ಮಹಿಳೆಯರಿಗೆ ಸಿಗಲಿದೆ 2.5 ಲಕ್ಷ ಸಾಲ ಸೌಲಭ್ಯ! ಮೈಕ್ರೋ ಕ್ರೆಡಿಟ್ ಯೋಜನೆಗೆ ಅರ್ಜಿ ಸಲ್ಲಿಸಿ

ಮಹಿಳೆಯರ ಸಬಲೀಕರಣದ (women empowerment) ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತವೆ ಅದರಲ್ಲೂ ಮಹಿಳೆಯರು ತಮ್ಮದೇ ಆಗಿರುವ ಸ್ವಸಹಾಯ ಗುಂಪು (self help group) ಕಟ್ಟಿಕೊಂಡು ಆ ಮೂಲಕ ಉತ್ಪಾದನಾ ಮತ್ತು ಸೇವಾ ಘಟಕಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಉತ್ತಮ ಹಂತವನ್ನು ತಲುಪಲು ಸರ್ಕಾರ ಹೊಸ ಯೋಜನೆ ಒಂದನ್ನು ಪರಿಚಯಿಸಿದೆ.
ಪ್ರೇರಣ ಯೋಜನೆ /ಮೈಕ್ರೋ ಕ್ರೆಡಿಟ್ ಯೋಜನೆ 2023 (Micro credit scheme 2023)
ಮಹಿಳೆಯರಿಗಾಗಿಯೇ ಈ ಯೋಜನೆ ಆರಂಭಿಸಲಾಗಿದ್ದು ಸ್ವಸಹಾಯ ಗುಂಪುಗಳ ಮೂಲಕ ಆರ್ಥಿಕ ನೆರವು (financial support) ಪಡೆದುಕೊಳ್ಳಲು ಮೈಕ್ರೋ ಕ್ರೆಡಿಟ್ ಯೋಜನೆ ಮಹಿಳೆಯರಿಗೆ ಹೆಚ್ಚು ಸಹಾಯಕವಾಗಲಿದೆ.
ಯೋಜನೆಯ ಅಡಿಯಲ್ಲಿ ಸಬ್ಸಿಡಿ (subsidy) ಹಾಗೂ ಸಾಲ (Loan) ಸೌಲಭ್ಯವನ್ನು ಪಡೆದುಕೊಳ್ಳಬಹುದು.
₹603 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲೆಂಡರ್! ಭರ್ಜರಿ ಸಬ್ಸಿಡಿ; ದೀಪಾವಳಿಗೆ ಬಂಪರ್ ಗಿಫ್ಟ್
ಎಷ್ಟು ಸಿಗಲಿದೆ ಸಹಾಯಧನ – Subsidy Loan
ಕನಿಷ್ಠ 10 ಮಹಿಳೆಯರು ಇರುವ ಸ್ವಸಹಾಯ ಗುಂಪುಗಳು ಮೈಕ್ರೋ ಕ್ರೆಡಿಟ್ ಯೋಜನೆಯ ಸಾಲ (Loan) ಪಡೆದುಕೊಳ್ಳಬಹುದು, ಇಲ್ಲಿ ಉದ್ಯಮ ಮಾಡುವವರಿಗೆ 2.50 ಲಕ್ಷ ರೂಪಾಯಿಗಳನ್ನು ನೀಡಲಾಗುವುದು.
ಇದರಲ್ಲಿ 1.50 ಲಕ್ಷ ರೂಪಾಯಿಗಳನ್ನು ಸರ್ಕಾರ ಸಹಾಯಧನವಾಗಿ ನೀಡಲಿದ್ದು ಒಂದು ಲಕ್ಷ ರೂಪಾಯಿಗಳಿಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. 21 ವರ್ಷ ಮೇಲ್ಪಟ್ಟ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.
ಕೇಂದ್ರದಿಂದ ದಿಟ್ಟ ನಿರ್ಧಾರ; ರಾತ್ರೋ ರಾತ್ರಿ ಕ್ಲೋಸ್ ಆಯ್ತು ಇಂತವರ ಪ್ಯಾನ್ ಕಾರ್ಡ್
ಯಾರಿಗೆ ಎಷ್ಟು ಸಾಲ ಸೌಲಭ್ಯ ಸಿಗುತ್ತದೆ

ಇನ್ನು ಘಟಕ ವೆಚ್ಚಕ್ಕೆ ಪ್ರತಿ ಮಹಿಳೆಯರಿಗೆ 15,000 ಸಹಾಯಧನ ಹಾಗೂ 10,000 ರೂ. ಸಾಲ ಸೌಲಭ್ಯ ನೀಡಲಾಗುವುದು. ಈ ಸಾಲಕ್ಕೆ ಕೇವಲ 4% ಬಡ್ಡಿ ( interest) ಇದ್ದು 30 ಕಂತುಗಳಲ್ಲಿ ಮಹಿಳೆಯರು ಸಾಲ ತೀರಿಸಬೇಕು.
ಆಸ್ತಿ, ಮನೆ ಖರೀದಿಗೆ ಸರ್ಕಾರದಿಂದ ಹೊಸ ನಿಯಮ; ಇಷ್ಟು ಹಣದ ವಹಿವಾಟು ಮಾಡುವಂತಿಲ್ಲ
ಯಾರಿಗೆ ಸಿಗಲಿದೆ ಮೈಕ್ರೋ ಕ್ರೆಡಿಟ್ ಯೋಜನೆಯ ಲಾಭ!
ಈ ಯೋಜನೆಯ ಲಾಭವನ್ನು ಈ ಕೆಳಗಿನ ನಿಗಮಗಳ ಅಡಿಯಲ್ಲಿ ಬರುವ ಸಮುದಾಯದವರು ಪಡೆದುಕೊಳ್ಳಬಹುದು.
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
ಕರ್ನಾಟಕ ತಾಂಡ ಸಮುದಾಯ ಅಭಿವೃದ್ಧಿ ನಿಗಮ
ಕರ್ನಾಟಕ ಆದಿ ಜಾಂಬವ ಸಮುದಾಯ ಅಭಿವೃದ್ಧಿ ನಿಗಮ
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ.
ಅಲೆಮಾರಿ ಪರಿಶಿಷ್ಟ ಜಾತಿ ಮತ್ತು ಪಂಗಡ ಅಭಿವೃದ್ಧಿ ನಿಗಮ.
ಅರ್ಹ ಸ್ವ ಸಹಾಯ ಗುಂಪುಗಳು ಕರ್ನಾಟಕ ಸರ್ಕಾರದ ಸೇವಾ ಸಿಂಧು ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ (online application) ಸಲ್ಲಿಸಬಹುದಾಗಿದೆ.
ಕೊನೆಯ ದಿನಾಂಕ ನವೆಂಬರ್ 29 2023. ಆನ್ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ:
https://sevasindhu.karnataka.gov.in/Sevasindhu/Kannada?ReturnUrl=%2F
Women will get 2.5 lakh loan facility, Apply for Micro Credit Scheme



