ಈಗಾಗಲೇ ನಾವು ಅರ್ಜಿ ಹಾಕಿರುವ ರೇಷನ್ ಕಾರ್ಡ್ (Ration card) ಇನ್ನೇನು ನಮ್ಮ ಕೈ ಸೇರುತ್ತದೆ ಎಂದು ಬಹಳ ನಿರೀಕ್ಷೆ ಇಟ್ಟುಕೊಂಡವರಿಗೆ ಸರ್ಕಾರ ಶಾಕಿಂಗ್ ಸುದ್ದಿ ಒಂದನ್ನು ಕೊಟ್ಟಿದೆ.
ಹೊಸ ರೇಸನ್ ಕಾರ್ಡ್ ಬರುವುದು ಹಾಗಿರಲಿ ಈಗಿರುವ ರೇಷನ್ ಕಾರ್ಡ್ ಉಳಿದರೆ ಸಾಕಪ್ಪ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಯಾಕೆಂದರೆ ಸರ್ಕಾರ ರೇಷನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಹೊಸ ಅಪ್ಡೇಟ್ (Update) ಕೊಟ್ಟಿದ್ದು ಈ ಕೆಲವು ನಿಯಮಗಳ ಆಧಾರದ ಮೇಲೆ ಈಗಿರುವ ರೇಷನ್ ಕಾರ್ಡ್ ಅನ್ನು ಕೂಡ ಗ್ರಾಹಕರು ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು.
ಕರೆಂಟ್ ಬಿಲ್ ಜೀರೋ ಬಂದಿದ್ರೂ ಮುಂದಿನ ತಿಂಗಳು ಇಂತವರು ಬಿಲ್ ಕಟ್ಟಲೇಬೇಕು; ಸರ್ಕಾರದ ಬಿಗ್ ಅಪ್ಡೇಟ್
ರೇಷನ್ ಕಾರ್ಡ್ ಗೆ ಹೆಚ್ಚಿದ ಬೇಡಿಕೆ
ಸರ್ಕಾರ ಜಾರಿಗೆ ತಂದಿರುವ ಪ್ರತಿಯೊಂದು ಗ್ಯಾರಂಟಿ ಯೋಜನೆಗೂ (Govt Schemes) ಕೂಡ ಪಡಿತರ ಚೀಟಿಯ (Ration Card) ಅಗತ್ಯವಿದೆ, ಅದರಲ್ಲೂ ಬಿಪಿಎಲ್ ಕಾರ್ಡ್ (BPL Card) ದಾರರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ.
ಈಗ ಸಾಕಷ್ಟು ಜನ ರೇಷನ್ ಕಾರ್ಡ್ ಪಡೆದುಕೊಳ್ಳಲು ಪರಿತಪಿಸುತ್ತಿದ್ದಾರೆ. ಒಂದು ವರ್ಷದ ಹಿಂದೆ ಅರ್ಜಿ ಹಾಕಿದವರಿಗೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಸಿಕ್ಕಿಲ್ಲ. ಸರ್ಕಾರ ಈಗಾಗಲೇ ಲಕ್ಷಾಂತರ ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿಯನ್ನು ಪರಿಶೀಲಿಸುತ್ತಿದೆ.
ಇಂಥವರ ರೇಷನ್ ಕಾರ್ಡ್ ರದ್ದು
ಅನ್ನಭಾಗ್ಯ ಯೋಜನೆಯ (Annabhagya Scheme) ಅಡಿಯಲ್ಲಿ ನಿಮಗೆ ಅಗಸ್ಟ್ ತಿಂಗಳ ಹಣ ಬಂದಿದ್ದರೆ, ಸೆಪ್ಟೆಂಬರ್ ತಿಂಗಳಿನ ಹಣ ಬಾರದೆ ಇರಬಹುದು ಯಾಕೆಂದರೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗಬಹುದು.
ರಾಜ್ಯಾದ್ಯಂತ 5.19 ಲಕ್ಷ ಫಲಾನುಭವಿಗಳ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆದುಹಾಕಲಾಗಿದೆ. ಇದಕ್ಕೆ ಮುಖ್ಯವಾದ ಕಾರಣ ರೇಷನ್ ಕಾರ್ಡ್ ನಲ್ಲಿ ಮರಣ ಹೊಂದಿದವರ ಹೆಸರು ಕೂಡ ಇದ್ದು ಅವರ ಹೆಸರಿನಲ್ಲಿ ಡಿಬಿಟಿ (DBT) ಅಂದರೆ ನೇರ ಹಣ ವರ್ಗಾವಣೆ (Bank Account) ಮಾಡಿಸಿಕೊಳ್ಳಲಾಗಿದೆ.
ಹಾಗಾಗಿ ಸತ್ತವರ ಹೆಸರನ್ನು ತೆಗೆದು ಹಾಕದೆ ಅವರ ಹೆಸರಿನಲ್ಲಿಯೇ ಈಗಲೂ ಕೂಡ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಂತಹ ಕುಟುಂಬದ ರೇಷನ್ ಕಾರ್ಡ್ ಅನ್ನು ಸರ್ಕಾರ ತ್ವರಿತವಾಗಿ ನಿಷೇಧ ಗೊಳಿಸುತ್ತಿದೆ.
ಮೇಕೆ ಸಾಕಾಣಿಕೆ ಮಾಡುವ ಎಲ್ಲಾ ರೈತರಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ! ಇಂದೇ ಅಪ್ಲೈ ಮಾಡಿ
ಆಗಲೇಬೇಕು ಆಧಾರ್ ಕಾರ್ಡ್ ಲಿಂಕ್: (ration card- Aadhaar card link)
ರೇಷನ್ ಕಾರ್ಡ್ ವಿಷಯದಲ್ಲಿ ಯಾವುದೇ ರೀತಿಯ ಅಕ್ರಮಗಳು ಕೂಡ ನಡೆಯಬಾರದು ಎಂದು ಸರ್ಕಾರ ಮುತುವರ್ಜಿ ವಹಿಸಿದ್ದು ನಿಮ್ಮ ಬಳಿ ಇರುವ ಪಡಿತರ ಚೀಟಿ ಹಾಗೂ ನಿಮ್ಮ ಆಧಾರ್ ಕಾರ್ಡ್ ಎರಡು ಕಡ್ಡಾಯವಾಗಿ ಲಿಂಕ್ ಆಗಿರಬೇಕು.
ಗೃಹಲಕ್ಷ್ಮಿ ಯೋಜನೆ, ಅಂತ್ಯೋದಯ ಯೋಜನೆ, ಆದ್ಯತೆಯ ವಸತಿ ಯೋಜನೆ.. ಹೀಗೆ ಸರ್ಕಾರದಿಂದ ಬಿಡುಗಡೆಯಾಗುವ ಯಾವುದೇ ಪ್ರಯೋಜನ ಪಡೆದುಕೊಳ್ಳುವುದಿದ್ದರೆ ಪಡಿತರ ಚೀಟಿ ಬೇಕು.
ಸುಮಾರು 5.18 ಲಕ್ಷ ರೇಶನ್ ಕಾರ್ಡ್ ಗಳಿಗೆ ಸಿಗೋದಿಲ್ಲ ಅನ್ನಭಾಗ್ಯ ಸೌಲಭ್ಯ! ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ಯಾ?
ಕೇವಲ ಪಡಿತರ ಚೀಟಿ ಇದ್ರೆ ಸಾಲುವುದಿಲ್ಲ ಅದು ಆಧಾರ್ ಕಾರ್ಡ್ (Aadhaar Card) ಜೊತೆಗೆ ಲಿಂಕ್ ಆಗಿರಬೇಕು ಎನ್ನುವುದನ್ನು ನೆನಪಿಟ್ಟುಕೊಳ್ಳಿ. ನಿಮ್ಮ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಂಡಿದ್ದರೆ ಮಾತ್ರ ಸರ್ಕಾರದ ಪ್ರತಿಯೊಂದು ಉಚಿತ ಯೋಜನೆಯ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು ಇಲ್ಲವಾದರೆ ಈ ಪ್ರಯೋಜನಗಳು ನಿಮಗೆ ಸಿಗುವುದಿಲ್ಲ.
Notice to cancel the ration card of such people
Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.