ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಖುಷಿಯಲ್ಲಿ ಜನತೆ

ರಾಜ್ಯದಲ್ಲಿ ಒಂದರ ಹಿಂದೆ ಒಂದರಂತೆ ಗ್ಯಾರಂಟಿ ಯೋಜನೆಗಳು ಘೋಷಣೆ ಆಗುತ್ತಿವೆ, ಇನ್ನು ಗ್ಯಾರಂಟಿ ಯೋಜನೆಯ ಪ್ರಯೋಜನ (Guarantee scheme Benefits) ಪಡೆದುಕೊಳ್ಳಲು ಪ್ರತಿಯೊಬ್ಬ ಫಲಾನುಭವಿಗಳು ಬಿಪಿಎಲ್ ಕಾರ್ಡ್ (BPL Card) ಹೊಂದಿರುವುದು ಕಡ್ಡಾಯ.

ಆದರೆ ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿರುವವರನ್ನು ಹೊರತುಪಡಿಸಿ ಇನ್ನು ಸಾಕಷ್ಟು ಕುಟುಂಬಗಳು ಬಿಪಿಎಲ್ ರೇಷನ್ ಕಾರ್ಡ್ (ration card) ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿವೆ. ಚುನಾವಣೆಗೂ ಮೊದಲೇ ಸಲ್ಲಿಸಿದ ಅರ್ಜಿಗಳು ಕೂಡ ನೆನೆಗುದಿಗೆ ಬಿದ್ದಿವೆ

ರಾಜ್ಯದ ಇಂತಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸಿಗಲಿದೆ 20,000 ಸ್ಕಾಲರ್ಶಿಪ್, ಇಂದೇ ಅರ್ಜಿ ಸಲ್ಲಿಸಿ

ಹೌದು ಎಲೆಕ್ಷನ್ (Election) ಸಮಯದಲ್ಲಿ ಜನರಿಂದ ಸಲ್ಲಿಕೆ ಆಗಿದ್ದ ಬಿಪಿಎಲ್ ಕಾರ್ಡ್ ಅನ್ನು ಜನರಿಗೆ ಸರ್ಕಾರ ಕೊಡುವುದನ್ನು ಸ್ಥಗಿತಗೊಳಿಸಿತು ಜೊತೆಗೆ ಆನ್ಲೈನ್ ಪೋರ್ಟಲ್ (Online Portal) ಕೂಡ ಸ್ಥಗಿತಗೊಳಿಸಿತ್ತು.

ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹಾಗಿರಲಿ ಈಗಾಗಲೇ ಸಲ್ಲಿಸಿರುವ ಅರ್ಜಿಗಳ ಪರಿಶೀಲನೆ ಕೂಡ ಆಗಿಲ್ಲ. ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡ ರಾಜ್ಯ ಆಹಾರ ಇಲಾಖೆ ಬಿಪಿಎಲ್ ಕಾರ್ಡ್ ಹೊಂದಲು ಇಚ್ಚಿಸುವವರಿಗೆ ಗುಡ್ ನ್ಯೂಸ್ ಒಂದನ್ನು ಕೊಟ್ಟಿದೆ.

ಶೀರ್ಘದಲ್ಲಿ ಆರಂಭವಾಗಲಿದ್ಯಾ ಬಿಪಿಎಲ್ ಕಾರ್ಡ್?

BPL Ration Cardಆಗಲೇ ಸಲ್ಲಿಸಿರುವ ಬಿಪಿಎಲ್ ಕಾರ್ಡ್ ಅರ್ಜಿಯ ಜೊತೆಗೆ ಹೊಸ ಅರ್ಜಿಗಳನ್ನು ಕೂಡ ಸ್ವೀಕರಿಸಲು ಅನುಮತಿ ನೀಡಲಾಗುವುದು ಎಂದು ಆಹಾರ ಇಲಾಖೆ (Food Department) ಮೂಲದಿಂದ ಮಾಹಿತಿ ಲಭ್ಯವಾಗಿದೆ.

ರಾಜ್ಯದಲ್ಲಿ ಈಗಾಗಲೇ ಮೂರು ಲಕ್ಷ ಎಪಿಎಲ್ ಕಾರ್ಡ್ (APL Card) ಅರ್ಜಿಗಳು ಸಲ್ಲಿಕೆಯಾಗಿದ್ದು ಅದರಲ್ಲಿ 75% ನಷ್ಟು ಪರಿಶೀಲನೆ ಪೂರ್ಣಗೊಂಡಿದೆ ಹಾಗಾಗಿ ಸದ್ಯದಲ್ಲಿ ವಿತರಣೆ ಆಗಬಹುದು.

ಬೀದಿ ಬೀದಿಗಳಲ್ಲಿ ಗಣೇಶ ಕೂರಿಸುವ ಪ್ರತಿಯೊಬ್ಬರಿಗೂ ಹೊಸ ರೂಲ್ಸ್, ಪಡೆದುಕೊಳ್ಳಲೇಬೇಕು ಪರ್ಮಿಷನ್

ಮೃತ ಪಟ್ಟವರ ಹೆಸರು ತೆಗೆದು ಹಾಕಲು ಅನುವು

ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿರುವ ಹಲವು ಕುಟುಂಬಗಳು ತಮ್ಮ ಮನೆಯಲ್ಲಿ ಯಾರಾದರೂ ಮೃತಪಟ್ಟಿದ್ದರೆ ಅಂತಹ ಫಲಾನುಭವಿಗಳ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆದು ಹಾಕಬೇಕು, ಒಂದು ವೇಳೆ ಈ ರೀತಿ ಮಾಡದೆ ಇದ್ದಲ್ಲಿ ಹಾಗೂ ಮೃತಪಟ್ಟವರ ಹೆಸರಿನಲ್ಲಿಯೂ ಲಾಭ ಪಡೆದುಕೊಳ್ಳುತ್ತಲೇ ಇದ್ದಲ್ಲಿ ಆಹಾರ ಇಲಾಖೆ ಈ ಕಾನೂನು ಉಲ್ಲಂಘನೆಯ ವಿರುದ್ಧ ವಿಶೇಷ ಕ್ರಮ ಕೈಗೊಳ್ಳಬಹುದು.

ಈಗಾಗಲೇ ಇಂತಹ 5 ಲಕ್ಷಕ್ಕೂ ಹೆಚ್ಚಿನ ಕಾರ್ಡನ್ನು ವಶಪಡಿಸಲಾಗಿದೆ. ಇನ್ನು ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡುವುದು ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ, ಆದರೆ ಇಂಥವರನ್ನ ಬಿಟ್ಟು ಉತ್ತಮ ಆದಾಯ ಹೊಂದಿರುವವರು ಹಾಗೂ ಸರ್ಕಾರಿ ಉದ್ಯೋಗಗಳು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ.

ಈಗಾಗಲೇ ಸರ್ಕಾರದ ಮಾನದಂಡಗಳನ್ನು ಉಲ್ಲಂಘಿಸಿ ಬಿಪಿಎಲ್ ಕಾರ್ಡ್ ಹೊಂದಿರುವವರ ರೇಷನ್ ಕಾರ್ಡ್ ಅನ್ನು ರದ್ದುಪಡಿಸಲಾಗಿದೆ.

ಯಾರಿಗೆಲ್ಲಾ ಸಿಕ್ಕಿಲ್ವೋ ಗೃಹಲಕ್ಷ್ಮಿ ಹಣ, ಅಂತಹವರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ರು ಸಿಹಿ ಸುದ್ದಿ

ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ

ಇನ್ನು ರಾಜ್ಯದ ಗೃಹಿಣಿಯರು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಅಂದರೆ, ತಮ್ಮ ರೇಷನ್ ಕಾರ್ಡ್ ನಲ್ಲಿ ಪುರುಷನ ಬದಲು ತಮ್ಮ ಹೆಸರು ಅಂದರೆ ಮಹಿಳೆಯ ಹೆಸರನ್ನು ಸೇರಿಸಬೇಕು.

ಹೀಗೆ ಮುಖ್ಯಸ್ಥರ ಹೆಸರು ಬದಲಾವಣೆ ಮಾಡಲು ಸೆಪ್ಟೆಂಬರ್ ಒಂದರಿಂದ 14ರ ವರೆಗೆ ಅವಕಾಶ ನೀಡಲಾಗಿದೆ. ಪ್ರಸ್ತುತ 6 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ಪುರುಷರ ಹೆಸರಿನಲ್ಲಿ ಇರುವುದರಿಂದ ಅಂತವರಿಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳು ಸಿಗುವುದಿಲ್ಲ. ಆದಷ್ಟು ಬೇಗ ಗೃಹಿಣಿಯರು ತಮ್ಮ ಹೆಸರನ್ನು ಯಜಮಾನಿಯ ಹೆಸರನ್ನಾಗಿ ಬದಲಾಯಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.

Government has given another good news to BPL card holders

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories