Karnataka NewsBangalore News

ಕರೆಂಟ್ ಬಿಲ್ ಜೀರೋ ಬಂದಿದ್ರೂ ಮುಂದಿನ ತಿಂಗಳು ಇಂತವರು ಬಿಲ್ ಕಟ್ಟಲೇಬೇಕು; ಸರ್ಕಾರದ ಬಿಗ್ ಅಪ್ಡೇಟ್

ರಾಜ್ಯ ಸರ್ಕಾರದ (Karnataka Government) ಗ್ಯಾರಂಟಿ ಯೋಜನೆ (guaranty Scheme) ಗಳಲ್ಲಿ ಒಂದು ಗೃಹಜ್ಯೋತಿ ಯೋಜನೆ (Gruha jyothi yojana). ಜುಲೈ ತಿಂಗಳಿನಲ್ಲಿಯೇ ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಯಾರು ಬಳಸುತ್ತಾರೋ ಅವರಿಗೆ ವಿದ್ಯುತ್ ಬಿಲ್ (Electricity bill) ಕಟ್ಟುವ ಹಾಗೆ ಇಲ್ಲ

ಅಂದ್ರೆ ಸಂಪೂರ್ಣ ಉಚಿತವಾಗಿ ವಿದ್ಯುತ್ ಬಳಸಬಹುದು, ಇಲ್ಲಿ ಮುಖ್ಯವಾಗಿರುವ ನಿಯಮ ಅಂದರೆ 200 ಯುನಿಟ್ (Unit) ಗಿಂತಲೂ ಹೆಚ್ಚಿಗೆ ವಿದ್ಯುತ್ ಬಳಸುವಂತಿಲ್ಲ, ಈಗಾಗಲೇ ರಾಜ್ಯದಲ್ಲಿ ಲಕ್ಷಾಂತರ ಜನ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.

sudden rise in electricity prices even Gruha Jyothi Yojana

ಗೃಹಲಕ್ಷ್ಮಿ, ಗೃಹಜ್ಯೋತಿ ಜೊತೆಗೆ ನಡೆದಿದೆ ಸರ್ಕಾರದ ಆರನೇ ಗ್ಯಾರಂಟಿ ಯೋಜನೆ ಸಿದ್ಧತೆ, ಎಲ್ಲರಿಗೂ ಸಿಗಲಿದೆ ಇದರ ಬೆನಿಫಿಟ್

ರಾಜ್ಯ ಸರ್ಕಾರ ಅಪ್ಡೇಟ್ ಒಂದನ್ನು ನೀಡಿದ್ದು ಈ ತಿಂಗಳಿನಲ್ಲಿ ಜೀರೋ ವಿದ್ಯುತ್ (Zero electricity Bill) ಪಡೆದುಕೊಂಡವರು ಮುಂದಿನ ತಿಂಗಳಿನಲ್ಲಿ ಕರೆಂಟ್ ಬಿಲ್ ಕಟ್ಟ ಬೇಕಾಗುವ ಪರಿಸ್ಥಿತಿ ಬರಬಹುದು. ಕಾರಣ ಏನು ಗೊತ್ತಾ?

ಜೀರೋ ವಿದ್ಯುತ್ ಬಂದವರು ಮುಂದಿನ ತಿಂಗಳು ವಿದ್ಯುತ್ ಬಿಲ್ ಕಟ್ಟಬೇಕಾ?

ಸರ್ಕಾರದ ಈ ಹೊಸ ನಿಯಮದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು, ಮುಖ್ಯವಾಗಿ ಒಂದು ವರ್ಷದ ಸರಾಸರಿ ಬಳಸಲ್ಪಟ್ಟ ವಿದ್ಯುತ್ ಆಧಾರದ ಮೇಲೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಕೊಡಲಾಗುತ್ತದೆ. ಅಂದರೆ ಸರಾಸರಿ 200 ಯೂನಿಟ್ ಗಿಂತಲೂ ಕಡಿಮೆ ಬರಬೇಕು.

ಆದರೆ ಈ ತಿಂಗಳು ನಿಮಗೆ ಫ್ರೀ ವಿದ್ಯುತ್ (Free Electricity) ಬಂದಿದೆ ಎಂದುಕೊಳ್ಳಿ. ಹೀಗೆ ಬಂದಿರುವ ಕಾರಣಕ್ಕೆ ನೀವು ಮುಂದಿನ ತಿಂಗಳು ಯಥೇಚ್ಛವಾಗಿ ವಿದ್ಯುತ್ ಬಳಸುವಂತಿಲ್ಲ. ಯಾಕಂದ್ರೆ ಪ್ರತಿ ಬಿಲ್ ನಲ್ಲಿಯೂ ಈ ಬಾರಿ ನೀವು ಎಷ್ಟು ಯೂನಿಟ್ ವಿದ್ಯುತ್ ಬಳಸಿದ್ದೀರಿ ಎನ್ನುವುದನ್ನು ಮುದ್ರಿಸಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅಂದ್ರೆ ಯಾರನ್ನ ಭೇಟಿ ಆಗ್ಬೇಕು ಗೊತ್ತಾ? ಹೊಸ ಅಪ್ಡೇಟ್ ಹೊರಡಿಸಿದ ಸರ್ಕಾರ

ಉದಾಹರಣೆಗೆ ನೀವು ಈ ಬಾರಿ 150 ಯೂನಿಟ್ ವಿದ್ಯುತ್ ಬಳಸಿದ್ದೀರಿ ಎಂದುಕೊಳ್ಳಿ, ಅದೇ ಮುಂದಿನ ತಿಂಗಳು ನೀವು ಇದೇ ಲಿಮಿಟ್ ನಲ್ಲಿ ವಿದ್ಯುತ್ ಬಳಸಬೇಕು, ಇದಕ್ಕಿಂತ ಹೆಚ್ಚಿಗೆ ವಿದ್ಯುತ್ ಬಳಸಿದರೆ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿದರು ಕೂಡ ಕಳೆದ ತಿಂಗಳು ಬಂದ ವಿದ್ಯುತ್ ಮಿತಿಯ ಆಧಾರದ ಮೇಲೆ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ.

Gruha Jyothi free electricity Schemeಸರಳವಾಗಿ ಹೇಳುವುದಾದರೆ ನಿಮ್ಮ ಈ ತಿಂಗಳ ಯೂನಿಟ್ ಎಷ್ಟು ಮೊತ್ತ ಹೊಂದಿರುತ್ತದೆಯೋ, ಮುಂದಿನ ತಿಂಗಳು ಅದಕ್ಕಿಂತ ಕಡಿಮೆ ಇದ್ದರೆ ತೊಂದರೆ ಇಲ್ಲ ಆದರೆ ಅದಕ್ಕಿಂತ ಹೆಚ್ಚಿದ್ದರೆ (200 unit ಒಳಗಿದ್ದರೂ ಕೂಡ) ಆಗ ನೀವು ವಿದ್ಯುತ್ ಬಿಲ್ ಬರಿಸಬೇಕಾಗುತ್ತದೆ. ನೀವು ಒಂದೇ ತರನಾದ ಯೂನಿಟ್ ಮಿತಿಯನ್ನು ಕಾಯ್ದುಕೊಳ್ಳಬೇಕಾಗುತ್ತದೆ.

ಹೊಸ ರೇಷನ್ ಕಾರ್ಡ್ ಗೆ ಶೀಘ್ರದಲ್ಲೇ ಅರ್ಜಿಗಳ ಆಹ್ವಾನ! ಸರ್ಕಾರದಿಂದ ಅಧಿಕೃತ ಘೋಷಣೆ

ಈ ಹಿಂದೆಯೂ ಸರ್ಕಾರ ಇದರ ಬಗ್ಗೆ ಮಾಹಿತಿಯನ್ನು ನೀಡಿತ್ತು. ಆದರೆ ಈಗ ಮತ್ತೆ ಇದರ ಬಗ್ಗೆ ಚರ್ಚೆ ನಡೆದಿದ್ದು ವಿದ್ಯುತ್ ಬಿಲ್ ಜೀರೋ ಮಾಡಿಕೊಳ್ಳಲು ಯೂನಿಟ್ ಮೊತ್ತವನ್ನು ಕಾಯ್ದುಕೊಳ್ಳುವುದು ಗ್ರಾಹಕರಿಗೆ ದೊಡ್ಡ ಸವಾಲಾಗಿದೆ.

ಹಾಗಾಗಿ ವಿದ್ಯುತ್ ಬಿಲ್ ಝೀರೊ ಬರಬೇಕು ಅಂದರೆ ನೀವು ಬಳಸುವ ಯುನಿಟ್ ಕಡಿಮೆ ಇರಬೇಕು ಎನ್ನುವುದು ನೆನಪಿರಲಿ. ಇಲ್ಲವಾದರೆ ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ.

Even such people get zero electricity bill, they have to pay the bill next month

Our Whatsapp Channel is Live Now 👇

Whatsapp Channel

Related Stories