ಹೊಸ ರೇಷನ್ ಕಾರ್ಡ್ ಬೇಕಾ? ಎಪಿಎಲ್ ಹಾಗೂ ಬಿಪಿಎಲ್ ಕಾರ್ಡಿಗೆ ಈ ರೀತಿ ಅರ್ಜಿ ಸಲ್ಲಿಸಿ
ಎಲ್ಲಾ ರೀತಿಯ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕಿದ್ದರೆ ಬಿಪಿಎಲ್ ರೇಷನ್ ಕಾರ್ಡ್ (BPL ration card) ಅನ್ನು ಕಡ್ಡಾಯವಾಗಿ ಹೊಂದಿರಬೇಕು, ಬಿಪಿಎಲ್ ರೇಷನ್ ಕಾರ್ಡ್ ಯಾರ ಬಳಿ ಇಲ್ಲವೋ ಅವರಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳಾಗಲಿ ಅಥವಾ ಇತರ ಯಾವುದೇ ಪಿಂಚಣಿ (pension) ಹಾಗೂ ಮೊದಲಾದ ಯೋಜನೆಯ ಪ್ರಯೋಜನಗಳಾಗಲಿ ಸಿಗುವುದಿಲ್ಲ.
ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್ ವಿತರಣೆ ಮಾಡಿರುವುದು ಬಡತನ ರೇಖೆಗಿಂತ ಕೆಳಗಿರುವವರು ಯಾವುದೇ ಕಾರಣಕ್ಕೂ ಉಪವಾಸ ಇರಬಾರದು ಎನ್ನುವ ಕಾರಣಕ್ಕೆ ಅಂದರೆ ಅಂತವರಿಗೆ ಪಡಿತರ ಚೀಟಿಯನ್ನು ವಿತರಣೆ ಮಾಡಿ ಉಚಿತವಾಗಿ ಪಡಿತರ ವಸ್ತುಗಳನ್ನ ಕೊಡಲಾಗುತ್ತಿದೆ
ಮೇ ತಿಂಗಳಿನಲ್ಲಿ ಅನ್ನಭಾಗ್ಯ ಯೋಜನೆ ಹಣ ಯಾವಾಗ ಜಮಾ ಆಗುತ್ತೆ? ಇಲ್ಲಿದೆ ಡೀಟೇಲ್ಸ್
ಉದಾಹರಣೆಗೆ, ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ ಉಚಿತವಾಗಿ ಸಿಗುತ್ತಿದೆ. ಇದರ ಜೊತೆಗೆ, ಗೋಧಿ ರಾಗಿ ಸಕ್ಕರೆ ಮೊದಲ ವಸ್ತುಗಳನ್ನು ಕೂಡ ನೀಡಲಾಗುತ್ತಿದೆ.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈ ದಿನದಿಂದ ಪ್ರಾರಂಭ!
ನಿಮಗೆಲ್ಲ ತಿಳಿದಿರುವಂತೆ ದೇಶದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಇನ್ನು ಒಂದು ಹಂತದ ಮತದಾನ ನಡೆಯಲಿದ್ದು ಜೂನ್ ನಾಲ್ಕು ಮತ್ತು ಐದನೇ ತಾರೀಕಿಗೆ ಚುನಾವಣಾ ನೀತಿ ಸಂಹಿತೆ ಹಾಕಿರುವ ನಿರ್ಬಂಧನೆಗಳು ತೆಗೆಯಲ್ಪಡುತ್ತವೆ ಹಾಗೂ ಜೂನ್ 5ನೆ ತಾರೀಖಿನ ನಂತರ ಮತ್ತೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್; ಇಂತಹವರಿಗೆ ಮಾತ್ರ ಗೃಹಲಕ್ಷ್ಮಿ ಹಣ ಖಾತೆಗೆ ಬರುತ್ತೆ
ಯಾರಿಗೆ ಸಿಗುತ್ತೇ ರೇಷನ್ ಕಾರ್ಡ್?
* ಹೊಸದಾಗಿ ಮದುವೆಯಾದ ನವ ವಿವಾಹಿತ ಪತಿ ಪತ್ನಿ ಅರ್ಜಿ ಸಲ್ಲಿಸಬಹುದು
* ಕುಟುಂಬದಲ್ಲಿ ಈಗಾಗಲೇ ರೇಷನ್ ಕಾರ್ಡ್ ಇದ್ರೆ ಮತ್ತೆ ರೇಷನ್ ಕಾರ್ಡ್ ಸಿಗುವುದಿಲ್ಲ
* ಆರ್ಥಿಕವಾಗಿ ಸಬಲರಾಗಿರುವವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.
ರೇಷನ್ ಕಾರ್ಡ್ ವಿತರಣೆಗೆ ಮರುಚಾಲನೆ! ಯಾವಾಗಿಂದ ಸಿಗುತ್ತೆ ಹೊಸ ಕಾರ್ಡ್ ಗೊತ್ತಾ?
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
ಆಧಾರ್ ಕಾರ್ಡ್
ವಿಳಾಸದ ಪುರಾವೆ
ಬ್ಯಾಂಕ ಖಾತೆಯ ವಿವರ
ಅಡ್ರೆಸ್ ಪ್ರೂಫ್ ಗಾಗಿ ವೋಟರ್ ಐಡಿ
ಪ್ಯಾನ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ರೇಷನ್ ಕಾರ್ಡ್ ಗಾಗಿ https://ahara.kar.nic.in/ ಈ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು.
Need a new ration card, Apply for APL and BPL card like this