ಶಿವಮೊಗ್ಗ: ಏಕಾಏಕಿ ಬ್ರೇಕ್ ಫೇಲ್ ಆಗಿ ಮನೆ ಮೇಲೆ ಉರುಳಿ ಬಿದ್ದ ಟೂರಿಸ್ಟ್ ಬಸ್! ಮುಂದೇನಾಯ್ತು…

ಸಾಗರ ತಾಲೂಕಿನ ಹಲಕೊಟ್ಟಿಗೆ ಕ್ರಾಸ್ ಬಳಿ ಪ್ರವಾಸಿ ಬಸ್ ಬ್ರೇಕ್ ಫೇಲ್ ಆಗಿ ಮನೆ ಮೇಲೆ ಪಲ್ಟಿಯಾಗಿದ್ದು, ಬಸ್‌ನಲ್ಲಿದ್ದ ಮಹಿಳೆಯರ ಪೈಕಿ ಎಂಟು ಮಂದಿಗೆ ಗಾಯಗಳಾಗಿವೆ.

  • ಪ್ರವಾಸಿ ಬಸ್ ಬ್ರೇಕ್ ಫೇಲ್ ಆಗಿ ಮನೆ ಮೇಲೆ ಪಲ್ಟಿ
  • 8 ಮಹಿಳೆಯರಿಗೆ ಸಣ್ಣಪುಟ್ಟ ಗಾಯ
  • ಸಾಗರ ತಾಲೂಕಿನ ಹಲಕೊಟ್ಟಿಗೆ ಕ್ರಾಸ್ ಬಳಿ ಘಟನೆ

ಶಿವಮೊಗ್ಗ (Shivamogga), ಅಕ್ಟೋಬರ್ 2: ಪ್ರವಾಸಕ್ಕೆ ತೆರಳಿದ್ದ ಮಹಿಳೆಯರಿದ್ದ ಬಸ್ (Tourist Bus) ಏಕಾಏಕಿ ಬ್ರೇಕ್ ಫೇಲ್ ಆಗಿ ಮನೆ ಮೇಲೆ ಪಲ್ಟಿಯಾದ ಘಟನೆ ಸಾಗರ ತಾಲೂಕಿನ ಹೊಸಕೊಪ್ಪ ಸಮೀಪದ ಹಲಕೊಟ್ಟಿಗೆ ಕ್ರಾಸ್ ಬಳಿ ನಡೆದಿದೆ.

ದಾವಣಗೆರೆಯ ನಿಟ್ಟುವಳ್ಳಿಯ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ 24 ಮಹಿಳೆಯರು ಕೊಲ್ಲೂರು, ಸಿಗಂದೂರು ಹಾಗೂ ಬಳೆ ಪದ್ಮಾವತಿ ದೇವಸ್ಥಾನಕ್ಕೆ ಪ್ರವಾಸ ಕೈಗೊಂಡಿದ್ದರು. ಬಳೆ ಪದ್ಮಾವತಿ ದೇವಸ್ಥಾನದತ್ತ ತೆರಳುತ್ತಿದ್ದ ವೇಳೆ ಬಸ್ ಬ್ರೇಕ್ ಫೇಲ್ (Brake Failure) ಆಗಿದೆ ಎನ್ನಲಾಗಿದೆ.

ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮನೆಯೊಂದರ ಮೇಲೆ ಪಲ್ಟಿಯಾಗಿದ್ದು, ಘಟನೆಯಿಂದ ಮನೆಗೂ ಹಾನಿಯಾಗಿದೆ. ಬಸ್‌ನಲ್ಲಿದ್ದ ಮಹಿಳೆಯರ ಪೈಕಿ 7ರಿಂದ 8 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಘೋರ ದುರಂತ: ಕಸ ವಿಂಗಡಣೆ ಯಂತ್ರದಲ್ಲಿ ಸಿಲುಕಿ ಮಹಿಳೆ ಸಾವು, ತುಂಡು ತುಂಡಾದ ದೇಹ

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ರಕ್ಷಣಾ ಕಾರ್ಯಾಚರಣೆ (Rescue Operation) ನಡೆಸಿದ್ದಾರೆ. ಗಾಯಗೊಂಡವರನ್ನು ಹೊರತೆಗೆದು ಸಮೀಪದ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.

ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಹೆಚ್ಚಿನ ಪ್ರಮಾಣದ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಈ ಘಟನೆ ಕಾರ್ಗಲ್ ಪೊಲೀಸ್ ಠಾಣೆ (Kargal Police Station) ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories