ಗೃಹಲಕ್ಷ್ಮಿ ಯೋಜನೆ ಹಣಕ್ಕೆ ಮತ್ತೊಂದು ಹೊಸ ರೂಲ್ಸ್! ಇಲ್ಲಿದೆ ಬಿಗ್ ಅಪ್ಡೇಟ್
ಈಗಾಗಲೇ 8 ಮತ್ತು 9ನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲಾಗಿದೆ ಏಪ್ರಿಲ್ ತಿಂಗಳಿನಲ್ಲಿ ನಾಲ್ಕು ಸಾವಿರ ರೂಪಾಯಿಗಳು ಮಹಿಳೆಯರ ಖಾತೆಗೆ ಜಮಾ (Money Deposit) ಆಗಿದೆ
ಪ್ರತಿ ತಿಂಗಳು ಗೃಹಿಣಿಯರು ಖಾತೆಗೆ (Bank Account) 2,000ಗಳನ್ನು ಜಮಾ ಮಾಡುವ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಆರಂಭವಾಗಿ ಸುಮಾರು 9 ತಿಂಗಳು ಕಳೆದಿವೆ. ಈಗಾಗಲೇ 8 ಮತ್ತು 9ನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲಾಗಿದೆ ಏಪ್ರಿಲ್ ತಿಂಗಳಿನಲ್ಲಿ ನಾಲ್ಕು ಸಾವಿರ ರೂಪಾಯಿಗಳು ಮಹಿಳೆಯರ ಖಾತೆಗೆ ಜಮಾ (Money Deposit) ಆಗಿದೆ.
ಹೌದು, ಪ್ರತಿ ತಿಂಗಳು ಏಪ್ರಿಲ್ 20 ನೇ ತಾರೀಖಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ ಈ ಚುನಾವಣೆಯ ಹಿನ್ನೆಲೆಯಲ್ಲಿ 9ನೇ ಕಂತಿನ ಹಣವನ್ನು ಮಾತ್ರ ಬಹಳ ಬೇಗ ಬಿಡುಗಡೆ ಮಾಡಲಾಗಿತ್ತು.
ಸಾಕಷ್ಟು ಜನ ಏಪ್ರಿಲ್ ತಿಂಗಳಿನಲ್ಲಿಯೇ ಮೇ ತಿಂಗಳ ಹಣವನ್ನು ಪಡೆದುಕೊಂಡಿದ್ದಾರೆ. 9ನೇ ಕಂತಿನ ಹಣ ಮೇ 20ನೇ ತಾರೀಕಿನ ಒಳಗಡೆ ಫಲಾನುಭವಿಗಳ ಖಾತೆ ತಲುಪುವ ನಿರೀಕ್ಷೆ ಇದೆ.
ಹೊಸ ರೇಷನ್ ಕಾರ್ಡ್ ಬೇಕಾ? ಎಪಿಎಲ್ ಹಾಗೂ ಬಿಪಿಎಲ್ ಕಾರ್ಡಿಗೆ ಈ ರೀತಿ ಅರ್ಜಿ ಸಲ್ಲಿಸಿ
ಈ ಕೆಲಸ ಮಾಡಿಕೊಳ್ಳಿ ಹಣ ಬರುತ್ತೆ!
ಸರ್ಕಾರ ಪೆಂಡಿಂಗ್ (pending amount) ಇರುವ ಹಣವನ್ನು ಕೂಡ ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿತ್ತು. ಆದರೆ ಸದ್ಯ ಇದು ಸಾಧ್ಯವಾಗಿಲ್ಲ. ಆದರೂ ನೀವು ನಿಮ್ಮ ಖಾತೆಗೆ ಸಂಬಂಧಪಟ್ಟ ಹಾಗೆ ಅಪ್ಡೇಟ್ಗಳನ್ನು ಮಾಡಿಕೊಂಡರೆ ಪ್ರತಿ ತಿಂಗಳು ತಪ್ಪದೇ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.
ನೀವು ಯಾವ ಬ್ಯಾಂಕ್ ನಲ್ಲಿ ಖಾತೆ ಹೊಂದಿರುತ್ತೀರೋ ಆ ಬ್ಯಾಂಕ್ ಖಾತೆಗೆ ಈ ಕೆ ವೈ ಸಿ (E-KYC) ಆಗಿರಬೇಕು ಅಗತ್ಯ ಇದ್ದಲ್ಲಿ ಎಂ ಪಿ ಸಿ ಐ ಮ್ಯಾಪಿಂಗ್ (NPCI mapping ) ಆಗಬೇಕು. ಜೊತೆಗೆ ಆಧಾರ್ ಕಾರ್ಡ್ ಅಪ್ಡೇಟ್ ಕೂಡ ಬಹಳ ಮುಖ್ಯವಾಗಿರುತ್ತದೆ.
ಮೇ ತಿಂಗಳಿನಲ್ಲಿ ಅನ್ನಭಾಗ್ಯ ಯೋಜನೆ ಹಣ ಯಾವಾಗ ಜಮಾ ಆಗುತ್ತೆ? ಇಲ್ಲಿದೆ ಡೀಟೇಲ್ಸ್
ಅತ್ತೆ ಇಲ್ಲದಿದ್ದರೆ ಸೊಸೆ ಖಾತೆಗೆ ಹಣ ಜಮಾ!
ಮನೆಯ ಹಿರಿಯ ಯಜಮಾನಿ ಖಾತೆಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತದೆ, ಆದರೆ ಒಂದು ವೇಳೆ ಅತ್ತೆ ಮರಣ ಹೊಂದಿದ್ದ ರೆ ಮತ್ತೆ ಆ ಮನೆಯ ಹಿರಿಯ ಸೊಸೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಿ ತಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ, ಹಾಗಾಗಿ ಅತ್ತೆ ಇಲ್ಲದೆ ಇದ್ದಾಗ ಸೊಸೆ ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್; ಇಂತಹವರಿಗೆ ಮಾತ್ರ ಗೃಹಲಕ್ಷ್ಮಿ ಹಣ ಖಾತೆಗೆ ಬರುತ್ತೆ
ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಘೋಷಿಸಿಲ್ಲ. ಹಾಗಾಗಿ ಈಗಲೂ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಅಗತ್ಯ ಇರುವವರು ಹಾಗೂ ಅರ್ಹರು ಮತ್ತೆ ಅರ್ಜಿ ಸಲ್ಲಿಸಿ ತಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು.
Another new rules for Gruha lakshmi Yojana money, Here’s the big update