ಮದುವೆಗೆ ಬಂದಿದ್ದು 150 ಗೆಸ್ಟ್, ಖರ್ಚಾಗಿದ್ದು ಕೋಟಿ ಕೋಟಿ! ಅಭಿಷೇಕ್ ಅವಿವಾ ಅದ್ಧೂರಿ ವಿವಾಹದ ಲೆಕ್ಕ ಇಲ್ಲಿದೆ
ಸ್ನೇಹಿತರೆ, ಸ್ಯಾಂಡಲ್ ವುಡ್ ರೆಬಲ್ ಮನೆತನದ ಕುಡಿ ಅಭಿಷೇಕ್ ಅಂಬರೀಶ್ (Abhishek Ambareesh) ಮತ್ತು ಅವಿವ ಬಿಡಪ್ಪ (Aviva Bidapa) ಅವರ ಮದುವೆ (Marriage) ಬಹಳ ವೈಭವ ಪೂರಿತವಾಗಿ ನೆರವೇರಿದೆ. ಹೌದು ಗೆಳೆಯರೇ ಜೂನ್ 5ನೇ ತಾರೀಕಿನಂದು ಅಭಿಷೇಕ್ ಅಂಬರೀಶ್ ಅವರು ಪ್ರೀತಿಸಿದ ಹುಡುಗಿ ಅವಿವ ಬಿಡಪ್ಪ ಅವರ ಜೊತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ (Bengaluru Palace Ground) ಒಕ್ಕಲಿಗ ಸಂಪ್ರದಾಯದಂತೆ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರು ಸಪ್ತಪದಿ ತುಳಿದು ಹೊಸ ಬದುಕಿಗೆ ಕಾಲಿಟ್ಟರು.
ಹೀಗೆ ಸ್ಯಾಂಡಲ್ ವುಡ್ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳ ಜೊತೆಗೆ ಗಣ್ಯ ರಾಜಕೀಯ ವ್ಯಕ್ತಿಗಳು ಕುಟುಂಬಸ್ಥರು, ಆತ್ಮೀಯ ಸ್ನೇಹಿತರು ಸೇರಿದಂತೆ ಮುಂತಾದವರು ಆಗಮಿಸಿದ ಈ ಮದುವೆಗೆ ಖರ್ಚಾದ ಒಟ್ಟು ಹಣ ಎಷ್ಟು ಕೋಟಿ ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ಕಷ್ಟದಲ್ಲೂ ಎಲ್ಲರನ್ನೂ ನಗಿಸುತ್ತಿದ್ದ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ನಿಜ ಜೀವನ ಹೇಗಿತ್ತು ಗೊತ್ತಾ?
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ತಮ್ಮ 17ನೇ ವಯಸ್ಸಿಗೆ ಉದ್ಯಮಕ್ಕೆ ಧುಮುಕಿ ಫ್ಯಾಷನ್ ಡಿಸೈನರ್, ಮಾಡೆಲ್ ಆಗಿ ಕೆಲಸ ಮಾಡಲು ಪ್ರಾರಂಭ ಮಾಡಿದಂತಹ ಅವಿವ ತಮ್ಮದೇ ಲೋಕದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.
ಇನ್ನು ಅಭಿಷೇಕ್ ತಮ್ಮ ತಂದೆಯಂತೆ ರೆಬೆಲ್ ನಟನೆಯ ಮೂಲಕ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇಬ್ಬರು ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇನ್ನು ಬೆಂಗಳೂರಿನಲ್ಲಿ ನಡೆದ ಅದ್ದೂರಿ ಮದುವೆ ಕಾರ್ಯಕ್ರಮಕ್ಕೆ ಇವರ ಕುಟುಂಬಸ್ಥರು ಆಪ್ತರು ಆಗಮಿಸಿ ನವ ವಧು-ವರರನ್ನು ಆಶೀರ್ವದಿಸಿದರು. ಹೌದು ಗೆಳೆಯರೇ ನಟ ರಾಜಕಾರಣಿ ಕುಮಾರ್ ಬಂಗಾರಪ್ಪ ಭಾಗಿಯಾಗಿ ಫೋಟೋ ಪೋಸ್ ನೀಡಿದರು.
ಜೊತೆಗೆ ನಿರ್ಮಾಪಕ ಹಾಗೂ ಪ್ರಖ್ಯಾತ ರಾಜಕಾರಣಿಯಾಗಿರುವ ಮುನಿರತ್ನ, ಎಂಬಿ ಪಾಟೀಲ್ ಸೇರಿದಂತೆ ಮುಂತಾದ ಗಣ್ಯ ರಾಜಕೀಯ ವ್ಯಕ್ತಿ ಗಳು ಆಗಮಿಸಿ ನವ ವಧು ವರರಿಗೆ ಶುಭ ಹಾರೈಸಿದರು.
ಪ್ರಖ್ಯಾತ ಸೆಲೆಬ್ರಿಟಿಗಳಾದ ಪ್ರಣತಿ ಶುಭಾಶ್, ಡಾಕ್ಟರ್ ವಿಷ್ಣುವರ್ಧನ್ ಅವರ ಕುಟುಂಬ, ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್, ಪತ್ನಿ ಮಗಳೊಂದಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಅಶ್ವಿನಿ ಪುನೀತ್ ರಾಜಕುಮಾರ್, ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ನಿರ್ದೇಶಕ ಗುರುದತ್ ಗಾಣಿಗ, ತಮಿಳಿಗರ ಗಾಡ್ ಫಾದರ್ ರಜನಿ, ಸುಹಾಸಿನಿ ಸೇರಿದಂತೆ ಬರೋಬ್ಬರಿ 150ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳು ಅಭಿ ಹಾಗೂ ಅವಿವ ಮದುವೆ ಸಂಭ್ರಮದಲ್ಲಿ ಭಾಗಿಯಾದರು.
ಈ ಎಲ್ಲಾ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗುತ್ತಿದ್ದು, ಅಭಿಷೇಕ್ ಅವಿವ ಬಿಡಪ್ಪ ಅವರಿಗೆ ಅಶ್ವಿನಿ ನಕ್ಷತ್ರ ತೋರುತ್ತಿರುವಂತಹ ಫೋಟೋ ಸದ್ಯಾ ನೆಟ್ಟಿಗರ ಗಮನ ಸೆಳೆದಿದೆ.
ಸಾಹಸಸಿಂಹ ವಿಷ್ಣುದಾದಾ ಯಾವಾಗಲೂ ಧರಿಸುತ್ತಿದ್ದ ಕೈ ಖಡಗ ಸದ್ಯ ಯಾರ ಬಳಿ ಇದೆ ಗೊತ್ತಾ?
ಇನ್ನು ಬಹಳ ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ನಡೆದಂತಹ ಈ ಮದುವೆಗೆ ಬರೋಬ್ಬರಿ 50 ಕೋಟಿ ಹಣ ಖರ್ಚು ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಅಷ್ಟೇ ಅಲ್ಲದೆ ಅಂಬಿ ಮನೆಯ ಸೊಸೆ ಅವಿವ ಬಿಡಪ್ಪ ತಮ್ಮ ಪ್ರೀತಿಯ ಪತಿಗೆ ಬಿಎಂಡಬ್ಲ್ಯೂ ಕಾರುನನ್ನು ಉಡುಗೊರೆಯನ್ನಾಗಿ ನೀಡುವ ಮೂಲಕ ಸರ್ಪ್ರೈಸ್ ನೀಡಿದರು. ಈ ಕಾರಿನ ಬೆಲೆ ಬರೋಬ್ಬರಿ ಒಂದುವರೆ ಕೋಟಿ ಎಂದು ಹೇಳಲಾಗುತ್ತಿದೆ.
Abhishek Ambareesh Aviva Bidapa Marriage cost Goes Viral
Our Whatsapp Channel is Live Now 👇