ಬೀದಿ ಬೀದಿಗಳಲ್ಲಿ ಗಣೇಶ ಕೂರಿಸುವ ಪ್ರತಿಯೊಬ್ಬರಿಗೂ ಹೊಸ ರೂಲ್ಸ್, ಪಡೆದುಕೊಳ್ಳಲೇಬೇಕು ಪರ್ಮಿಷನ್

ಕಟ್ಟುನಿಟ್ಟಿನ ಕ್ರಮವನ್ನು ಬಿಬಿಎಂಪಿ ತಿಳಿಸಿದೆ. ಒಟ್ಟಿನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ವರ್ಷದ ಗಣೇಶ ಚತುರ್ಥಿ ಸಾಕಷ್ಟು ನಿಯಮಗಳನ್ನು ಪಾಲಿಸುವುದರ ಜೊತೆಗೆ ಆಚರಣೆ ಮಾಡಬೇಕಾಗಿದೆ.

ಇನ್ನೇನು ಸದ್ಯದಲ್ಲಿಯೇ ಗಣೇಶ ಚತುರ್ಥಿ (Ganesha Chaturthi) ಹಬ್ಬ (Festival) ಆರಂಭವಾಗಲಿದೆ, ಒಂದೊಂದು ಸ್ಥಳದಲ್ಲಿ ಒಂದೊಂದು ರೀತಿಯ ಆಚರಣೆ ಮಾಡಲಾಗುತ್ತದೆ.

ಇನ್ನು ದೇಶಾದ್ಯಂತ ವಿವಿಧ ಗಾತ್ರದ ವಿವಿಧ ರೂಪದ ಗಣೇಶನ ಮೂರ್ತಿ (Ganesha Statue) ಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪರಿಸರಕ್ಕೆ ಹಾನಿ ಆಗುವಂಥ ಕೆಮಿಕಲ್ ಬಳಸಿ ತಯಾರಿಸಲಾದ ಗಣೇಶ ವಿಗ್ರಹದ ಬದಲು ಪರಿಸರ ಸ್ನೇಹಿ ಗಣಪನನ್ನು ಬಳಸಿ ಎಂದು ಸರ್ಕಾರ ಕರೆ ಕೊಡುತ್ತಲೇ ಇದೆ.

ಆದರೂ ಅನೇಕ ಬಾರಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ನಂತರ ಅದರ ಸರಿಯಾದ ನಿರ್ವಹಣೆ ಮಾಡದೆ ಸಾಕಷ್ಟು ತೊಂದರೆ ಉಂಟಾಗುತ್ತದೆ.

ಬೀದಿ ಬೀದಿಗಳಲ್ಲಿ ಗಣೇಶ ಕೂರಿಸುವ ಪ್ರತಿಯೊಬ್ಬರಿಗೂ ಹೊಸ ರೂಲ್ಸ್, ಪಡೆದುಕೊಳ್ಳಲೇಬೇಕು ಪರ್ಮಿಷನ್ - Kannada News

ಯಾರಿಗೆಲ್ಲಾ ಸಿಕ್ಕಿಲ್ವೋ ಗೃಹಲಕ್ಷ್ಮಿ ಹಣ, ಅಂತಹವರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ರು ಸಿಹಿ ಸುದ್ದಿ

ಇಂತಹ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ನಗರದ ಯಾವ ಭಾಗದಲ್ಲಿ ಗಣೇಶ ಹಬ್ಬಕ್ಕಾಗಿ ಗಣಪತಿ ಬಪ್ಪನ ಪ್ರತಿಷ್ಠಾಪನೆ ಮಾಡುತ್ತಾರೋ ಅಂತವರು ಬೆಂಗಳೂರು ಮಹಾನಗರ ಪಾಲಿಕೆಯ (BBMP) ಈ ಹೊಸ ರೂಲ್ಸ್ ಪಾಲಿಸಲೇಬೇಕು.

ಗಣೇಶ ಚತುರ್ಥಿಯಲ್ಲಿ ಬೀದಿ ಬೀದಿಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈಗಾಗಲೇ ಬೇರೆ ಬೇರೆ ಸಂಘಟನೆಗಳು ಗಣೇಶನನ್ನು ಕೂರಿಸುವ ವಿಷಯದಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಹಿಂದಿನ ಕಳೆದೆರಡು ವರ್ಷಗಳಲ್ಲಿ ಕರೋನಾ ಕಾರಣದಿಂದ ಗಣೇಶ ಚತುರ್ಥಿ ಆಚರಿಸಲು ಸಾಧ್ಯವಾಗಿರಲಿಲ್ಲ, ಆದರೆ ಕಳೆದ ವರ್ಷ ಗಣೇಶ ಚತುರ್ಥಿ ಜೊತೆಗೆ ಇನ್ನಷ್ಟು ಹಬ್ಬಗಳನ್ನು ಆಚರಿಸಲಾಗಿತ್ತು ಅದೇ ರೀತಿ ಈ ವರ್ಷವೂ ಕೂಡ ವಿಜೃಂಭಣೆಯಿಂದ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲು ಜನರು ನಿರ್ಧರಿಸಿದ್ದಾರೆ.

ಇದಕ್ಕೆ ಒಂದು ಟ್ವಿಸ್ಟ್ ಕೊಟ್ಟಿರುವ ಬೆಂಗಳೂರು ಮಹಾನಗರ ಪಾಲಿಕೆ (Bangalore Metropolitan Corporation) ಹೊಸ ರೂಲ್ಸ್ ಜಾರಿಗೆ ತಂದಿದೆ.

ಬೆಂಗಳೂರು ಬಂದ್ ಎಫೆಕ್ಟ್, ಇವತ್ತು ಏನಿರುತ್ತೆ ಏನಿರಲ್ಲ ಗೊತ್ತೇ? ಅಷ್ಟಕ್ಕೂ ಬಂದ್ ನಿಜವಾದ ಕಾರಣವೇನು

New rules for everyone for Ganesha Festival Celebration on the streetsಬಿಬಿಎಂಪಿ ಪರ್ಮಿಷನ್ ಬೇಕು

ಬೀದಿಯಲ್ಲಿ ಗಣೇಶ ನನ್ನು ಕೂರಿಸಲು ಮಂಟಪ ನಿರ್ಮಿಸುವ ಸಂಘಟನೆಗಳು ಬಿಬಿಎಂಪಿ ಈಗಾಗಲೇ ಬೆಂಗಳೂರಿನಲ್ಲಿ ಸ್ಥಾಪಿಸಿರುವ 60ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಅನುಮತಿಯನ್ನು ಪಡೆದುಕೊಂಡು ಬರಬೇಕಾಗುತ್ತದೆ.

ಬಿಬಿಎಂಪಿ ಆರಂಭಿಸಿರುವ ಕೇಂದ್ರದಲ್ಲಿ ವಿದ್ಯುತ್ ಸರಬರಾಜು ಕಂಪನಿ, ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆಯ ಪ್ರತಿನಿಧಿಗಳು ಕಾರ್ಯನಿರ್ವಹಿಸುತ್ತಾರೆ. ಇದಕ್ಕೆ ಮುತುವರ್ಜಿಯಿಂದ ಕೆಲಸ ಮಾಡುವಂತೆ ನೋಡಲ್ ಅಧಿಕಾರಿಗಳಿಗೆ ಪೌರಾಡಳಿತ ಮಂಡಳಿ ಆದೇಶ ನೀಡಿದೆ.

ಕೆಮಿಕಲ್ ಗಣಪ ನಿಷೇಧ

ಗಣೇಶ ಹಬ್ಬದಲ್ಲಿ ಗಣೇಶನನ್ನು ಕೂರಿಸುವ ಬರದಲ್ಲಿ ಪರಿಸರಕ್ಕೆ ಹಾನಿಯಾಗುವಂತಹ ಗಣೇಶನನ್ನು ತಯಾರಿಸಲಾಗುತ್ತೆ, ಅಂದರೆ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮಾಡಲ್ಪಟ್ಟ ಗಣಪನ ವಿಗ್ರಹವನ್ನು ಯಾವುದೇ ಕಾರಣಕ್ಕೂ ಬಳಸುವಂತಿಲ್ಲ ಎಂದು ಬಿಬಿಎಂಪಿ ಕಟ್ಟುನಿಟ್ಟಿನ ನಿಯಮ ತಂದಿದೆ.

ಇದರ ಜೊತೆಗೆ ರಸ್ತೆಗಳಲ್ಲಿ ಪ್ರಯಾಣಕ್ಕೆ ತೊಂದರೆ ಆಗದೆ ಇರುವ ರೀತಿಯಲ್ಲಿ ಗಣೇಶ ಹಬ್ಬವನ್ನು ಆಚರಿಸಬೇಕು ಎಂದು ಬಿಬಿಎಂಪಿ ತಿಳಿಸಿದೆ. ಗಣೇಶ ಚತುರ್ಥಿ ಪರಿಸರ ಸ್ನೇಹಿ ಉತ್ಸವವಾಗಬೇಕು. ಹಾಗೂ ಬಿಬಿಎಂಪಿಯ ಯಾವುದೇ ಮಾರ್ಗಸೂಚಿ ಉಲ್ಲಂಘನೆ ಮಾಡಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದೆ.

ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್! ಜನರ ಇಷ್ಟದಂತೆ ನಡೆದುಕೊಳ್ಳಲು ನಿರ್ಧರಿಸಿದ ಸರ್ಕಾರ

ಗಣೇಶ ಚತುರ್ಥಿಯ ಹೆಸರಿನಲ್ಲಿ ನಗರದಾದ್ಯಂತ ಬ್ಯಾನರ್ ಹಾಗೂ ಫ್ಲೆಕ್ಸ್ ಗಳನ್ನು ಹಾಕುವಂತಿಲ್ಲ. ಅನಧಿಕೃತ ಬ್ಯಾನರ್ ಹಾಗೂ ಫ್ಲೆಕ್ಸ್ ಗಳನ್ನು ಕೂಡಲೇ ತೆರವು ಗೊಳಿಸಲಾಗುತ್ತದೆ. ಇನ್ನು ವಿಗ್ರಹ ವಿಸರ್ಜನೆಯ ಸಮಯದಲ್ಲಿಯೂ ಕೂಡ ಬಿಬಿಎಂಪಿ ವಿಶೇಷ ನಿರ್ದೇಶನವನ್ನು ನೀಡಿದೆ.

ಮನೆಗಳಲ್ಲಿ ಕೂರಿಸಿದ ಸಣ್ಣ ವಿಗ್ರಹಗಳನ್ನು ಮುಳುಗಿಸಲು ಮೊಬೈಲ್ ಟ್ಯಾಂಕ್ ಬಳಸಬೇಕು. ಹಾಗೂ ದೊಡ್ಡ ವಿಗ್ರಹವನ್ನು ವಿಸರ್ಜನೆ ಮಾಡಲು ಬೆಂಗಳೂರಿನ ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ, ಅಗರ ಕೆರೆ ಇಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು ಸಂಘಟನೆಗಳು ಇಲ್ಲಿಯೇ ತಮ್ಮ ಗಣೇಶನ ವಿಗ್ರಹವನ್ನು ವಿಸರ್ಜನೆ ಮಾಡಬೇಕು.

ಇನ್ನು ವಿಸರ್ಜನೆಯ ಸಮಯದಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ತೊಂದರೆ ಮಾಡಬಾರದು ಎನ್ನುವ ಬಗ್ಗೆ ಕಟ್ಟುನಿಟ್ಟಿನ ಕ್ರಮವನ್ನು ಬಿಬಿಎಂಪಿ ತಿಳಿಸಿದೆ. ಒಟ್ಟಿನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ವರ್ಷದ ಗಣೇಶ ಚತುರ್ಥಿ ಸಾಕಷ್ಟು ನಿಯಮಗಳನ್ನು ಪಾಲಿಸುವುದರ ಜೊತೆಗೆ ಆಚರಣೆ ಮಾಡಬೇಕಾಗಿದೆ.

New rules for everyone for Ganesha Festival Celebration on the streets

Follow us On

FaceBook Google News

New rules for everyone for Ganesha Festival Celebration on the streets