ರಾಜ್ಯ ಕಾಂಗ್ರೆಸ್ ಸರ್ಕಾರ (State Government) ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದ ಗ್ಯಾರಂಟಿ ಯೋಜನೆಗಳನ್ನು ಬಹುತೇಕ ಜಾರಿಗೊಳಿಸಿದೆ ಮೊದಲನೆಯದಾಗಿ ಉಚಿತ ಬಸ್ (Free Bus) ವ್ಯವಸ್ಥೆ ಮಾಡಲಾಗಿದ್ರೆ ಗೃಹಜ್ಯೋತಿ ಯೋಜನೆಯ ಮೂಲಕ ಅರ್ಹ ಫಲಾನುಭವಿಗಳು ವಿದ್ಯುತ್ ಬಿಲ್ (Electric Bill) ಪಾವತಿ ಮಾಡುವಂತೆಯೂ ಇಲ್ಲ
ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ (Gruha lakshmi Scheme) ಅಡಿಯಲ್ಲಿ ಮಹಿಳೆಯರಿಗೆ 2000ರೂ.ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇನ್ನು ಯುವಕರಿಗೆ ಉದ್ಯೋಗ ಬಗ್ಗೆ ನೀಡುವ ಯುವ ನಿಧಿ ಯೋಜನೆ ಕೂಡ ಸದ್ಯದಲ್ಲಿದೆ ಜಾರಿಯಾಗಲಿದೆ.
ಮೇಕೆ ಸಾಕಾಣಿಕೆ ಮಾಡುವ ಎಲ್ಲಾ ರೈತರಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ! ಇಂದೇ ಅಪ್ಲೈ ಮಾಡಿ
ಇಷ್ಟೆಲ್ಲ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದ್ದರು ಕೂಡ ಎಲ್ಲರಿಗೂ ಇದರ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ, ಯಾಕೆಂದರೆ ಸರ್ಕಾರ ಜಾರಿಗೆ ತಂದಿರುವ ಕೆಲವು ಯೋಜನೆಗಳಲ್ಲಿ ಎಪಿಎಲ್ ಕಾರ್ಡ್ (APL Card) ಕೂಡ ಕಡ್ಡಾಯವಾಗಿರುತ್ತದೆ
ಎಲ್ಲರ ಬಳಿ ಎಪಿಎಲ್ ಕಾರ್ಡ್ ಇರದೇ ಇರುವ ಹಿನ್ನೆಲೆಯಲ್ಲಿ ಉಚಿತ ಹಣ ಅಥವಾ ಅಕ್ಕಿ ಪಡೆದುಕೊಳ್ಳಲು ಸಾಧ್ಯವಿಲ್ಲ, ಆಗಿದ್ದ ಮಾತ್ರಕ್ಕೆ ಯಾರು ನಿರಾಶೆಯಾಗುವ ಅಗತ್ಯವಲ್ಲ, ಸರ್ಕಾರ ತನ್ನ ಆರನೇ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲು ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಿದೆ.
ಒಂದು ವೇಳೆ ಯೋಜನೆ ಜಾರಿಗೆ ಬಂದರೆ ಕರ್ನಾಟಕದ ಪ್ರತಿಯೊಂದು ಮನೆಯ ಪ್ರತಿಯೊಬ್ಬರೂ ಕೂಡ ಪ್ರಯೋಜನ ಪಡೆದುಕೊಳ್ಳಬಹುದು.
ಆರೋಗ್ಯವೇ ಭಾಗ್ಯ ಎಂದು ಸಿಎಂ ಸಿದ್ದರಾಮಯ್ಯ
ನಿಮಗೆ ಉಚಿತವಾದ ಅಕ್ಕಿ ಅಥವಾ ಹಣ ಸಿಗದಿದ್ರೆ ಏನು? ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಈಗ ಇನ್ನಷ್ಟು ಸುಲಭವಾಗಲಿದೆ, ಸರ್ಕಾರ ಒಂದು ಹೊಸ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ, ಅದುವೇ ಗೃಹ ಆರೋಗ್ಯ (Gruha Arogya).
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಯೋಜನೆಯ ಬಗ್ಗೆ ಕ್ಯಾಬಿನೆಟ್ ನಲ್ಲಿ ಪ್ರಸ್ತಾವನೆ ಮಾಡಿದೆ. ಆರೋಗ್ಯ ಇಲಾಖೆ ಈ ಯೋಜನೆಯ ಬಗ್ಗೆ ಹೆಚ್ಚು ಉತ್ಸುಕವಾಗಿದ್ದು, ಗೃಹ ಆರೋಗ್ಯ ಜಾರಿಗೆ ಬಂದರೆ ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ (Free Health Checkup) ಮಾಡಲಾಗುತ್ತದೆ.
ವೋಟರ್ ಐಡಿ ಹೊಂದಿರುವ ಎಲ್ಲರಿಗೂ ಧಿಡೀರ್ ಹೊಸ ನಿಯಮ, ಕೇಂದ್ರ ಸರ್ಕಾರದ ಹೊಸ ರೂಲ್ಸ್
ಮನೆ ಬಾಗಿಲಿಗೆ ಬರಲಿದೆ ಮಿನಿ ಆಸ್ಪತ್ರೆ
ಸಾಮಾನ್ಯವಾಗಿ ಜನರು ಬಿಪಿ (BP), ಶುಗರ್ ಸೇರಿದಂತೆ ಸಣ್ಣಪುಟ್ಟ ಕಾಯಿಲೆಗಳು ಬಂದಾಗ ಅದನ್ನು ನಿರ್ಲಕ್ಷ ಮಾಡುತ್ತಾರೆ, ಆದರೆ ಈಗ ಗೃಹ ಆರೋಗ್ಯ ಯೋಜನೆಯಡಿಯಲ್ಲಿ ಜನರಿಗೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ಚಿಂತನೆ ನಡೆಸಲಾಗಿದೆ
ಸಣ್ಣ ಪುಟ್ಟ ಖಾಯಿಲೆಗಳಿಂದ ಹಿಡಿದು ಗಂಭೀರ ಸಮಸ್ಯೆ ಇದ್ದರೂ ಕೂಡ ಅದನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ಸಲಹೆ ನೀಡಲಾಗುತ್ತದೆ, ಅಷ್ಟೇ ಅಲ್ಲದೆ ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧವನ್ನು (Medicine) ಕೂಡ ಮನೆಯ ಬಾಗಿಲಿಗೆ ಬಂದು ಉಚಿತವಾಗಿ ನೀಡಲಾಗುತ್ತದೆ.
ಹೌದು ಗೃಹ ಆರೋಗ್ಯ ಯೋಜನೆಯ ಅಡಿಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ವೈದ್ಯರು ಮನೆ ಬಾಗಿಲಿಗೆ ಬಂದು ಜನರ ವೈದ್ಯಕೀಯ ತಪಾಸಣೆ ಮಾಡಲಿದ್ದಾರೆ
ಆಸ್ತಿ ಮಾರಾಟ ಮತ್ತು ವರ್ಗಾವಣೆ ಬಗ್ಗೆ ಸರ್ಕಾರದ ಹೊಸ ನಿಯಮ, ನೆನಪಿಟ್ಟುಕೊಳ್ಳಿ ಹೊಸ ರೂಲ್ಸ್
ಇದಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರ ಪ್ರತ್ಯೇಕ ಸಿಬ್ಬಂದಿ ಹಾಗೂ ವೈದ್ಯರ ನೇಮಕಾತಿಯ ಬಗ್ಗೆಯೂ ಕೂಡ ಚಿಂತನೆ ನಡೆಸಿದೆ. ಹೀಗಾಗಿ ಮನೆಯಲ್ಲಿ ಕುಳಿತು ನೀವು ನಿಮಗೆ ಅಗತ್ಯವಿರುವ ಔಷಧಗಳನ್ನು ಕೂಡ ತರಿಸಿಕೊಳ್ಳಬಹುದು ಹಾಗೂ ಸಣ್ಣಪುಟ್ಟ ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ಕೂಡ ಪಡೆಯಬಹುದು.
Karnataka Government Free Gruha Arogya Scheme
Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.