ಗ್ರಾಮ-ಒನ್ ಕೇಂದ್ರದ ಫ್ರಾಂಚೈಸಿ ಪ್ರಾರಂಭಿಸಲು ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಿ

ಹಳ್ಳಿ ಹಳ್ಳಿಗಳಲ್ಲಿ ಗ್ರಾಮ ಒನ್ ಕೇಂದ್ರವನ್ನ ತೆರೆಯಲು ಸರ್ಕಾರ ಇದೀಗ ಆಹ್ವಾನ ನೀಡಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

ಕೇಂದ್ರ (central government) ಮತ್ತು ರಾಜ್ಯ ಸರ್ಕಾರಗಳು (state government) ಸಾರ್ವಜನಿಕರಿಗಾಗಿ ಜಾರಿಗೆ ತರುವ ಯೋಜನೆಗಳು ಹಾಗೂ ಈಗಾಗಲೇ ಜಾರಿಯಲ್ಲಿ ಇರುವ ಸುಮಾರು 700 ಸೇವೆಗಳನ್ನು ಸಾರ್ವಜನಿಕರಿಗೆ ಸರಿಯಾಗಿ ಒದಗಿಸುವ ಕಾರ್ಯವನ್ನು ಗ್ರಾಮ ಒನ್ ಕೇಂದ್ರಗಳು (grama one centre) ಮಾಡುತ್ತವೆ.

ಪ್ರತಿಯೊಂದು ಹಳ್ಳಿಯ, ಹೋಬಳಿಯ ಜನರ ಅನುಕೂಲಕ್ಕಾಗಿ ಗ್ರಾಮ ಒನ್, ಬಾಪೂಜಿ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ಮೊದಲಾದ ಸೇವಾ ಕೇಂದ್ರಗಳು ಬೇಕೇ ಬೇಕು. ಹಾಗಾಗಿ ಹಳ್ಳಿ ಹಳ್ಳಿಗಳಲ್ಲಿ ಗ್ರಾಮ ಒನ್ ಕೇಂದ್ರವನ್ನ ತೆರೆಯಲು ಸರ್ಕಾರ ಇದೀಗ ಆಹ್ವಾನ ನೀಡಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ ಹಣ ಪಡೆಯೋಕೆ ಹೊಸ ರೂಲ್ಸ್! ತಪ್ಪದೆ ತಿಳಿಯಿರಿ

ಗ್ರಾಮ-ಒನ್ ಕೇಂದ್ರದ ಫ್ರಾಂಚೈಸಿ ಪ್ರಾರಂಭಿಸಲು ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಿ - Kannada News

ಗ್ರಾಮ ಒನ್ ತೆರೆಯಲು ಬೇಕಾಗಿರುವ ಅರ್ಹತೆಗಳು! (Eligibility)

*ಕಂಪ್ಯೂಟರ್ ಜ್ಞಾನ (computer knowledge) ನೀಡುವ ಯಾವುದೇ ಪದವಿ ಹೊಂದಿರಬಹುದು.
*ಕೇಂದ್ರ ಭಾಗದಲ್ಲಿ ಅಂದರೆ ಸಾರ್ವಜನಿಕರ ಸಂಪರ್ಕದಲ್ಲಿ ಇರುವ ಜಾಗದಲ್ಲಿ ಗ್ರಾಮ ಒನ್ ಕೇಂದ್ರವನ್ನ ಆರಂಭಿಸಬೇಕು.

*ಪೊಲೀಸ್ ವೆರಿಫಿಕೇಷನ್ ಪ್ರಮಾಣ ಪತ್ರ ಹೊಂದಿರಬೇಕು.

*ಒಂದರಿಂದ ಎರಡು ಲಕ್ಷ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡುವ ಸಾಮರ್ಥ್ಯ ಇರಬೇಕು.

ಈ ದಾಖಲೆ ಇದ್ರೆ ಆನ್ಲೈನ್ ಮೂಲಕವೇ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು!

ಈ ವಸ್ತುಗಳು ನಿಮ್ಮ ಗ್ರಾಮ ಒನ್ ಕೇಂದ್ರದಲ್ಲಿ ಇರಲೇಬೇಕು!

ಡೆಸ್ಕ್ ಟಾಪ್ ಅಥವಾ ಲ್ಯಾಪ್ಟಾಪ್ – (I3 ಪ್ರೊಸೆಸರ್ ಗಿಂತಲೂ ಅಡ್ವಾನ್ಸ್ ಆಗಿರುವುದು)
ಪ್ರಿಂಟರ್ (printer)
ಸ್ಕ್ಯಾನರ್ (scanner)
ಬಯೋಮೆಟ್ರಿಕ್ ಸ್ಕ್ಯಾನರ್ (biometric scanner)
ವೆಬ್ ಕ್ಯಾಮೆರಾ
ವೈಫೈ ರಿಸಿವರ್
ಇಂಟರ್ನೆಟ್ ಕನೆಕ್ಷನ್

ರೈತರಿಗೆ ಮತ್ತೊಂದು ಗುಡ್ ನ್ಯೂಸ್! ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ

Gram One Center in your districtಫ್ರಾಂಚೈಸಿ ತೆರೆಯಲು ಬೇಕಾಗಿರುವ ದಾಖಲೆಗಳು (documents to get franchise)

ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಬ್ಯಾಂಕ ಖಾತೆಯ ವಿವರ
ಗ್ರಾಮ ಒನ್ ಆರಂಭಿಸಲು ಬೇಕಾಗಿರುವ ಸ್ಥಳ ಇದೆ ಎನ್ನುವುದನ್ನು ತೋರಿಸುವ ದೃಢೀಕರಣ ಪ್ರಮಾಣ ಪತ್ರ
ಅಗತ್ಯ ಇರುವ ಎಲ್ಲಾ ಯಂತ್ರೋಪಕರಣಗಳು ಇವೆ ಎಂದು ತೋರಿಸುವ ದೃಢೀಕರಣ ಪ್ರಮಾಣ ಪತ್ರ

ಕೃಷಿ ಜಮೀನು ಹೊಂದಿರೋ ರೈತರಿಗೆ ಸಿಗಲಿದೆ 10,000 ರೂಪಾಯಿ! ಈ ರೀತಿ ಪಡೆಯಿರಿ

ಗ್ರಾಮ ಒನ್ ತೆರೆಯಲು ಅರ್ಜಿ ಸಲ್ಲಿಸುವುದು ಹೇಗೆ? (How to start grama one centre)

https://www.karnatakaone.gov.in/ ಈ ಅಧಿಕೃತ ವೆಬ್ಸೈಟ್ಗೆ ಹೋಗಿ ಗ್ರಾಮ ಒನ್ ಕೇಂದ್ರ ತೆರೆಯಲು ಬೇಕಾಗಿರುವ ಅಗತ್ಯ ಮಾಹಿತಿಗಳನ್ನು ಕೊಡಲಾಗಿದೆ ಮೊದಲು ಅದನ್ನ ಓದಿ ತಿಳಿದುಕೊಳ್ಳಿ. ಬಳಿಕ ಆನ್ಲೈನ್ ಮೂಲಕವೇ ಅರ್ಜಿ ಶುಲ್ಕವನ್ನು ಕೂಡ ಪಾವತಿ ಮಾಡಬೇಕು. ಈ ರೀತಿ ಮಾಡಿ ಅರ್ಜಿ ಫಾರ್ಮ್ ಭರ್ತಿ ಮಾಡಿ. ಈಗ ನಿಮ್ಮ ಗ್ರಾಮ ಒನ್ ಕೇಂದ್ರ ಆರಂಭಿಸಲು ಅರ್ಜಿ ಸಲ್ಲಿಕೆ ಆಗುತ್ತದೆ.

ಗ್ರಾಮ ಒನ್ ಕೇಂದ್ರ ತೆರೆಯಲು ಎಲ್ಲಿ ಅವಕಾಶವಿದೆ?

ನಿಟ್ಟೂರು, ಕೆ.ಬಡಕ, ಕಿರುಗೂರು, ಬಲ್ಯ ಮಂಡೂರು, ಪೊನ್ನಂಪೇಟಿಯ ನಾಲ್ಕೇರಿ, ಬೆಟ್ಟದಳ್ಳಿ, ಸೋಮವಾರಪೇಟೆಯ ಗರ್ವಾಲೆ, ಬೇಟೋಳಿ,ಮಡಿಕೇರಿಯ ಹೊಕ್ಕೇರಿ, ಕಾಕತ್ತೂರು, ಕರಿಕೆ.

Application Invitation to Start a Franchise of Gram-One Center

Follow us On

FaceBook Google News

Application Invitation to Start a Franchise of Gram-One Center