ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ (Gruha Lakshmi Scheme) ಯೋಜನೆಯ ಎರಡು ಸಾವಿರ ರೂಪಾಯಿಗಳು ಬಿಡುಗಡೆ ಆಗಿ ಮೂರು ವಾರಗಳು ಕಳೆದಿವೆ

ಅರ್ಜಿ ಹಾಕಿದ ಕೋಟ್ಯಾಂತರ ಜನರಲ್ಲಿ ಒಂದಿಷ್ಟು ಜನರಿಗೆ ಹಣ ಅವರ ಖಾತೆಗೆ ನೇರವಾಗಿ ವರ್ಗಾವಣೆ (DBT) ಆಗಿದೆ, ಇನ್ನು ಹಲವರ ಖಾತೆಗೆ (Bank Account) ಹಣ ಬಂದಿಲ್ಲ. ಇದಕ್ಕಾಗಿ ಸಾಕಷ್ಟು ಮಹಿಳೆಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

The second installment is finally deposited, Check Gruha Lakshmi Yojana Status

ರಾತ್ರೋ ರಾತ್ರಿ ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್ ಗೆ ಸೂಚನೆ! ಸರ್ಕಾರದ ಮಹತ್ವದ ನಿರ್ಧಾರ

ಕಾರಣ ತಿಳಿಸಿದ ಸರ್ಕಾರ

ಗೃಹಿಣಿಯರ ಖಾತೆಗೆ ಯಾಕೆ ಇದುವರೆಗೆ ಹಣ ಬಂದಿಲ್ಲ ಎನ್ನುವುದಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸಾಕಷ್ಟು ಕಾರಣಗಳನ್ನು ಕೂಡ ಕೊಟ್ಟಿದ್ದಾರೆ. ಮೊದಲನೇದಾಗಿ ಹಲವು ಗೃಹಿಣಿಯರ ಖಾತೆ ಆಕ್ಟಿವ್ (Active) ಆಗಿಲ್ಲ, ಹಾಗಾಗಿ ಅವರ ಬ್ಯಾಂಕ್ ಖಾತೆ (Bank Account) ಸಕ್ರಿಯವಾಗಿ ಇಲ್ಲದಿದ್ದರೆ ಅಂತವರಿಗೆ ಹಣ ಹಾಕಲು ಸಾಧ್ಯವಾಗುತ್ತಿಲ್ಲ

ಇದರ ಜೊತೆಗೆ ಆರ್‌ಬಿಐ (RBI) ಹಂತ ಹಂತವಾಗಿ ಹಣವನ್ನು ಬಿಡುಗಡೆ ಮಾಡುತ್ತಿದ್ದು, ಕೋಟ್ಯಂತರ ಮಹಿಳೆಯರಿಗೆ ಒಟ್ಟಿಗೆ ಹಣ ಸಂದಾಯ ಮಾಡಲು ಸಾಧ್ಯವಾಗುತ್ತಿಲ್ಲ.

ಇನ್ನು ಕೆಲವೊಮ್ಮೆ ಸರಕಾರಿ ಸರ್ವರ್ ಪ್ರಾಬ್ಲಮ್ (Server Problem) ನಿಂದಾಗಿ ಕೂಡ ಹಣ ಬಂದು ತಲುಪಲು ನಿಧಾನವಾಗುತ್ತದೆ. ಅದೇ ರೀತಿ ರೇಷನ್ ಕಾರ್ಡ್ (Ration Card) ನಲ್ಲಿ ಕುಟುಂಬದ ಮೊದಲ ಸದಸ್ಯ ಮಹಿಳೆ ಆಗಿರಬೇಕು (Head of the Family) ಈ ಹೆಸರು ಬದಲಾವಣೆ ಆಗುವವರೆಗೆ ಅವರ ಖಾತೆಗೆ ಹಣ ಬರುವುದಿಲ್ಲ. ಎಲ್ಲಾ ಕಾರಣಗಳಿಂದಾಗಿ ಸುಮಾರು ಎಂಟು ಲಕ್ಷ ಜನರ ಖಾತೆಗೆ ಹಣ ಬರುವುದು ಇನ್ನೂ ಬಾಕಿ ಇದೆ.

ಕರೆಂಟ್ ಬಿಲ್ ಜೀರೋ ಬಂದಿದ್ರೂ ಮುಂದಿನ ತಿಂಗಳು ಇಂತವರು ಬಿಲ್ ಕಟ್ಟಲೇಬೇಕು; ಸರ್ಕಾರದ ಬಿಗ್ ಅಪ್ಡೇಟ್

Gruha Lakshmi Yojaneಎಲ್ಲವೂ ಸರಿ ಇದ್ರೆ ಸಿಕ್ಕೆ ಸಿಗುತ್ತೆ:

ಇನ್ನು ನಿಮ್ಮ ಖಾತೆಯಲ್ಲಿ ಎಲ್ಲವೂ ಸರಿಯಾಗಿದ್ದರೆ ಸ್ವಲ್ಪ ವಿಳಂಬವಾದರೂ ಸರಿ ಹಣ ಬಂದು ತಲುಪುತ್ತದೆ, ಹಾಗಾದ್ರೆ ನಮ್ಮ ಖಾತೆಗೆ ಹಣ ಬಂದೇ ಬರುತ್ತದೆ ಎಂದು ದೃಢೀಕರಣ ಪಡಿಸಿಕೊಳ್ಳುವುದು ಹೇಗೆ? ಇದಕ್ಕೆ ನೀವು ಏನು ಮಾಡಬೇಕು ಎಂಬುದಕ್ಕೇ ಇಲ್ಲಿದೆ ಉತ್ತರ.

NPCI seeding

ನೀವು ನಿಮ್ಮ ಖಾತೆ ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಆಗಿದೆಯೇ ಎಂಬುದು ಬ್ಯಾಂಕ್ ನಲ್ಲಿ ಹೋಗಿ ಚೆಕ್ ಮಾಡಿಕೊಳ್ಳಿ ಅಥವಾ https://resident.uidai.gov.in/bank-mapper ಈ ಲಿಂಕ್ ಕ್ಲಿಕ್ ಮಾಡಿ ಇದರಲ್ಲಿ ಆಧಾರ್ ನಂಬರ್ ಹಾಕಿ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ (Registered Mobile Number) ಗೆ ಬರುವ ಓಟಿಪಿ ಯನ್ನು ನಮೂದಿಸಿ.

ಈಗ ನಿಮ್ಮ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಸೀಡಿಂಗ್ ಆಗಿದೆಯೋ ಇಲ್ಲವೋ ಎಂಬುದು ತಿಳಿಯುತ್ತದೆ. ಜೊತೆಗೆ ಯಾವ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದೆ ಎಂಬುದು ಕೂಡ ಗೊತ್ತಾಗುತ್ತದೆ.

ಮೇಕೆ ಸಾಕಾಣಿಕೆ ಮಾಡುವ ಎಲ್ಲಾ ರೈತರಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ! ಇಂದೇ ಅಪ್ಲೈ ಮಾಡಿ

ಹಲವರು ಒಂದಕ್ಕಿಂತ ಹೆಚ್ಚಿನ ಖಾತೆ ಹೊಂದಿರುತ್ತಾರೆ. ಹಾಗಾಗಿ ಆಕ್ಟಿವ್ ಆಗಿರುವ ಖಾತೆ ಒಂದು, ಸರ್ಕಾರದಲ್ಲಿ ರಿಜಿಸ್ಟರ್ ಆಗಿರುವ ಅಂದರೆ ಆಧಾರ್ ಸೀಡಿಂಗ್ ಆಗಿರುವ ಖಾತೆ ಒಂದು ಆಗಿರುತ್ತದೆ.

ಸರ್ಕಾರಕ್ಕೆ ಆಧಾರ ಕಾರ್ಡ್ ಮ್ಯಾಪಿಂಗ್ ಆಗಿರುವ ಖಾತೆ ಮಾತ್ರ ಸಿಗುತ್ತದೆ. ಅದು ಆಕ್ಟಿವ್ ಇಲ್ಲದೆ ಇದ್ದಾಗ ನಿಮ್ಮ ಖಾತೆಗೆ ಹಣ ಬರುವುದಿಲ್ಲ ಹಾಗಾಗಿ ಇದನ್ನು ಮೊದಲು ಚೆಕ್ ಮಾಡಿಕೊಳ್ಳಿ.

ರೇಷನ್ ಕಾರ್ಡ್ ನ ತಿದ್ದುಪಡಿ ಸರಿಯಾಗಿದೆಯೇ? (Ration card Correction)

ಸರ್ಕಾರ ಈ ಹಿಂದೆಯೇ ಸೂಚಿಸಿರುವಂತೆ ರೇಶನ್ ಕಾರ್ಡ್ ನಲ್ಲಿ ಮೊದಲ ಸದಸ್ಯ ಅಥವಾ ಕುಟುಂಬದ ಯಜಮಾನ ಹೆಸರಿನಲ್ಲಿಯೇ ರೇಷನ್ ಕಾರ್ಡ್ ಇರಬೇಕು. ಒಂದು ವೇಳೆ ನೀವು ಬದಲಾವಣೆ ಮಾಡಿಕೊಳ್ಳದೆ ಇದ್ದಲ್ಲಿ ಕೂಡಲೇ ಹೆಸರು ಬದಲಾವಣೆ ಮಾಡಿಕೊಳ್ಳಿ. ಇನ್ನು ಹಲವರು ಈಗಾಗಲೇ ಯಜಮಾನಿ ಹೆಸರನ್ನು ಮೊದಲ ಸದಸ್ಯ ಆಗಿ ಸೇರಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅಂದ್ರೆ ಯಾರನ್ನ ಭೇಟಿ ಆಗ್ಬೇಕು ಗೊತ್ತಾ? ಹೊಸ ಅಪ್ಡೇಟ್ ಹೊರಡಿಸಿದ ಸರ್ಕಾರ

ಆದರೂ ಅವರಿಗೆ ಹಣ ಬಂದಿಲ್ಲ ಎಂದಾದರೆ https://mahitikanaja.karnataka.gov.in/FCS/MyRationCard?ServiceId=1036&Type=TABLE&DepartmentId=1010 ಈ ವೆಬ್ಸೈಟ್ನಲ್ಲಿ ನಿಮ್ಮ ಆಧಾರ್ ನಂಬರ್ ಹಾಗೂ ಜಿಲ್ಲೆಯನ್ನು ನಮೂದಿಸಿ ನೀವು ಬದಲಾಯಿಸಿದ ನಿಮ್ಮ ಹೆಸರು ಸರಕಾರದ ಮಾಹಿತಿ ಕಣಜದಲ್ಲಿ ಅಪ್ಡೇಟ್ ಆಗಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಿ.

ಒಂದು ವೇಳೆ ಬದಲಾವಣೆ ಆಗಿದ್ದರೆ ಅಲ್ಲಿ ನಿಮ್ಮ ಹೆಸರು ತೋರಿಸುತ್ತದೆ ಇಲ್ಲವಾದರೆ ನೀವು ಮತ್ತೆ ಆ ಕೆಲಸವನ್ನು ಮಾಡಬೇಕು.

ಸರ್ಕಾರದ ರಿಜಿಸ್ಟರ್ ನಲ್ಲಿ ನಿಮ್ಮ ಹೆಸರು ಆಧಾರ್ ಮ್ಯಾಪಿಂಗ್, ಆಧಾರ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ಈ ಮೂರರಲ್ಲಿ ನಿಮ್ಮ ಹೆಸರು ಒಂದೇ ತರ ಇದ್ರೆ ನೀವು ಚಿಂತೆ ಮಾಡುವ ಅಗತ್ಯವೇ ಇಲ್ಲ ಸ್ವಲ್ಪ ವಿಳಂಬವಾದರೂ ಕೂಡ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬಂದು ಸೇರುತ್ತದೆ.

How to know whether Gruha Lakshmi money is coming or not