್ತೀರ್ಣರಾಗಿರಬೇಕು.
ವಿದ್ಯಾಧನ್ ವಿದ್ಯಾರ್ಥಿವೇತನದ ಮೊತ್ತ ಎಷ್ಟು?
10ನೇ ತರಗತಿಯನ್ನು ಮೇಲಿನ ಪರ್ಸೆಂಟೇಜ್ ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 11 ಮತ್ತು 12ನೇ (PUC) ತರಗತಿಯನ್ನು ಓದಲು ಪ್ರತಿವರ್ಷ 10 ಸಾವಿರ ರೂಪಾಯಿಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ. ಪ್ರಥಮ ಪಿಯುಸಿ ಪ್ರವೇಶಿಸಿದಾಗ 10,000 ಹಾಗೂ ದ್ವಿತೀಯ ಪಿಯುಸಿ ಪ್ರವೇಶಿಸಿದಾಗ 10,000 ಕೊಟ್ಟರೆಯಾಗಿ 20 ಸಾವಿರ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು.
ವಿದ್ಯಾರ್ಥಿವೇತನದ ಅರ್ಜಿ ನಮೂನೆಯನ್ನು ತೆಗೆದುಕೊಂಡು ಅದರಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು. ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ
ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಸಂದರ್ಶನ ಹಾಗೂ ಪರೀಕ್ಷೆಯ ದಿನಾಂಕ ಸ್ಥಳ ಮೊದಲಾದ ವಿವರಗಳನ್ನು ವಿದ್ಯಾರ್ಥಿಯ ಇ-ಮೇಲ್ ಐಡಿ ಗೆ ಅಥವಾ ಮೊಬೈಲ್ ಸಂಖ್ಯೆಗೆ ಮೆಸೇಜ್ ಮಾಡಿ ತಿಳಿಸಲಾಗುತ್ತದೆ. ಅಗತ್ಯವಿದ್ದಲ್ಲಿ ವಿದ್ಯಾರ್ಥಿ ಹಾಗೂ ಪೋಷಕರ ಪ್ರಯಾಣದ ವೆಚ್ಚವನ್ನು ವಿದ್ಯಾರ್ಥಿವೇತನ ಸಮಿತಿ ಮರುಪಾವತಿ ಮಾಡುತ್ತದೆ.
ಈ ವರ್ಷದ ವಿದ್ಯಾಧನ ವಿದ್ಯಾರ್ಥಿ ವೇತನದ ಕೊನೆಯ ದಿನಾಂಕ, ಸ್ಕ್ರೀನಿಂಗ್ ಟೆಸ್ಟ್ 16,ಸೆಪ್ಟೆಂಬರ್ 2023. ಸಂದರ್ಶನ ಮತ್ತು ಪರೀಕ್ಷೆ ಅಕ್ಟೋಬರ್ 9ರಿಂದ 20ರವರೆಗೆ. ವಿದ್ಯಾರ್ಥಿಗಳು ವಿದ್ಯಾಧನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಫೌಂಡೇಶನ್ ನ ಅಧಿಕೃತ ವೆಬ್ಸೈಟ್ ಗೆ ಹೋಗಬೇಕು
ಅಲ್ಲಿ ಅಪ್ಲೈ ಫಾರ್ ಸ್ಕಾಲರ್ಶಿಪ್ ಎನ್ನುವ ಆಯ್ಕೆಯನ್ನು ಮಾಡಿ ಸಂಬಂಧ ಪಟ್ಟ ಮಾಹಿತಿಗಳನ್ನು ನೀಡಿ ಫಾರ್ಮ್ ಭರ್ತಿ ಮಾಡಬೇಕು. ಇದನ್ನು ಪರಿಶೀಲಿಸಿದ ಫೌಂಡೇಶನ್ ನಿಮಗೆ ಪರೀಕ್ಷೆಗೆ ಮಾಹಿತಿಯನ್ನು ನೀಡುತ್ತದೆ.
ವಿದ್ಯಾಧನ್ ವಿದ್ಯಾರ್ಥಿವೇತನ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು
ಆಧಾರ್ ಕಾರ್ಡ್ ಇಮೇಲ್ ಐಡಿ 10ನೇ ತರಗತಿ ಪಾಸ್ ಆಗಿರುವ ಬಗ್ಗೆ ಅಂಕಪಟ್ಟಿ, ಪಾಸ್ಪೋರ್ಟ್ ಅಳತೆಯ ಭಾವ ಚಿತ್ರ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಯ ವಿವರ, ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿ ಅಂಗವಿಕಲತೆ ಉಳ್ಳವರಾಗಿದ್ದರೆ ಅದರ ಬಗ್ಗೆ ಪ್ರಮಾಣ ಪತ್ರ.
20,000 scholarship will be given to such students every year for Education
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
20,000 scholarship will be given to such students every year for Education