ಇನ್ಮುಂದೆ ಸರ್ಕಾರಿ ಕೆಲಸ ಬೇಕು ಅಂದ್ರೆ ಈ ದಾಖಲೆ ಕಡ್ಡಾಯ; ರಾತ್ರೋರಾತ್ರಿ ಹೊಸ ರೂಲ್ಸ್
ನೀವು ಪದವಿ ಅಥವಾ ಇತರ ಕೋರ್ಸ್ ಮುಗಿಸಿದ್ದೀರಾ? ಹೊಸದಾಗಿ ಸರ್ಕಾರಿ ಕೆಲಸ (government job) ಒಂದಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದೀರಾ ಹಾಗಾದ್ರೆ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬೇಕು ಅಂದ್ರೆ ಇದೊಂದು ಮುಖ್ಯವಾಗಿರುವ ದಾಖಲೆ (documents) ಇನ್ನು ಮುಂದೆ ನಿಮ್ಮ ಬಳಿ ಇರಲೇಬೇಕು ಇಲ್ಲವಾದರೆ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುವುದು ಹಾಗಿರಲಿ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಕೂಡ ಸಾಧ್ಯವಿಲ್ಲ.
ಒಂದು ಹಂತದ ಶಿಕ್ಷಣ ಮುಗಿಸಿದ ನಂತರ ಕೆಲಸಕ್ಕೆ ಸೇರಬೇಕು, ಉದ್ಯೋಗ ಮಾಡಬೇಕು. ಕೈ ತುಂಬಾ ಹಣ ಸಂಪಾದನೆ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಆಸೆ.. ಅದಕ್ಕಾಗಿ ಖಾಸಗಿ ಸಂಸ್ಥೆ (private companies) ಗಳಿರಬಹುದು ಅಥವಾ ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುವುದಿರಬಹುದು ಜನ ಅರ್ಜಿ ಸಲ್ಲಿಸಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ
ವಸತಿ ಯೋಜನೆ! ಮನೆ ಇಲ್ಲದವರಿಗೆ ಸರ್ಕಾರವೇ ನೀಡುತ್ತೆ ಮನೆ; ಸರ್ಕಾರದಿಂದ ಸಿಹಿ ಸುದ್ದಿ
ಆದರೆ ಯಾವುದೇ ರೀತಿಯ ಪದವಿ ಮುಗಿಸಿದ್ದರು ಕೂಡ ಸರ್ಕಾರಿ ಕೆಲಸವನ್ನ ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ ಅದಕ್ಕೆ ವಿಶೇಷವಾದ ರೀತಿಯಲ್ಲಿಯೇ ತಯಾರಿ ನಡೆಸಬೇಕು, ಜೊತೆಗೆ ಸಾಕಷ್ಟು ದಾಖಲೆಗಳು, ಪ್ರೋಸೆಸ್ (process) ಗಳು ಇರುತ್ತವೆ.
ಸಾಕಷ್ಟು ಸ್ಪರ್ಧಾತ್ಮಕ ಪರೀಕ್ಷೆ (competitive exams) ಗಳನ್ನು ಕೂಡ ಎದುರಿಸಬೇಕಾಗುತ್ತದೆ. ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುವವರಿಗೆ ರಾಜ್ಯ ಸರ್ಕಾರದಿಂದ ಒಂದು ಹೊಸ ರೂಲ್ಸ್ ತಿಳಿಸಲಾಗಿದೆ.
ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕುವವರಿಗೆ ಸರ್ಕಾರದ ರೂಲ್ಸ್! (Government new rules for applicant)
ಸರ್ಕಾರಿ ನೌಕರಿ ಪಡೆದುಕೊಳ್ಳಲು ಅರ್ಜಿ ಹಾಕುವುದಕ್ಕೂ ಮೊದಲು ನೀವು ಆಯಾ ಕೆಲಸದ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬೇಕು, ನಿಮ್ಮ ಅರ್ಜಿಯಲ್ಲಿ ಯಾವುದೇ ಸಣ್ಣ ಲೋಪದೋಷ ಇದ್ದರೂ ಕೂಡ ಅಂತಹ ಅರ್ಜಿ ರಿಜೆಕ್ಟ್ (application reject) ಆಗುತ್ತೆ.
ಸರ್ಕಾರದ ಹೊಸ ನಿಯಮದ ಪ್ರಕಾರ ಕನಿಷ್ಠ ವಿದ್ಯಾರ್ಹತೆ (qualification) ಇಲ್ಲದೆ ಇರುವವರು ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಇನ್ನು ಸರ್ಕಾರಿ ನೌಕರಿ ಪಡೆದುಕೊಳ್ಳಲು ಅರ್ಜಿ ಹಾಕುವ ಅಭ್ಯರ್ಥಿ ಇದೊಂದು ಪ್ರಮುಖವಾದ ದಾಖಲೆಯನ್ನು ಹೊಂದಿರಬೇಕು ಎಂದು ಸರ್ಕಾರ ತಿಳಿಸಿದೆ
ಗೃಹಲಕ್ಷ್ಮಿ ಹಣ ಬ್ಯಾಂಕ್ ಲೋನ್‌ಗೆ ಮನ್ನಾ! ಬಿಗ್ ಅಪ್ಡೇಟ್; ಇನ್ಮುಂದೆ ಹೊಸ ನಿಯಮ
ಈ ದಾಖಲೆ ಇಲ್ಲದೆ ಇದ್ರೆ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಕೂಡ ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಇಷ್ಟಕ್ಕೂ ಸರ್ಕಾರಿ ನೌಕರಿ ಪಡೆದುಕೊಳ್ಳಲು ಬೇಕಾಗಿರುವ ದಾಖಲೆ ಯಾವುದು ಎಂಬುದನ್ನು ನೋಡೋಣ
ಈ ದಾಖಲೆ ಇದ್ದವರು ಮಾತ್ರ ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಬಯಸುವವರು ಇನ್ನು ಮುಂದೆ ಯಾವುದೇ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ 10ನೇ ತರಗತಿ (10th marks card) ಅಥವಾ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಅನ್ನು ಪ್ರಮುಖ ದಾಖಲೆಯಾಗಿ ನೀಡಲೇಬೇಕು. ಒಬ್ಬ ವ್ಯಕ್ತಿಗೆ ಬೇಸಿಕ್ ಶಿಕ್ಷಣವಾದರೂ ಸಿಕ್ಕಿದೆ ಹಾಗೂ ಅಭ್ಯರ್ಥಿಯ ಶಿಕ್ಷಣ ಫೇಕ್ ಅಲ್ಲ ಎಂದು ತಿಳಿಸುವ ಸಲುವಾಗಿ ಈ ಒಂದು ಕಡ್ಡಾಯ ನಿಯಮವನ್ನು ತರಲಾಗಿದೆ.
ಕರ್ನಾಟಕ ಸಿವಿಲ್ ಸೇವೆ ಕಾಯ್ದೆ (Karnataka civil service act) 1978 ಇದು ಕೊಡಿ ಮಾಡಲಾಗಿದ್ದು ರಾಜ್ಯದ್ಯಂತ ಈ ಹೊಸ ನಿಯಮದ ಬಗ್ಗೆ ಮಾಹಿತಿ ನೀಡಲಾಗಿದೆ. ಯಾವುದೇ ರೀತಿಯ ಗ್ರೂಪ್ ಡಿ ಹುದ್ದೆಗೆ (group d jobs) ಅರ್ಜಿ ಸಲ್ಲಿಸುವವರು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಲೇಬೇಕು.
ಈ ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ರೆ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಸಿಗೋಲ್ಲ
ಹಾಗಾಗಿ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದ ಅಥವಾ ಮಂಡಳಿಯ ಅಡಿಯಲ್ಲಿ 10ನೇ ತರಗತಿ ಮುಗಿಸಿರುವುದಕ್ಕೆ ಪ್ರಮಾಣ ಪತ್ರ ಅಥವಾ ಮಾರ್ಕ್ಸ್ ಕಾರ್ಡ್ ದಾಖಲೆಯನ್ನು ನೀಡಿ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.
ಹಾಗಾಗಿ ಈ ರೀತಿಯ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಯಾವುದೇ ಕಾರಣಕ್ಕೂ ಇತರ ಎಲ್ಲಾ ದಾಖಲೆಗಳ ಜೊತೆಗೆ 10ನೇ ತರಗತಿಯ ಮಾರ್ಕ್ಸ್ ಕಾರ್ಡ್ ಇಟ್ಟುಕೊಳ್ಳುವುದನ್ನು ಮರೆಯಬೇಡಿ.
This document is mandatory if you want a government job from now