ರಾಮನಗರ: ಕಾರಿನಲ್ಲಿ ಮಲಗಿದ್ದ ಕ್ಯಾಬ್ ಚಾಲಕ ಸಾವು! ಹೃದಯಾಘಾತ ಶಂಕೆ

ಗ್ರಾಹಕರನ್ನು ತಾವರೆಕೆರೆಗೆ ಡ್ರಾಪ್ ಮಾಡಿದ ಬಳಿಕ ಕಾರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕ್ಯಾಬ್ ಚಾಲಕ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಹೃದಯಾಘಾತವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

  • ಕ್ಯಾಬ್ ಚಾಲಕ ಪುಷ್ಪರಾಜ್ ಕಾರಿನಲ್ಲೇ ಮೃತ್ಯು
  • ತಾವರೆಕೆರೆ ಚಂದ್ರಪ್ಪ ಸರ್ಕಲ್ ಬಳಿ ಘಟನೆ
  • ಹೃದಯಾಘಾತ ಶಂಕೆ, ಮರಣೋತ್ತರ ಪರೀಕ್ಷೆಗೆ ರವಾನೆ

ರಾಮನಗರ (Ramanagara): ಗ್ರಾಹಕರನ್ನು ಡ್ರಾಪ್ ಮಾಡಿದ ಬಳಿಕ ಕಾರಿನಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಕ್ಯಾಬ್ ಚಾಲಕನೊಬ್ಬ (Cab Driver) ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತಾವರೆಕೆರೆ (Tavarekere) ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಪ್ಪ ಸರ್ಕಲ್ ಬಳಿ ನಡೆದಿದೆ.

ಮೃತರನ್ನು ಬೆಂಗಳೂರಿನ ಕೆ.ಪಿ. ಅಗ್ರಹಾರ ನಿವಾಸಿ ಪುಷ್ಪರಾಜ್ (29) ಎಂದು ಗುರುತಿಸಲಾಗಿದೆ. ಗ್ರಾಹಕರನ್ನು ತಾವರೆಕೆರೆ ಪ್ರದೇಶದಲ್ಲಿ ಇಳಿಸಿದ ಬಳಿಕ ಅವರು ಚಂದ್ರಪ್ಪ ಸರ್ಕಲ್ ಸಮೀಪದ ಲೇಔಟ್‌ನಲ್ಲಿ ಕಾರನ್ನು ನಿಲ್ಲಿಸಿ ವಿಶ್ರಾಂತಿಗೆ ತೆರಳಿದ್ದರು.

ಇದನ್ನೂ ಓದಿ: ಬೆಂಗಳೂರು: ಟ್ರೆಕ್ಕಿಂಗ್ ವೇಳೆ ಕ್ವಾರಿ ನೀರಿನಲ್ಲಿ ಮುಳುಗಿದ್ದ ಟೆಕ್ಕಿ ಮೃತದೇಹ ಪತ್ತೆ

ಬೆಳಗ್ಗೆಯಿಂದಲೂ ಒಂದೇ ಸ್ಥಳದಲ್ಲಿ ಕಾರು ನಿಂತಿರುವುದನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಮೂಡಿದೆ. ಬಳಿಕ ಕಾರಿನ ಬಳಿ ತೆರಳಿ ಪರಿಶೀಲಿಸಿದಾಗ, ಚಾಲಕನಿಗೆ ಯಾವುದೇ ಚಲನವಲನ ಇಲ್ಲದಿರುವುದು ಕಂಡುಬಂದಿದೆ. ಪರಿಶೀಲನೆ ನಡೆಸಿದಾಗ ಪುಷ್ಪರಾಜ್ ಕಾರಿನೊಳಗೇ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ಏರಿಕೆ: ವಿದ್ಯಾರ್ಥಿಗಳಿಗೆ ಹೆಚ್ಚುವರಿ ಹೊರೆ

ಈ ಘಟನೆ ಕುರಿತು ಮಾಹಿತಿ ಪಡೆದ ತಾವರೆಕೆರೆ ಪೊಲೀಸರು (Tavarekere Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಹೃದಯಾಘಾತದಿಂದ (Heart Attack) ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories