Actor Yash: ನಟ ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಕಾದಿದೆ ಭರ್ಜರಿ ಸರ್ಪ್ರೈಸ್! ಬಿಗ್ ಅಪ್ಡೇಟ್
Actor Yash Birthday: ಜನವರಿ 8ರಂದು ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ‘ಟಾಕ್ಸಿಕ್’ ಸಿನಿಮಾ ತಂಡದಿಂದ ಟೀಸರ್ ಅಥವಾ ಟ್ರೈಲರ್ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
- ಯಶ್ ಹುಟ್ಟುಹಬ್ಬಕ್ಕೆ ‘ಟಾಕ್ಸಿಕ್’ ತಂಡದಿಂದ ವಿಶೇಷ ಸರ್ಪ್ರೈಸ್
- ಟಾಕ್ಸಿಕ್ ಸಿನಿಮಾ ಟೀಸರ್ ಅಥವಾ ಟ್ರೈಲರ್ ಬಿಡುಗಡೆ
- ಟಾಕ್ಸಿಕ್ ಅಪ್ಡೇಟ್ಗಾಗಿ ಅಭಿಮಾನಿಗಳ ನಿರೀಕ್ಷೆ ತೀವ್ರ
Actor Yash Birthday Surprise: ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ (Yash-starrer Toxic) ಸದ್ಯ ಭಾರೀ ಚರ್ಚೆಯಲ್ಲಿದೆ. ಈಗಾಗಲೇ ಸಿನಿಮಾದ ಪ್ರಮುಖ ಪಾತ್ರಗಳ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಇದೀಗ ಯಶ್ ಹುಟ್ಟುಹಬ್ಬದ ಸಂದರ್ಭದಲ್ಲೇ ಚಿತ್ರತಂಡದಿಂದ ದೊಡ್ಡ ಅಪ್ಡೇಟ್ ಸಿಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಜನವರಿ 8ರ ಮೇಲಿನ ಎಲ್ಲರ ದೃಷ್ಟಿ
ಯಶ್ ಅವರ ಹುಟ್ಟುಹಬ್ಬ ಜನವರಿ 8ರಂದು ಇರುವುದರಿಂದ, ಅದೇ ದಿನ ‘ಟಾಕ್ಸಿಕ್’ ಸಿನಿಮಾದ ಟೀಸರ್ ಅಥವಾ ಟ್ರೈಲರ್ ಬಿಡುಗಡೆ ಆಗಬಹುದು ಎನ್ನುವ ನಿರೀಕ್ಷೆ ಜೋರಾಗಿದೆ. ಇದುವರೆಗೂ ಫಸ್ಟ್ ಲುಕ್ ಹಾಗೂ ಪಾತ್ರಗಳ ಪೋಸ್ಟರ್‌ಗಳನ್ನಷ್ಟೇ ಬಿಡುಗಡೆ ಮಾಡಿರುವ ಚಿತ್ರತಂಡ, ಈಗ ದೃಶ್ಯ ರೂಪದ ಅಪ್ಡೇಟ್ ನೀಡುವ ಸನ್ನಿಹಿತದಲ್ಲಿದೆ ಎನ್ನಲಾಗುತ್ತಿದೆ. ಯಶ್ ಹುಟ್ಟುಹಬ್ಬವೇ ಇಂತಹ ಘೋಷಣೆಗೆ ಸೂಕ್ತ ಸಮಯ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.
ನಾಯಕಿಯರ ಪೋಸ್ಟರ್‌ಗಳಿಂದಲೇ ಕುತೂಹಲ
ಸಿನಿಮಾದಲ್ಲಿ ನಾಯಕಿಯರಾಗಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅಭಿನಯಿಸುತ್ತಿದ್ದು, ಅವರ ಪಾತ್ರಗಳ ಪೋಸ್ಟರ್‌ಗಳು ಈಗಾಗಲೇ ಗಮನ ಸೆಳೆದಿವೆ. ಈ ಎಲ್ಲ ಅಪ್ಡೇಟ್‌ಗಳ ಬಳಿಕ ಟೀಸರ್ ಅಥವಾ ಟ್ರೈಲರ್ ಬಿಡುಗಡೆಯಾಗುವುದು ಸಹಜ ನಿರೀಕ್ಷೆಯಾಗಿದೆ.
ಭಿನ್ನ ಪ್ರಯೋಗದ ‘ಟಾಕ್ಸಿಕ್’
‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ Geetu Mohandas ನಿರ್ದೇಶಿಸುತ್ತಿದ್ದಾರೆ. ನಾಯಕನಾಗಿ ಯಶ್ ನಟಿಸುವುದರ ಜೊತೆಗೆ ಕಥೆಯಲ್ಲೂ ಅವರು ಕೈಜೋಡಿಸಿದ್ದಾರೆ. Toxic Cinema ವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಸಿನಿಮಾ ಹಲವು ಭಾರತೀಯ ಭಾಷೆಗಳ ಜೊತೆಗೆ ಇಂಗ್ಲಿಷ್‌ನಲ್ಲಿಯೂ ಒಂದೇ ಸಮಯದಲ್ಲಿ ಬಿಡುಗಡೆಯಾಗಲಿದೆ.
ಬಿಡುಗಡೆ ದಿನಾಂಕವೂ ಹತ್ತಿರ
ಕೆಲವು ಹಾಲಿವುಡ್ ತಂತ್ರಜ್ಞರ ಸಹಕಾರದೊಂದಿಗೆ ಸಿನಿಮಾ ನಿರ್ಮಾಣವಾಗುತ್ತಿದ್ದು, ಮಾರ್ಚ್ 19ರಂದು ‘ಟಾಕ್ಸಿಕ್’ ತೆರೆಕಾಣಲಿದೆ. ಈ ಹಿನ್ನೆಲೆ ಯಶ್ ಹುಟ್ಟುಹಬ್ಬದ ಸರ್ಪ್ರೈಸ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


