ದೂರದ ಊರುಗಳಿಂದ ಕೋರ್ಟ್ ಕೇಸ್‌ಗಳಿಗೆ ಸುತ್ತಾಡೋ ಪಜೀತಿ ಇನ್ನಿಲ್ಲ! ಇನ್ಮುಂದೆ ನಿಮ್ಮೂರಲ್ಲೇ ಕೋರ್ಟ್

ಸರ್ಕಾರವು ಚಿಕ್ಕ ಮಟ್ಟದಲ್ಲಿ, ಜನರ ಸಣ್ಣ ಸಮಸ್ಯೆಗಳನ್ನು ಸಾಲ್ವ್ ಮಾಡುವುದಕ್ಕೆ ಇನ್ನುಮುಂದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ಕೋರ್ಟ್ ಸ್ಥಾಪಿಸುವ ತೀರ್ಮಾನ ತೆಗೆದುಕೊಂಡಿದೆ.

ಈಗ ಜನರು ಒಂದು ಸಣ್ಣ ಪುಟ್ಟ ವಿಷಯಗಳಿಗೂ ಕೇಸ್ ಹಾಕಿ, ಡಿಸ್ಟ್ರಿಕ್ಟ್ ಕೋರ್ಟ್, ಹೈಕೋರ್ಟ್ ಎಂದು ಕೋರ್ಟ್ ಮೆಟ್ಟಿಲು ಏರುತ್ತಾರೆ. ಈ ರೀತಿಯ ಪ್ರಕರಣಗಳು ಜಾಸ್ತಿ ಆಗುತ್ತಿರುವುದರಿಂದ ಸರ್ಕಾರವು ಈ ಬಗ್ಗೆ ಒಂದು ತೀರ್ಮಾನ ಮಾಡಲು ಮುಂದಾಗಿದ್ದು, ಈ ರೀತಿಯ ಕೇಸ್ ಗಳ ಕಾರಣ ಕೋರ್ಟ್ ನಲ್ಲಿ (Court Cases) ಸಹಸ್ರಾರು ಕೇಸ್ ಗಳು ಕ್ಲಿಯರ್ ಆಗದೆ ಹಾಗೆಯೇ ಬಾಕಿ ಉಳಿದಿದೆ.

ಅಲ್ಲದೆ ಪ್ರಕರಣಗಳಿಗಾಗಿ ಒಳ್ಳೆಯ ಲಾಯರ್ (Best Lawyers) ಗೊತ್ತು ಮಾಡಿಕೊಳ್ಳಬೇಕು, ಹೋಗಲು ಬರಲು ಹೆಚ್ಚಿನ ಹಣ ಸೇರಿದಂತೆ ಸಾಕಷ್ಟು ಸಮಯ ಬೇಕಾಗುತ್ತದೆ.

ಹಾಗಾಗಿ ಸರ್ಕಾರವು ಚಿಕ್ಕ ಮಟ್ಟದಲ್ಲಿ, ಜನರ ಸಣ್ಣ ಸಮಸ್ಯೆಗಳನ್ನು ಸಾಲ್ವ್ ಮಾಡುವುದಕ್ಕೆ ಇನ್ನುಮುಂದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ಕೋರ್ಟ್ ಸ್ಥಾಪಿಸುವ ತೀರ್ಮಾನ ತೆಗೆದುಕೊಂಡಿದೆ.

ದೂರದ ಊರುಗಳಿಂದ ಕೋರ್ಟ್ ಕೇಸ್‌ಗಳಿಗೆ ಸುತ್ತಾಡೋ ಪಜೀತಿ ಇನ್ನಿಲ್ಲ! ಇನ್ಮುಂದೆ ನಿಮ್ಮೂರಲ್ಲೇ ಕೋರ್ಟ್ - Kannada News

ರಾಜ್ಯದ ಎಲ್ಲಾ ಶಾಲಾ ಹೆಣ್ಣುಮಕ್ಕಳಿಗೆ ಸಿಹಿಸುದ್ದಿ, ಹೊಸ ಯೋಜನೆಯ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಮೊದಲು ಹಳ್ಳಿಗಳಲ್ಲಿ ಕೋರ್ಟ್ ಗೆ ಹೋಗುವ ಸಂಸ್ಕೃತಿ ಇರಲಿಲ್ಲ. ಮೊದಲೆಲ್ಲಾ, ಯಾವುದಾದರೂ ಕುಟುಂಬಗಳ ನಡುವೆ ಆಸ್ತಿ ವಿಷಯಕ್ಕೆ ತೊಂದರೆ ಉಂಟಾದರೆ, ಅಥವಾ ಇನ್ಯಾವುದೇ ಸಮಸ್ಯೆಗಳು ಎದುರಾದರೆ ಪಂಚಾಯ್ತಿಯಲ್ಲಿ ಹಳ್ಳಿಯ ಹಿರಿಯರು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು.

ಆದರೆ ಈಗ ಹಾಗಿಲ್ಲ, ಸಣ್ಣ ವಿಷಯಗಳಿಗು ಈಗ ಕೋರ್ಟ್ ಮೆಟ್ಟಿಲೇರುತ್ತಾರೆ. ಸಣ್ಣ ವಿಷಯಕ್ಕೂ ಡಿಸ್ಟ್ರಿಕ್ಟ್ ಕೋರ್ಟ್ ಅಥವಾ ಹೈಕೋರ್ಟ್ ಗೆ ಹೋಗಬೇಕಾಗುತ್ತದೆ. ಹೀಗಿರುವುದರಿಂದ ಮುಂದೆ ಗ್ರಾಮದ ಮಟ್ಟದಲ್ಲಿ ಕೋರ್ಟ್ (Village Court) ಇದ್ದರೆ, ಕೇಸ್ ಗಳನ್ನು ಸುಲಭವಾಗಿ ತೀರ್ಮಾನ ಮಾಡಬಹುದು.

ಹಳ್ಳಿ ಅಥವಾ ಗ್ರಾಮ ಮಟ್ಟದಲ್ಲಿ ಕೇಸ್ ಹಾಕುವುದಕ್ಕೆ ಬರುವುದು ರೈತರು, ಬಡವರು ಮತ್ತು ಸಾಮಾನ್ಯ ಜನರೇ ಆಗಿರುತ್ತಾರೆ. ಹಾಗಾಗಿ ಅವರು ಜಿಲ್ಲಾ ಕೋರ್ಟ್ ಗೆ ಬಂದರೆ, ಅಥವಾ ತಾಲೂಕು ಕೋರ್ಟ್ ಗೆ ಹೋದರೆ ಅವರ ಸಮಯ, ಹಣ, ಖರ್ಚು ಎಲ್ಲವೂ ಜಾಸ್ತಿಯೇ ಆಗಿರುತ್ತದೆ.

ಹಾಗಾಗಿ ಗ್ರಾಮ ಮಟ್ಟದಲ್ಲಿ ಕೋರ್ಟ್ ಶುರುವಾದರೆ, ಅದು ಹಳ್ಳಿಯ ಜನರಿಗು ಸಹಾಯ ಆಗುತ್ತದೆ. ಹಾಗೆಯೇ ಈ ರೀತಿ ಗ್ರಾಮ ಮಟ್ಟದ ಕೋರ್ಟ್ ನಲ್ಲಿ ನ್ಯಾಯ ತೀರ್ಮಾನ ಮಾಡಿ, ಗ್ರಾಮಗಳನ್ನು ವ್ಯಾಜ್ಯ ಮುಕ್ತ ಗ್ರಾಮ ಎಂದು ಘೋಷಣೆ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶ ಆಗಿದೆ.

ಹೊಸ BPL ರೇಷನ್ ಕಾರ್ಡ್ ಪಡೆಯಲು ಈ 6 ರೂಲ್ಸ್ ಪಾಲಿಸುವುದು ಕಡ್ಡಾಯ! ಹೊಸ ನಿಯಮಗಳನ್ನು ತಿಳಿಯಿರಿ

Village Court2008ರಲ್ಲೇ ಕೇಂದ್ರ ಸರ್ಕಾರ ಗ್ರಾಮ ನ್ಯಾಯಾಲಯ ಎನ್ನುವ ಕಾಯ್ದೆಯನ್ನು ಜಾರಿಗೆ ತಂದಿದೆ, ಹಲವು ರಾಜ್ಯಗಳಲ್ಲಿ ಇದನ್ನು ಪಾಲಿಸಲಾಗುತ್ತಿದೆ. ಪ್ರಸ್ತುತ ಈ ವಿಚಾರದ ಬಗ್ಗೆ ಕಾನೂನು ಸಚಿವರಾದ ಹೆಚ್.ಕೆ ಪಾಟೀಲ್ ಅವರು ಸಭೆಯಲ್ಲಿ ಚರ್ಚೆ ನಡೆಸಿ, ತೀರ್ಮಾನ ತೆಗೆದುಕೊಂಡಿದ್ದಾರೆ.

ಜಾಸ್ತಿ ಕೇಸ್ ಗಳು ಇರುವ ಕಡೆ ಒಂದು ಗ್ರಾಮ ನ್ಯಾಯಾಲಯದ ನಿರ್ಮಾಣ ಆಗಲಿದೆ. ಇದಕ್ಕಾಗಿ 18 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣ ಬೇಕಾಗುತ್ತದೆ. ಈ ಕೋರ್ಟ್ ನಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಎರಡು ಕೇಸ್ ಗಳನ್ನು ಪರಿಹರಿಸಲಾಗುತ್ತದೆ.

7ನೇ ತರಗತಿ ಪಾಸ್ ಆಗಿದ್ರು ಸಾಕು, ವಿಧಾನಸೌಧದಲ್ಲಿ ಸಿಗುತ್ತೆ ಕೆಲಸ! ಈಗಲೇ ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ

ಈಗ ತಾಲ್ಲೂಕ್ ಮತ್ತು ಡಿಸ್ಟ್ರಿಕ್ಟ್ ಕೋರ್ಟ್ ಗಳಿಗೆ ಬರುತ್ತಿರುವ ಕೇಸ್ ಗಳು ಜಾಸ್ತಿ ಆಗುತ್ತಲೇ ಇರುವ ಕಾರಣ, ಕೇಸ್ ಗಳು ಬೇಗ ತೀರ್ಮಾನ ಆಗಬೇಕಿರುವ ಕಾರಣ ಗ್ರಾಮೀಣ ಭಾಗದಲ್ಲಿ ಕೋರ್ಟ್ ಶುರು ಮಾಡಬೇಕು ಎನ್ನಲಾಗುತ್ತಿದೆ.

ಹಳ್ಳಿಗಳಲ್ಲಿ ಸಿವಿಲ್ ಕೇಸ್ ಗಳು ಜಾಸ್ತಿ ಇರುತ್ತದೆ, ಹಾಗಾಗಿ ಈ ಕೇಸ್ ಗಳ ಪರಿಹಾರಕ್ಕೆ ಪೊಲೀಸರ ಸಹಾಯ ಕೂಡ ಸಿಗುತ್ತದೆ. ಪ್ರಸ್ತುತ 1000 ಗ್ರಾಮ ನ್ಯಾಯಾಲಯಗಳನ್ನು ನಿರ್ಮಿಸಬೇಕು ಎಂದು ಚಿಂತನೆ ನಡೆಸಲಾಗಿದ್ದು, ಇದರ ಮೊದಲ ಹಂತದಲ್ಲಿ 400 ಗ್ರಾಮೀಣ ಕೋರ್ಟ್ ಗಳ ನಿರ್ಮಾಣ ಆಗಲಿದೆ.

ಗ್ರಾಮ ನ್ಯಾಯಾಲಯವು ಗ್ರಾಮ ಪಂಚಾಯತ್ ಕೇಂದ್ರ ಬಿಟ್ಟು ಬೇರೆ ಕಡೆಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ ಎರಡು ಸರ್ಕಾರದಿಂದ ಹಣ ಸಹಾಯ ಸಿಗುತ್ತದೆ. ಈಗ ಕೇರಳ, ಉತ್ತರ ಪ್ರದೇಶ, ರಾಜಸ್ಥಾನ ಇಲ್ಲೆಲ್ಲಾ ಸುಮಾರು 256 ಗ್ರಾಮ ನ್ಯಾಯಾಲಯಗಳ ಸ್ಥಾಪನೆ ಆಗಿದೆ.

ಸಿಹಿ ಸುದ್ದಿ! ರಾಜ್ಯ ಸರ್ಕಾರದಿಂದ ಇನ್ನು 3 ಹೊಸ ಯೋಜನೆ ಜಾರಿಗೆ, ಈ ಬಾರಿ ಯಾರಿಗೆಲ್ಲ ಸಿಗಲಿದೆ ಯೋಜನೆಯ ಫಲ

ಹಾಗಾಗಿ ಇನ್ನು ಹೆಚ್ಚು ಗ್ರಾಮ ನ್ಯಾಯಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಕೋರ್ಟ್ ಗಳಲ್ಲಿ ಬೇಕಾಗುವ ಜಡ್ಜ್ ಗಳಿಗಾಗಿ ಹೈಕೋರ್ಟ್ ಜೊತೆಗೆ ಚರ್ಚೆ ನಡೆಸಲಾಗುತ್ತದೆ, ಒಂದು ಕೋರ್ಟ್ ಗೆ 6 ಜಡ್ಜ್ ಗಳನ್ನು ನೇಮಿಸಬಹುದು. ಆಕ್ಟೊಬರ್ ಅಥವಾ ನವೆಂಬರ್ ತಿಂಗಳ ಸಮಯಕ್ಕೆ ಈ ಕೋರ್ಟ್ ಜಾರಿಗೆ ಬರಬಹುದು ಎನ್ನಲಾಗುತ್ತಿದೆ.

Good news for those who are traveling for court cases from distant towns

Follow us On

FaceBook Google News

Good news for those who are traveling for court cases from distant towns