Karnataka NewsBangalore News

ಮೇ ತಿಂಗಳಿನಲ್ಲಿ ಅನ್ನಭಾಗ್ಯ ಯೋಜನೆ ಹಣ ಯಾವಾಗ ಜಮಾ ಆಗುತ್ತೆ? ಇಲ್ಲಿದೆ ಡೀಟೇಲ್ಸ್

ಅನ್ನಭಾಗ್ಯ ಯೋಜನೆ (Annabhagya scheme) ಗೆ ಸಂಬಂಧಪಟ್ಟ ಹಾಗೆ ಹೊಸ ಅಪ್ಡೇಟ್ ಸಿಕ್ಕಿದೆ, ಈಗಾಗಲೇ ಎಂಟು ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ (Bank Account) ಬಿಡುಗಡೆ ಮಾಡಲಾಗಿದ್ದು 9ನೇ ಕಂತಿನ ಹಣ ಇದೆ ಮೇ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ.

ಇದರ ಬಗ್ಗೆ ಮತ್ತೊಂದು ಹೊಸ ಮಾಹಿತಿ ಲಭ್ಯವಾಗಿದ್ದು, ಯಾವಾಗ ಹಣ ಬಿಡುಗಡೆ ಆಗುತ್ತದೆ ಎನ್ನುವ ದಿನಾಂಕವನ್ನು ಪ್ರಕಟಿಸಲಾಗಿದೆ.

Do this if Annabhagya Yojana money not reached your Bank account yet

ಕಳೆದ 8 ತಿಂಗಳುಗಳಿಂದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ (Money Deposit) ಮಾಡಲಾಗುತ್ತಿದೆ. 10 ಕೆಜಿ ಅಕ್ಕಿಯನ್ನು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಒದಗಿಸಬೇಕಿತ್ತು. ಆದರೆ ಈಗ ಸದ್ಯಕ್ಕೆ ಕೇಂದ್ರ ಸರ್ಕಾರದಿಂದ ಸಿಗುತ್ತಿರುವ 5 ಕೆಜಿ ಅಕ್ಕಿ ಮಾತ್ರ ಪಡೆದುಕೊಳ್ಳಬಹುದಾಗಿದ್ದು, ಇನ್ನು ಐದು ಕೆಜಿ ಅಕ್ಕಿ ಬದಲು ರಾಜ್ಯ ಸರ್ಕಾರ ಹಣವನ್ನು ಜಮಾ ಮಾಡುತ್ತಿದೆ

ರೇಷನ್ ಕಾರ್ಡ್ ವಿತರಣೆಗೆ ಮರುಚಾಲನೆ! ಯಾವಾಗಿಂದ ಸಿಗುತ್ತೆ ಹೊಸ ಕಾರ್ಡ್ ಗೊತ್ತಾ?

ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳು, ಅಂದರೆ 5 ಕೆಜಿ ಅಕ್ಕಿಗೆ 170ಗಳನ್ನು ಜಮಾ ಮಾಡಲಾಗುತ್ತಿದೆ. ಮನೆಯಲ್ಲಿ ಎಷ್ಟು ಸದಸ್ಯರು ಇದ್ದಾರೋ ಅಷ್ಟು ಸದಸ್ಯರಿಗೂ ಐದು ಕೆಜಿ ಅಕ್ಕಿ ಹಣ ಜಮಾ ಆಗುತ್ತದೆ. ಹಾಗಾಗಿ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಸಾವಿರಗಟ್ಟಲೆ ಹಣವನ್ನು ಪಡೆದುಕೊಳ್ಳುತ್ತಿರುವವರು ಇದ್ದಾರೆ.

ಈ ಕೆಲಸ ಮಾಡುವುದು ಕಡ್ಡಾಯ!

ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುವುದರಿಂದ ಇದು ಡಿಜಿಟಲ್ ಪ್ರಕ್ರಿಯೆ ಆಗಿರುತ್ತದೆ. ಹಾಗಾಗಿ ಸರಿಯಾಗಿ ನಿಮ್ಮ ಬ್ಯಾಂಕ್ ಖಾತೆಗೆ ಅಗತ್ಯ ಇರುವ ಅಪ್ಡೇಟ್ಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಆಧಾರ್ ಸೀಡಿಂಗ್, ಈ ಕೆ ವೈ ಸಿ ಅಪ್ಡೇಟ್, ಎನ್ ಪಿ ಸಿ ಐ ಮ್ಯಾಪಿಂಗ್ ಈ ಮೊದಲಾದ ಅಪ್ಡೇಟ್ಗಳು ಆಗಬೇಕು ಇಲ್ಲವಾದರೆ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದಿಲ್ಲ.

ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್; ಇಂತಹವರಿಗೆ ಮಾತ್ರ ಗೃಹಲಕ್ಷ್ಮಿ ಹಣ ಖಾತೆಗೆ ಬರುತ್ತೆ

Annabhagya Schemeನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ!

ಬ್ಯಾಂಕ ಖಾತೆಗೆ ಹಣ ಜಮಾ ಆಗಿದ್ಯೋ, ಇಲ್ಲವೋ ಎನ್ನುವುದನ್ನು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಅಥವಾ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ DBT Karnataka ಮೊಬೈಲ್ ಅಪ್ಲಿಕೇಶನ್ ಮೂಲಕ ತಿಳಿದುಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆ ಕುರಿತು ಬಿಗ್ ಅಪ್ಡೇಟ್; ಫಲಾನುಭವಿಗಳ ಹೊಸ ಲಿಸ್ಟ್ ಬಿಡುಗಡೆ!

ಮೇ ತಿಂಗಳ ಹಣ ಬಿಡುಗಡೆ!

ಇದೇ ತಿಂಗಳು 15ನೇ ತಾರೀಕಿಗೆ 9ನೇ ಕಂತಿನ ಹಣ ಬಿಡುಗಡೆ ಆಗಲಿದೆ ತಿಂಗಳು ಮುಗಿಯುವುದರ ಒಳಗೆ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತದೆ. ಪ್ರತಿ ಕುಟುಂಬದಲ್ಲಿಯೂ ಮನೆಯ ಯಜಮಾನನ ಖಾತೆಗೆ ಹಣ ಜಮಾ ಆಗುತ್ತದೆ.

ಆದರೆ ಇತ್ತೀಚಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಕ್ಕೆ ರೇಷನ್ ಕಾರ್ಡ್ ನಲ್ಲಿ ಮಹಿಳೆಯರ ಹೆಸರು ಪ್ರಧಾನವಾಗಿ ಇರಬೇಕು ಎನ್ನುವ ಹಿನ್ನೆಲೆಯಲ್ಲಿ, ಅನ್ನಭಾಗ್ಯ ಯೋಜನೆಯ ಹಣ ಮಹಿಳೆಯರ ಖಾತೆಗೂ ಜಮಾ ಆಗುತ್ತಿದೆ.

ಕೊನೆಗೂ ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ! ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಿ

When will Annabhagya Yojana money be deposited in the month of May

Our Whatsapp Channel is Live Now 👇

Whatsapp Channel

Related Stories