ಶಾಲಾ ಮಕ್ಕಳಿಗೆ ಹೊಸ ಭಾಗ್ಯ ಕಲ್ಪಿಸಿಕೊಟ್ಟ ಸರ್ಕಾರ! ಇನ್ಮುಂದೆ ಬಿಸಿಯೂಟದ ಜೊತೆಗೆ ಇದೂ ಸಿಗುತ್ತೆ
ರಾಜ್ಯ ಕಾಂಗ್ರೆಸ್ ಸರಕಾರ (State Congress government) ಶಿಕ್ಷಣ ವಿಚಾರದಲ್ಲಿ (Education) ಕೆಲವು ಪ್ರಮುಖ ಬದಲಾವಣೆಗಳನ್ನು ತರುತ್ತಿದ್ದು ಇದರಿಂದ ಸರ್ಕಾರಿ ಶಾಲೆಯಲ್ಲಿ (government school) ಹಾಗೂ ಅನುದಾನಿತ ಶಾಲೆಯಲ್ಲಿ (aided school) ಓದುತ್ತಿರುವ ಮಕ್ಕಳಿಗೆ ಸುಲಭ ವಿದ್ಯಾಭ್ಯಾಸಕ್ಕೆ (Education) ಅನುಕೂಲವಾಗಿದೆ ಎನ್ನಬಹುದು.
ಹೌದು, ರಾಜ್ಯ ಶಿಕ್ಷಣ ಸಚಿವರು ಮಧು ಬಂಗಾರಪ್ಪ (minister Madhu Bangarappa) ಅವರು ತಿಳಿಸಿರುವಂತೆ ರಾಜ್ಯದ ಸರ್ಕಾರಿ ಶಾಲೆಗಳು ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು (nutrient food) ಒದಗಿಸುವುದು ಬಹಳ ಮುಖ್ಯ
ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿದಾಗ ಮಾತ್ರ ಅವರು ಉತ್ತಮ ವಿದ್ಯಾಭ್ಯಾಸ (study) ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಚಿವರು ಈ ಹಿಂದೆಯೇ ತಿಳಿಸಿದ್ದರು. ಅದೇ ಪ್ರಕಾರವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿ ಊಟದ ಜೊತೆಗೆ ವಾರಕ್ಕೆ 2 ದಿನ ಪೌಷ್ಟಿಕ ಆಹಾರಗಳನ್ನು ಕೂಡ ನೀಡಲಾಗುತ್ತಿತ್ತು.
ಯುವ ನಿಧಿ ಯೋಜನೆ ಬಿಗ್ ಅಪ್ಡೇಟ್, ಹಣ ಪಡೆಯಲು ತಕ್ಷಣ ಈ ದಾಖಲೆ ರೆಡಿ ಇಟ್ಟುಕೊಳ್ಳಿ
ಮೊಟ್ಟೆ ನೀಡಲಾಗುತ್ತಿದೆ – Egg
ರಾಜ್ಯ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಪೌಷ್ಟಿಕಯುಕ್ತ ಆಹಾರ ನೀಡುವ ಸಲುವಾಗಿ ಕೋಳಿ ಮೊಟ್ಟೆ (egg) , ಶೇಂಗಾ ಚಿಕ್ಕಿ ಹಾಗೂ ಬಾಳೆಹಣ್ಣು (banana) ವಿತರಣೆ ಮಾಡಲಾಗುತ್ತಿದೆ
ಯಾರು ಕೋಳಿ ಮೊಟ್ಟೆ ತಿನ್ನುವುದಿಲ್ಲವೋ ಅಂತವರಿಗೆ ಚಿಕ್ಕಿ ಹಾಗೂ ಬಾಳೆಹಣ್ಣು ವಿತರಣೆ ಮಾಡಲಾಗುತ್ತೆ. ಇದು ಎಲ್ಲಾ ಸರ್ಕಾರಿ ಶಾಲೆಗಳು ಹಾಗೂ ಅನುದಾನಿತ ಶಾಲೆಗಳಲ್ಲಿ ಚಾಲ್ತಿಯಲ್ಲಿ ಇದೆ.
ಮಹಿಳೆಯರಿಗಾಗಿ ವಿಶೇಷ ಸಾಲ ಯೋಜನೆ; ಸಿಗಲಿದೆ ₹25,000 ದವರೆಗೆ ಬಡ್ಡಿ ರಹಿತ ಸಾಲ
ಪೌಷ್ಟಿಕಯುಕ್ತ ರಾಗಿ ಮಾಲ್ಟ್
ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಉತ್ತಮವಾಗಿರುವ ಶಿಕ್ಷಣ ಒದಗಿಸುವುದರ ಜೊತೆಗೆ ಪೌಷ್ಟಿಕಾಂಶ ಹೊಂದಿರುವ ಆಹಾರ ಪದಾರ್ಥಗಳನ್ನು ನೀಡುವುದು ಕೂಡ ಅಷ್ಟೇ ಮುಖ್ಯ ಎಂಬುದನ್ನು ಮನಗೊಂಡಿದೆ. ವಿದ್ಯಾರ್ಥಿಗಳಿಗೆ ಪೌಷ್ಟಿಕ ಯುದ್ಧ ಆಹಾರ ನೀಡಲು ಮುಂದಾಗಿದೆ.
ಇದಕ್ಕಾಗಿ ರಾಗಿ ಮಾಲ್ಟ್ ಭಾಗ್ಯ (ragi malt) ಆರಂಭಿಸಿದೆ. ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಬಿಸಿ ಊಟದ ಜೊತೆಗೆ ಒಂದೊಂದು ಲೋಟ ಪೌಷ್ಟಿಕಾಂಶ ಯುಕ್ತ ರಾಗಿ ಮಾಲ್ಟ್ ಕೂಡ ನೀಡಬೇಕು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಇದು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಅನ್ವಯವಾಗಲಿದ್ದು ದಿನವೂ ರಾಗಿ ಮಾಲ್ಟ್ ಅನ್ನು ಮಕ್ಕಳಿಗೆ ನೀಡಬೇಕು ಎಂದು ಸಚಿವರು ತಿಳಿಸಿದ್ದರೆ.
ಸರ್ಕಾರವೇ ನೀಡುತ್ತೆ 5 ಲಕ್ಷ ಬಡ್ಡಿ ರಹಿತ ಸಾಲ; ಕೃಷಿ ಮಾಡುವ ರೈತರಿಗೆ ಇದು ಸಕಾಲ
ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ! (Changes in education system)
ರಾಜ್ಯ ಶಿಕ್ಷಣ ಪದ್ಧತಿಯಲ್ಲಿಯೂ ಕೂಡ ಕೆಲವು ಬದಲಾವಣೆಗಳನ್ನು ತರಲಾಗಿದೆ, ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ಈಗಾಗಲೇ ತಿಳಿಸಿರುವಂತೆ ವಿದ್ಯಾರ್ಥಿಗಳಿಗೆ ವಾರ್ಷಿಕ ಮೂರು ಪರೀಕ್ಷೆಗಳನ್ನು ಇಡುವುದರ ಮೂಲಕ ಒಮ್ಮೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಮತ್ತೆ ಎರಡು ಬಾರಿ ಪರೀಕ್ಷೆ ಬರೆದು ಆ ವರ್ಷದ ಶಿಕ್ಷಣ ಹಾಳಾಗದಂತೆ ನೋಡಿಕೊಳ್ಳಬಹುದು ಎಂದು ಸೂಚಿಸಲಾಗಿದೆ. ಹೀಗಾಗಿ ರಾಜ್ಯ ಶಿಕ್ಷಣ ವ್ಯವಸ್ಥೆ ಸುಧಾರಿಸುವಲ್ಲಿ ಸರ್ಕಾರ ಮುತುವರ್ಜಿವಹಿಸಿದೆ ಎನ್ನಬಹುದು.
ಅಕ್ರಮ ರೇಷನ್ ಕಾರ್ಡ್ ರದ್ದುಪಡಿಗೆ ಸರ್ಕಾರದ ಮಾಸ್ಟರ್ ಪ್ಲಾನ್ ಏನು ಗೊತ್ತಾ? ಏನಿದು ಪ್ರಕ್ರಿಯೆ
Ragi Malt For Karnataka Govt School Students