ಹೆಣ್ಣು ಮಕ್ಕಳಿಗೆ 1 ಲಕ್ಷ ರೂ. ಉಚಿತವಾಗಿ ನೀಡಲು ಮುಂದಾದ ಸರ್ಕಾರ! ಮಹತ್ವದ ಯೋಜನೆ

ರಾಜ್ಯ ಸರ್ಕಾರ (State government) ಮೊದಲಿನಿಂದಲೂ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ (girl child) ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ.

ಹಿಂದಿನ ಬಿಜೆಪಿ ಸರ್ಕಾರ (BJP government) ತನ್ನ ಆಡಳಿತ ಅವಧಿಯಲ್ಲಿ ಮನೆಯಲ್ಲಿ ಹುಟ್ಟಿದ ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ಅವರ 18 ವರ್ಷ ವಯಸ್ಸಿಗೆ ಬಂದಾಗ ಒಂದು ಲಕ್ಷ ರೂಪಾಯಿ ಸಿಗುವಂತಹ ಯೋಜನೆಯನ್ನು ಆರಂಭಿಸಿತು, ಈಗ ಆ ಹಣ ಸಿಗುವ ಸಮಯ.

ಡಿಸೆಂಬರ್ ತಿಂಗಳಿನಿಂದ ರದ್ದಾಗಲಿದೆ ಇಂತಹವರ ರೇಷನ್ ಕಾರ್ಡ್! ಸರ್ಕಾರ ಖಡಕ್ ವಾರ್ನಿಂಗ್

ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ (Bhagyalakshmi bond scheme)

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು (former CM Yeddyurappa) ಅಧಿಕಾರದಲ್ಲಿ ಇರುವಾಗ 2006ರಲ್ಲಿ ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತೆ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಆರಂಭಿಸಿದ್ದರು.

ಲಕ್ಷಾಂತರ ಜನ ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ, ಇದೀಗ ಮೊದಲಿಗೆ ಅರ್ಜಿ ಸಲ್ಲಿಸಿದವರಿಗೆ ಭಾಗ್ಯಲಕ್ಷ್ಮಿ ಬಾಂಡ್ ನ ಹಣ ಬಿಡುಗಡೆಯಾಗಲಿದೆ. 2006ರಲ್ಲಿ ಅರ್ಜಿ ಸಲ್ಲಿಸಿದವರಿಗೆ 2024 ಮಾರ್ಚ್ ತಿಂಗಳಿನಲ್ಲಿ 18 ವರ್ಷಗಳು ಮುಗಿಯಲಿದ್ದು ಭಾಗ್ಯಲಕ್ಷ್ಮಿ ಬಾಂಡ್ ನ ಹಣ ಸಿಗಲಿದೆ.

ಪಿಯುಸಿ ಆಗಿದ್ರೆ ಜಿಲ್ಲಾ ಕೋರ್ಟ್ ನಲ್ಲಿ ಸಿಗುತ್ತೆ ಕೆಲಸ, 52,000 ಸಂಬಳ; ಇಂದೇ ಅರ್ಜಿ ಸಲ್ಲಿಸಿ

ಯಾರಿಗೆ ಎಷ್ಟು ಹಣ ಸಿಗಲಿದೆ? (Beneficiary)

Bhagyalakshmi Yojanaಭಾಗ್ಯಲಕ್ಷ್ಮಿ ಬಾಂಡ್ ಒಂದು ಕುಟುಂಬದ ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಸಿಗಲಿದೆ. 2008 ಜುಲೈ ತಿಂಗಳಿನ ಒಳಗೆ ಜನಿಸಿದ ಹೆಣ್ಣು ಮಗುವಿಗೆ ಭಾಗ್ಯ ಲಕ್ಷ್ಮಿ ಬಾಂಡ್ ಮಾಡಿಸಿದ್ದರೆ, ಸಮಯದಲ್ಲಿ ಆ ಹೆಣ್ಣು ಮಗುವಿನ ಹೆಸರಿನಲ್ಲಿ 10,000ಗಳನ್ನು ಸರ್ಕಾರ ಎಫ್ ಡಿ (Fixed Deposit) ಇಟ್ಟಿರುತ್ತದೆ.

ಎಲ್ ಐ ಸಿ ಸಹಯೋಗದೊಂದಿಗೆ ಸರ್ಕಾರ ಈ ಬಾಂಡ್ ಆರಂಭಿಸಿತ್ತು. 2024 ಮಾರ್ಚ್ ತಿಂಗಳಿನಲ್ಲಿ 18 ವರ್ಷ ತುಂಬಿರುವ ಹೆಣ್ಣು ಮಗುವಿಗೆ 34,751 (ಮೊದಲ ಮಗುವಿಗೆ) ಸಿಗಲಿದೆ. ಇನ್ನು ಎರಡನೇ ಮಗುವಿಗೆ 40,619 ರೂಪಾಯಿ ಸಿಗಲಿದೆ.

2008 ಆಗಸ್ಟ್ ತಿಂಗಳಿನ ನಂತರ ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಿದ್ದರೆ, ಮೊದಲ ಮಗುವಿಗೆ 19,300 ರೂ. Fixed Deposit ಹಣವನ್ನು ಸರ್ಕಾರ ಮೀಸಲಿಟ್ಟಿದೆ. ಈ ಸಮಯದಲ್ಲಿ ಬಾಂಡ್ ಮಾಡಿಸಿದ ಮೊದಲ ಮಗುವಿಗೆ 1,00,051 ರೂಪಾಯಿಗಳು ಸಿಗಲಿದೆ. ಎರಡನೇ ಮಗುವಿಗೆ 18.350 ರೂಪಾಯಿಗಳ ಎಫ್ ಡಿ ಸರ್ಕಾರ ಮೀಸಲಿಟ್ಟಿದೆ. ಇವರಿಗೆ 1,00,097 ರೂಪಾಯಿಗಳು ಸಿಗಲಿದೆ. ಇಷ್ಟು ಮೊತ್ತವನ್ನು ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ಮಾರ್ಚ್ 2024ರಲ್ಲಿ ವರ್ಗಾವಣೆ ಮಾಡಲಾಗುವುದು.

ಗೃಹಲಕ್ಷ್ಮಿ ಯೋಜನೆ ಬಿಗ್ ಅಪ್ಡೇಟ್! ಇನ್ಮುಂದೆ ಇದೇ ದಿನಾಂಕ ಜಮಾ ಆಗುತ್ತೆ ಎಲ್ಲರಿಗೂ ಹಣ

ಭಾಗ್ಯಲಕ್ಷ್ಮಿ ಬಾಂಡ್ ಈಗಲೂ ಮಾಡಿಸಬಹುದೇ?

ಈಗ ಭಾಗ್ಯಲಕ್ಷ್ಮಿ ಬಾಂಡ್ ಸುಕನ್ಯಾ ಸಮೃದ್ಧಿ ಯೋಜನೆ (Sukanya samriddhi Yojana) ಯಲ್ಲಿ ವಿಲೀನಗೊಳಿಸಲಾಗಿದೆ. ಹಾಗಾಗಿ ಮನೆಯಲ್ಲಿ ಹೆಣ್ಣು ಮಕ್ಕಳು ಜನಿಸಿದ ತಕ್ಷಣವೇ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಆರಂಭಿಸಬಹುದು

21 ವರ್ಷ ವಯಸ್ಸಿಗೆ ಬಂದಿರುವ ಹೆಣ್ಣು ಮಗುವಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ ಹಣ ಸಿಗುತ್ತದೆ. ಬಡತನ ರೇಖೆಗಿಂತ ಕೆಳಗಿನವರು (below poverty line) ಎಂದರೆ ಬಿಪಿಎಲ್ ಕಾರ್ಡ್ (BPL card) ಹೊಂದಿರುವ ಪ್ರತಿ ಕುಟುಂಬದ ಮೊದಲ ಎರಡು ಹೆಣ್ಣು ಮಕ್ಕಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ಪೋಸ್ಟ್ ಆಫೀಸ್ನಲ್ಲಿ ಸಹ ಈ ಯೋಜನೆಯನ್ನು ಆರಂಭಿಸಬಹುದು.

ಇನ್ಮುಂದೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಈ 4 ಹೊಸ ಮಾನದಂಡಗಳು ಕಡ್ಡಾಯ

Govt to give Rs 1 lakh free to girl children, Know About Scheme

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories