ಸೈಟ್ ಹಾಗೂ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನ; ಇ-ಪೇಮೆಂಟ್ ಮೂಲಕ ನಿಮ್ಮದಾಗಿಸಿಕೊಳ್ಳಿ
ನೀವು ನಿಮ್ಮದೇ ಆಗಿರುವ ಸೈಟ್ ಖರೀದಿ (site purchase) ಮಾಡಬೇಕಾ? ಯಾವುದೇ ಮೋಸದ ವಹಿವಾಟು ಇಲ್ಲದೆ ಸರಿಯಾದ ರೀತಿಯಲ್ಲಿ ನಿವೇಶನ ನಿಮ್ಮದಾಗಿಸಿಕೊಳ್ಳಬೇಕಾ? ಹಾಗಾದ್ರೆ ಗೃಹ ಮಂಡಳಿ (Karnataka housing board) ಹಂಚಿಕೆ ಮಾಡುತ್ತಿರುವ ಸೈಟ್ ಖರೀದಿ (Site Purchase) ಮಾಡಲು ಕೂಡಲೇ ಅರ್ಜಿ ಸಲ್ಲಿಸಿ.
ಗೃಹ ಮಂಡಳಿ ನಿವೇಶನ ಹಂಚಿಕೆ (Karnataka housing board site distribution)
ಗೃಹ ಮಂಡಳಿ ಅಭಿವೃದ್ಧಿಪಡಿಸುತ್ತಿರುವ ನಿವೇಶನ ಹಂಚಿಕೆ ಈಗಾಗಲೇ ಆಗಿದ್ದು ಉಳಿದಿರುವ ನಿವೇಶನ ಅಥವಾ ಸೈಟ್ ಖರೀದಿ ಮಾಡಲು ಆನ್ಲೈನ್ (online apply) ನಲ್ಲಿ ಅರ್ಜಿ ಕರೆಯಲಾಗಿದೆ
ನೀವು ಇ- ಪೇಮೆಂಟ್ (E payment) ಮಾಡುವುದರ ಮೂಲಕ ಸೈಟ್ ನಿಮ್ಮದಾಗಿಸಿಕೊಳ್ಳಬಹುದು. ನಿವೇಶನ ಖರೀದಿಗೆ (House Purchase) ಮೊದಲು ಠೇವಣಿ ಹಣವನ್ನು ಕೊಡಬೇಕು.
ಮುಲಾಜಿಲ್ಲದೆ ಇಂತಹ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಸೌಲಭ್ಯ ಕ್ಯಾನ್ಸಲ್
ನೋಂದಣಿ ಶುಲ್ಕ (Registration fee)
ನಿವೇಶನ ಖರೀದಿ ಮಾಡುವುದಿದ್ದರೆ ನೀವು ನೋಂದಣಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಜೊತೆಗೆ ಆರಂಭಿಕ ಠೇವಣಿ ಮೊತ್ತವನ್ನು ಕೂಡ ಕೊಡಬೇಕು. ಕೊಡಬೇಕಾಗಿರುವ ಶುಲ್ಕ ಹಾಗೂ ಠೇವಣಿ ಮೊತ್ತದ ವಿವರ ಹೀಗಿದೆ.
EWS (ಕಡಿಮೆ ಆದಾಯ ಹೊಂದಿರುವವರು)-25,300 ರೂ.
LIG-50,500ರೂ.
MIG- (ಮಧ್ಯಮ ಆದಾಯ) 76,000 ರೂ.
HIG-1 & 2 – 1,01,500 ರೂ.ಗಳನ್ನು ಪಾವತಿ ಮಾಡಬೇಕು.
ಹೊಸ ಬಿಪಿಎಲ್ ಕಾರ್ಡ್ ವಿತರಣೆ ಬಗ್ಗೆ ಬಿಗ್ ಅಪ್ಡೇಟ್! ಇನ್ಮುಂದೆ ಸಿಗುತ್ತೆ ಇನ್ನಷ್ಟು ಬೆನಿಫಿಟ್
ಗೃಹ ಮಂಡಳಿಯ ಸೈಟ್ಗಳು ಎಲ್ಲಿ ಲಭ್ಯವಿವೆ?
*ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕದಾದವಾಡಗಿ ಸ್ಥಳದಲ್ಲಿ ಸೈಟ್ ಮಾರಾಟಕ್ಕಿದೆ. ಪ್ರತಿ ಚದರ ಅಡಿ ಗೆ 500 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
*ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅನಂತನಹಳ್ಳಿ, ಮೆಳ್ಳೆಕಟ್ಟೆಯಲ್ಲಿಯೂ ಗೃಹ ಮಂಡಳಿ ಅಭಿವೃದ್ಧಿಪಡಿಸಿರುವ ನಿಮಿಷಗಳು ಲಭ್ಯವಿದ್ದು ಇಲ್ಲಿ ಪ್ರತಿ ಚದರ ಅಡಿಗೆ 650 ರೂಪಾಯಿಗಳು. ಬಳ್ಳಾರಿ ಮೊದಲಾದ ಪ್ರದೇಶಗಳಲ್ಲಿಯೂ ಕೂಡ ನಿವೇಶನಗಳು ಲಭ್ಯವಿವೆ.
ಅನ್ನಭಾಗ್ಯ ಯೋಜನೆ ಹಣ ಸಂದಾಯಕ್ಕೆ ಸರ್ಕಾರ ಹೊಸ ತಂತ್ರ! ಇನ್ಮುಂದೆ ಹಣ ಮಿಸ್ ಆಗೋಲ್ಲ
ಶರತ್ತುಗಳು ಅನ್ವಯ; (conditions apply)
*ಇನ್ನು ನಿವೇಶನ ಖರೀದಿ ಮಾಡುವವರು ನಿಗದಿತ ಪೂರ್ವ ಠೇವಣಿ (deposit) ಹಣ ಪಾವತಿ ಮಾಡದೆ ಇದ್ದರೆ ಅವರಿಗೆ ನಿವೇಶನ ನೀಡಲಾಗುವುದಿಲ್ಲ.
*ಒಮ್ಮೆ ಖರೀದಿಸಿದ ನಂತರ ಮತ್ತೆ ನಿವೇಶನ ಬೇಡ ಎಂದು ಹೇಳಲು ಸಾಧ್ಯವಿಲ್ಲ ಹಾಗೇನಾದರೂ ಮಾಡಿದರೆ 25% ನಷ್ಟು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
*ಇನ್ನು ಅರ್ಜಿದಾರರು 10 ವರ್ಷಗಳಿಗಿಂತ ಹಿಂದೆ ಅಥವಾ ಹತ್ತು ವರ್ಷಗಳಲ್ಲಿ ಯಾವುದೇ ರೀತಿಯ ಸರ್ಕಾರಿ ನಿವೇಶನ ಖರೀದಿ ಮಾಡಿಲ್ಲ ಎನ್ನುವ ನೋಟರಿ ದೃಢೀಕರಣ (affidavit) ನೀಡಬೇಕು.
ನಿವೇಶನ ಖರೀದಿ ಮಾಡಲು ಇ-ಪೇಮೆಂಟ್ ಮಾಡಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಗೃಹ ಮಂಡಳಿಯ ಅಧಿಕೃತ ವೆಬ್ಸೈಟ್ ಆಗಿರುವ https://www.khb.karnataka.gov.in ಗೆ ಭೇಟಿ ನೀಡಿ.
Application Invitation for Site and Plot Allotment