ನೀನೇನು ದೊಡ್ಡ ಹೀರೋನ? ಎಂದು ರಜನಿಕಾಂತ್ ಗೆ ಅಡ್ವಾನ್ಸ್ ಕೊಡದೆ ಸೆಟ್ನಿಂದ ಹೊರ ಕಳಿಸಿದ ನಿರ್ಮಾಪಕ! ಅವಮಾನಕ್ಕೊಳಗಾದ ರಜಿನಿ ಮಾಡಿದ್ದೇನು ಗೊತ್ತಾ?

ಬೆಂಗಳೂರಿನಿಂದ ಚೆನ್ನೈ ಗೆ ಹೋಗಿ ಆರಂಭದಲ್ಲಿ ಸಣ್ಣಪುಟ್ಟ ವಿಲ್ಲನ್ ಪಾತ್ರಗಳಲ್ಲಿ ನಟಿಸುತ್ತಾ ಗುರುತಿಸಿಕೊಂಡಿದ್ದ ರಜನಿಕಾಂತ್ ಅವರಿಗೆ ಹೀರೋ ಆಗಿ ಬೆಳೆಯಬೇಕು ಎಂಬ ಮಹಾದಾಸ ಇರುತ್ತದೆ.

ಸ್ನೇಹಿತರೆ, ಸೂಪರ್ ಸ್ಟಾರ್ ರಜನಿಕಾಂತ್ (Actor Rajinikanth) ಅದೆಂತ ಬಹುದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂಬುದು ನಮ್ಮೆಲ್ಲರಿಗೂ ಗೊತ್ತೇ ಇದೆ‌. ಆದರೆ ಅದೊಂದು ಕಾಲದಲ್ಲಿ ಅವಕಾಶಗಳಿಗಾಗಿ ಪರದಾಡಿದ್ದಂತಹ ರಜನಿಕಾಂತ್ ಅವರು ಕನ್ನಡ (Kannada Movies), ತೆಲುಗು, ತಮಿಳು ಎಲ್ಲಾ ಭಾಷೆಯ ಸಿನಿಮಾ ರಂಗದಲ್ಲಿಯೂ ನಟಿಸುತ್ತಾ ಒಂದೊಳ್ಳೆ ಬ್ರೇಕ್ ಗಾಗಿ ಕಾಯುತ್ತಿದ್ದರು.

ಹೀಗೆ ಬೆಂಗಳೂರಿನಿಂದ ಚೆನ್ನೈ ಗೆ (Bengaluru to Chennai) ಹೋಗಿ ಆರಂಭದಲ್ಲಿ ಸಣ್ಣಪುಟ್ಟ ವಿಲ್ಲನ್ ಪಾತ್ರಗಳಲ್ಲಿ ನಟಿಸುತ್ತಾ ಗುರುತಿಸಿಕೊಂಡಿದ್ದ ರಜನಿಕಾಂತ್ ಅವರಿಗೆ ಹೀರೋ ಆಗಿ ಬೆಳೆಯಬೇಕು ಎಂಬ ಮಹಾದಾಸ ಇರುತ್ತದೆ.

ಅದರಂತೆ 1976-77ರ ರಜನಿಕಾಂತ್ ಅವಮಾನಕ್ಕೊಳಗದಂತಹ ಘಟನೆ ಒಂದು ನಡೆದಿತ್ತು. ಹೌದು ಗೆಳೆಯರೇ ಈ ಒಂದು ಮಾಹಿತಿಯನ್ನು ಸ್ವತಃ ರಜನಿಕಾಂತ್ ಅವರೇ ಸಂದರ್ಶನ ಒಂದರಲ್ಲಿ ಹಂಚಿಕೊಂಡು ತಮ್ಮ ಆರಂಭಿಕ ಸಿನಿ ಬದುಕು ಎಷ್ಟೆಲ್ಲ ನೋವನ್ನು ತಂದಿತ್ತು ಎಂಬುದರ ಮೆಲುಕು ಹಾಕಿದ್ದಾರೆ.

ನೀನೇನು ದೊಡ್ಡ ಹೀರೋನ? ಎಂದು ರಜನಿಕಾಂತ್ ಗೆ ಅಡ್ವಾನ್ಸ್ ಕೊಡದೆ ಸೆಟ್ನಿಂದ ಹೊರ ಕಳಿಸಿದ ನಿರ್ಮಾಪಕ! ಅವಮಾನಕ್ಕೊಳಗಾದ ರಜಿನಿ ಮಾಡಿದ್ದೇನು ಗೊತ್ತಾ? - Kannada News

ನೆನಪಿದ್ದಾರಾ ಸ್ಪರ್ಶ ಸಿನಿಮಾ ನಟಿ ರೇಖಾ, ಈಕೆ ಮದುವೆಯಾಗಿರುವುದು ಯಾವ ಸ್ಟಾರ್ ಸೆಲೆಬ್ರಿಟಿಯನ್ನ ಗೊತ್ತೇ?

ಹೌದು ರಜನಿಕಾಂತ್ ಹಾಗಷ್ಟೇ ತಮಿಳು ಸಿನಿಮಾದಲ್ಲಿ (Tamil Cinema) ನಟಿಸಿ ಗುರುತಿಸಿಕೊಂಡಿರುತ್ತಾರೆ. ಇಂತಹ ಸಂದರ್ಭದಲ್ಲಿ ನಿರ್ಮಾಪಕರು ರಜನಿಕಾಂತ್ ಅವರನ್ನು ಕರೆದು ಜನಪ್ರಿಯ ನಾಯಕನಾಗಿ ಅಭಿನಯಿಸುತ್ತಿದ್ದ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಮಾಡುವಂತೆ ಕೇಳುತ್ತಾರೆ.

ಅದನ್ನು ರಜನಿಕಾಂತತ್ ಖುಷಿಯಿಂದಲೇ ಒಪ್ಪಿಕೊಂಡು, ಡೇಟ್ಸ್ ಎಲ್ಲವೂ ಫಿಕ್ಸ್ ಆದ ನಂತರ ಸಂಭಾವನೆಯ ಬಗ್ಗೆ ಚರ್ಚೆ ಮಾಡಿ 6,000 ನಿಗದಿ ಮಾಡಿಕೊಂಡರಂತೆ. ಅಲ್ಲದೆ ಒಂದು ಸಾವಿರ ರೂಪಾಯಿ ಮುಂಗಡ ಅಡ್ವಾನ್ಸ್ ಹಣವನ್ನು ಕೊಡುವುದಾಗಿ ನಿರ್ಮಾಪಕರು ತಿಳಿಸಿ ನಾನೀಗ ಹಣ ತಂದಿಲ್ಲ ನಾಳೆ ಶೂಟಿಂಗ್ ಇದೆ ಅಲ್ಲಿ ಕೊಡುತ್ತೇನೆ ಬಾ ಎಂದು ಹೇಳಿದರಂತೆ.

ಹೀಗೆ ನಿರ್ಮಾಪಕರು ಹೇಳಿದಂತೆ ಮೇಕಪ್ ಮ್ಯಾನ್ ಬಂದರು ಟೈಲರ್ ಅಳತೆ ತೆಗೆದುಕೊಂಡರು, ಪ್ರೊಡಕ್ಷನ್ ಮ್ಯಾನೇಜರ್ ಕೂಡ ಬರುತ್ತಾರೆ ಆದರೆ ಯಾರು ರಜನಿಕಾಂತ್ ಅವರಿಗೆ ಒಂದು ಸಾವಿರ ರೂಪಾಯಿ ಅಡ್ವಾನ್ಸ್ ಕೊಡಲೇ ಇಲ್ಲ, ಈ ಕುರಿತು ನಿರ್ದೇಶಕರ ಬಗ್ಗೆ ಕೇಳಿದಾಗ ಇದರ ಬಗ್ಗೆ ನನಗೆ ಗೊತ್ತಿಲ್ಲ ನಿರ್ಮಾಪಕರನ್ನು ಕೇಳಿ ಎಂದರು.

ಒಂದು ಸಿನಿಮಾಗೆ ನಟಿ ಆರತಿ ಪಡೆಯುತ್ತಿದ್ದ ಪೇಮೆಂಟ್ ಎಷ್ಟಿತ್ತು ಗೊತ್ತಾ? ಹಿರಿಯ ನಿರ್ದೇಶಕ ಭಾರ್ಗವ ಬಹಿರಂಗಪಡಿಸಿದ ಅಸಲಿ ಸತ್ಯ!

ಆಗ ನಿರ್ಮಾಪಕರಿಗೆ ಲೈನ್ ಸಿಕ್ಕಿ ಅಡ್ವಾನ್ಸ್ ಹಣದ ಕುರಿತು ಮಾಹಿತಿ ವಿಚಾರಿಸಿದಾಗ ನಾನು ಮರೆತುಬಿಟ್ಟೆ ನಾಳೆ ಮೇಕಪ್ ಹಾಕುವ ಮೊದಲೇ ಅಡ್ವಾನ್ಸ್ ನೀಡುತ್ತೇನೆ ಎಂದು ತಿಳಿಸುತ್ತಾರೆ.

Actor Rajinikanth Cine Journeyಹೀಗೆ ಮರುದಿನ ಬೆಳಗ್ಗೆ 9 ಗಂಟೆಗೆ ಶೂಟಿಂಗ್ ಇತ್ತು, ಏಳು ಗಂಟೆಗೆ ಕಾರು ಬರುತ್ತೆ ಎಂದಿದ್ದರು ಆದರೆ 8:00 ಗಂಟೆಯಾದರೂ ಬರಲೇ ಇಲ್ಲ ಕೊನೆಗೆ ನಾನು ಎಂಟು ಮುಕ್ಕಾಲಿಗೆ ಎ ವಿ ಎಂ ಸ್ಟುಡಿಯೋದ ಬಳಿ ನಡೆದುಕೊಂಡೆ ಬಂದೆ ಆಗ ಅಲ್ಲಿದ್ದವರು ಏನಯ್ಯ ಈಗ ಬಂದಿದ್ದೀಯಾ? ಹೀರೋನೇ ಬಂದಾಯ್ತು ಬೇಗ ಮೇಕಪ್ ಹಾಕೋ ಎಂದಾಗ ಅಡ್ವಾನ್ಸ್ ಕೊಡಿ ಇಲ್ಲ ನಾನು ಮೇಕಪ್ ಹಾಕಲ್ಲ ಎಂದರಂತೆ.

ನೆನಪಿದ್ದಾರಾ ನಟಿ ಭಾನುಪ್ರಿಯ? ಗಂಡನನ್ನು ಕಳೆದುಕೊಂಡ ಮೇಲೆ ಪಾಪ ಇವರ ಪರಿಸ್ಥಿತಿ ಏನಾಗಿದೆ ನೋಡಿ!

ಹೀಗೆ ಇವರಿಬ್ಬರ ನಡುವೆ ಮಾತುಕತೆ ನಡೆಯುತ್ತಿದ್ದ ಹಾಗೆ ಶೂಟಿಂಗ್ ಸೆಟ್ ಒಳಗೆ ಒಂದು ವೈಟ್ ಅಂಬಾಸಿಡರ್ ಕಾರು ಬರುತ್ತದೆ. ಅದರಿಂದ ನಿರ್ಮಾಪಕರು ಕೆಳಗೆ ಇಳಿದು ಏನೋ ನೀನೇನು ದೊಡ್ಡ ಹೀರೋನಾ? ದುಡ್ಡು ಕೊಟ್ಟಿಲ್ಲ ಅಂದ್ರೆ ಮೇಕಪ್ ಹಾಕಲ್ವಾ? ನಿಮ್ಮಂತವರ ಎಷ್ಟು ಜನರನ್ನು ನೋಡಿಲ್ಲ ನಾನು. ಇಲ್ಲಿಂದ ಆಚೆ ಹೋಗು ನಿನಗೆ ಅವಕಾಶವಿಲ್ಲ ಎಂದರಂತೆ.

ರಜನಿಕಾಂತ್ ಕಾರು ಕಳುಹಿಸಿಕೊಡಿ ಎಂದು ಕೇಳಿದಾಗ ಅದೆಲ್ಲ ಕೊಡಲ್ಲ ಕಾರು ಬೇಕಂದ್ರೆ ಬಾಡಿಗೆ ಕೊಡಬೇಕು ನಡೆದುಕೊಂಡೆ ಹೋಗು ಎಂದು ಬಿಟ್ಟರಂತೆ.

ಇದರಿಂದ ಬೇಸರಕ್ಕೊಳಗದಂತಹ ರಜನಿಕಾಂತ್ ಈ ಘಟನೆ ನಡೆದ ಎರಡು ವರ್ಷಗಳ ಬಳಿಕ ಎವಿಎಂ ಸ್ಟುಡಿಯೋದ ಬಳಿ ಇದ್ದ ಇಟಾಲಿಯಾನ ಫಿಯೆಟ್ ಕಾರನ್ನು 4.15 ಲಕ್ಷಕ್ಕೆ ಕೊಂಡುಕೊಳ್ಳುತ್ತಾರೆ. ಅಲ್ಲದೆ ಇದಕ್ಕೆ ಇಂಡಿಯನ್ ಡ್ರೈವರ್ ಬೇಡ, ಎಂದು ಫಾರಿನ್ ಇಂದ ರಾಬಿನ್ ಸನ್ ಎಂಬುವರನ್ನು ಕರೆಸಿ ತಮ್ಮ ಕಾರ ಡ್ರೈವರ್ ಮಾಡಿಕೊಂಡರು.

3 ಮಕ್ಕಳ ತಂದೆಯನ್ನು 2ನೇ ಮದುವೆಯಾದ ನಟಿ ಜಯಪ್ರದಾ ಕೊನೆಗೆ ಒಂಟಿಯಾಗಿ ಜೀವನ ನಡೆಸುತ್ತಿರುವುದು ಯಾಕೆ ಗೊತ್ತಾ?

ತಮಗೆ ಅವಮಾನ ಮಾಡಿದ ನಿರ್ಮಾಪಕನ ಕಾರಿನ ಬಳಿ ತಮ್ಮ ಕಾರನ್ನು ನಿಲ್ಲಿಸಿ, ಸ್ಟೈಲಿಶ್ ಆಗಿ ಸಿಗರೇಟ್ ಸೇದುತ್ತಾ, ರಜನಿ ಬಂದ ವೈಕರಿ ನೋಡಿ ಅಲ್ಲಿದ್ದವರೆಲ್ಲರೂ ಗವರ್ನರ್ ಬಂದಿರಬೇಕು ಎಂದು ಕೊಂಡರಂತೆ. ಈಗೆ ರಜನಿಕಾಂತ್ ಕಷ್ಟಗಳನ್ನು ಗುರಿಗಳನ್ನಾಗಿ ಮಾಡಿಕೊಂಡು ಸೂಪರ್ ಸ್ಟಾರ್ ಆಗಿದ್ದಾರೆ.

Do you know how Superstar Rajinikanth film journey was in the early days

Follow us On

FaceBook Google News

Do you know how Superstar Rajinikanth film journey was in the early days