ರೈತರಿಗೆ ಪ್ರತಿ ತಿಂಗಳು ₹3,000 ಪಿಂಚಣಿ ಸಿಗುವ ಸರ್ಕಾರದ ಮಹತ್ವದ ಯೋಜನೆ! ಅರ್ಜಿ ಸಲ್ಲಿಸಿ
ಒಂದು ದೇಶ ಆರ್ಥಿಕವಾಗಿ ಬೆಳೆಯಬೇಕಾದರೆ (financial development) ಹಾಗೂ ಒಬ್ಬ ರೈತ ಆರ್ಥಿಕವಾಗಿ ಸಬಲನಾಗಬೇಕಾದರೆ (financial stability) ಸರ್ಕಾರದ ಮಧ್ಯಸ್ಥಿಕೆ ಬಹಳ ಮುಖ್ಯವಾಗಿರುತ್ತದೆ.
ರೈತರಿಗಾಗಿ ಸಾಲ ಸೌಲಭ್ಯದಿಂದ ಹಿಡಿದು ಸಬ್ಸಿಡಿ (subsidy Loan) ಮೊದಲಾದ ಸಹಾಯಧನವನ್ನು ನೀಡಲು ಸರ್ಕಾರ ಮುಂದಾದರೆ ದೇಶದ ರೈತ ಉದ್ಧಾರವಾಗಲು ಸಾಧ್ಯ, ದೇಶವು ಪ್ರಗತಿ ಹೊಂದಲು ಸಾಧ್ಯ.
ಕೇಂದ್ರ ಸರ್ಕಾರ (central government) ರೈತರಿಗಾಗಿಯೇ ಹಲವಾರು ಯೋಜನೆಗಳನ್ನು (schemes for farmers) ಜಾರಿಗೆ ತಂದಿದೆ, ಅದರಲ್ಲಿ ಕೆಲವು ಪ್ರಮುಖ ಯೋಜನೆಗಳ ಪ್ರಯೋಜನವನ್ನು ಈಗಾಗಲೇ ದೇಶದ ಕೋಟ್ಯಂತರ ರೈತರೂ ಪಡೆದುಕೊಳ್ಳುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ರಾತ್ರೋ ರಾತ್ರಿ ಬದಲಾವಣೆ! ಹಣ ವರ್ಗಾವಣೆಗೆ ಹೊಸ ಕ್ರಮ
ರೈತರು ವೃದ್ಧಾಪ್ಯದ ಜೀವನ ಹೇಗಿರಬೇಕು?
ಈ ಪ್ರಶ್ನೆಗೆ ಸರ್ಕಾರವೇ ಪರಿಹಾರವನ್ನು ಸೂಚಿಸುತ್ತದೆ. ರೈತರು 60 ವರ್ಷ ದಾಟಿದ ನಂತರ ತಮ್ಮ ಜಮೀನುಗಳಲ್ಲಿ ಮೊದಲಿನಂತೆ ಹೋಗಿ ಉಳುಮೆ ಮಾಡಲು ಸಾಧ್ಯವಲ್ಲ, ದೇಹದಲ್ಲಿ ಅಷ್ಟು ಶಕ್ತಿಯೂ ಇರುವುದಿಲ್ಲ.
ಈ ಹಿನ್ನೆಲೆಯಲ್ಲಿ ರೈತರ ವೃದ್ಧಾಪ್ಯ (farmers old age life) ಯಾವುದೇ ಕಾರಣಕ್ಕೂ ಆರ್ಥಿಕವಾಗಿ ಸಮಸ್ಯೆ ಅನುಭವಿಸಬಾರದು ಎಂದು ಸರ್ಕಾರ ಪ್ರಮುಖ ಪಿಂಚಣಿ ಯೋಜನೆಯನ್ನು (Pension Scheme) ಆರಂಭಿಸಿದೆ. ಯೋಜನೆಯ ಲಾಭ ಪಡೆದುಕೊಂಡರೆ ಪ್ರತಿ ತಿಂಗಳು 3,000 ರೂಪಾಯಿಗಳ ಪಿಂಚಣಿಯನ್ನು ಪ್ರತಿಯೊಬ್ಬ ರೈತ ಕೂಡ ಪಡೆದುಕೊಳ್ಳಬಹುದು.
ರೈತರಿಗೆ ಸಿಹಿ ಸುದ್ದಿ! ಕೃಷಿ ಉಪಕರಣಗಳ ಖರೀದಿಗೆ ಸಿಗುತ್ತೆ ಸಬ್ಸಿಡಿ ಸಾಲ; ಅರ್ಜಿ ಸಲ್ಲಿಸಿ
ಪ್ರಧಾನ್ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ! (PM Kisan man dhan Yojana)
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ (pradhanmantri Kisan Samman Nidhi Yojana) ನೋಂದಾಯಿಸಿಕೊಂಡಿರುವ ರೈತರು ಪ್ರಧಾನಮಂತ್ರಿ ಕಿಸಾನ್ ಮನಧನ್ ಯೋಜನೆಯ ಪ್ರಯೋಜನವನ್ನು ಕೂಡ ಪಡೆದುಕೊಳ್ಳಬಹುದು.
ಇದೊಂದು ಉತ್ತಮ ಪಿಂಚಣಿ ಯೋಜನೆಯಾಗಿದ್ದು (pension scheme) 18 ವರ್ಷ ವಯಸ್ಸಿನಿಂದ 40 ವರ್ಷ ವಯಸ್ಸಿನವರು ಕೂಡ ಖಾತೆ ತೆರೆಯಬಹುದಾಗಿದೆ. ಯೋಜನೆಯಲ್ಲಿ ಹೂಡಿಕೆ ಮಾಡಿದ ನಂತರ ರೈತ ಅಕಾಲಿಕ ಮರಣ ಹೊಂದಿದರೆ ಆತನ ಉಳಿತಾಯದ ಶೇಕಡ 50% ನಷ್ಟು ಹಣವನ್ನು ಆತನ ಪತ್ನಿಗೆ ನೀಡಲಾಗುತ್ತದೆ.
ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಆಸಕ್ತರು ಕೂಡಲೇ ಅರ್ಜಿ ಹಾಕಿ
ಕಿಸಾನ್ ಮನ್ ಧನ್ ಮಾಸಿಕ ಪಿಂಚಣಿ ಹೂಡಿಕೆ!
ನೀವು ಯಾವ ವಯಸ್ಸಿನಲ್ಲಿ ಹೂಡಿಕೆ ಮಾಡಲು ಬಯಸುತ್ತೀರೋ, ಅದರ ಆಧಾರದ ಮೇಲೆ ಹಣ ಪಾವತಿ ಮಾಡಬೇಕು, 18 ವರ್ಷ ವಯಸ್ಸಿನಿಂದ ೪೦ ವರ್ಷ ವಯಸ್ಸಿನವರೆಗಿನ ರೈತರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ನೀವು 18 ವರ್ಷ ವಯಸ್ಸಿನಲ್ಲಿ ಹೂಡಿಕೆ ಮಾಡಿದರೆ ತಿಂಗಳಿಗೆ ಕೇವಲ 55 ರೂಪಾಯಿಗಳನ್ನು ಪಾವತಿಸಬೇಕು.
ಅದೇ ನೀವು 30 ವರ್ಷ ವಯಸ್ಸಿನಲ್ಲಿ ಹೂಡಿಕೆ (Investment) ಮಾಡುವುದಾದರೆ 110ರೂ.ಗಳನ್ನು ಮೀಸಲಿಡಬೇಕು. ಹಾಗೂ 40 ವರ್ಷ ಮೀರಿದವರು ಪ್ರತಿ ತಿಂಗಳು 270ರೂ. ಗಳನ್ನು ಠೇವಣಿ (deposit) ಇಡಬೇಕಾಗುತ್ತದೆ. ಠೇವಣಿ ಇಟ್ಟ ರೈತನಿಗೆ 60 ವರ್ಷ ಆಗುತ್ತಿದ್ದ ಹಾಗೆ ಪಿಂಚಣಿ ಸೌಲಭ್ಯ ಪಡೆದುಕೊಳ್ಳಬಹುದು.
ಸರ್ಕಾರದಿಂದ ನಿವೇಶನ, ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ! ಈ ಜಿಲ್ಲೆಯವರಿಗೆ ಸಿಗಲಿದೆ ಪ್ರಯೋಜನ
ಪ್ರತಿ ತಿಂಗಳು ಪಡೆಯಿರಿ 3,000 ರೂ.ಪಿಂಚಣಿ! (Monthly pension)
ನೀವು ಅತಿ ಕಡಿಮೆ ವಯಸ್ಸಿನಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಪಾವತಿ ಮಾಡಿದರೆ ಸಾಕು ಇನ್ನು ಮೂರು ಸಾವಿರ ರೂಪಾಯಿಗಳ ಪಿಂಚಣಿ ಅಂದರೆ ನೀವು ಪ್ರತಿ ವರ್ಷ 36,000 ರೂ.ಗಳನ್ನು ಪಾವತಿ ಮಾಡಬೇಕಾಗುತ್ತದೆ.
ಕನಿಷ್ಠ 55 ರಿಂದ 200 ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ವರ್ಷಕ್ಕೆ 660 ಅಥವಾ ಗರಿಷ್ಠ 24 ನೂರು ರೂಪಾಯಿಗಳನ್ನು ನೇರವಾಗಿ ನಿಮ್ಮ ಖಾತೆಯಿಂದಲೇ (Bank Account) ಕಡಿತಗೊಳಿಸಲಾಗುವುದು.
60 ವರ್ಷ ಮೇಲ್ಪಟ್ಟ ನಂತರ ಹಣ ಕಡಿತಗೊಳ್ಳುವುದಿಲ್ಲ ಬದಲಾಗಿ ಪಿಂಚಣಿ ಹಣ ಲಭ್ಯ ಆಗುತ್ತದೆ. ಆನ್ಲೈನ್ ಮೂಲಕವೆ ಹೂಡಿಕೆ ಆರಂಭಿಸಬಹುದು ಅಥವಾ ಯಾವುದೇ ಬ್ಯಾಂಕ್ (Bank) ಹಾಗೂ ಅಂಚೆ ಕಚೇರಿಯಲ್ಲಿ ಖಾತೆ (Post Office Account) ತೆರೆಯುವುದರ ಮೂಲಕ ಹೂಡಿಕೆ ಆರಂಭಿಸಬಹುದು. ಹಾಗಾಗಿ ಪಿಎಂ ಕಿಸಾನ್ ಮನ್ ಧನ್ ಯೋಜನೆಯಡಿಯಲ್ಲಿ ಹೂಡಿಕೆ ಮಾಡಿ ವೃದ್ಧಾಪ್ಯ ಜೀವನವನ್ನು ಆನಂದವಾಗಿ ಕಳೆಯಿರಿ.
ಕೃಷಿ ಜಮೀನು ಇರೋ ರೈತರ ಖಾತೆಗೆ 25,000 ಜಮಾ; ನಿಮ್ಮ ಖಾತೆಗೂ ಬಂದಿದ್ಯಾ ಚೆಕ್ ಮಾಡಿ
An important scheme of the government to get 3,000 Monthly pension for farmers