ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಬಾರದು ಅಂದ್ರೆ ಈ ಕೆಲಸಗಳನ್ನು ತಪ್ಪದೇ ಮಾಡಿ! ಹೊಸ ರೂಲ್ಸ್
ರಾಜ್ಯದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojane) ಅನ್ನ ಭಾಗ್ಯ ಯೋಜನೆಯ (Annabhagya Yojana) ಹಣ ನೇರವಾಗಿ ಅವರ ಖಾತೆಗೆ ವರ್ಗಾವಣೆ ಆಗುತ್ತದೆ
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬಹುತೇಕ ಯೋಜನೆಗಳು ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರಿಗೆ ತಲುಪುತ್ತದೆ. ಅಂದ್ರೆ ರಾಜ್ಯದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojane) ಅನ್ನ ಭಾಗ್ಯ ಯೋಜನೆಯ (Annabhagya Yojana) ಹಣ ನೇರವಾಗಿ ಅವರ ಖಾತೆಗೆ (Bank Account) ವರ್ಗಾವಣೆ ಆಗುತ್ತದೆ
ಆದರೆ ಈಗ ಹಲವರಲ್ಲಿ ಮೂಡಿರುವ ಆತಂಕ ಎಂದರೆ ಇಷ್ಟು ದಿನ ತಮ್ಮ ಬಳಿ ಇದ್ದ ಬಿಪಿಎಲ್ ರೇಷನ್ ಕಾರ್ಡ್ (Ration Card) ರದ್ದಾಗುತ್ತದೆ ಎನ್ನುವ ವಿಷಯ.
ಗೃಹಲಕ್ಷ್ಮಿ ಹಣ ಬರೋದು ಲೇಟ್ ಆದ್ರೂ ಪರವಾಗಿಲ್ಲ! ಆದ್ರೆ ಬರುತ್ತೋ ಇಲ್ವೋ ಈ ರೀತಿ ತಿಳಿಯಿರಿ
ಈಗಾಗಲೇ ಇಷ್ಟು ರೇಷನ್ ಕಾರ್ಡ್ ರದ್ದುಪಡಿಸಲಾಗಿದೆ:
ಹೌದು ಸರ್ಕಾರ ಈಗಾಗಲೇ ಸುಮಾರು 5.1 ಲಕ್ಷ ಜನರ ರೇಷನ್ ಕಾರ್ಡ್ ರದ್ದುಪಡಿಸಿದೆ ಎನ್ನುವ ಮಾಹಿತಿ ಇದೆ, ಇದಕ್ಕೆ ಮುಖ್ಯವಾಗಿರುವ ಕಾರಣ, ರೇಷನ್ ಕಾರ್ಡ್ ನ ವಿವರಗಳು ಸರಿ ಇಲ್ಲದೆ ಇರುವುದು ಅಥವಾ ರೇಷನ್ ಕಾರ್ಡ್ ನಲ್ಲಿ ಇನ್ನು ಮೃತರ ಹೆಸರನ್ನು ತೆಗೆಯದೆ ಇರುವುದು.
ಸುಮಾರು 5.1 ಲಕ್ಷ ಕುಟುಂಬದವರು ಮನೆಯಲ್ಲಿ ಮೃತಪಟ್ಟಿರುವ ಸದಸ್ಯನ ಹೆಸರು ತೆಗೆಯದೆ ಅವರ ಹೆಸರಿನಲ್ಲಿಯೂ ಕೂಡ ಅನ್ನಭಾಗ್ಯ (Annabhagya) ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರು
ಹಲವು ವರ್ಷಗಳಿಂದಲೂ ಕೂಡ ಇಂತವರ ಹೆಸರನ್ನು ತೆಗೆಯದೆ ಬಿಪಿಎಲ್ ಕಾರ್ಡ್ ನಲ್ಲಿಯೇ ಸೇರಿಸಿ ಇಟ್ಟುಕೊಂಡಿರುವವರು ಇದ್ದಾರೆ. ಹಾಗಾಗಿ ಸರ್ಕಾರ ಇದನ್ನು ಗಮನಿಸಿ ಈಗಾಗಲೇ 5 ಲಕ್ಷಕ್ಕೂ ಹೆಚ್ಚಿನ ಮೃತಪಟ್ಟವರ ಹೆಸರನ್ನು ತೆಗೆಯದೆ ಉಳಿಸಿಕೊಂಡಿದ್ದ ಕುಟುಂಬದ ರೇಷನ್ ಕಾರ್ಡ್ ರದ್ದುಪಡಿಸಿದೆ.
ರಾತ್ರೋ ರಾತ್ರಿ ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್ ಗೆ ಸೂಚನೆ! ಸರ್ಕಾರದ ಮಹತ್ವದ ನಿರ್ಧಾರ
ಸರ್ಕಾರದ ಮಾನದಂಡಗಳನ್ನು ಪಾಲಿಸಬೇಕು
ಇನ್ನು ಮುಖ್ಯವಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಲು ಸರ್ಕಾರ 6 ಮಾನದಂಡಗಳನ್ನು ಕೂಡ ಹೇಳಿದೆ ಆದರೆ ಈ ಮಾನದಂಡಗಳನ್ನು ಮೀರಿ, ಸ್ವಂತ ವಾಹನ ಇರುವವರು, ಹೆಚ್ಚು ಆಸ್ತಿ ಹೊಂದಿರುವವರು, ತೆರಿಗೆ ಪಾವತಿ ಮಾಡುವವರು ಅಷ್ಟೇ ಅಲ್ಲದೆ ಸರ್ಕಾರಿ ಉದ್ಯೋಗದಲ್ಲಿ ಇರುವವರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ.
ಹಾಗಾಗಿ ಇಂಥವರನ್ನು ಕೂಡ ಹುಡುಕಿ ಅವರ ಕಾರ್ಡ್ ರದ್ದುಪಡಿಸುವ ಕಾರ್ಯ ನಡೆಯುತ್ತಿದೆ. ಒಟ್ಟಿನಲ್ಲಿ ಸಾಕಷ್ಟು ಜನ ರೇಷನ್ ಕಾರ್ಡ್ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಆದರೆ ನೀವು ನಿಮ್ಮ ರೇಷನ್ ಕಾರ್ಡ್ ಉಳಿಸಿಕೊಳ್ಳಬೇಕು ಅಂದ್ರೆ ಏನು ಮಾಡಬೇಕು ಗೊತ್ತಾ?
ಕರೆಂಟ್ ಬಿಲ್ ಜೀರೋ ಬಂದಿದ್ರೂ ಮುಂದಿನ ತಿಂಗಳು ಇಂತವರು ಬಿಲ್ ಕಟ್ಟಲೇಬೇಕು; ಸರ್ಕಾರದ ಬಿಗ್ ಅಪ್ಡೇಟ್
ರೇಷನ್ ಕಾರ್ಡ್ ಉಳಿಸಿಕೊಳ್ಳಲು ಹೀಗೆ ಮಾಡಿ
• ನಿಮ್ಮ ಪಡಿತರ ಚೀಟಿಯಲ್ಲಿ ಮನೆಯ ಮೃತಪಟ್ಟ ಸದಸ್ಯನ ಹೆಸರು ಇದ್ದರೆ ಕೂಡಲೇ ಅದನ್ನು ತೆಗೆಸಿ.
• ಮದುವೆಯಾಗಿ ಗಂಡನ ಮನೆಗೆ ಹೋಗಿರುವ ಹೆಣ್ಣುಮಗಳ ಹೆಸರು ಈಗಲೂ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇದ್ದರೆ ಅವರ ಹೆಸರನ್ನು ತೆಗೆಸಿ.
• ನಿಮ್ಮ ರೇಷನ್ ಕಾರ್ಡ್ ಹಾಗೂ ಆಧಾರ್ ಸಂಖ್ಯೆ ಲಿಂಕ್ (Aadhaar Card Link) ಆಗಿದೆಯಾ ಎಂಬುದನ್ನು ಪರೀಕ್ಷಿಸಿಕೊಳ್ಳಿ ಒಂದು ವೇಳೆ ಆಗಿಲ್ಲ ಎಂದರೆ ತಕ್ಷಣವೇ ಈ ಕೆಲಸವನ್ನು ಮಾಡಿ.
• ರೇಷನ್ ಕಾರ್ಡ್ ತಿದ್ದುಪಡಿಗೆ (Ration Card Correction) ಸರ್ಕಾರ ಅವಕಾಶ ನೀಡಿದ್ದು ನಿಮ್ಮ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ವಿಳಾಸ ತಪ್ಪಿದ್ದರೆ ಅವುಗಳನ್ನು ಕೂಡಲೇ ಸರಿ ಮಾಡಿಸಿ.
• ಇನ್ನು ಪ್ರತಿ ತಿಂಗಳು ರೇಷನ್ ಪಡೆಯುವುದನ್ನು ನಿಲ್ಲಿಸಬೇಡಿ. ಮೂರು ತಿಂಗಳಗಳ ಕಾಲ ನಿರಂತರವಾಗಿ ರೇಷನ್ ತೆಗೆದುಕೊಳ್ಳದೇ ಇರುವವರ ಕಾರ್ಡ್ ಕೂಡ ರದ್ದಾಗುತ್ತದೆ.
• ಮನೆಯಲ್ಲಿ ಯಾವುದೇ ಸೇರಿಸುವ ಹೆಸರು ಇದ್ದರೆ ಅಂದರೆ ಮನೆಗೆ ಸೊಸೆ ಬಂದಿದ್ದರೆ ಅಥವಾ ಚಿಕ್ಕ ಮಗು ಇದ್ದರೆ ಅವರ ಹೆಸರನ್ನು ಸೇರಿಸಿ.
• ಆಧಾರ್ ಕಾರ್ಡ್ ನಲ್ಲಿ ಗಂಡು ಹೆಣ್ಣು ಎನ್ನುವ ಲಿಂಗದಲ್ಲಿ ಬದಲಾವಣೆ ಆಗಿದ್ದರೆ ಉದಾಹರಣೆಗೆ ಹೆಣ್ಣು ಮಕ್ಕಳಿಗೆ ಗಂಡು ಎಂದು ಗಂಡು ಮಗುವಿಗೆ ಹೆಣ್ಣು ಎಂದು ಲಿಂಗ ವ್ಯತ್ಯಾಸವಾಗಿದ್ದರೆ ಅದನ್ನು ಕೂಡ ಸರಿ ಮಾಡಿಸಿ.
• ಒಂದು ವೇಳೆ ನೀವು ಹಳೆಯ ವಿಳಾಸದಲ್ಲಿ ಇಲ್ಲದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ಮಾತ್ರ ಹಳೆಯ ವಿಳಾಸದಲ್ಲಿಯೇ ಇದ್ದರೆ ತಕ್ಷಣವೇ ಆ ಅಡ್ರೆಸ್ ಕೂಡ ತಿದ್ದುಪಡಿ ಮಾಡಿಸಿ.
ಸುಮಾರು 5.18 ಲಕ್ಷ ರೇಶನ್ ಕಾರ್ಡ್ ಗಳಿಗೆ ಸಿಗೋದಿಲ್ಲ ಅನ್ನಭಾಗ್ಯ ಸೌಲಭ್ಯ! ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ಯಾ?
ಈ ಮೇಲಿನ ಎಲ್ಲಾ ಬದಲಾವಣೆಗಳನ್ನು ಕೂಡ ನೀವು ತಕ್ಷಣವೇ ರೇಷನ್ ಕಾರ್ಡ್ ನಲ್ಲಿ ಮಾಡಿಸಿಕೊಳ್ಳಬೇಕು. ಇಷ್ಟೆಲ್ಲ ಬದಲಾವಣೆಗಳು ಆಗಿದ್ದರೂ ಕೂಡ ಕೆಲವರ ರೇಷನ್ ಕಾರ್ಡ್ ರದ್ದಾಗುತ್ತದೆ, ಅದಕ್ಕೆ ಮುಖ್ಯ ಕಾರಣ ಸರ್ಕಾರದ ಮಾನದಂಡಗಳನ್ನು ಮೀರಿರುವುದು.
ಇನ್ನು ಸರ್ಕಾರ ಬಿಪಿಎಲ್ ರೇಷನ್ ಕಾರ್ಡ್ ಅನ್ನು ನೀಡುವುದು ಬಡತನ ರೇಖೆಗಿಂತ ಕೆಳಗಿನವರು (Below poverty line) ಅಂದರೆ ಜೀವನ ಸಾಗಿಸಲು ಕೂಡ ಕಷ್ಟ ಇರುವಂತ ಜನರಿಗಾಗಿ ಮಾತ್ರ.
ಆದರೆ ಇಂದು ಅನುಕೂಲ ಪರಿಸ್ಥಿತಿಯಲ್ಲಿ ಇರುವವರು ಕೂಡ ಇಂತಹ ಕಾರ್ಡ್ ಪಡೆದುಕೊಂಡಿದ್ದಾರೆ. ನೀವು ಕೂಡ ಒಬ್ಬರಾಗಿದ್ದರೆ ನಿಜವಾಗಿ ಈ ಕಾರ್ಡ್ ಪ್ರಯೋಜನ ಯಾರಿಗೆ ಸಿಗಬೇಕು ಅಂತವರಿಗೆ ಸಲ್ಲಿಸುವ ಸಲುವಾಗಿ ನಿಮ್ಮ ಬಳಿ ಇರುವ ರೇಷನ್ ಕಾರ್ಡ್ ಅನ್ನು ಸರ್ಕಾರಕ್ಕೆ ಹಿಂತಿರುಗಿಸಿ.
ನಿಮಗೆ ಅನಗತ್ಯವಾಗಿರುವ ರೇಷನ್ ಕಾರ್ಡ್ ಇನ್ನೊಂದು ಕುಟುಂಬಕ್ಕೆ ಬಹಳ ಅತ್ಯಗತ್ಯವಾಗಿರಬಹುದು. ಹಾಗಾಗಿ ನೀವು ಸ್ವಯಂ ಇಚ್ಚೆಯಿಂದ ನಿಮ್ಮ ರೇಷನ್ ಕಾರ್ಡ್ ಒಪ್ಪಿಸಿದರೆ ಅಗತ್ಯ ಇರುವ ವ್ಯಕ್ತಿಗೆ ಆ ಕಾರ್ಡ್ ಸಲ್ಲುತ್ತದೆ.
Do these things without fail so that your ration card does not get cancelled
Follow us On
Google News |