ಉಚಿತವಾಗಿ ಸಿಗಲಿದೆ ಲ್ಯಾಪ್ ಟಾಪ್! ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್
ಕಾರ್ಮಿಕ ಇಲಾಖೆಯ ಪತ್ರಿಕಾ ಪ್ರಕಟನೆಯಲ್ಲಿ ಈ ವಿಚಾರ ತಿಳಿದುಬಂದಿದ್ದು, ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಫ್ರೀಯಾಗಿ ಲ್ಯಾಪ್ ಟಾಪ್ (Free Laptop) ನೀಡುವುದಾಗಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ನಮ್ಮ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಚೆನ್ನಾಗಿರಬೇಕು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗಬೇಕು. ಅವರ ಶಿಕ್ಷಣಕ್ಕೆ (Education) ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಸ್ಕಾಲರ್ಶಿಪ್ ಯೋಜನೆಗಳು (scholarship Schemes) ಮತ್ತು ಇನ್ನಿತರ ಯೋಜನೆಗಳನ್ನು ಕೂಡ ಜಾರಿಗೆ ತರಲಾಗುತ್ತಿದೆ. ವಿವಿಧ ಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು (Quality Education) ಕೂಡ ನೀಡುವ ಪ್ರಯತ್ನದಲ್ಲಿದೆ..
ಇದೇ ಕ್ರಮದಲ್ಲಿ ರಾಜ್ಯ ಸರ್ಕಾರವು ಪದವಿ ವಿದ್ಯಾರ್ಥಿಗಳಿಗೆ ಜಾರಿಯಾಗಿದ್ದ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National education policy) ನಮ್ಮ ರಾಜ್ಯದಲ್ಲಿ ಕ್ಯಾನ್ಸಲ್ ಮಾಡಿತು. ಇದರಿಂದ ನಮ್ಮ ವಿದ್ಯಾರ್ಥಿಗಳಿಗೆ ಒಂದು ರೀತಿ ಅನುಕೂಲ ಆಗಿದೆ ಎಂದು ಹೇಳಬಹುದು.
ಇಂತಹವರ ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಅಕೌಂಟ್ಗೆ ಬಂದರೂ ಕೈಗೆ ಸಿಗೋಲ್ಲ! ಬ್ಯಾಂಕ್ ಹೊಸ ನಿರ್ಧಾರ
ಹಾಗೆಯೇ ಯೂನಿವರ್ಸಿಟಿಗಳಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸಹಾಯ ಆಗುವ ಹಾಗೆ, ಪರಿಶಿಷ್ಟ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯ ಮೂಲಕ ಫ್ರೀ ಲ್ಯಾಪ್ (Free Laptop) ಟಾಪ್ ನೀಡಲು ಸರ್ಕಾರ ನಿರ್ಧಾರ ಮಾಡಿತ್ತು..
ಆದರೆ ಇನ್ನುಮುಂದೆ ಇವರಿಗೆ ಮಾತ್ರವಲ್ಲ ಪಿಯುಸಿ ವಿದ್ಯಾರ್ಥಿಗಳಿಗೆ (PC Students), ಪ್ರಥಮ ಮತ್ತು ದ್ವಿತೀಯ ಪಿಯಿಸಿ ವಿದ್ಯಾರ್ಥಿಗಳಿಗೆ ಸಹಾಯ ಆಗುವ ಹಾಗೆ ಅವರಿಗೂ ಲ್ಯಾಪ್ ಟಾಪ್ ವಿತರಣೆ (Laptop) ಮಾಡುವುದಾಗಿ ಸರ್ಕಾರ ಹೊಸದಾಗಿ ಘೋಷಣೆ ಮಾಡಿದೆ.
ಕಾರ್ಮಿಕ ಇಲಾಖೆಯ ಪತ್ರಿಕಾ ಪ್ರಕಟನೆಯಲ್ಲಿ ಈ ವಿಚಾರ ತಿಳಿದುಬಂದಿದ್ದು, ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಫ್ರೀಯಾಗಿ ಲ್ಯಾಪ್ ಟಾಪ್ (Free Laptop) ನೀಡುವುದಾಗಿ ತಿಳಿಸಿದ್ದಾರೆ.
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಎಷ್ಟು ದಿನ ಇರುತ್ತೆ ಗೊತ್ತಾ? ಕಾಂಗ್ರೆಸ್ ನಾಯಕರು ಕೊಟ್ಟ ಸ್ಪಷ್ಟನೆ ಏನು?
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ರಿಜಿಸ್ಟರ್ ಆಗಿರುವ ಕಾರ್ಮಿಕರ ಮಕ್ಕಳಿಗೆ 2023-24ರ ಸಾಲಿನಲ್ಲಿ ಓದುತ್ತಿರುವ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಫ್ರೀಯಾಗಿ ಸರ್ಕಾರದಿಂದ ಲ್ಯಾಪ್ ಟಾಪ್ ಸಿಗುತ್ತದೆ. ಅರ್ಹತೆ ಇರುವ ವಿದ್ಯಾರ್ಥಿಗಳು ಉಚಿತವಾಗಿ ಲ್ಯಾಪ್ ಟಾಪ್ ಪಡೆಯಲು ಅರ್ಜಿ ಹಾಕುವುದಕ್ಕೆ ಆಹ್ವಾನ ಬಂದಿದೆ. ಅರ್ಜಿ ಹಾಕಲು ಬಯಸುವವರು ಅವರವರ ಜಿಲ್ಲೆಯ ಅಥವಾ ತಾಲ್ಲೂಕು ಕಾರ್ಮಿಕ ಅಧಿಕಾರಿಗಳ ಕಛೇರಿಯಿಂದ ಅರ್ಜಿ ಪಡೆದುಕೊಳ್ಳಬಹುದು..
ಅರ್ಜಿ ಹಾಕಲು ಮುಖ್ಯವಾಗಿ ಕಟ್ಟಡ ಕಾರ್ಮಿಕರ ರಿಜಿಸ್ಟರ್ ಆಗಿರುವ ಐಡೆಂಟಿಟಿ ಕಾರ್ಡ್, ಮಕ್ಕಳ ಆಧಾರ್ ಕಾರ್ಡ್, ಶಿಕ್ಷಣ ಪಡೆಯುತ್ತಿರುವುದಕ್ಕೆ ದೃಢೀಕರಣ ಪತ್ರ, SSLC ಮಾರ್ಕ್ಸ್ ಕಾರ್ಡ್ ಇದಿಷ್ಟು ಬೇಕಾಗುತ್ತದೆ.
ಇನ್ನೂ ನಿಮಗೆ ಅನ್ನಭಾಗ್ಯ ಯೋಜನೆ ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ ಸಾಕು! ನಿಮ್ಮ ಖಾತೆಗೆ ಹಣ ಬರುತ್ತದೆ
ಹಾಗೆಯೇ ಸ್ವಯಂ ದೃಢೀಕರಣ ಪತ್ರ ಒಂದನ್ನು ಕಟ್ಟಡ ಕಾರ್ಮಿಕರ ಇಲಾಖೆಗೆ ಸಲ್ಲಿಸಬೇಕು. ನಂತರ ಉಚಿತ ಲ್ಯಾಪ್ ಟಾಪ್ ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 16, ಈ ದಿನಾಂಕದ ಒಳಗೆ ಅರ್ಹತೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು..
Free laptop distribution to PUC students