Sandalwood News

ಒಂದು ಸಿನಿಮಾಗೆ ನಟಿ ಆರತಿ ಪಡೆಯುತ್ತಿದ್ದ ಪೇಮೆಂಟ್ ಎಷ್ಟಿತ್ತು ಗೊತ್ತಾ? ಹಿರಿಯ ನಿರ್ದೇಶಕ ಭಾರ್ಗವ ಬಹಿರಂಗಪಡಿಸಿದ ಅಸಲಿ ಸತ್ಯ!

ಸ್ನೇಹಿತರೆ, ನಟಿ ಆರತಿ (Actress Aarathi) ಅವರ ಹೆಸರು ಕೇಳುತ್ತಿದ್ದ ಹಾಗೆ 70-80 ರ ದಶಕದಲ್ಲಿನ ಅವರ ಅತಿ ಅದ್ಬುತ ಸಿನಿಮಾಗಳು ನಮ್ಮೆಲ್ಲರ ನೆನಪಿಗೆ ಬಂದುಬಿಡುತ್ತದೆ. ಎಂತಹ ಪಾತ್ರ ನೀಡಿದರು ಪಾತ್ರಕ್ಕೆ ಅದರೊಳಗೆ ಪರಕಾಯ ಪ್ರವೇಶ ಮಾಡಿ ಅಚ್ಚುಕಟ್ಟಾಗಿ ಜೀವ ತುಂಬುತ್ತಿದ್ದಂತಹ ಆರತಿಯವರು ಅಲ್ಪಾವಧಿಯಲ್ಲಿಯೇ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಂತಹ ನಟಿ.

ಗೆಜ್ಜೆಪೂಜೆ ಸಿನಿಮಾದ ಮೂಲಕ ನಾಯಕ ನಟನ ತಂಗಿಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಮಾ ರಂಗವನ್ನು ಪ್ರವೇಶ ಮಾಡಿದ ಆರತಿ ಮುಂದೆ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಅದರಲ್ಲೂ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾಗಳಲ್ಲಿ (Kannada Movies) ಹೆಚ್ಚು ಹೆಚ್ಚು ಅಭಿನಯಿಸುತ್ತ 1970 ಮತ್ತು 1980ರ ದಶಕದಲ್ಲಿ ಜನಪ್ರಿಯತೆ ಪಡೆದುಕೊಂಡವರು.

Kannada Actress Aarathi Remuneration on that Days

ನೆನಪಿದ್ದಾರಾ ನಟಿ ಭಾನುಪ್ರಿಯ? ಗಂಡನನ್ನು ಕಳೆದುಕೊಂಡ ಮೇಲೆ ಪಾಪ ಇವರ ಪರಿಸ್ಥಿತಿ ಏನಾಗಿದೆ ನೋಡಿ!

ಹೀಗೆ ರಂಗನಾಯಕಿ, ಉಪಾಸನೆ, ರಾಜ ನನ್ನ ರಾಜ, ಸಿಪಾಯಿ ರಾಮು, ನಾಗರಹಾವು, ಬಂಗಾರದ ಪಂಜರ, ಪ್ರೇಮದ ಕಾಣಿಕೆ, ಎಡಕಲ್ಲು ಗುಡ್ಡದಮೇಲೆ,‌ ಸತಿ ಸಕ್ಕು ಬಾಯಿ, ಮುಳ್ಳಿನ ಗುಲಾಬಿ, ಶುಭ ಮಂಗಳ, ವಸಂತ ಲಕ್ಷ್ಮಿ, ಬಿಳಿ ಹೆಂಡತಿ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ, ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಮಹಾತ್ಮೆ, ಭಕ್ತ ಸಿರಿಯಾಳ, ಹಾವು ಏಣಿ ಆಟ, ತಿರುಗುಬಾಣ, ಗಂಧರ್ವಗಿರಿ, ಬಂಗಾರದ ಜಿಂಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿಅಭಿನಯಿಸಿ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ತಮ್ಮದೇ ಆದ ವಿಶಿಷ್ಟ ನಟನೆಯ ಚಾಪನ್ನು ಮೂಡಿಸಿದ್ದರು ಆರತಿಯವರು..

ಈ ನಡುವೆ ಪುಟ್ಟಣ್ಣ ಕಣಗಾಲ್ ಅವರನ್ನು ಮದುವೆಯಾಗಿದ್ದರು ಎಂಬ ಗಾಸಿಪ್ ಸಿನಿರಂಗದಲ್ಲಿ ಹೊಗೆ ಆಡುತ್ತಲೇ ಇತ್ತು. ಹೀಗಿರುವಾಗ 1982 ರಲ್ಲಿ ಚಿತ್ರರಂಗವನ್ನು ತೊರೆದು ಅಮೆರಿಕದಲ್ಲಿ ನೆಲೆಸಿದ ಆರತಿ 2005ರಲ್ಲಿ ಮಿಠಾಯಿ ಮನೆ ಎಂಬ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡುತ್ತಾರೆ.

3 ಮಕ್ಕಳ ತಂದೆಯನ್ನು 2ನೇ ಮದುವೆಯಾದ ನಟಿ ಜಯಪ್ರದಾ ಕೊನೆಗೆ ಒಂಟಿಯಾಗಿ ಜೀವನ ನಡೆಸುತ್ತಿರುವುದು ಯಾಕೆ ಗೊತ್ತಾ?

ಇನ್ನು ಆರತಿ ಪಡೆಯುತ್ತಿದ್ದ ಪೇಮೆಂಟ್ ಕುರಿತು ಮಾತನಾಡಿದ ಹಿರಿಯ ನಿರ್ದೇಶಕ ಭಾರ್ಗವವರು “ಚಂದ್ರಶೇಖರ್ ಶರ್ಮಾ ಡೈರೆಕ್ಷನ್ ಮಾಡಿದ ಆರತಿ ಮತ್ತು ಪ್ರಭಾಕರ್ ಅಭಿನಯಿಸಿದ ಮಾತೃಭಾಗ್ಯ ಸಿನಿಮಾ 25 ವಾರಗಳ ಕಾಲ ಸೂಪರ್ ಡೂಪರ್ ಹಿಟ್ ಆಗುತ್ತದೆ. ಹೀಗೆ ಮೊದಲ ಬಾರಿಗೆ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಂಡರು. ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ನಂತರ ನಾನು ಇವರಿಬ್ಬರನ್ನು ಹಾಕಿಕೊಂಡು ಸಿನಿಮಾ ಮಾಡಬೇಕೆಂದು ನಿರ್ಧರಿಸಿದೆ.

Kannada Actress Aarathiಆಗ ನಾನೆಲ್ಲೋ ಆರತಿಯವರು ಕಡಿಮೆ ಸಂಭಾವನೆ ಪಡೆಯುತ್ತಾರೆ ಎಂದುಕೊಂಡಿದ್ದೆ, 35 ರಿಂದ 40,000 ಎಂದು ಅವರ ಹೆಸರಿನಲ್ಲಿ ಸಂಭಾವನೆಯನ್ನು ಫಿಕ್ಸ್ ಮಾಡಿ ಬುಕ್ ನಲ್ಲಿ ಬರೆದುಕೊಂಡು ಬಿಟ್ಟಿದ್ದೆ. ಹೀಗೆ ಸಿನಿಮಾ ಎರಡು ದಿನಗಳ ಶೂಟಿಂಗ್ ಆದ ಬಳಿಕ ಡೇಟ್ ಹೇಳಿ ಕಳಿಸಿದೆ ಆಗ ಆರತಿಯವರು ಭಾರ್ಗವ್ ಅವರನ್ನು ಸ್ವಲ್ಪ ಬರ ಹೇಳಿ ಎಂದರು. ನಾನು ಶೂಟಿಂಗ್ ನಲ್ಲಿ ಇದ್ದೆ, ಹೀಗಾಗಿ ಮ್ಯಾನೇಜರ್ ಬಳಿ ವಿಷಯ ಏನು ಅಂತ ಎಂದು ಕೇಳಿದಾಗ ಅವರು ರೆನ್ಯುಮರೇಷನ್ ಕುರಿತು ಮಾತನಾಡಿದರು,

ನಟ ವಿಷ್ಣುವರ್ಧನ್ ಕಿಟ್ಟು ಪುಟ್ಟು ಚಿತ್ರಕ್ಕೆ ಹೀರೋ ಆಗುವುದು ಬೇಡವೆಂದು ನಟಿ ಮಂಜುಳಾ ಹಠ ಹಿಡಿದಿದ್ದರಂತೆ! ಯಾಕೆ ಗೊತ್ತಾ?

ಎಷ್ಟೆಂದು ಕೇಳಿದ್ದಕ್ಕೆ ಒಂದು ಲಕ್ಷ ಎಂದರು. ನಾನು 40,000ಕ್ಕೆ ಫಿಕ್ಸ್ ಆಗಿದ್ದೆ ಅದೇ ನನಗೆ ಜಾಸ್ತಿಯಾಗಿದ್ದು, ಆದರೆ ಆರತಿ ಅವರು ಇದ್ದಕ್ಕಿದ್ದ ಹಾಗೆ 60 ಸಾವಿರ ರೂಪಾಯಿ ಜಾಸ್ತಿ ಮಾಡಿದ್ದು ನನಗೆ ಸ್ವಲ್ಪ ಬೇಸರವಾಯಿತು.

ನಮ್ಮ ಬಳಿ ಆಗ ಯಾವುದೇ ಸೇವಿಂಗ್ಸ್ ಇರಲಿಲ್ಲ. ಆದರೂ ಸಿನಿಮಾದ ಕುರಿತು ಪೇಪರ್ನಲ್ಲಿ ಎಲ್ಲ ಅಪ್ಡೇಟ್ಸ್ ಕೊಟ್ಟುಬಿಟ್ಟಿದ್ದೆವು. ಪ್ರಭಾಕರ್ ಮತ್ತು ಆರತಿ ಪೇರ್ ರಿಪೀಟ್ ಆಗುತ್ತದೆ ಎಂದು ಎಲ್ಲೆಡೆ ಪ್ರಚಾರ ಕೂಡ ಮಾಡಿದ್ವಿ.

ಇಂತಹ ಸಂದರ್ಭದಲ್ಲಿ ನಾನು ರಾಜನಾಥ್ ಸರ್ ಬಳಿ ಕೇಳಿಕೊಂಡ್ವಿ ಎಲ್ಲಿ ಖರ್ಚು ಕಡಿಮೆಯಾಗುತ್ತೋ ಅಲ್ಲಿ ಕಡಿಮೆ ಮಾಡೋಣ ಇಲ್ಲವಾದರೆ ಸಾಲ ಸೂಲಾ ಮಾಡಿ ಅವರಿಗೆ ಪೇಮೆಂಟ್ ಕೊಟ್ಟು ಬಿಡೋಣ ಮೊದಲು ಸಿನಿಮಾ ತಯಾರಾಗಲಿ ಎಂದೇ.

ಇನ್ಮುಂದೆ ತುಂಡು ಬಟ್ಟೆ ಧರಿಸೊಲ್ಲ ಎಂದಿದ್ದ ಯಜಮಾನ ಸಿನಿಮಾ ನಟಿ ಅರ್ಚನಾ ಚಿತ್ರರಂಗದಿಂದ ದೂರವಾದದ್ದು ಯಾಕೆ ಗೊತ್ತಾ?

ಹೀಗೆ ಈ ಎಲ್ಲಾ ಮಾತುಕಥೆ ಕುರಿತು ತಿಳಿದುಕೊಂಡ ಆರತಿಯವರು 10,000 ಹಣವನ್ನು ಕಡಿಮೆ ಮಾಡಿಕೊಂಡರು.‌ ಅನಂತರ ಶೂಟಿಂಗ್ ಇನ್ನೇನು ಮುಗಿಯುವ ಹಂತಕ್ಕೆ ಬರುತ್ತಿದ್ದಾಗ ನಮ್ಮ ಕೆಲಸವನ್ನೆಲ್ಲ ನೋಡಿ ಆರತಿ ಭಾರ್ಗವರೇ ನಿಮಗೊಂದು ಗುಡ್ ನ್ಯೂಸ್ ಎಂದರು.

ಏನು ಹೇಳಿ ಮೇಡಂ ಎಂದು ಹೇಳಿದ್ದಕ್ಕೆ 75,000 ಸಂಭಾವನೆ ಕೊಡಿ ಸಾಕು ಎಂದರಂತೆ. ನನಗಂತೂ ಆಗ ಭಾರಿ ಖುಷಿಯಾಯಿತು ಬರೋಬ್ಬರಿ 25,000 ಸಂಭಾವನೆಯನ್ನು ಕೊನೆಗೂ ಕಡಿಮೆ ಮಾಡಿಕೊಂಡರಲ್ಲ ಎಂದು ಅವರು ಹೇಳಿದ ತಕ್ಷಣ ನಾನು 75,000 ಹಣವನ್ನು ಒದಗಿಸಿ ಕೊಟ್ಟುಬಿಟ್ಟೆ” ಎಂದರು.

ಹೀಗೆ ಅವರು ಒಂದು ಸಿನಿಮಾಗೆ ಮಿನಿಮಮ್ ಒಂದು ಲಕ್ಷ ರೂಪಾಯಿ ಸಂಭಾವನೆಯನ್ನು (Actress Aarathi Remuneration) ಆಗಿನ ಕಾಲದಲ್ಲಿ ಪಡೆಯುತ್ತಿದ್ದಂತಹ ನಟಿ ಎಂಬುದು ಈ ಘಟನೆಯ ಮೂಲಕ ತಿಳಿದು ಬರುತ್ತದೆ.

Kannada Actress Aarathi Remuneration on that Days

Our Whatsapp Channel is Live Now 👇

Whatsapp Channel

Related Stories