ಯಾರಿಗೆಲ್ಲಾ ಸಿಕ್ಕಿಲ್ವೋ ಗೃಹಲಕ್ಷ್ಮಿ ಹಣ, ಅಂತಹವರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ರು ಸಿಹಿ ಸುದ್ದಿ
8 ಲಕ್ಷ ಜನ ಗೃಹಿಣಿಯರ ಖಾತೆಯಲ್ಲಿ ಸಮಸ್ಯೆ ಇದೆ. ಅವುಗಳನ್ನು ಒಂದೊಂದಾಗಿ ಪರಿಹರಿಸಿಕೊಂಡು ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಹಣ ಬರುವಂತೆ ಮಾಡುತ್ತೇವೆ. ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳು ಸಿಗುತ್ತವೆ.
ಕಾಂಗ್ರೆಸ್ ಸರ್ಕಾರ (Congress Government) ಜಾರಿಗೆ ತಂದಿರುವ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು 2,000ರೂ. ಗಳನ್ನು ಪಡೆದುಕೊಂಡು ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತಿದ್ದಾರೆ.
ಈ ನಡುವೆ ಇನ್ನೂ ಲಕ್ಷಾಂತರ ಜನರ ಖಾತೆಗೆ ಹಣ ಬರಬೇಕು. ಅರ್ಜಿ ಸಲ್ಲಿಸಿ ಆಗಿದೆ, ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆ ಎನ್ನುವ ಸರ್ಕಾರದ ಮೆಸೇಜ್ ಕೂಡ ಬಂದಿದೆ, ಆದ್ರೂ ಅಂಥವರ ಖಾತೆಗೆ (Bank Account) ಹಣ ಮಾತ್ರ ಹೋಗಿಲ್ಲ
ಇದರ ಬಗ್ಗೆ ಗೃಹಿಣಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಖಾತೆಗೆ ಯಾವಾಗ ಬರುತ್ತೆ ಎಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ, ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಏನು ಹೇಳಿದ್ದಾರೆ ಗೊತ್ತೇ?
ಬೆಂಗಳೂರು ಬಂದ್ ಎಫೆಕ್ಟ್, ಇವತ್ತು ಏನಿರುತ್ತೆ ಏನಿರಲ್ಲ ಗೊತ್ತೇ? ಅಷ್ಟಕ್ಕೂ ಬಂದ್ ನಿಜವಾದ ಕಾರಣವೇನು
ಇತ್ತೀಚೆಗೆ ನಿಪ್ಪಾಣಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ರಾಜ್ಯ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಯೋಜನೆಯಲ್ಲಿ ಇರುವ ಕೊಂದು ಕೊರತೆಗಳನ್ನು ನಿವಾರಿಸಿಕೊಂಡು ಎಲ್ಲರ ಖಾತೆಗೆ ಹಣ (DBT) ಬರುವಂತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ 1.28 ಕೋಟಿ ಗೃಹಿಣಿಯರು ಫಲಾನುಭವಿಗಳಾಗಿದ್ದಾರೆ. ಸುಮಾರು 17 ಲಕ್ಷಕ್ಕೂ ಅಧಿಕ ಜನ ಅರ್ಜಿ ಸಲ್ಲಿಸಿದ್ದಾರೆ, ಇನ್ನು ಅರ್ಜಿ ಸಲ್ಲಿಕೆ ಆಗಿರುವವರಲ್ಲಿ 8 ಲಕ್ಷಕ್ಕೂ ಅಧಿಕ ಮಹಿಳೆಯರ ಖಾತೆಗೆ ಹಣ (Bank Account) ಹೋಗಿ ತಲುಪಿಲ್ಲ. ಇದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರಣವನ್ನು ತಿಳಿಸಿದ್ದು ಶೀರ್ಘದಲ್ಲಿ ಅದನ್ನು ಪರಿಹರಿಸುವುದಾಗಿ ಹೇಳಿದ್ದಾರೆ.
8 ಲಕ್ಷ ಜನ ಗೃಹಿಣಿಯರ ಖಾತೆಯಲ್ಲಿ ಸಮಸ್ಯೆ ಇದೆ. ಅವುಗಳನ್ನು ಒಂದೊಂದಾಗಿ ಪರಿಹರಿಸಿಕೊಂಡು ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಹಣ ಬರುವಂತೆ ಮಾಡುತ್ತೇವೆ. ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳು ಸಿಗುತ್ತವೆ.
ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್! ಜನರ ಇಷ್ಟದಂತೆ ನಡೆದುಕೊಳ್ಳಲು ನಿರ್ಧರಿಸಿದ ಸರ್ಕಾರ
ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ (Ration Card Correction) ಗೃಹಿಣಿಯ ಹೆಸರಿನಲ್ಲಿ ಇರಬೇಕು ಹಾಗಾಗಿ ರೇಷನ್ ಕಾರ್ಡ್ ತಿದ್ದುಪಡಿಗೂ ಕೂಡ ಸರ್ಕಾರ ಅವಕಾಶ ಮಾಡಿಕೊಟ್ಟಿದೆ
ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗದೆ ಇರಲು ಈ ನಿಮ್ಮ ತಪ್ಪುಗಳೇ ಕಾರಣ!
ಇದೇ ಬರುವ ಸೆಪ್ಟೆಂಬರ್ 14 2023 ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನಾಂಕವಾಗಿದ್ದು ಅಷ್ಟರಲ್ಲಿ ಮನೆ ಯಜಮಾನನ ಹೆಸರಿನ ಬದಲಾಗಿ ತಮ್ಮ ಹೆಸರನ್ನು ಸೇರಿಸಿಕೊಳ್ಳಬೇಕು ಎಂದು ಸರ್ಕಾರ ಸೂಚನೆ ನೀಡಿದೆ, ಪುರುಷರ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಇದ್ದರೆ ಅಂತವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ.
Everyone will get two thousand rupees of Gruha Lakshmi Yojana
Follow us On
Google News |