ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡೋದು ಈಗ ಸುಲಭ, ಮನೆಯಲ್ಲೇ ಕೂತು ಈ ರೀತಿ ಅಪ್ಲೈ ಮಾಡಿ

ಈಗ ನಮ್ಮ ರಾಜ್ಯದ ಜನರು ರೇಷನ್ ಕಾರ್ಡ್ (Ration Card) ಹೊಂದಿರುವುದು ಬಹಳ ಮುಖ್ಯ ಆಗಿದೆ. ರೇಷನ್ ಕಾರ್ಡ್ ಹೊಂದಿದ್ದರೆ ಮಾತ್ರ ನಿಮಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ಸಿಗುತ್ತದೆ. ರೇಷನ್ ಕಾರ್ಡ್ ಅನ್ನು ಬಡಜನರಿಗಾಗಿ ಕೊಡಲಾಗುವುದು. ಅದರ ಮೂಲಕ ಸರ್ಕಾರದಿಂದ ಎಲ್ಲಾ ಸೌಲಭ್ಯಗಳು, ಯೋಜನೆಗಳ ಫಲ ಎಲ್ಲವನ್ನು ಕೂಡ ಪಡೆದುಕೊಳ್ಳಬಹುದು.

ಈಗ ನಮ್ಮ ರಾಜ್ಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ ಬೇಕು, ಬಿಪಿಎಲ್ ಕಾರ್ಡ್ (BPL Ration Card) ಹೊಂದಿರುವವರಿಗೆ ಈ ಯೋಜನೆಗಳ ಸೌಲಭ್ಯ ಸಿಗಲಿದೆ.

ಸುಳ್ಳು ದಾಖಲೆಗಳನ್ನು ಕೊಟ್ಟು ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿರುವವರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್, ಹೊಸ ನಿಯಮಗಳು ಜಾರಿಗೆ!

ಹಾಗಾಗಿ ಹೊಸ ರೇಷನ್ ಕಾರ್ಡ್ ಗೆ ಅಪ್ಲೈ (Apply Ration Card Online) ಮಾಡಿರುವವರ ಸಂಖ್ಯೆ ಹೆಚ್ಚಾಗಿದ್ದು, ಹೊಸದಾಗಿ ರೇಷನ್ ಕಾರ್ಡ್ ಪಡೆಯಬೇಕು ಎಂದುಕೊಂಡಿರುವವರ ಸಂಖ್ಯೆ ಕೂಡ ಜಾಸ್ತಿ ಆಗಿದೆ. ಒಂದು ವೇಳೆ ನೀವು ಕೂಡ ಹೊಸದಾಗಿ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಬೇಕು ಎಂದುಕೊಂಡಿದ್ದರೆ, ಈಗ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಯಾವುದೇ ಕಷ್ಟಪಡುವ ಅವಶ್ಯಕತೆ ಇಲ್ಲ.

ಮನೆಯಲ್ಲೇ ಕೂತು, ನಿಮ್ಮ ಮೊಬೈಲ್ (Mobile) ಮೂಲಕವೇ ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಬಹುದು.

ಸರ್ಕಾರದ ಒಂದು ಆಪ್ ಇದ್ದು, ಆ ಆಪ್ ಮೂಲಕ ಹೊಸ ರೇಶನ್ ಕಾರ್ಡ್ ಪಡೆಯಲು ರಿಜಿಸ್ಟರ್ ಮಾಡಿಕೊಳ್ಳಬಹುದು. ಇದಕ್ಕಾಗಿ ಸರ್ಕಾರ ಇಟ್ಟಿರುವುದು ಕೆಲವೇ ಕೆಲವು ಕಂಡೀಷನ್ ಗಳನ್ನು ಮಾತ್ರ.. ಮೊದಲನೆಯದಾಗಿ ನೀವು ಭಾರತೀಯರಾಗಿರಬೇಕು, ಹಾಗೆಯೇ ನಿಮ್ಮ ಹತ್ತಿರ ವಾಸ ಸ್ಥಳ ಪ್ರಮಾಣ ಪತ್ರ ಇರಬೇಕು. ಇಲ್ಲದಿದ್ದರೆ ನಿಮಗೆ ರೇಷನ್ ಕಾರ್ಡ್ ಪ್ರಯೋಜನ ಸಿಗುವುದಿಲ್ಲ.

ನೀವು ಹಳ್ಳಿಯಲ್ಲಿ ವಾಸ ಮಾಡುವವರಾದರೆ ಬೇರೆ ಅರ್ಹತೆ, ನಗರ ಪ್ರದೇಶಗಳಲ್ಲಿ ವಾಸ ಮಾಡುವವರಾದರೆ ಬೇರೆ ಅರ್ಹತೆ ಇದೆ. ಇನ್ನು ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೆ ಬೇಕಾಗುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ ಎಲ್ಲವನ್ನು ತಿಳಿಸುತ್ತೇವೆ ನೋಡಿ..

2 ನಿಮಿಷದಲ್ಲಿ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ, ಸೈಬರ್ ಸೆಂಟರ್ ಗೆ ಹೋಗುವ ಅವಶ್ಯಕತೆಯೇ ಇಲ್ಲ

BPL Ration Cardಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಅರ್ಜಿದಾರರ ಆಧಾರ್ ಕಾರ್ಡ್
ಅರ್ಜಿದಾರರ ಕುಟುಂಬದವರ ಆಧಾರ್ ಕಾರ್ಡ್
ಅರ್ಜಿದಾರರ ಪ್ಯಾನ್ ಕಾರ್ಡ್
ಅರ್ಜಿದಾರರ ಕುಟುಂಬದಲ್ಲಿ ಎಲ್ಲರ ಪಾಸ್ ಪೋರ್ಟ್ ಸೈಜ್ ಫೋಟೋ
ಅರ್ಜಿದಾರರ ಇನ್ಕಮ್ ಸರ್ಟಿಫಿಕೇಟ್
ಅರ್ಜಿದಾರರ ಮನೆಯ ಗ್ಯಾಸ್ ಸಿಲಿಂಡರ್ ಮಾಹಿತಿ
ಅರ್ಜಿದಾರರ ಕ್ಯಾಸ್ಟ್ ಸರ್ಟಿಫಿಕೇಟ್
ಅರ್ಜಿದಾರರ ಬ್ಯಾಂಕ್ ಡೀಟೇಲ್ಸ್
ಅರ್ಜಿದಾರರ ಫೋನ್ ನಂಬರ್

ಅನ್ನಭಾಗ್ಯ ಯೋಜನೆಯ ಹಣ ಇನ್ನು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬಂದಿಲ್ವಾ? ಹಾಗಾದ್ರೆ ಈ ಒಂದು ಕೆಲಸ ತಪ್ಪದೇ ಮಾಡಿ

ಅರ್ಜಿ ಸಲ್ಲಿಸುವ ವಿಧಾನ

ಮೊದಲಿಗೆ ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಪ್ಲೇ ಸ್ಟೋರ್ ಇಂದ ಆಹಾರ ಇಲಾಖೆಯ ಆಪ್ ಡೌನ್ಲೋಡ್ ಮಾಡಿ
ಈ ಪೇಜ್ ನಲ್ಲಿ ಕೂಪನ್ ಶಾಶ್ವತ ರೇಷನ್ ಕಾರ್ಡ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ
ನಂತರ ನಿಮ್ಮ ಫೋನ್ ನಂಬರ್ ಆಯ್ಕೆ ಮಾಡುವ ಆಪ್ಶನ್ ನಿಮ್ಮ ಎದುರು ಕಾಣುತ್ತದೆ. ಅದನ್ನು ಚೆಕ್ ಮಾಡಿ
ಬೇರೆ ಬೇರೆ ರಾಜ್ಯಗಳಿಗೆ ಅಪ್ಲೈ ಮಾಡುವ ರೀತಿ ಬೇರೆ ಬೇರೆ ಆಗಿರುತ್ತದೆ. ನಮ್ಮ ರಾಜ್ಯದ ಅರ್ಜಿ ತೆಗೆದುಕೊಂಡು ಅಲ್ಲಿ ಕೇಳಿರುವ ಪ್ರಶ್ನೆಗಳನ್ನು ನೋಡಿಕೊಂಡು, ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ, ಹಾಗೆಯೇ ಕೇಳುವ ಎಲ್ಲಾ ಡಾಕ್ಯುಮೆಂಟ್ ಗಳನ್ನು ಅಟ್ಯಾಚ್ ಮಾಡಿ

ಇದೆಲ್ಲವೂ ಮುಗಿದ ನಂತರ ನಿಮ್ಮ ಮೊಬೈಲ್ ಗೆ ರೇಷನ್ ಕಾರ್ಡ್ ಬಳಿಕ ನಿಮಗೆ ಹತ್ತಿರ ಇರುವ ಪಡಿತರ ಚೀಟಿ ಕಚೇರಿಯಲ್ಲಿ ರೇಷನ್ ಪಡೆಯಬಹುದು.

Apply For New BPL Ration Card Online by Your Smartphone

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories