ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್; ಇಂತಹವರಿಗೆ ಮಾತ್ರ ಗೃಹಲಕ್ಷ್ಮಿ ಹಣ ಖಾತೆಗೆ ಬರುತ್ತೆ
ಗೃಹಲಕ್ಷ್ಮಿ ಹಣ ಇನ್ನೂ ಕೆಲವರಿಗೆ ಸಿಕ್ಕಿಲ್ಲ, ಇದಕ್ಕೆ ಮುಖ್ಯ ಕಾರಣ ಮಹಿಳೆಯರ ಖಾತೆಯಲ್ಲಿ (Bank Account) ಬೇಕಾಗಿರುವ ಬದಲಾವಣೆ ಮಾಡಿಸಿಕೊಳ್ಳದೆ ಇರುವುದು.
ರಾಜ್ಯ ಸರ್ಕಾರದ ಅತ್ಯಂತ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು, ಇಂದು ಕೋಟ್ಯಾಂತರ ಮಹಿಳೆಯರು ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 2000 ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಬಹುತೇಕ ಯಶಸ್ವಿಯಾಗಿದ್ದು ರಾಜ್ಯ ಸರ್ಕಾರ ಈ ಯೋಜನೆಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಟ್ಟಿದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ದಿನದಿಂದ ದಿನಕ್ಕೆ ಹೊಸ ಹೊಸ ರೀತಿಯ ಅಪ್ಡೇಟ್ ಗಳು ಸಿಗುತ್ತಿದ್ದು ಈಗ ಯಾವ ವಿಷಯದ ಬಗ್ಗೆ ಮಾಹಿತಿ ಸಿಕ್ಕಿದೆ ಎಂಬುದನ್ನು ನೋಡೋಣ.
ರೇಷನ್ ಕಾರ್ಡ್ ವಿತರಣೆಗೆ ಮರುಚಾಲನೆ! ಯಾವಾಗಿಂದ ಸಿಗುತ್ತೆ ಹೊಸ ಕಾರ್ಡ್ ಗೊತ್ತಾ?
ಪೆಂಡಿಂಗ್ ಇರುವ ಹಣ ನಿಜಕ್ಕೂ ಬರುತ್ತಾ?
ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣ ಬಿಡುಗಡೆ ಆಗಿದೆ, ಆದರೆ ಸಾಕಷ್ಟು ಜನರಿಗೆ ಮೊದಲ ಒಂದೆರಡು ಕಂತಿನ ಹಣ ಬಿಡುಗಡೆಯಾಗಿ ಮತ್ತೆ ಗ್ರಹಲಕ್ಷ್ಮಿ ಯೋಜನೆಯ ಹಣ ಸಿಕ್ಕಿಲ್ಲ ಅಂತವರಿಗೆ ಪೆಂಡಿಂಗ್ ಹಣ ಬಿಡುಗಡೆ ಮಾಡುತ್ತೇವೆ ಎಂದು ಸರ್ಕಾರ ತಿಳಿಸಿತ್ತು.
ಇದುವರೆಗೆ ಹಲವರಿಗೆ ಪೆಂಡಿಂಗ್ ಇರುವ ಹಣ ಲಭ್ಯವಾಗಿದೆ ಆದರೆ ಎಲ್ಲರಿಗೂ ಈ ಹಣ ಸಿಕ್ಕಿಲ್ಲ ಇದಕ್ಕೆ ಮುಖ್ಯ ಕಾರಣ ಮಹಿಳೆಯರ ಖಾತೆಯಲ್ಲಿ (Bank Account) ಬೇಕಾಗಿರುವ ಬದಲಾವಣೆ ಮಾಡಿಸಿಕೊಳ್ಳದೆ ಇರುವುದು.
ಈ ಬದಲಾವಣೆಗಳು ಆಗಬೇಕಿತ್ತು!
ರಾಜ್ಯ ಸರ್ಕಾರ ಈಗಾಗಲೇ ತಿಳಿಸಿರುವಂತೆ ಕೆಲವು ಪ್ರಮುಖ ಬದಲಾವಣೆಗಳನ್ನು ಬ್ಯಾಂಕ ಖಾತೆಯಲ್ಲಿ ಮಾಡಿಕೊಳ್ಳಬೇಕಿತ್ತು. ಉದಾಹರಣೆಗೆ ಆಧಾರ್ ಸೀಡಿಂಗ್ ಮಾಡಿಸುವುದು, ಈಕೆ ವೈ ಸಿ ಮಾಡಿಸುವುದು, ಅಗತ್ಯವಿದ್ದಲ್ಲಿ ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸುವುದು, ಹಾಗೆಯೇ ಮಹಿಳೆಯರ ಬ್ಯಾಂಕ್ ಖಾತೆಯನ್ನು ಆಕ್ಟಿವ್ ಆಗಿ ಇಟ್ಟುಕೊಳ್ಳುವುದು. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅಂಥವರ ಖಾತೆಗೆ ಹಣ ಜಮಾ (Money Deposit) ಮಾಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆ ಕುರಿತು ಬಿಗ್ ಅಪ್ಡೇಟ್; ಫಲಾನುಭವಿಗಳ ಹೊಸ ಲಿಸ್ಟ್ ಬಿಡುಗಡೆ!
8 ಮತ್ತು 9ನೇ ಕಂತಿನ ಹಣ ಒಟ್ಟಿಗೆ ಖಾತೆಗೆ ಡಿಬಿಟಿ ಮಾಡಿದ ಸರ್ಕಾರ!
ಪ್ರತಿ ತಿಂಗಳು 20 ನೇ ತಾರೀಖಿನ ನಂತರ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಬಾರಿ ಬಹಳ ಬೇಗ ಹಣ ಮಂಜೂರು ಮಾಡಲಾಗಿದ್ದು 9ನೇ ಕಂತಿನ ಹಣ ಮೇ ತಿಂಗಳ ಬದಲು ಏಪ್ರಿಲ್ ತಿಂಗಳಿನಲ್ಲಿಯೇ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಕೆಲವು ಜಿಲ್ಲೆಯ ಮಹಿಳೆಯರಿಗೆ ಏಪ್ರಿಲ್ ತಿಂಗಳಿನಲ್ಲಿ ಎಂಟು ಮತ್ತು ಒಂಬತ್ತನೇ ಕಂತಿನ ಹಣ ಕೊಟ್ಟಿಗೆ ನಾಲ್ಕು ಸಾವಿರ ರೂಪಾಯಿ ಜಮಾ ಆಗಿದೆ.
ಕೊನೆಗೂ ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ! ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಿ
ಸಿ ಡಿ ಪಿ ಓ ಕಚೇರಿಗೆ ಹೋಗಿ ಅಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ಅಥವಾ ಆಶಾ ಕಾರ್ಯಕರ್ತೆಯರು ಅಂಗನವಾಡಿ ಸಹಾಯಕಿಯರನ್ನು ಭೇಟಿ ಮಾಡಿ ಮಹಿಳೆಯರು ತಮ್ಮ ಖಾತೆಗೆ ಸಂಬಂಧಪಟ್ಟ ಸಮಸ್ಯೆ ಇದ್ರೆ ಅವರಿಂದಲೇ ಪರಿಹಾರ ಪಡೆದುಕೊಳ್ಳಬಹುದು.
Gruha Lakshmi money will Deposit to the account only for such people