ಇನ್ಮುಂದೆ ಕೇವಲ ಆಧಾರ್ ಕಾರ್ಡ್ ತೋರಿಸಿದರೆ ಸಿಗೋಲ್ಲ ಫ್ರೀ ಬಸ್ ಸೌಲಭ್ಯ; ಶಕ್ತಿ ಯೋಜನೆಯ ಹೊಸ ಅಪ್ಡೇಟ್
Free Bus Shakti Yojana Smart Card : ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ (State Government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಲ್ಲಿ ಮೊದಲನೇ ಯೋಜನೆ ಶಕ್ತಿ ಯೋಜನೆ (Shakti Scheme). ಈ ಯೋಜನೆಯಿಂದಾಗಿ ಮಹಿಳೆಯರು ರಾಜ್ಯದ ಸರ್ಕಾರಿ ಬಸ್ಗಳಲ್ಲಿ ಒಂದು ರೂಪಾಯಿಗಳನ್ನು ಕೂಡ ಟಿಕೆಟ್ ಗೆ ಖರ್ಚು ಮಾಡದೆ ಉಚಿತವಾಗಿ (Free Ticket for women) ಪ್ರಯಾಣ ಮಾಡಬಹುದು.
ಇದು ಕರ್ನಾಟಕದ ಪ್ರಯಾಣಿಕರಿಗೆ ಮಾತ್ರ ಅನ್ವಯವಾಗುವ ಯೋಜನೆ ಆಗಿದ್ದು ಕರ್ನಾಟಕದ ಒಳಗೆ ಮಾತ್ರ (Karnataka) ಪ್ರಯಾಣ ಮಾಡಬಹುದು ಅಂದರೆ ರಾಜ್ಯದ ಹೊರಗೆ ಉಚಿತ ಪ್ರಯಾಣ ಮಾಡುವಂತಿಲ್ಲ.
ರೇಷನ್ ಕಾರ್ಡ್ ತಿದ್ದುಪಡಿ ಮಾಡಿದ್ರೆ ಅದು ಸಕ್ಸಸ್ ಆಗಿದ್ಯೋ ಇಲ್ವೋ ತಿಳಿದುಕೊಳ್ಳಲು ಹೀಗೆ ಮಾಡಿ!
ಶಕ್ತಿ ಯೋಜನೆ ಬಹುತೇಕ ಯಶಸ್ವಿ ಆಗಿದೆ. ಮೊದಮೊದಲಿಗೆ ಸಾಕಷ್ಟು ಗೊಂದಲಗಳು, ಬಸ್ಸುಗಳಲ್ಲಿ ನೂಕು ನುಗ್ಗಲು ಹೀಗೆ ಹಲವಾರು ಸಮಸ್ಯೆಗಳು ಕೂಡ ಇದ್ದವು ಆದರೆ ಈಗ ನಿಧಾನವಾಗಿ ಯೋಜನೆ ಫಲ ಕೊಡುತ್ತಿದೆ. ರಾಜ್ಯದಲ್ಲಿ ಲಕ್ಷಾಂತರ ಮಹಿಳೆಯರು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಅದೇ ರೀತಿ ಉಚಿತ ಬಸ್ ಇರುವ ಕಾರಣ ಪುರುಷರಿಗೆ 50% ನಷ್ಟು ಸಿಟಿ ನಲ್ಲಿ ಮೀಸಲಾತಿ ಕೂಡ ನೀಡಲಾಗಿದೆ.
ಆಧಾರ್ ಕಾರ್ಡ್ ಒಂದೇ ಸಾಕು
ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಲು ಅಥವಾ ಉಚಿತ ಟಿಕೆಟ್ ಪಡೆದುಕೊಳ್ಳಲು ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ (Aadhaar Card) ಅನ್ನು ತೋರಿಸಲೇಬೇಕು. ಆಧಾರ್ ಕಾರ್ಡ್ ಇಲ್ಲದಿದ್ದರೆ ಉಚಿತವಾಗಿ ಪ್ರಯಾಣಿಸಲು ಸಾಧ್ಯವಿಲ್ಲ.
ಆಧಾರ್ ಕಾರ್ಡ್ ನಲ್ಲಿ ಕರ್ನಾಟಕದ ನಿವಾಸಿ ಆಗಿರುವ ವಿಳಾಸ ಕೂಡ ಇರಬೇಕು. ಇದೀಗ ಶಕ್ತಿ ಯೋಜನೆಗೆ ಸಂಬಂಧಪಟ್ಟ ಹಾಗೆ ಹೊಸ ಅಪ್ಡೇಟ್ (Update) ಒಂದನ್ನು ಸರ್ಕಾರ ನೀಡಿದ್ದು ಇನ್ನು ಮುಂದೆ ಆಧಾರ್ ಕಾರ್ಡ್ ಹಿಡಿದುಕೊಂಡು ಬಸ್ ಹತ್ತಿದರೆ ಉಚಿತವಾಗಿ ಪ್ರಯಾಣಿಸಲು ಸಾಧ್ಯವಿಲ್ಲ.
ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಬಾರದು ಅಂದ್ರೆ ಈ ಕೆಲಸಗಳನ್ನು ತಪ್ಪದೇ ಮಾಡಿ! ಹೊಸ ರೂಲ್ಸ್
ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಿ
ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಇನ್ನು ಎರಡು ವಾರಗಳಲ್ಲಿ, ಸೇವಾ ಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಆರಂಭವಾಗುತ್ತದೆ. ಬೆಂಗಳೂರು ಒನ್, ಗ್ರಾಮ ಒನ್, ಮೊದಲಾದ ಸೇವಾ ಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್ (Smart Card) ಪಡೆಯಬಹುದು.
ನಿಮ್ಮ ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ನೀಡಬೇಕಾಗುತ್ತದೆ. ಆಧಾರ್ ಕಾರ್ಡ್ ಒಂದನ್ನು ತೋರಿಸಿದರೆ ಸಾಕು ಸ್ಮಾರ್ಟ್ ಕಾರ್ಡ್ ನಿಮಗೆ ಲಭ್ಯವಾಗುತ್ತದೆ.
ಯಾವ ತರ ಇರುತ್ತೆ ಸ್ಮಾರ್ಟ್ ಕಾರ್ಡ್
ಇನ್ನು ಈಗಾಗಲೇ ಸರ್ಕಾರ ಸ್ಮಾರ್ಟ್ ಕಾರ್ಡ್ ಅನ್ನು ಮೆಟ್ರೋ ಸ್ಮಾರ್ಟ್ ಕಾರ್ಡ್ (Metro Smart Card) ಮಾದರಿಯಲ್ಲಿಯೇ ನೀಡಲು ಚಿಂತನೆ ನಡೆಸಿದ್ದು ಆದರೆ ಇದು ಬಹಳ ದುಬಾರಿಯಾಗುವುದರಿಂದ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗುತ್ತದೆ.
ಆ ಕಾರಣದಿಂದ ಸ್ಮಾರ್ಟ್ ಕಾರ್ಡ್ ಅನ್ನು ಮೆಟ್ರೋ ಮಾದರಿಯಲ್ಲಿ ಮಾಡುವ ಚಿಂತನೆಯನ್ನು ಸರ್ಕಾರ ಕೈಬಿಟ್ಟಿದೆ. ಈಗ ಸರ್ಕಾರದಿಂದ ಪ್ರತ್ಯೇಕ ಸ್ಮಾರ್ಟ್ ಕಾರ್ಡ್ ಸಿಗುವುದಿಲ್ಲ ನೀವು ಸೇವ ಕೇಂದ್ರಗಳಲ್ಲಿ ಹೋಗಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಇತರ ಮಾಹಿತಿ ನೀಡಿದರೆ ನಿಮಗೆ ಅದೇ ಕೇಂದ್ರಗಳಲ್ಲಿ ಒಂದು ಪ್ರಿಂಟ್ ಔಟ್ (Print Out) ಕೊಡಲಾಗುತ್ತದೆ.
ಗೃಹಲಕ್ಷ್ಮಿ ಹಣ ಬರೋದು ಲೇಟ್ ಆದ್ರೂ ಪರವಾಗಿಲ್ಲ! ಆದ್ರೆ ಬರುತ್ತೋ ಇಲ್ವೋ ಈ ರೀತಿ ತಿಳಿಯಿರಿ
ಅದೇ ಪ್ರಿಂಟ್ ಔಟ್ ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಂಡು ಸ್ಮಾರ್ಟ್ ಕಾರ್ಡ್ ನಂತೆ ಬಳಸಿಕೊಳ್ಳಬೇಕು. ಇದಕ್ಕಾಗಿ ನೀವು ಹಣ ಖರ್ಚು ಮಾಡಬೇಕಾಗಿಲ್ಲ. ಆದರೆ ಬಸ್ ಪಾಸ್ ನಂತರ ಸ್ಮಾರ್ಟ್ ಕಾರ್ಡ್ ಸರ್ಕಾರ ಕೊಡುತ್ತಿಲ್ಲ ಅದರ ಬದಲಿಗೆ ಕೇವಲ ನಿಮ್ಮ ಹೆಸರಿನಲ್ಲಿ ಸ್ಮಾರ್ಟ್ ಕಾರ್ಡ್ ನೀಡಲಾಗಿದೆ ಎನ್ನುವ ಪ್ರಿಂಟ್ ಔಟ್ ಅನ್ನು ಸೇವಾ ಕೇಂದ್ರಗಳಲ್ಲಿ ಪಡೆಯಬೇಕು.
ಇದಕ್ಕಾಗಿ ಅರ್ಜಿ ಸಲ್ಲಿಸಿ ಹೆಚ್ಚು ಸಮಯ ಕಾಯಬೇಕಾಗಿಲ್ಲ, ನೀವು ಸೇವಾ ಕೇಂದ್ರಗಳಿಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ತೋರಿಸುತ್ತಿದ್ದಂತೆಯೇ ಪ್ರಿಂಟ್ ಔಟ್ ಸಿಗುತ್ತದೆ. ಇನ್ನು ಸೇವಾ ಸಿಂಧು ವೆಬ್ ಪೋರ್ಟಲ್ (Seva sindhu Web Portal) ನಲ್ಲಿಯೂ ಕೂಡ ನೀವು ಅರ್ಜಿ ಸಲ್ಲಿಸಿ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.
ಸದ್ಯ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಬಗ್ಗೆ ಸರ್ಕಾರ ಇಷ್ಟು ಅಪ್ಡೇಟ್ ನೀಡಿದೆ ಹಾಗೂ ಇನ್ನು ಎರಡು ವಾರಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಸೇವಾ ಕೇಂದ್ರಗಳಲ್ಲಿ ಆರಂಭವಾಗಲಿದೆ.
ಇನ್ನು ಸೇವಾ ಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್ ಪ್ರಿಂಟ್ ಔಟ್ ತೆಗೆದುಕೊಳ್ಳಲು ನೀವು ಆಧಾರ್ ಕಾರ್ಡ್ ನೀಡಬೇಕು ಹಾಗೂ ಆಧಾರ್ ಕಾರ್ಡ್ ನಲ್ಲಿ ಕರ್ನಾಟಕದವರೇ ಎನ್ನುವ ವಿಳಾಸ ಇರಬೇಕು.
ರಾತ್ರೋ ರಾತ್ರಿ ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್ ಗೆ ಸೂಚನೆ! ಸರ್ಕಾರದ ಮಹತ್ವದ ನಿರ್ಧಾರ
ಒಂದು ವೇಳೆ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಲು ನಿಮ್ಮ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾಯಿಸಿದರೆ ಅಥವಾ ನಕಲಿ ಆಧಾರ್ ಕಾರ್ಡ್ ನೀಡಿದರೆ ಅದು ಅಕ್ಷಮ್ಯ ಅಪರಾಧವಾಗುತ್ತದೆ ಮತ್ತು ಶಿಕ್ಷೆಗೆ ಕೂಡ ಗುರಿಯಾಗಬೇಕಾಗಬಹುದು.
ಹಾಗಾಗಿ ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣಿಸುವ ಕರ್ನಾಟಕ ಮಹಿಳೆಯರು ಸ್ಮಾರ್ಟ್ ಕಾರ್ಡ್ ಪ್ರತಿಯನ್ನು ತೋರಿಸಿದರೆ ಉಚಿತವಾಗಿ ಬಸ್ ಪ್ರಯಾಣ ಮಾಡಬಹುದು.
Free Bus Shakti Yojana Smart Card Update