ಸುಳ್ಳು ಆರೋಪ ಮಾಡಿದ ಯೂಟ್ಯೂಬ್ ಚಾನೆಲ್ ಮೇಲೆ ಕಾನೂನು ಕ್ರಮಕ್ಕೆ ಮುಂದಾದ ಸ್ಟಾರ್ ಹೀರೋ! ಯಾರು ಗೊತ್ತಾ?
Prithviraj Sukumaran: ಇತ್ತೀಚೆಗಷ್ಟೇ ಮಲಯಾಳಂ ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರನ್ ವಿರುದ್ಧ ಮಲಯಾಳಂ ಯೂಟ್ಯೂಬ್ ಚಾನೆಲ್ ವೊಂದು ಸುಳ್ಳು ಆರೋಪ ಮಾಡಿತ್ತು. ಈ ಬಗ್ಗೆ ಪೃಥ್ವಿರಾಜ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
Prithviraj Sukumaran: ಮಲಯಾಳಂ ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರನ್ ಸದ್ಯ ಫುಲ್ ಫಾರ್ಮ್ ನಲ್ಲಿದ್ದಾರೆ. ಅಯ್ಯಪ್ಪನ್ ಕೋಶಿಯಂ, ಬ್ರೋ ಡ್ಯಾಡಿ, ಲೂಸಿಫರ್, ಜನಗಣಮನ, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಹಿಟ್ ಸಿನಿಮಾಗಳ ಮೂಲಕ ಮುನ್ನುಗ್ಗುತ್ತಿದ್ದಾರೆ. ಮತ್ತೊಂದೆಡೆ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಸಹ ಮಾಡುತ್ತಿದ್ದಾರೆ.
ಸೆಲೆಬ್ರಿಟಿಗಳ ಬಗ್ಗೆ ವದಂತಿಗಳು ಮತ್ತು ಗಾಸಿಪ್‌ಗಳು ಬರುವುದು ಸಹಜ. ಅನೇಕ ಸೆಲೆಬ್ರಿಟಿಗಳು ಆ ವದಂತಿಗಳನ್ನು ನಿರ್ಲಕ್ಷಿಸುತ್ತಾರೆ. ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸಿ ಆ ಕೂಡಲೇ ಕೌಂಟರ್ ಕೊಡುತ್ತಾರೆ.
ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ಕನ್ನಡಕ್ಕೆ ಬಂದದ್ದು ಹೇಗೆ? ಚಿತ್ರೀಕರಣ ನಡೆದಿದ್ದು ಎಲ್ಲಿ ಗೊತ್ತಾ?
ಇತ್ತೀಚೆಗೆ, ಕೆಲವು ಯೂಟ್ಯೂಬ್ ಚಾನೆಲ್‌ಗಳು ಮತ್ತು ಮಾಧ್ಯಮಗಳು ತಮ್ಮ ವೀಕ್ಷಣೆಗಳಿಗಾಗಿ, ಹೆಚ್ಚು ವ್ಯೂಸ್ ಪಡೆಯಲು ವೀಕ್ಷಕರು ಇಷ್ಟಪಡುವ ಸುದ್ದಿಗಳನ್ನು ಬರೆಯುತ್ತಿವೆ. ಅಲ್ಲದೆ ಕೆಲವೊಮ್ಮೆ ಕೆಲವು ಯೂಟ್ಯೂಬ್ ಚಾನೆಲ್‌ಗಳು ಸುಳ್ಳುಗಳನ್ನು ಪ್ರಸಾರ ಮಾಡಿಬಿಡುತ್ತಾರೆ.
ಅನೇಕ ಸೆಲೆಬ್ರಿಟಿಗಳು ಈಗಾಗಲೇ ಇಂತಹ ಚಾನೆಲ್‌ಗಳು ಮತ್ತು ಸುದ್ದಿಗಳ ಮೇಲೆ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಮಲಯಾಳಂ ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರನ್ ವಿರುದ್ಧ ಮಲಯಾಳಂ ಯೂಟ್ಯೂಬ್ ಚಾನೆಲ್ ವೊಂದು ಸುಳ್ಳು ಆರೋಪ ಮಾಡಿತ್ತು. ಈ ಬಗ್ಗೆ ಪೃಥ್ವಿರಾಜ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ರಜನಿಕಾಂತ್ ಕನ್ನಡದಲ್ಲಿ ಅಭಿನಯಿಸಿದ ಕೊನೆಯ ಸಿನಿಮಾ ಯಾವುದು? ಕನ್ನಡ ಚಿತ್ರಗಳಿಂದ ದೂರ ಉಳಿದಿದ್ದೇಕೆ ರಜನಿ?
ಪೃಥ್ವಿರಾಜ್ ಸುಕುಮಾರನ್ ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. ಕೆಲವು ರೀತಿಯ ಸಿನಿಮಾಗಳನ್ನು ನಿರ್ಮಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯಕ್ಕೆ 25 ಕೋಟಿ ದಂಡ ಪಾವತಿಸಿದ್ದೇನೆ ಎಂದು ಆರೋಪಿಸಿ ನನ್ನ ಮೇಲೆ ಸುದ್ದಿ ಬರೆದಿದ್ದಾರೆ.
ಬರೋಬ್ಬರಿ 300 ಸಿನಿಮಾಗಳಲ್ಲಿ ನಟಿಸಿರುವ ಅನಂತನಾಗ್ ಅವರ ಮೊದಲ ಸಿನಿಮಾ ಯಾವುದು ಗೊತ್ತಾ?
ಆ ಆರೋಪಗಳಲ್ಲಿ ಸತ್ಯಾಂಶವಿಲ್ಲ. ನನ್ನ ವಿರುದ್ಧ ಇಂತಹ ಸುಳ್ಳು ಪ್ರಚಾರ ಮಾಡುತ್ತಿರುವ ವಾಹಿನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಹಾಗೆಯೇ ಎಲ್ಲಾ ಮಾಧ್ಯಮ ವಾಹಿನಿಗಳಿಗೂ ನನ್ನ ಮನವಿ.. ಯಾವುದೇ ಮಾಹಿತಿ ಬಂದಾಗ ಅದು ನಿಜವೋ ಸುಳ್ಳೋ ಎಂಬುದನ್ನು ಪರಿಶೀಲಿಸಿ ಪ್ರಸಾರ ಮಾಡಿ’ ಎಂದು ಪೃಥ್ವಿರಾಜ್ ಸುಕುಮಾರನ್ ಮನವಿ ಮಾಡಿದ್ದಾರೆ.
ಸದ್ಯ ಪೃಥ್ವಿರಾಜ್ ಸುಕುಮಾರನ್ ಅವರ ಪೋಸ್ಟ್ ವೈರಲ್ ಆಗಿದ್ದು ಮಲಯಾಳಂ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದೆ.
Prithviraj Sukumaran Takes Legal Action On a YouTube channel made false allegations
View this post on Instagram
Follow us On
Google News |