ಮತ್ತೊಂದು ವಿವಾದಕ್ಕೆ ಸಿಲುಕಿದ ರಶ್ಮಿಕಾ ಮಂದಣ್ಣ, ಭಾರೀ ಟ್ರೋಲ್ ಗೆ ಕಣ್ಣೀರಾಕಿದ ಶ್ರೀವಲ್ಲಿ.. ಅಷ್ಟಕ್ಕೂ ಆಗಿದ್ದೇನು?
Rashhmika Mandanna: ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ಸರಣಿ ವಿವಾದಗಳಲ್ಲಿ ಸಿಲುಕಿದ್ದಾರೆ. ಹೊಸದಾಗಿ ಇದೀಗ ಚಿಕನ್ ಬರ್ಗರ್ ತಿನ್ನುತ್ತಾ ಜಾಹೀರಾತು ಹಾಕಿದ್ದಕ್ಕೆ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ.
Rashmika Mandanna: ಸೌತ್ ಸ್ಟಾರ್ ನಟಿಯಾಗಿ ಬೆಳೆದ ರಶ್ಮಿಕಾ ಮಂದಣ್ಣ, ಪುಷ್ಪಾ ಚಿತ್ರದೊಂದಿಗೆ ಪ್ಯಾನ್ ಇಂಡಿಯಾ (Pan India) ಇಮೇಜ್ ಪಡೆದರು. ಇದು ದೇಶಾದ್ಯಂತ ರಶ್ಮಿಕಾ ಮೇಲಿನ ಕ್ರೇಜ್ ಇನ್ನಷ್ಟು ಹುಟ್ಟು ಹಾಕಿದೆ.
ಈಗ ಅನೇಕ ಬ್ರ್ಯಾಂಡ್‌ಗಳು ತಮ್ಮ ಪ್ರಚಾರಕ್ಕಾಗಿ (Brand Promotions) ಈ ಸ್ಟಾರ್‌ಡಮ್ ಅನ್ನು ಬಳಸುತ್ತಿವೆ. ಇತ್ತೀಚೆಗಷ್ಟೇ ಜಪಾನಿನ ಫ್ಯಾಶನ್ ಬ್ರ್ಯಾಂಡ್ ವೊಂದಕ್ಕೆ (Japan Fashion Brand) ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದ ರಶ್ಮಿಕಾ, ಇತ್ತೀಚೆಗಷ್ಟೇ ಆಹಾರ ಪದಾರ್ಥವೊಂದರ ವಾಣಿಜ್ಯ ಜಾಹೀರಾತು (Commercial Ads) ಮಾಡಿದ್ದಾರೆ.
ಸುಳ್ಳು ಆರೋಪ ಮಾಡಿದ ಯೂಟ್ಯೂಬ್ ಚಾನೆಲ್ ಮೇಲೆ ಕಾನೂನು ಕ್ರಮಕ್ಕೆ ಮುಂದಾದ ಸ್ಟಾರ್ ಹೀರೋ! ಯಾರು ಗೊತ್ತಾ?
ಜನಪ್ರಿಯ ಬರ್ಗರ್ ಬ್ರಾಂಡ್‌ನ ಜಾಹೀರಾತಿನಲ್ಲಿ (Chicken Burger Advertisement) ನಟಿಸಿರುವ ರಶ್ಮಿಕಾ ಮಂದಣ್ಣ (Actress Rashmika Mandanna), ಜಾಹೀರಾತಿನಲ್ಲಿ ಮಸಾಲೆಯುಕ್ತ ಚಿಕನ್ ಬರ್ಗರ್ ರುಚಿಯನ್ನು ಆನಂದಿಸುತ್ತಾರೆ. ಸದ್ಯ ಈ ಜಾಹೀರಾತು ರಶ್ಮಿಕಾ ಟ್ರೊಲ್ ಹಾಗೂ ಟೀಕೆಗೆ (Brutally Trolled) ಕಾರಣವಾಗಿದೆ.
ರಶ್ಮಿಕಾ ಮಂದಣ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಜಾಹೀರಾತಿನ ವಿಡಿಯೋ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ಆದರೆ ರಶ್ಮಿಕಾ ಈ ಹಿಂದೆ ತಾನು ಸಸ್ಯಾಹಾರಿ ಎಂದು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ಕನ್ನಡಕ್ಕೆ ಬಂದದ್ದು ಹೇಗೆ? ಚಿತ್ರೀಕರಣ ನಡೆದಿದ್ದು ಎಲ್ಲಿ ಗೊತ್ತಾ?
ತಾನೆಂದೂ ಮಾಂಸಾಹಾರ (Non-Veg) ಸೇವಿಸುವುದಿಲ್ಲ, ನಾನು ಶುದ್ಧ ಸಸ್ಯಾಹಾರಿ ಅಂದಿದ್ದ ರಶ್ಮಿಕಾ ಮಂದಣ್ಣ (ashmika Mandanna Calls Herself A Vegetarian) ಈ ಜಾಹೀರಾತು ಒಪ್ಪಿಕೊಂಡಿದ್ದು ಏಕೆ? ಈಗಾಗಲೇ ಸಾಕಷ್ಟು ಬೇಡಿಕೆ ಇದ್ದರೂ ಇಂತಹ ಜಾಹೀರಾತಿನ (Rashmika Eats A Chicken Burger) ಮೂಲಕವೇ ಗಳಿಸಬೇಕೇ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕಾಮೆಂಟ್ ಗಳು ವ್ಯಕ್ತವಾಗುತ್ತಿವೆ.
ರಜನಿಕಾಂತ್ ಕನ್ನಡದಲ್ಲಿ ಅಭಿನಯಿಸಿದ ಕೊನೆಯ ಸಿನಿಮಾ ಯಾವುದು? ಕನ್ನಡ ಚಿತ್ರಗಳಿಂದ ದೂರ ಉಳಿದಿದ್ದೇಕೆ ರಜನಿ?
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಬಾಲಿವುಡ್ ನಲ್ಲಿ ರಣಬೀರ್ ಕಪೂರ್ ಜೊತೆ ಅನಿಮಲ್ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ. ಟಾಲಿವುಡ್ ನಲ್ಲಿ ಅಲ್ಲು ಅರ್ಜುನ್ ಜೊತೆ ಪುಷ್ಪ 2, ನಿತಿನ್ ಜೊತೆ ಒಂದು ಸಿನಿಮಾ ಮತ್ತು ರೇನ್ ಬೋ ಎಂಬ ಲೇಡಿ ಓರಿಯೆಂಟೆಡ್ ಸಿನಿಮಾ ಮಾಡಲಿದ್ದಾರೆ.
ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗಳಾಗಿ ತಯಾರಾಗುತ್ತಿರುವ ಅನಿಮಲ್ ಮತ್ತು ಪುಷ್ಪ 2 ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಈ ಚಿತ್ರಗಳ ಮೂಲಕ ರಶ್ಮಿಕಾ ಮಂದಣ್ಣ ಎಷ್ಟು ಸ್ಟಾರ್ ಡಮ್ ಗಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.
Actress Rashmika Mandanna Facing Another Controversy, After posting an ad while eating a chicken burger
Follow us On
Google News |