Karnataka NewsBangalore News

ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ಸರ್ಕಾರ ಕೊಡುತ್ತೆ ಭಾರಿ ಸಬ್ಸಿಡಿ!

ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾರ್ವಜನಿಕರ ಉದ್ಧಾರಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತದೆ. ಅದರಲ್ಲೂ ಯಾವಾಗ ರೈತರ ಅಭ್ಯುದಯಕ್ಕಾಗಿ ಸರ್ಕಾರ ಶ್ರಮಿಸುತ್ತೋ ಆಗ ರಾಜ್ಯದ ಆರ್ಥಿಕ ಪರಿಸ್ಥಿತಿ (financial status) ಕೂಡ ಸುಧಾರಣೆ ಆಗುತ್ತದೆ. ಯಾಕಂದ್ರೆ ನಾವು ಕೃಷಿಯನ್ನೇ ಆಧರಿಸಿರುವುದರಿಂದ ಆಹಾರ ಪಡೆದುಕೊಳ್ಳುವುದು ಕಷ್ಟವಾಗಬಹುದು.

ರಾಜ್ಯ ಸರ್ಕಾರ ರೈತರಿಗೆ ಶೇಕಡ 80% ನಷ್ಟು ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್ ಸೆಟ್ (solar pump set) ಅಳವಡಿಸಿಕೊಳ್ಳಲು ಅವಕಾಶ ನೀಡುತ್ತಿದೆ. ಇದರಿಂದ ರೈತರು ಸುಲಭವಾಗಿ ತಮ್ಮ ಜಮೀನಿಗೆ ಸೋಲಾರ್ ವಿದ್ಯುತ್ ಮೂಲಕವೇ ನೀರು ಒದಗಿಸಬಹುದು. ಇದರಿಂದ ವಿದ್ಯುತ್ ಬಿಲ್ ಪಾವತಿಸುವ ಅಗತ್ಯವು ಇರುವುದಿಲ್ಲ

Apply for Free Solar Pump Set Scheme for Your agricultural land

ಪೆಂಡಿಂಗ್ ಹಣದ ಜೊತೆಗೆ 7ನೇ ಕಂತಿನ ಗೃಹಲಕ್ಷ್ಮಿ ಹಣ ಕೂಡ ಬಿಡುಗಡೆ! ಚೆಕ್ ಮಾಡಿ

ಕಿಸಾನ್ ಉರ್ಜಾ ಸುರಕ್ಷಾ ಮತ್ತು ಉತ್ತಾನ್ ಮಹಾ ಅಭಿಯಾನ! (KUSUM B scheme)

ಸಾಂಪ್ರದಾಯಿಕ ಗ್ರೀಡ್ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡುವ ಸಲುವಾಗಿ ಹಾಗೂ ರೈತರಿಗೆ ಅತಿಯಾಗಿ ಹಣ ಖರ್ಚಾಗದಂತೆ ಮಾಡಲು ಸೋಲಾರ್ ವಿದ್ಯುತ್ ಮೂಲಕ ಪಂಪ್ಸೆಟ್ ಬಳಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ. ಕುಸುಮ್ ಬಿ ಯೋಜನೆಯ ಅಡಿಯಲ್ಲಿ ಸೌರ ಪಂಪ್ ಸೆಟ್ ಗಳಿಗೆ ಶೇಕಡ 80% ನಷ್ಟು ಸಬ್ಸಿಡಿ ನೀಡಲು ಸರ್ಕಾರ ಮುಂದಾಗಿದೆ.

ಕೃಷಿ (Agriculture) ಚಟುವಟಿಕೆಗೆ ಪೂರಕವಾಗಿ ಬೇಕಾಗಿರುವುದು ನೀರಾವರಿ ಸೌಲಭ್ಯ ಹಾಗಾಗಿ ರೈತರು ತಮ್ಮ ಜಮೀನಿಗೆ ಸರಿಯಾಗಿ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಲೇಬೇಕು ರೈತರಿಗೆ ಆರ್ಥಿಕ ಬೆನ್ನೆಲುಬಾಗಿ ನಿಂತಿದ್ದು ಕೃಷಿ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ..

ಪ್ರಧಾನ ಮಂತ್ರಿ ಕುಸುಮ್ ಯೋಜನೆ ಇದೀಗ ರಾಜ್ಯ ಸರ್ಕಾರವು ಕೂಡ ಮುಂದುವರಿಸಿಕೊಂಡು ಬಂದಿದ್ದು ಇದರ ಅಡಿಯಲ್ಲಿ ರೈತರಿಗೆ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ.

ಈ ದಾಖಲೆಗಳು ಇದ್ರೆ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿಗೆ ಅವಕಾಶ! ಖಡಕ್ ಸೂಚನೆ

solar water pumpಕುಸುಮ್ ಬಿ ಯೋಜನೆಯ ಉದ್ದೇಶ!

ಸೌರಶಕ್ತಿ ಬಳಸಿಕೊಂಡು ಪಂಪ್ಸೆಟ್ ಅನ್ನು ಕೃಷಿ ಭೂಮಿಯಲ್ಲಿ ಸ್ಥಾಪಿಸಿ ನೀರಾವರಿಗೆ ಅನುಕೂಲವಾಗುವಂತೆ ಮಾಡುವುದು ಈ ಯೋಜನೆ ಉದ್ದೇಶ. ಹಾಗಾಗಿ ಸುಮಾರು 30 ಮಿಲಿಯನ್ ಸೌರ ವಿದ್ಯುತ್ ಸ್ಥಾವರಗಳ ಸ್ಥಾಪನೆಯ ಗುರಿಯನ್ನು ಸರ್ಕಾರ ಹೊಂದಿದ್ದು, ಆಧುನಿಕ ರೀತಿಯಲ್ಲಿ ಕೃಷಿ ಮೂಲ ಸೌಕರ್ಯವನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ.

ಈಗಾಗಲೇ ಲಭ್ಯವಾಗಿರುವ ಮಾಹಿತಿಯ ಪ್ರಕಾರ 2024 25 ನೇ ಸಾಲಿನಲ್ಲಿ, 40,000 ರೈತರು ಸೌರಶಕ್ತಿ ಬಳಕೆಯ ಮೂಲಕ ಪಂಪ್ ಸೆಟ್ ಅಳವಡಿಸಿಕೊಳ್ಳಲು ಸರ್ಕಾರ ಸಹಕರಿಸುತ್ತಿದೆ.

ಇಂತಹವರು ಸಂಪೂರ್ಣ ವಿದ್ಯುತ್ ಬಿಲ್ ಕಟ್ಟಬೇಕು! ಸಿಗೋಲ್ಲ ಗೃಹಜ್ಯೋತಿ ಸೌಲಭ್ಯ

ತಮ್ಮ ಜಮೀನಿನಲ್ಲಿ 3 HP ಇಂದ 10HP ಸಾಮರ್ಥ್ಯದ ಸೌರ ವಿದ್ಯುತ್ ಪಂಪ್ ಸೆಟ್ ಘಟಕವನ್ನು ರೈತರು ತಮ್ಮ ಕೃಷಿ ಭೂಮಿಯಲ್ಲಿ ಅಳವಡಿಸಿಕೊಳ್ಳಬಹುದು. ಹಾಗೂ ಇದಕ್ಕೆ ಸರ್ಕಾರ ಶೇಕಡ 80% ವರೆಗೂ ಸಬ್ಸಿಡಿ ನೀಡುತ್ತದೆ.

ಒಂದು HP ಪಂಪ್ಸೆಟ್ ಅಳವಡಿಕೆಗೆ 80000 ವೆಚ್ಚವಾಗುತ್ತದೆ ಎಂದು ಭಾವಿಸಿ, ಇದಕ್ಕೆ ಸರ್ಕಾರ 64,000ಗಳ ಸಹಾಯಧನ ನೀಡುತ್ತದೆ. ಅಂದರೆ ನೀವು ಕೇವಲ ಹದಿನಾರು ಸಾವಿರ ರೂಪಾಯಿಗಳನ್ನು ಮಾತ್ರ ಪಾವತಿ ಮಾಡಿದ್ರೆ ಆಯ್ತು. ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಕೇಂದ್ರ (subsidy for solar pump set) ಸರ್ಕಾರದಿಂದ 30% ಹಾಗೂ ರಾಜ್ಯ ಸರ್ಕಾರದಿಂದ 50 ಪರ್ಸೆಂಟ್ ನಷ್ಟು ಸಬ್ಸಿಡಿ ಕೊಡಲಾಗುವುದು.

ಯಾರು ಅರ್ಜಿ ಸಲ್ಲಿಸಬಹುದು?

ಟ್ರಾನ್ಸ್ಫಾರ್ಮರ್ ಕೇಂದ್ರದಿಂದ 500 ಮೀಟರ್ ಗಿಂತ ದೂರದಲ್ಲಿ ಬಾವಿ ಇದ್ದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. 20 % ನಷ್ಟು ಹೊಸದಾಗಿ ಅರ್ಜಿ ಸಲ್ಲಿಸುವ ರೈತರು ಹಾಗೂ ಉಳಿದ 80% ನಷ್ಟು ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಸಹಾಯಧನ ಒದಗಿಸಲಾಗುವುದು.

ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಅವರಿಗೆ ಬಿಗ್ ಅಪ್ಡೇಟ್! ಪೆಂಡಿಂಗ್ ಹಣ ಪಡೆಯಿರಿ

ಅರ್ಜಿ ಸಲ್ಲಿಸುವುದು ಹೇಗೆ?

ಸೌರ ಪಂಪ್ ಸೆಟ್ ಪಡೆದುಕೊಳ್ಳಲು https://souramitra.com/solar/beneficiary/register/Kusum-Yojana-Component-B ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಅದನ್ನು ಸರಿಯಾಗಿ ಭರ್ತಿ ಮಾಡಿ.

ನಂತರ ಅರ್ಜಿ ಫಾರಂ ಸ್ಕ್ಯಾನ್ ಕಾಪಿ ಹಾಗೂ ವೆಬ್ಸೈಟ್ನಲ್ಲಿ ಕೇಳಲಾದ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಕೆ ಮಾಡಬೇಕು. ನಿಮ್ಮ ಅರ್ಜಿ ಅಪ್ ಲೋಡ್ ಆದ ನಂತರ ಒಂದು ಸ್ವೀಕೃತಿ ಪ್ರತಿ ಕೊಡಲಾಗುತ್ತದೆ. ಅದನ್ನ ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.

Government gives huge subsidy for solar pump set

Our Whatsapp Channel is Live Now 👇

Whatsapp Channel

Related Stories