ಎಸ್​ಎಸ್​ಎಲ್​ಸಿ ಪರೀಕ್ಷಾ ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆ! ಇಲ್ಲಿದೆ ಮಾಹಿತಿ

Story Highlights

2023 24ನೇ ಸಾಲಿನ ಶೈಕ್ಷಣಿಕ ವರ್ಷದ 10ನೇ ತರಗತಿಯ ವಾರ್ಷಿಕ ಪರೀಕ್ಷೆ ಸದ್ಯ ಆರಂಭವಾಗಲಿದ್ದು, ಅದಕ್ಕಿಂತ ಮೊದಲು ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯಲಿವೆ.

ಇನ್ನೇನು ಕೆಲವೇ ತಿಂಗಳುಗಳಲ್ಲಿ 10ನೇ ತರಗತಿಯ ವಾರ್ಷಿಕ ಪರೀಕ್ಷೆ (10th annual exam) ಆರಂಭವಾಗಲಿದೆ. ಹಾಗಾಗಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಕೂಡ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ (Karnataka state education department) ಬಿಡುಗಡೆ ಮಾಡಿದೆ.

ವಾರ್ಷಿಕ ಪರೀಕ್ಷೆಗೂ ಮೊದಲು ನಡೆಯುವ ಪೂರ್ವ ಸಿದ್ಧತಾ ಪರೀಕ್ಷೆ (preparatory exam) ವೇಳಾಪಟ್ಟಿಯಲ್ಲಿಯೂ ದೊಡ್ಡ ಬದಲಾವಣೆ ಮಾಡಲಾಗಿದೆ.

ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಪಡೆಯೋಕೆ 4 ಹೊಸ ನಿಯಮ ಜಾರಿ ತಂದ ಸರ್ಕಾರ

ವೇಳಾಪಟ್ಟಿ ಬದಲಾಯಿಸಿದ ರಾಜ್ಯ ಸರ್ಕಾರ!

2023 24ನೇ ಸಾಲಿನ ಶೈಕ್ಷಣಿಕ ವರ್ಷದ 10ನೇ ತರಗತಿಯ ವಾರ್ಷಿಕ ಪರೀಕ್ಷೆ ಸದ್ಯ ಆರಂಭವಾಗಲಿದ್ದು, ಅದಕ್ಕಿಂತ ಮೊದಲು ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯಲಿವೆ. ಶಾಲೆಗಳನ್ನು ನಡೆಯಲಿರುವ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಈಗಾಗಲೇ ಎಲ್ಲಾ ಶಾಲೆಗಳಿಗೂ ತಲುಪಿಸಿದೆ.

ಆದರೆ ಈಗ ವೇಳಾಪಟ್ಟಿಯಲ್ಲಿ ರಾಜ್ಯ ಸರ್ಕಾರ ದೊಡ್ಡ ಬದಲಾವಣೆ ಮಾಡಿದೆ. ಶುಕ್ರವಾರ ಮುಸ್ಲಿಂ ವಿದ್ಯಾರ್ಥಿಗಳಿಗೆ ಬೆಳಿಗ್ಗೆಯ ಬದಲು ಮಧ್ಯಾಹ್ನ ಪರೀಕ್ಷೆ ಮಾಡುವುದಾಗಿ ತಿಳಿಸಲಾಗಿದೆ. ಇದರಿಂದ ಆಕ್ರೋಶ ವ್ಯಕ್ತಪಡಿಸಿರುವ ಹಿಂದು ಸಂಘಟನೆಗಳು ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಮನಒಲೈಸಲು ಈ ರೀತಿ ಪರೀಕ್ಷೆಯಲ್ಲಿಯೂ ಕೂಡ ರಾಜಕೀಯ ಮಾಡುತ್ತಿದೆ. ಮುಸ್ಲಿಂ ವಿದ್ಯಾರ್ಥಿಗಳಿಗಾಗಿ ಶುಕ್ರವಾರದ ಪರೀಕ್ಷೆಯನ್ನು ಬೆಳಿಗ್ಗೆಯಿಂದ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.

ಇಂತಹವರ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಲಿದೆ! ಸರ್ಕಾರ ಖಡಕ್ ವಾರ್ನಿಗ್

ನಮಾಜ್ ಗಾಗಿ ಪರೀಕ್ಷಾ ವೇಳಾಪಟ್ಟಿ ತಿದ್ದುಪಡಿ ಮಾಡುವುದು ಎಷ್ಟು ಸರಿ?

10ನೇ ತರಗತಿಯ ಪೂರ್ವ ಸಿದ್ಧತಾ ಪರೀಕ್ಷೆ ಫೆಬ್ರವರಿ 26 ರಿಂದ ಮಾರ್ಚ್ 2ರವರೆಗೆ ನಡೆಯಲಿದೆ. ಬೆಳಿಗ್ಗೆ 10.30 ಕ್ಕೆ ಆರಂಭವಾಗುವ ಪರೀಕ್ಷೆ 1:30ಕ್ಕೆ ಕೊನೆಗೊಳ್ಳಲಿದೆ. ಆದರೆ ಇದೀಗ ಶುಕ್ರವಾರದ ದಿನ ಮಾತ್ರ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್ ಮಾಡುವ ಸಲುವಾಗಿ ಬೆಳಿಗ್ಗೆ ಇದ್ದ ಪರೀಕ್ಷೆಯನ್ನು ಮಧ್ಯಾಹ್ನ 2 ರಿಂದ ಸಂಜೆ 5:15ರ ವರೆಗೆ ನಿಗದಿಪಡಿಸಲಾಗಿದೆ.

ಶಿಕ್ಷಣ ಇಲಾಖೆಯ ಈ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಒಂದು ಸಮುದಾಯದ ಸಿಸ್ಟಮ್ ಅನ್ನು ಬೆಂಬಲಿಸುವ ಸಲುವಾಗಿ ಶಾಲಾ ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ ಮಾಡಲಾಗಿರುವ ಈ ಬದಲಾವಣೆಯನ್ನು ಪ್ರತಿಯೊಬ್ಬರು ಅಲ್ಲಗಳೆದಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ರೈತರಿಗೆ ಗುಡ್ ನ್ಯೂಸ್; ಈ ಬ್ಯಾಂಕುಗಳಲ್ಲಿ ಮಾಡಿದ ಸಾಲದ ಮೇಲಿನ ಬಡ್ಡಿ ಮನ್ನಾ

SSLC Exam Time Tableರಾಜ್ಯದಲ್ಲಿ ನಡೆಯಲಿರುವ 10ನೇ ತರಗತಿಯ ಪೂರ್ವ ತಯಾರಿ ಪರೀಕ್ಷೆಗಳ ವೇಳಾಪಟ್ಟಿ ಇಂತಿದೆ! (Exam time table)

26 ಫೆಬ್ರವರಿ, 2024: ಪ್ರಥಮ ಭಾಷೆ (first language) – ಕನ್ನಡ, ತೆಲುಗು, ಹಿಂದಿ, ಮರಾಠಿ, ಉರ್ದು,ಸಂಸ್ಕೃತ (ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ಭಾಷೆ)

27 ಫೆಬ್ರವರಿ, 2024 – ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ (second language)

28 ಫೆಬ್ರವರಿ 2024 – ತೃತೀಯ ಭಾಷೆ ಹಿಂದಿ, ಇಂಗ್ಲಿಷ್, ಕನ್ನಡ, ಕೊಂಕಣಿ, ಅರೇಬಿಕ್, ಪರ್ಷಿಯನ್, ಉರ್ದು,ಸಂಸ್ಕೃತ. (Third language)

29 ಫೆಬ್ರವರಿ, 2024 – ಗಣಿತ (mathematic)

1 ಮಾರ್ಚ್ 2024 – ವಿಜ್ಞಾನ (science)

2 ಮಾರ್ಚ್ 2024 – ಸಮಾಜ ವಿಜ್ಞಾನ (social science)

ರಾಜ್ಯದ ಎಲ್ಲಾ 10ನೇ ತರಗತಿಯ ವಿದ್ಯಾರ್ಥಿಗಳಿಗೂ ಶುಭವಾಗಲಿ

Big change in SSLC exam schedule, Here is the information

Related Stories