ಇನ್ಮುಂದೆ ಇಂಥವರ DL ಕ್ಯಾನ್ಸಲ್! ವಾಹನ ಸವಾರರ ವಿಚಾರಕ್ಕೆ ಕಠಿಣ ನಿರ್ಧಾರ ತೆಗೆದುಕೊಂಡ RTO
ಎಲ್ಲರೂ ಕೂಡ RTO ನಿಗಮಗಳನ್ನು ಪಾಲಿಸಿಯೇ ಗಾಡಿಗಳನ್ನು ಓಡಿಸಬೇಕು. ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲನೆ ಮಾಡಿದರೆ ಅಂಥವರ ಡ್ರೈವಿಂಗ್ ಲೈಸೆನ್ಸ್ (Deriving Licence) ಅನ್ನು ಕ್ಯಾನ್ಸಲ್ ಮಾಡಲಾಗುತ್ತದೆ
ನಮ್ಮಲ್ಲಿ ಈಗ ದಿನೇ ದಿನೇ ವಾಹನಗಳ (Vehicles) ಸಂಖ್ಯೆ ಜಾಸ್ತಿ ಆಗುತ್ತಿದೆ ಹೊರತು ಕಡಿಮೆ ಅಂತೂ ಆಗುತ್ತಿಲ್ಲ. ಈಗ ಪ್ರತಿಯೊಬ್ಬರ ಮನೆಯಲ್ಲೂ ಕನಿಷ್ಠ ಒಂದು ವಾಹನ ಆದರೂ ಇರುತ್ತದೆ. ಎಲ್ಲರೂ ತಮ್ಮ ಸ್ವಂತ ವಾಹನಗಳಲ್ಲೇ (Own Vehicle) ಓಡಾಡಬೇಕು ಎಂದು ಬಯಸುತ್ತಾರೆ.
ಇದರಿಂದಾಗಿ ಟ್ರಾಫಿಕ್ (Traffic) ಕೂಡ ಜಾಸ್ತಿಯಾಗಿದೆ. ವಾಹನ ಸಂಖ್ಯೆಗಳ ಏರಿಕೆ, ನಗರಗಳಲ್ಲಿ ವಾಹನಗಳಿಂದ ಪ್ರಯಾಣ ದಟ್ಟಣೆಯಿಂದ ಕೂಡಿದ್ದು, ವೇಗವಾಗಿ ಚಲನೆ ಮಾಡುವುದರಿಂದ ಆಕ್ಸಿಡೆಂಟ್ ಗಳು ಕೂಡ ಜಾಸ್ತಿಯಾಗುತ್ತಿದೆ. ಈ ಕಾರಣಕ್ಕೆ ಈಗ ವಾಹನಗಳ ವಿಚಾರಕ್ಕೆ ಸರ್ಕಾರ ಈಗ ಹೊಸದೊಂದು ನಿರ್ಧಾರ ತೆಗೆದುಕೊಂಡಿದೆ..
ರಾಜ್ಯದಲ್ಲಿ ಇನ್ನುಮುಂದೆ ವಾಹನ ಸವಾರಿ ಮಾಡುವ ಎಲ್ಲರೂ ಕೂಡ RTO ನಿಗಮಗಳನ್ನು ಪಾಲಿಸಿಯೇ ಗಾಡಿಗಳನ್ನು ಓಡಿಸಬೇಕು. ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲನೆ ಮಾಡಿದರೆ ಅಂಥವರ ಡ್ರೈವಿಂಗ್ ಲೈಸೆನ್ಸ್ (Deriving Licence) ಅನ್ನು ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ..
ಗೃಹಜ್ಯೋತಿ, ಗೃಹಲಕ್ಷ್ಮಿ ನಂತರ ಅಂಥದ್ದೇ ಮತ್ತೊಂದು ಯೋಜನೆ ತರಲು ಮುಂದಾದ ಸರ್ಕಾರ
ಈ ನಿಯಮಗಳು ಹೇಗಿದೆ ಎಂದರೆ, ಯಾವುದೇ ಜಾಗರೂಕತೆ ತೆಗೆದುಕೊಳ್ಳದೆ ವಾಹನ ಓಡಿಸುವುದು, ವಾಹನ ಓಡಿಸುವಾಗ ಫೋನ್ ನಲ್ಲಿ (Talking in Smartphone) ಮಾತನಾಡುವುದು, ಹೆಲ್ಮೆಟ್ ಹಾಕಿಕೊಳ್ಳದೆ ವಾಹನ ಓಡಿಸುವುದು.. ಆಲ್ಕೋಹಾಲ್ ಕುಡಿದು ವಾಹನ ಓಡಿಸುವುದು..
ಇಂಥ ನಿಯಮ ಉಲ್ಲಂಘನೆ ಮಾಡಿದರೆ ಅಂಥವರ ಮೇಲೆ RTO ಇಲಾಖೆ ದಂಡ ವಿಧಿಸುತ್ತದೆ.. ಅದು ಮಾತ್ರವಲ್ಲ, ಅಂಥವರ ಡಿಎಲ್ ಅನ್ನು ಕ್ಯಾನ್ಸಲ್ ಮಾಡಬಹುದು, ಇಂಥ ಹೊಸ ಕ್ರಮಗಳನ್ನು ಜಾರಿಗೆ ತರುವ ನಿರ್ಧಾರ ತೆಗೆದುಕೊಂಡಿದೆ ಸರ್ಕಾರ.
ಈ ನಿಯಮ ಮುಖ್ಯವಾಗಿ ಜಾರಿಗೆ ಬಂದಿರುವುದು ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇ ನಲ್ಲಿ (Mysore Bengaluru Express way). ಈ ಹೊಸ ನಿಯಮಗಳನ್ನು ಜಾರಿಗೆ ತಂದ ಬಳಿಕ ಇಲ್ಲಿ ಆಕ್ಸಿಡೆಂಟ್ ಆಗುವುದು ಕಡಿಮೆ ಆಗಿದೆ.
ಗೃಹಜ್ಯೋತಿ ಯೋಜನೆ ಶುರುವಾದ ಒಂದೇ ತಿಂಗಳಿಗೆ ಸರ್ಕಾರದಿಂದ ಹೊಸ ನಿಯಮ! ಧಿಡೀರ್ ಬದಲಾವಣೆ
ಫಾಸ್ಟ್ ಆಗಿ ಡ್ರೈವ್ ಮಾಡುವುದು, ತಪ್ಪಾದ ಕಡೆಯಲ್ಲಿ ಡ್ರೈವಿಂಗ್ ಮಾಡುವುದು, ಸಿಗ್ನಲ್ ಜಂಪ್ ಮಾಡುವುದು, ಅಥವಾ ಇನ್ಯಾವುದೇ ನಿಯಮ ಉಲ್ಲಂಘನೆ ಮಾಡುವುದನ್ನು ಕ್ಯಾಮೆರಾಗಳು (Camera) ಸೆರೆ ಹಿಡಿಯುತ್ತದೆ.
ಇನ್ಮುಂದೆ ಸ್ಮಾರ್ಟ್ ರೇಷನ್ ಕಾರ್ಡ್ ಇದ್ರೆ ಮಾತ್ರ ರೇಷನ್ ಸಿಗೋದು! ಹೊಸ ರೂಲ್ಸ್ ತರಲು ಮುಂದಾದ ಸರ್ಕಾರ
ಅದನ್ನು ಪೊಲೀಸರು ಗಮನಿಸಿ ಅವರ ಮೇಲೆ ಸೂಕ್ತವಾದ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಮಾಹಿತಿ ಸಿಕ್ಕಿದೆ.
ಒಂದು ರೀತಿಯಲ್ಲಿ ಯೋಚಿಸಿ ನೋಡುವುದಾದರೇ, ಇಂಥ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರುತ್ತಿರುವುದು ಕೂಡ ಜನರಿಗೆ ಒಳ್ಳೆಯದಾಗಲಿ ಎನ್ನುವ ಕಾರಣದಿಂದಲೇ ಆಗಿದೆ. ಜನರ ಪ್ರಾಣಕ್ಕೆ ತೊಂದರೆ ಆಗಬಾರದು ಎಂದು ಸರ್ಕಾರ ಈ ನಿರ್ಧಾರ ಮಾಡಿದ್ದು. ಇದನ್ನು ಜನರು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ.
Driving Licence will Cancel if Not Follow New Rules of RTO
Follow us On
Google News |