Zee Kannada: ಜೀ ಕನ್ನಡ ಬ್ಯಾನ್‌ ವದಂತಿ; ಜೊತೆ ಜೊತೆಯಲಿ ವಿವಾದದ ಬಗ್ಗೆ ಆಶಿತಾ ಓಪನ್ ಮಾತು

Zee Kannada: ಜೊತೆ ಜೊತೆಯಲಿ ಧಾರಾವಾಹಿಯಿಂದ ಏಕಾಏಕಿ ರಿಪ್ಲೇಸ್ ಆದ ನಂತರ ಜೀ ಕನ್ನಡ ಬ್ಯಾನ್ ಮಾಡಿದೆ ಎನ್ನುವ ಮಾತುಗಳು ಹರಿದಾಡಿದವು. ಇದೀಗ ನಟಿ ಆಶಿತಾ ಚಂದ್ರಪ್ಪ ಸತ್ಯ ಸಂಗತಿಯನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

  • ಜೊತೆ ಜೊತೆಯಲಿ ರಿಪ್ಲೇಸ್‌
  • ಜೀ ಕನ್ನಡ ಬ್ಯಾನ್‌ ವದಂತಿ
  • ನಟಿ ಆಶಿತಾ ಓಪನ್ ಟಾಕ್‌

Zee Kannada: ಒಂದು ಕಾಲದಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ ಮನೆಮಾತಾಗಿತ್ತು. ಅದರಲ್ಲೂ ‘ಶಾಲಿನಿ’ ಪಾತ್ರದಲ್ಲಿ ಕಾಣಿಸಿಕೊಂಡ ಆಶಿತಾ ಚಂದ್ರಪ್ಪ (Ashita Chandrappa) ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಆದರೆ 100ನೇ ಸಂಚಿಕೆಗಳ ನಂತರ ಅವರ ಪಾತ್ರಕ್ಕೆ ಮತ್ತೊಬ್ಬರನ್ನು ತರಲಾಗಿದ್ದು, ಇದು ಅಚ್ಚರಿ ಮೂಡಿಸಿತ್ತು.

ಈ ಬದಲಾವಣೆಯ ಹಿಂದೆ ಏನಾಯ್ತು ಎಂಬ ಪ್ರಶ್ನೆ ವರ್ಷಗಳ ಬಳಿಕ ಮತ್ತೆ ಕೇಳಿಬಂದಿದೆ. ಈ ಬಗ್ಗೆ ಸ್ವತಃ ಆಶಿತಾ ಮಾತನಾಡಿ, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

“ನನ್ನ ಮೇಲೆ ತಪ್ಪು ಆರೋಪಗಳು ಮಾಡಿದರು”

ಸಂದರ್ಶನದಲ್ಲಿ ಮಾತನಾಡಿದ ಅವರು, “ಟೀಮ್ ಒಳ್ಳೆಯವರೇ ಇದ್ದರು. ಆದರೆ ಆಗ ಎಲ್ಲರೂ ಹೊಸಬರು. ನಾನು ಎಷ್ಟು ಕಷ್ಟಪಟ್ಟರೂ ತೃಪ್ತಿ ಆಗುತ್ತಿರಲಿಲ್ಲ. ನನ್ನ ಹಿಂದೆ ಮಾತುಗಳು ಶುರುವಾದವು. ನಾನು ಬೇಡಿಕೆಯನ್ನೇ ಇಟ್ಟಿರಲಿಲ್ಲ, ಆದರೂ ತಪ್ಪು ನನ್ನ ಮೇಲೇ ಬಿತ್ತು” ಎಂದು ಹೇಳಿದ್ದಾರೆ.

ಮದುವೆ ಸೀಸನ್ ಸಮಯದಲ್ಲಿ ದಿನ-ರಾತ್ರಿ ಶೂಟಿಂಗ್ ನಡೆಯುತ್ತಿತ್ತು. ಮುಂಚಿತವಾಗಿ ಡೇಟ್ಸ್ ಕೊಟ್ಟಿದ್ದರೂ, ಶಿರಡಿಗೆ ಹೋಗುವುದಾಗಿ ಹೇಳಿದ ಕಾರಣಕ್ಕೆ ಪಾತ್ರವೇ ಬದಲಾಯಿಸಲಾಯ್ತು ಎಂದು ಅವರು ನೋವಿನಿಂದ ಹೇಳಿದ್ದಾರೆ.

Ashita Clarifies Zee Kannada Ban Rumours

ಬ್ಯಾನ್ ಮಾಡಲಾಯಿತಾ? ಅವರ ಉತ್ತರ

ಚಾನೆಲ್ ನನ್ನನ್ನು ಬ್ಯಾನ್ ಮಾಡಿಲ್ಲ. ಆದರೆ ಕೆಲವರು ತಪ್ಪು ಸುದ್ದಿಗಳನ್ನು ಹರಡಿದರು. “ಅವಳನ್ನು ತೆಗೆದುಕೊಂಡರೆ ಪ್ರಾಜೆಕ್ಟ್ ಮುಗಿಯಲ್ಲ” ಎಂದು ಹೇಳಿ ನನ್ನ ಇಮೇಜ್ ಹಾಳು ಮಾಡಿದರು ಎಂದು ಆಶಿತಾ ಹೇಳಿದ್ದಾರೆ.

ಅದಾದ ಬಳಿಕ ಅವರು ಮತ್ತೆ ಕಂಬ್ಯಾಕ್ ಮಾಡಿದರು. ನಂತರವೂ ಸಮಸ್ಯೆಗಳು ಎದುರಾದರೂ, ಬೇರೆ ಚಾನೆಲ್‌ನಲ್ಲಿ ‘ಸುಂದರಿ’ ಧಾರಾವಾಹಿಯಲ್ಲಿ ಕೆಲಸ ಮುಂದುವರಿಸಿದ್ದಾರೆ. “ಧಾರಾವಾಹಿ ಎಷ್ಟು ಜನಪ್ರಿಯವಾಯಿತೋ, ಅದೇ ಮಟ್ಟಿಗೆ ನನ್ನ ಹೆಸರು ಕೆಡಿಸಿತು” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Ashita chandrappa

ಅಭಿಮಾನಿಗಳ ಬೆಂಬಲ

ಸತ್ಯ ಹೊರಬಂದ ನಂತರ ಅಭಿಮಾನಿಗಳು ಆಶಿತಾಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇಂಡಸ್ಟ್ರಿಯಲ್ಲಿ ಗಾಸಿಪ್‌ಗಳು ಹೇಗೆ ಒಬ್ಬರ ವೃತ್ತಿಜೀವನಕ್ಕೆ ಹೊಡೆತ ನೀಡುತ್ತವೆ ಎಂಬುದಕ್ಕೆ ಇದು ಉದಾಹರಣೆ ಎನ್ನಬಹುದು.

Ramya

Sub Editor, Cinema, Health & Lifestyle : 👤 Ramya is a journalist with five years of experience in… More »

Related Stories