ನಿರುದ್ಯೋಗ (unemployment) ದೇಶದ ದೊಡ್ಡ ಸಮಸ್ಯೆ. ಈ ಸಮಸ್ಯೆ ಪರಿಹರಿಸುವ ಸಲುವಾಗಿ ಆಳುವ ಸರ್ಕಾರಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನ ಮಾಡುತ್ತಲೇ ಇರುತ್ತದೆ. ನಿರುದ್ಯೋಗ ಹೋಗಲಾಡಿಸಲು ಸ್ವ-ಉದ್ಯೋಗ (own business) ಪ್ರೋತ್ಸಾಹವು ಒಂದು ಮಾರ್ಗವಾಗಿದೆ.
ಸರ್ಕಾರಗಳು ಸ್ವ-ಉದ್ಯೋಗ ಕೈಗೊಳ್ಳುವವರಿಗಾಗಿ ಪ್ರೋತ್ಸಾಹ ನೀಡುತ್ತ ಬಂದಿದೆ. ಪ್ರಸ್ತುತ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಹ ಸ್ವ-ಉದ್ಯೋಗ ಪ್ರೋತ್ಸಾಹಿಸುವ ಸಲುವಾಗಿ ಸಹಾಯಧನ ನೀಡುತ್ತಿದೆ.
ಹಾಗಾದರೆ ಯಾರಿಗೆ ಈ ಸಹಾಯಧನ ಲಭ್ಯವಾಗುತ್ತದೆ, ಈ ಸಹಾಯಧನ ಪಡೆಯಲು ಇರುವ ಅರ್ಹತೆಗಳೇನು ಎನ್ನುವುದರ ಕುರಿತು ಈಗ ತಿಳಿದುಕೊಳ್ಳೊಣ.
ಪೆಂಡಿಂಗ್ ಇರುವ ಗೃಹಲಕ್ಷ್ಮಿ ಯೋಜನೆ ಹಣ ರಿಲೀಸ್! ಒಟ್ಟಿನಲ್ಲಿ ಎಲ್ಲರಿಗೂ ಬಂತು ಹಣ
ಆರ್ಥಿಕವಾಗಿ ಹಿಂದುಳಿದಿರುವ (financially weak) ಬ್ರಾಹ್ಮಣ ವರ್ಗದ ಏಳ್ಗೆಗಾಗಿ ರಾಜ್ಯ ಸರ್ಕಾರವು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಸಾಂದೀಪಿನಿ ಶಿಷ್ಯವೇತನ ಹಾಗೂ ಸ್ವ-ಉದ್ಯೋಗಕ್ಕಾಗಿ ಬ್ಯಾಂಕ್ನಿಂದ ಸಾಲ (Bank Loan) ಪಡೆದವರಿಗೆ 5 ಲಕ್ಷ ರೂ. ವರೆಗೆ ಸಹಾಯ ಧನ ನೀಡಲಿದೆ ಎಂದು ಸಚಿವ ಕೃಷ್ಣ ಬೈರೇ ಗೌಡ (Krishna bairagowda) ಅವರು ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇ ಗೌಡ, ಈ ಯೋಜನೆಯಡಿಯಲ್ಲಿ ಶೇ.2೦ ರಷ್ಟು ಸಹಾಯಧನ ನೀಡಲಾಗುತ್ತದೆ. ಈ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ (Bank Account) ಜಮಾ ಮಾಡಲಾಗುತ್ತದೆ. ಈ ಯೋಜನೆ ಬಳಸಿಕೊಂಡು ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಸಮುದಾಯದ ಜನರು ಸ್ವ-ಉದ್ಯೋಗ ಕೈಗೊಳ್ಳಬಹುದಾಗಿದೆ. ಈ ಮೂಲಕ ಅವರು ಬದುಕು ಕಟ್ಟಿಕೊಳ್ಳಬಹುದು ಎಂದು ಹೇಳಿದರು.
ಕುರಿ ಮೇಕೆ ಹಸು ಸಾಕಾಣಿಕೆ ಮಾಡಲು ಉಚಿತವಾಗಿ ತರಬೇತಿ; ಅರ್ಜಿ ಆಹ್ವಾನ
ಸ್ವಾವಲಂಬಿ ಯೋಜನೆ:
ರಾಜ್ಯ ಸರ್ಕಾರವು ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಸಮುದಾಯ (brahmins community) ವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಸ್ವಾವಲಂಬಿ ಯೋಜನೆ ಜಾರಿಗೆ ತಂದಿದೆ. ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಸಾಲ ಪಡೆದು ಸ್ವ-ಉದ್ಯೋಗ ಮಾಡುವ ಬ್ರಾಹ್ಮಣ ಸಮುದಾಯದ ಜನರಿಗೆ ಗರಿಷ್ಟ 5 ಲಕ್ಷ ರೂ.ಗಳ ವರೆಗೆ ಸಹಾಯಧನ ನೀಡಲಾಗುತ್ತದೆ.
ಈ ಧನವು ಅಭ್ಯರ್ಥಿಯು ಎಷ್ಟು ಸಾಲ (Loan) ಪಡೆದುಕೊಂಡಿರುತ್ತಾನೆ ಎನ್ನುವುದರ ಮೇಲೆ ಅವಲಂಭಿತವಾಗಿರುತ್ತದೆ. ಈ ಯೋಜನೆ ಫಲಾನುಭವಿಯಾಗಲು ಜ.31 ರೊಳಗೆ ಅರ್ಜಿ ಸಲ್ಲಿಸಬೇಕು.ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧಿಕೃತ ವೆಬ್ ಸೈಟ್ಗೆ ಭೇಟಿ ನೀಡಿ ಹೆಚ್ಚಿನ ವಿವರ ತಿಳಿದುಕೊಳ್ಳಬಹುದು.
ಇಂತಹ ರೈತರಿಗೆ ಬೆಳೆ ಪರಿಹಾರ ನಿಧಿ ಹಣ ಜಮಾ ಆಗಿದೆ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿ!
ಯಾವ ಯಾವ ಉದ್ಯಮ ಆರಂಭಿಸಬಹುದು?:
ಹಣ್ಣಿನ ಅಂಗಡಿ, ಹೂವಿನ ಅಂಗಡಿ, ಮೊಬೈಲ್ ಅಂಗಡಿ, ಹೊಲಿಗೆ, ಆಟಿಕೆ ತಯಾರಿಕೆ, ಹೈನುಗಾರಿಕೆ, ಗುಡಿ ಕೈಗಾರಿಕೆಯಂತಹ ಕಡಿಮೆ ವೆಚ್ಚದಲ್ಲಿ ಆರಂಭಿಸಿ ಹೆಚ್ಚಿನ ಲಾಭ ಬರುವ ಉದ್ಯಮ ಸ್ಥಾಪಿಸಬಹುದಾಗಿದೆ.
ಸಾಂದೀಪಿನಿ ಶಿಷ್ಯ ವೇತನ ಯೋಜನೆ: (Sandeepini scheme)
ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗಾಗಿ ಸಾಂದೀಪಿನಿ ಶಿಷ್ಯವೇತನ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲ್ಲಿ ಎಸ್ಎಸ್ಎಲ್ಸಿ (SSLC) ನಂತರ ಪ್ರಥಮ ಪಿಯುಸಿ (PUC) ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ 15,೦೦೦ ರೂ. ಶಿಷ್ಯ ವೇತನ ನೀಡಲಾಗುತ್ತದೆ.
ಮುಂದಿನ ಕಂತಿನ ಗೃಹಲಕ್ಷ್ಮಿ ಹಣ ಪಡೆಯೋಕೆ ಈ ಹೊಸ ನಿಯಮ ಪಾಲಿಸಲೇಬೇಕು!
ಉನ್ನತ ಶಿಕ್ಷಣ ವಿವಿಧ ಕೋರ್ಸ್ಗಳಿಗೆ ಸಿಇಟಿ ಮೂಲಕ ಪಾಸಾದ ವಿದ್ಯಾರ್ಥಿಗಳಿಗೆ ದಾಖಲಾತಿ ಶುಲ್ಕದ 2/3 ಅಥವಾ ಒಂದು ಲಕ್ಷ ರೂ. ವರೆಗೆ ನೀಡಲಾಗುತ್ತದೆ. ಈ ಯೋಜನೆ ಲಾಭ ಪಡೆದು ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಸಮುದಾಯದವರು ಉನ್ನತ ಶಿಕ್ಷಣ ಕನಸನ್ನು ನನಸಾಗಿಸಿಕೊಳ್ಳಬಹುದಾಗಿದೆ.
ಸಾಂದೀಪಿನಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಜ.31 ಕೊನೆಯ ದಿನವಾಗಿದೆ.
The government will give 5 lakh rupees to those who have to do their own Business
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.