ಪೆಂಡಿಂಗ್ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ
ಒಂದು ವೇಳೆ ಹೆಸರು ಮ್ಯಾಚ್ ಆಗದೇ ಇದ್ದಲ್ಲಿ ಸರ್ಕಾರದಿಂದ ಹಣ ಬಿಡುಗಡೆ ಆಗಿದ್ದರು ಬ್ಯಾಂಕ್ನಿಂದ ನಿಮ್ಮ ಖಾತೆಗೆ ಹಣ ಬಾರದೆ ಇರಬಹುದು.
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಜಾರಿಗೆ ಬಂದ ನಂತರ ಸಾಕಷ್ಟು ಮಹಿಳೆಯರ ಖಾತೆಯಲ್ಲಿ (Bank Account) ಹಣ ಸಂಗ್ರಹವಾಗಿದೆ ಎನ್ನಬಹುದು. ಇಲ್ಲಿಯವರೆಗೆ 8 ಕಂತಿನ ಹಣ ಅಂದರೆ 16 ಸಾವಿರ ರೂಪಾಯಿಗಳು ಪ್ರತಿ ತಿಂಗಳಿಗೆ ಎರಡು ಸಾವಿರ ರೂಪಾಯಿಗಳಂತೆ ಮಹಿಳೆಯರ ಖಾತೆಗೆ ಜಮಾ ಆಗಿದೆ.
ಇದೀಗ ಲೋಕಸಭಾ ಎಲೆಕ್ಷನ್ ಬರುತ್ತಿರುವ ಹಿನ್ನೆಲೆಯಲ್ಲಿ ಪೆಂಡಿಂಗ್ (pending amount) ಇರುವ ಹಣವನ್ನು ಕೂಡ ಬಿಡುಗಡೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ಕಡೆಗೂ ಬಿಡುಗಡೆ ಆಯ್ತು ಹೊಸ ರೇಷನ್ ಕಾರ್ಡ್ ಲಿಸ್ಟ್; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!
ಈ ಸಮಸ್ಯೆ ಇದ್ರೆ ಪರಿಹರಿಸಿಕೊಳ್ಳಿ!
ಸರ್ಕಾರ ಈಗಾಗಲೇ ತಿಳಿಸಿರುವಂತೆ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಅದು ಮಹಿಳೆಯರ ಹೆಸರಿನಲ್ಲಿ ಇರಬೇಕು, ಅದೇ ರೀತಿ ರೇಷನ್ ಕಾರ್ಡ್ ಮಹಿಳೆಯ ಹೆಸರಿನಲ್ಲಿಯೇ ಇರಬೇಕು. ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಮೂರರಲ್ಲಿಯೂ ಮಹಿಳೆಯರ ಹೆಸರು ವಿಳಾಸ ಒಂದೇ ರೀತಿಯಲ್ಲಿಯೇ ಇರಬೇಕು.
ಒಂದು ವೇಳೆ ಹೆಸರು ಮ್ಯಾಚ್ ಆಗದೇ ಇದ್ದಲ್ಲಿ ಸರ್ಕಾರದಿಂದ ಹಣ ಬಿಡುಗಡೆ ಆಗಿದ್ದರು ಬ್ಯಾಂಕ್ನಿಂದ ನಿಮ್ಮ ಖಾತೆಗೆ ಹಣ ಬಾರದೆ ಇರಬಹುದು.
ಇನ್ನು ನಿಮ್ಮ ಬ್ಯಾಂಕ್ ಖಾತೆಗೆ ಈ ಕೆವೈಸಿ (E-KYC ) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ಹಳೆಯದಾಗಿದ್ದರೆ ಅದಕ್ಕೆ ಹಣ ಬರುತ್ತಿಲ್ಲ ಎಂದಾದರೆ ಅಂಚೆ ಕಚೇರಿಯಲ್ಲಿ ಅಥವಾ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಖಾತೆ ಆರಂಭಿಸಿ.
ಇತ್ತೀಚಿಗೆ ಶಿವಮೊಗ್ಗದ ಮಹಿಳೆ ಒಬ್ಬರು ಬ್ಯಾಂಕ್ ಆಫ್ ಬರೋಡ (Bank of Baroda) ದಲ್ಲಿ ಹೊಸ ಖಾತೆಯನ್ನು ಆರಂಭಿಸಿ, ಕೇವಲ ಮೂರು ದಿನಗಳ ಅಂತರದಲ್ಲಿ ಮೂರು ಕಂತಿನ ಪೆಂಡಿಂಗ್ ಹಣವನ್ನು (pending amount) ಪಡೆದುಕೊಂಡಿದ್ದಾರೆ.
ಫ್ರೀ ಫ್ರೀ ಫ್ರೀ ! ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ; ಕೂಡಲೇ ಅರ್ಜಿ ಸಲ್ಲಿಸಿ
ಗೃಹಲಕ್ಷ್ಮಿ ಯೋಜನೆ ಸಕ್ಸಸ್ ನಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರು ಕೈಜೋಡಿಸಿದ್ದು, ಅವರ ಸಹಾಯದಿಂದ ನಿಮ್ಮ ಖಾತೆಯಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ತಾಂತ್ರಿಕ ದೋಷದಿಂದಾಗಿ ಹಾಗೂ ಮಹಿಳೆಯರ ಖಾತೆಯಲ್ಲಿರುವ ಸಮಸ್ಯೆಯಿಂದಾಗಿ ಪೆಂಡಿಂಗ್ ಇರುವ ಹಣ ಜಮಾ ಆಗುತ್ತಿಲ್ಲ. ಸದ್ಯಕ್ಕೆ 8ನೇ ಕಂತಿನ ಹಣ ಜಮಾ ಮಾಡುವ ಬಗ್ಗೆ ಸರ್ಕಾರ ಗಮನ ವಹಿಸಿದ್ದು ಇದೇ ಬರುವ 25 ಏಪ್ರಿಲ್ 2024ರ ಒಳಗೆ ಪ್ರತಿಯೊಬ್ಬರ ಖಾತೆಗೂ ಹಣ ಜಮಾ (Money Deposit) ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕೊನೆಗೂ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಪೆಂಡಿಂಗ್ ಹಣ ಜಮಾ! ಖಾತೆ ನೋಡಿಕೊಳ್ಳಿ
ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆ ಒಂದು ಉತ್ತಮ ಯೋಜನೆಯಾಗಿದ್ದು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಾಯಕವಾಗಿದೆ. ಆದರೂ ಅರ್ಜಿ ಸಲ್ಲಿಸಿದರು ಹಲವು ಫಲಾನುಭವಿ ಮಹಿಳೆಯರಿಗೆ ಹಣ ಬಾರದೆ ಇರುವುದು ನಿಜಕ್ಕೂ ಬೇಸರದ ಸಂಗತಿ. ಹಾಗಾಗಿ ಯಾವ ಮಹಿಳೆಯರು ತಮ್ಮ ಖಾತೆಗೆ ಹಣ ಬಂದಿಲ್ಲವೂ ಅವರು ಸಿಡಿಪಿಓ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಬಹುದು.
ಇದ್ದಕ್ಕಿದ್ದಂತೆ ಇಂಥವರ ಬಿಪಿಎಲ್ ಕಾರ್ಡ್ ರದ್ದುಪಡಿಸಿದ ರಾಜ್ಯ ಸರ್ಕಾರ! ಕಾರಣ ಇಲ್ಲಿದೆ
government given new update on release of pending Gruha lakshmi scheme Money