ನಿಮ್ಮ ಕೃಷಿ ಭೂಮಿಗೆ ಹೋಗೋಕೆ ದಾರಿ ಇಲ್ವಾ? ಹಾಗಾದ್ರೆ ಸರ್ಕಾರವೇ ನೀಡುತ್ತೆ ಪರಿಹಾರ
ಕೃಷಿ ಭೂಮಿಗೆ (Agriculture Land) ಸಂಬಂಧಪಟ್ಟಂತೆ ಬೇರೆ ಬೇರೆ ಕಾನೂನುಗಳು ಅವುಗಳಲ್ಲಿ ಜಮೀನಿಗೆ ಹೋಗಲು ಬೇಕಾಗಿರುವ ದಾರಿ ಒದಗಿಸಿಕೊಡುವ ಕಾನೂನು ಕೂಡ ಸೇರಿದೆ.
ಭಾರತ ಕೃಷಿ ಪೂರಕ ರಾಷ್ಟ್ರ. ಇಲ್ಲಿ ಕೃಷಿ ಮಾಡುವವರ ಸಂಖ್ಯೆ ಬಹಳ ದೊಡ್ಡದಿದೆ ಆದರೆ ಕೃಷಿಕರು ಸಾಕಷ್ಟು ಬಾರಿ ತಮ್ಮ ಜಮೀನಿಗೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಒಂದು ಕಡೆ ಕೃಷಿ ಚಟುವಟಿಕೆಗಾಗಿ ಬೇಕಾಗಿರುವ ಬಂಡವಾಳ ಒದಗಿಸಲು ಕೃಷಿಕರು ಕಷ್ಟ ಪಡುತ್ತಿದ್ದರೆ, ಇನ್ನೊಂದು ಕಡೆ ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಅಥವಾ ಬಂಡಿದಾರಿ ಇಲ್ಲದೆ ಕೂಡ ಸಮಸ್ಯೆ ಎದುರಿಸಬೇಕಾಗುತ್ತದೆ.
ಎಷ್ಟೋ ಬಾರಿ ಇನ್ನೊಬ್ಬರ ಖಾಸಗಿ ಜಮೀನಿನ ಮೂಲಕ ತಮ್ಮ ಜಮೀನಿಗೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ, ಆಗ ತಕರಾರು ನಡೆಯುವುದು ಸಹಜ. ಇಲ್ಲಿಯವರೆಗೆ ಬಗೆಹರಿಯದ ಅದೆಷ್ಟೋ ವ್ಯಾಜ್ಯಗಳು ಕೋರ್ಟ್ ನಲ್ಲಿ ಇವೆ ಎನ್ನಬಹುದು.
ಆದರೆ ಈಗ ನಿಮ್ಮ ಜಮೀನಿಗೆ (Property) ಹೋಗಲು ಅಗತ್ಯವಿರುವ ಸಣ್ಣ ದಾರಿಯನ್ನು ಬಿಡದೆ ಇರುವವರಿಗೆ ಕಾನೂನಿನ ಪ್ರಕಾರ ನೀವು ದೂರು ದಾಖಲಿಸಿ ನಿಮಗೆ ಬೇಕಿರುವ ದಾರಿ ಬಿಡಿಸಿಕೊಳ್ಳಲು ಸಾಧ್ಯವಿದೆ.
ಗೃಹಲಕ್ಷ್ಮಿ 9ನೇ ಕಂತಿಗೆ ಹೊಸ ಕಂಡೀಷನ್; ಯಾರ ಖಾತೆಗೆ ಹಣ ಬಂದಿದೆ ಇಲ್ಲಿದೆ ಡೀಟೇಲ್ಸ್
ಜಮೀನಿಗೆ ಹೋಗಲು ದಾರಿ ಇಲ್ಲದಿದ್ದರೆ ಈ ಕೆಲಸ ಮಾಡಿ!
ಎಷ್ಟೋ ರೈತರು ತಮ್ಮ ಜಮೀನಿಗೆ ಹೋಗಲು ದಾರಿ ಇಲ್ಲದೆ ಸಮಸ್ಯೆ ಅನುಭವಿಸಬೇಕಾಗುತ್ತದೆ. ಅವರ ಜಮೀನಿನ ಎದುರುಗಡೆ ಇರುವ ಜಮೀನಿನ ಮಾಲೀಕ ಅಥವಾ ಪ್ರಾಪರ್ಟಿ ಮಾಲೀಕ ಜಾಗ ಕೊಡುವುದಿಲ್ಲ ಎಂದು ಹೇಳಿದರೆ ಜಮೀನಿಗೆ ಹೋಗಲು ದಾರಿ ಇರುವುದಿಲ್ಲ ಆದರೆ ಇನ್ನು ಮುಂದೆ ಈ ಚಿಂತೆ ಬೇಡ.
Easements act ಅಡಿಯಲ್ಲಿ ಕಾನೂನಿನ ಪ್ರಕಾರ ಅಂತವರ ಮೇಲೆ ಕ್ರಮ ಕೈಗೊಳ್ಳಬಹುದು. ಕೃಷಿ ಭೂಮಿಗೆ (Agriculture Land) ಸಂಬಂಧಪಟ್ಟಂತೆ ಬೇರೆ ಬೇರೆ ಕಾನೂನುಗಳು ಅವುಗಳಲ್ಲಿ ಜಮೀನಿಗೆ ಹೋಗಲು ಬೇಕಾಗಿರುವ ದಾರಿ ಒದಗಿಸಿಕೊಡುವ ಕಾನೂನು ಕೂಡ ಸೇರಿದೆ. ಇದರ ಬಗ್ಗೆ ನೀವು ಸರಿಯಾಗಿ ತಿಳಿದುಕೊಂಡರೆ ಯಾವುದೇ ಕಾರಣಕ್ಕೂ ನಿಮಗೆ ಸಮಸ್ಯೆ ಆಗುವುದಿಲ್ಲ.
ಮುಲಾಜಿಲ್ಲದೆ ಇಂತಹವರ ರೇಷನ್ ಕಾರ್ಡ್ ರದ್ದಾಗುತ್ತದೆ, ಸರ್ಕಾರದ ಹೊಸ ನಿರ್ಧಾರ
Easement of Prescription
ಈ ಆಕ್ಟ್ ನಾ ಪ್ರಕಾರ 15 ರಿಂದ 20 ವರ್ಷದಿಂದ ರೈತರು ತಮ್ಮ ಜಮೀನಿಗೆ ಹೋಗುವ ಕಾಲು ದಾರಿಯನ್ನು ಯಾರಾದ್ರೂ ಮುಚ್ಚಿದ್ರೆ ಆಗ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬಹುದು.
Easement of Necessity
ಈ ಆಕ್ಟ್ ಅಡಿಯಲ್ಲಿ ಮುಂಭಾಗದಲ್ಲಿ ಜಮೀನು ಹೊಂದಿರುವ ರೈತ ಹಿಂಭಾಗದಲ್ಲಿ ಇರುವ ರೈತನ ಜಮೀನಿಗೆ ಹೋಗಲು ದಾರಿ ಕೊಡಬೇಕು. ಒಂದು ವೇಳೆ ಹೀಗೆ ದಾರಿ ಬಿಟ್ಟುಕೊಡಲು ಒಪ್ಪದೆ ಇದ್ದಾಗ ನೀವು ಕಾನೂನಿನ ಪ್ರಕಾರ ಅವರ ಮೇಲೆ ಕ್ರಮ ಕೈಗೊಳ್ಳಬಹುದು.
ಗೃಹಜ್ಯೋತಿ ಫ್ರೀ ಕರೆಂಟ್ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಮಹತ್ವದ ಮಾಹಿತಿ
Easement of Custom
ತಾತ ಮುತ್ತಾತನ ಕಾಲದಿಂದಲೂ ನಿಮ್ಮ ಜಮೀನಿಗೆ ಹೋಗುವ ದಾರಿಯನ್ನು ಸಡನ್ನಾಗಿ ಯಾರಾದ್ರೂ ತಮ್ಮ ಜಾಗ ಎಂದು ಮುಚ್ಚಿ ಅದರಲ್ಲಿ ಖೇತಿ ಮಾಡಲು ಆರಂಭಿಸಿದರೆ ಆಗ ಅಂತವರ ವಿರುದ್ಧವು ಕಾನೂನಿನ ಪ್ರಕಾರ ದೂರು ಸಲ್ಲಿಸಿ ನಿಮ್ಮ ಜಮೀನಿಗೆ ಹೋಗಲು ದಾರಿ ಬಿಟ್ಟು ಕೊಡುವಂತೆ ಮಾಡಬಹುದು.
ಕೃಷಿಕರು ತಮ್ಮ ಜಮೀನಿಗೆ ಇಳುವರಿ ಮಾಡಲು ಅಗತ್ಯ ಇರುವ ವಸ್ತುಗಳನ್ನು ಸಾಗಿಸಲು ಹಾಗೂ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಯಂತ್ರೋಪಕರಣಗಳನ್ನು ಟ್ರ್ಯಾಕ್ಟರ್ ಗಳನ್ನು ಬಳಸಬೇಕಾಗುತ್ತದೆ.
ಗೃಹಲಕ್ಷ್ಮಿ ಪೆಂಡಿಂಗ್ ಹಣದ ಬಗ್ಗೆ ಬಂತು ನೋಡಿ ಹೊಸ ಅಪ್ಡೇಟ್! ಎಲ್ಲರಿಗು ಹಣ ಜಮಾ
ಅಂತಹ ಸಂದರ್ಭದಲ್ಲಿ ಜಮೀನಿಗೆ ಹೋಗಲು ದಾರಿಯ ಇಲ್ಲದೆ ಇದ್ದರೆ ಸಮಸ್ಯೆ ಉಂಟಾಗುತ್ತದೆ. ಆದರೆ ರಾಜ್ಯ ಸರ್ಕಾರ ತಿಳಿಸಿರುವಂತೆ ಇನ್ನು ಮುಂದೆ ಈ ಸಮಸ್ಯೆ ಇಲ್ಲ.
government solution if You Dont Have Road to go Your Agriculture Land