Sandalwood News

ಇನ್ಮುಂದೆ ತುಂಡು ಬಟ್ಟೆ ಧರಿಸೊಲ್ಲ ಎಂದಿದ್ದ ಯಜಮಾನ ಸಿನಿಮಾ ನಟಿ ಅರ್ಚನಾ ಚಿತ್ರರಂಗದಿಂದ ದೂರವಾದದ್ದು ಯಾಕೆ ಗೊತ್ತಾ?

Story Highlights

ನಟಿ ಅರ್ಚನಾ ಅವರಿಗೆ ದೊಡ್ಡ ಮಟ್ಟದ ಸಕ್ಸಸ್ ನೀಡಿದಂತಹ ಚಿತ್ರವೆಂದರೆ ಅದು ವಿಷ್ಣುವರ್ಧನ್ ಅವರ ಯಜಮಾನ ಸಿನಿಮಾ. ನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದ ಅರ್ಚನಾ ಇದಕ್ಕಿಂತ ಹಾಗೆ ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಿ ಬಿಟ್ಟರು.

Ads By Google

ಒಂದಷ್ಟು ಕಲಾವಿದರು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಬಹಳ ಬೇಡಿಕೆಯನ್ನು ಗಿಟ್ಟಿಸಿಕೊಂಡಿರುವಾಗಲೆ ಇದ್ದಕ್ಕಿದ್ದ ಹಾಗೆ ಚಿತ್ರರಂಗದಿಂದ (Sandalwood) ಕಣ್ಮರೆಯಾಗಿ ಬಿಡುತ್ತಾರೆ.

ಅನಂತರ ಅವರು ಎಲ್ಲಿದ್ದಾರೆ ಹೇಗಿದ್ದಾರೆ ಎಂಬುದರ ಪರಿಚಯವು ಯಾರಿಗೂ ತಿಳಿದಿರುವುದಿಲ್ಲ. ಇಂತಹ ನಟಿಯರ ಪಟ್ಟಿಗೆ ಸೇರ್ಪಡೆಗೊಂಡಂತಹ ನಟಿಯರ ಪೈಕಿ ಅರ್ಚನಾ (Actress Archana) ಅವರು ಒಬ್ಬರು.

ಹೌದು ಗೆಳೆಯರೇ ಅರ್ಚನಾ ಅವರ ಹೆಸರು ಕೇಳುತ್ತಿದ್ದ ಹಾಗೆ ಯಜಮಾನ ಸಿನಿಮಾದ (Yajamana Kannada Movie) ಓ ಮೈನಾ ಓ ಮೈನಾ ಹಾಡು ತಟ್ ಎಂದು ನೆನಪಿಗೆ ಬಿಡುತ್ತೆ. ಹೀಗೆ ನೋಡಲು ಬಹಳಾನೇ ಸುಂದರವಾಗಿದ್ದು, ನೀಡಿದಂತಹ ಪಾತ್ರಕ್ಕೆ ಅಚ್ಚುಕಟ್ಟಾದ ಅಭಿನಯ ಮಾಡುತ್ತಾ ಬರೋಬ್ಬರಿ 20 ವರ್ಷಗಳ ಕಾಲ ತೆಲುಗು, ತಮಿಳು, ಹಿಂದಿ ಹಾಗೂ ಕನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದ ಅರ್ಚನಾ ಇದಕ್ಕಿಂತ ಹಾಗೆ ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಿ ಬಿಟ್ಟರು.

ಹಳ್ಳಿ ಮೇಷ್ಟ್ರು ಸಿನಿಮಾ ನಟಿ ಬಿಂದಿಯಾ ಚಿತ್ರರಂಗ ತೊರೆದಿದ್ದು ಯಾಕೆ? ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ?

ಹಾಗಾದ್ರೆ ಅರ್ಚನಾ ಈಗ ಎಲ್ಲಿದ್ದಾರೆ? ಹೇಗಿದ್ದಾರೆ? ಸಿನಿಮಾ ರಂಗವನ್ನು ತೊರೆಯಲು ಕಾರಣವೇನು? ಎಂಬ ಎಲ್ಲ ಸಂಕ್ಷಿಪ್ತ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

90ರ ದಶಕದಲ್ಲಿ ನಟಿ ಅರ್ಚನಾ ಅವರಿಗೆ ಶಿವರಾಜ್ ಕುಮಾರ್ (Shiva Rajkumar) ಅವರ ಆದಿತ್ಯ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗುವ ಅವಕಾಶ ಒದಗಿ ಬರುತ್ತದೆ. ಈ ಸಿನಿಮಾ ತಕ್ಕಮಟ್ಟಿಗೆ ಹಿಟ್ಟಾದರು ಕೂಡ ಅರ್ಚನಾ ಅವರಿಗೆ ಗುರುತಿಸಿಕೊಳ್ಳುವಲ್ಲಿ ಸಹಾಯಮಾಡುತ್ತದೆ.

ಬಾಲ್ಯದಲ್ಲಿ ತಂದೆಯಿಂದಲೇ ಖುಷ್ಬೂ ಮೇಲೆ ನಡೆದಿತ್ತು ಆ ಕೃತ್ಯ, ಖುಷ್ಬೂ ಅನುಭವಿಸಿದ ನೋವನ್ನು ಹೆತ್ತ ತಾಯಿಯು ಅರ್ಥಮಾಡಿಕೊಳ್ಳಲಿಲ್ವ?

ಹೀಗೆ ಈ ಸಿನಿಮಾದ ಬಳಿಕ ಅರ್ಚನಾ ಅವರಿಗೆ ಸಾಲು ಸಾಲು ಸಿನಿಮಾಗಳ ಅವಕಾಶ ಹರಸಿ ಬಂದವು. ಈ ಹೃದಯ ನಿನಗಾಗಿ, ಮೇಘ ಬಂತು ಮೇಘ, ಎ, ಮಾರಿ ಕಣ್ಣು ಹೋರಿಮ್ಯಾಗೆ ಯಂತಹ ಸಿನಿಮಾಗಳಲ್ಲಿ ನಟಿಸಿದರು.

ಇನ್ನು ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ನಟಿ ಅರ್ಚನಾ ಅವರಿಗೆ ದೊಡ್ಡ ಮಟ್ಟದ ಸಕ್ಸಸ್ ನೀಡಿದಂತಹ ಚಿತ್ರವೆಂದರೆ ಅದು ವಿಷ್ಣುವರ್ಧನ್ ಅವರ ಯಜಮಾನ ಸಿನಿಮಾ.

ಈ ಚಿತ್ರ ವರ್ಷಾನುಗಟ್ಟಲೆ ತೆರೆಯ ಮೇಲೆ ರಾರಾಜಿಸಿ ಈ ಸಿನಿಮಾದಲ್ಲಿ ಯಾವೆಲ್ಲ ಕಲಾವಿದರು ಅಭಿನಯಿಸಿದರೋ ಆ ಎಲ್ಲರಿಗೂ ದೊಡ್ಡಮಟ್ಟದ ಹೆಸರನ್ನು ತಂದು ಕೊಟ್ಟಿತು.

ಅದರಂತೆ ಅರ್ಚನಾ ಅವರು ಕೂಡ ಈ ಸಿನಿಮಾದ ಮೂಲಕ ಬಹು ಬೇಡಿಕೆಯನ್ನು ಗಿಟ್ಟಿಸಿಕೊಳ್ಳುತ್ತಾರೆ. ಇದಾದ ಬಳಿಕ ಮಾವ ಮಾವ ಮದುವೆ ಮಾಡೋ, ಯಾರಿಗೆ ಬೇಡ ದುಡ್ಡು ಹಾಗೂ ನೀಲಾಂಬರಿ ಎಂಬ ಸಿನಿಮಾದಲ್ಲಿ ಅಭಿನಯಿಸಿದರು.

ಇನ್ನು ಕೊನೆಯದಾಗಿ 2016ರಲ್ಲಿ ನಟ ಅಭಿಜಿತ್ ಅವರೊಂದಿಗೆ ಸಿಬಿಐ ಸತ್ಯ ಎಂಬ ಸಿನಿಮಾದಲ್ಲಿ ಕೊನೆಯದಾಗಿ ಅಭಿನಯಿಸಿದರು. ಆನಂತರ ಯಾವ ಸಿನಿಮಾದಲ್ಲಿಯೂ ಅರ್ಚನಾ ನಟಿಸಲಿಲ್ಲ.

ವಿಷ್ಣುವರ್ಧನ್ ಅವರ ಚಿತ್ರಕ್ಕೆ ಆಯ್ಕೆಯಾಗಿದ್ದ ನಟಿ ಆರತಿ ಅವಕಾಶವನ್ನು ಕಸಿದುಕೊಂಡ್ರಾ ನಟಿ ಸುಹಾಸಿನಿ? ಅಷ್ಟಕ್ಕೂ ಸಿನಿಮಾ ಯಾವುದು?

ಇನ್ನು ಇವರು ಸಿನಿಮಾ ಇಂಡಸ್ಟ್ರಿಯಿಂದ ದೂರವಾದ ಬಳಿಕ ಅದರ ಕಾರಣ ಹುಡುಕುತ್ತಾ ಹೋದವರಿಗೆ ತಿಳಿದಿದ್ದು ಅರ್ಚನಾ ತುಂಡು ಬಟ್ಟೆ ಧರಿಸುವುದಿಲ್ಲ ಎಂಬ ಶರತ್ತನ್ನು ಹಾಕಿದ್ದರಂತೆ…

ಹೌದು ಗೆಳೆಯರೇ, ಅರ್ಚನಾ ಅವರು ಯಾವುದೇ ಕಾರಣಕ್ಕೂ ಅತಿ ಹೆಚ್ಚಿನ ಗ್ಲಾಮರಸ್ ಪಾತ್ರಗಳಲ್ಲಿ ನಟಿಸುವುದಿಲ್ಲ ತುಂಡು ಬಟ್ಟೆ ಹಾಕೋದಿಲ್ಲ ಎಂಬ ಶರತ್ತನ್ನು ತಮಗೆ ತಾವೇ ಹಾಕಿಕೊಂಡಿರುತ್ತಾರೆ. ಈ ಕಾರಣದಿಂದ ಅವರ ಎಲ್ಲಾ ಸಿನಿಮಾಗಳಲ್ಲೂ ಸಾಕಷ್ಟು ಹೋಮ್ಲಿ ಪಾತ್ರಗಳಲ್ಲಿ ಹೋಮ್ಲಿ ಉಡುಗೆಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದು ಅವರ ಸಿನಿ ಬದುಕಿಗೆ ಮುಳುವಾಯಿತು ಎಂದರೆ ತಪ್ಪಾಗಲಾರದು.

ಚಿತ್ರರಂಗ ಆಗಷ್ಟೇ ಮಡಿಯವಂತಿಕೆಯಿಂದ ಹೊರ ಬರುತ್ತಿದ್ದಂತಹ ಕಾಲದಲ್ಲಿ ಅರ್ಚನಾ ಅವರು ತಮ್ಮ ದೇಹದ ತೋರ್ಪಡಿಕೆಗೆ ಇಷ್ಟಪಡದ ಕಾರಣ ಇವರಿಗೆ ಪ್ರಮುಖ ನಾಯಕಿಯ ಪಾತ್ರಗಳು ಕೈತಪ್ಪುತ್ತ ಹೋಯಿತು.

ಎರಡನೇ ಹೀರೋಯಿನ್ ಆಗಿ ಪೋಷಕ ನಟಿಯಾಗಿ ಅಭಿನಯಿಸುವ ಅವಕಾಶಗಳು ಬರಲಾರಂಬಿಸಿದವು. ಅಲ್ಲದೆ ಸಿನಿಮಾದಲ್ಲಿ ನಾಯಕ ನಟಿಯಾಗುವ ಪಾತ್ರಗಳು ಬಂದರೆ ಅದರಲ್ಲಿ ಹೆಚ್ಚು ಗ್ಲಾಮರಸ್ ಸೀನ್ಗಳು ಇರುತ್ತಿದ್ದವು.

ನೂರಾರು ಸಿನಿಮಾಗಳ ಸರದಾರ ವಜ್ರಮುನಿ ಒಂದು ಸಿನಿಮಾದಲ್ಲಿ ನಟಿಸಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

ಅಲ್ಲದೆ ಗ್ಲಾಮರಸ್ ಉಡುಗೆಗಳನ್ನು ತೊಡಬೇಕಾದ ಪ್ರಸಂಗ ಎದುರಾಗುತ್ತಿತ್ತು. ಈ ಕಾರಣದಿಂದ ಅವರು ಒಂದೊಂದೇ ಸಿನಿಮಾಗಳನ್ನು ರಿಜೆಕ್ಟ್ ಮಾಡುತ್ತಾ ಅಲ್ಲೊಂದು ಇಲ್ಲೊಂದು ಸಭ್ಯ ಸಿನಿಮಾಗಳನ್ನು ಅರ್ಚನಾ ಒಪ್ಪಿಕೊಳ್ಳುತ್ತಿರುತ್ತಾರೆ.

ಅಲ್ಲದೇ ಕೆಲ ಸಂದರ್ಶನಗಳಲ್ಲಿ ನಾನು ತುಂಡು ಉಡುಗೆ ಧರಿಸುವುದಿಲ್ಲ ಇಂತಹ ಸೀನ್ಗಳು ಗ್ಲಾಮರಸ್ ಪಾತ್ರಗಳೇನಾದರೂ ಇದ್ದರೆ ಆ ಸಿನಿಮಾಗೆ ನನ್ನನ್ನು ಆಯ್ಕೆ ಮಾಡಿಕೊಳ್ಳಬೇಡಿ ಎಂದು ಬಿಟ್ಟಿದ್ದರಂತೆ.

ಇದರಿಂದ ಅರ್ಚನಾ ಅವರಿಗೆ ಅವಕಾಶಗಳು ಕಡಿಮೆಯಾಗುತ್ತದೆ. ಇವರೇನಾದರೂ ಗ್ಲಾಮರಸ್ ಆಗಿ ಅಭಿನಯಿಸಲು ಒಪ್ಪಿದರೆ ಇನ್ನೂ ಹತ್ತು-ಹದಿನೈದು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುತ್ತಿದ್ದರೋ ಏನೋ.

Kannada Yajamana Movie Fame Actress Archana Unknown Facts

*********************

second hand car buying tips

ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವ ಏನನ್ನು ಪರಿಶೀಲಿಸಬೇಕು?

ಸೆಕೆಂಡ್ ಹ್ಯಾಂಡ್ ಕಾರನ್ನು (second hand car) ಖರೀದಿಸುವ ಮೊದಲು ಪರಿಶೀಲಿಸಬೇಕಾದ ವಿಷಯಗಳು:

1) ಕಾರಿನ ಸ್ಥಿತಿಯನ್ನು ಪರಿಶೀಲಿಸಿ
2) ನಿರ್ವಹಣೆ ದಾಖಲೆಗಳು
3) ನೋಂದಣಿ ಪ್ರಮಾಣಪತ್ರವನ್ನು ಪರಿಶೀಲಿಸಿ
4) ಕಾರು ವಿಮೆ
5) ನೋ ಕ್ಲೈಮ್ ಬೋನಸ್ ವರ್ಗಾವಣೆ

ಹೊಸ ಕಾರನ್ನು (New Car) ಖರೀದಿಸುವುದಕ್ಕೆ ಹೋಲಿಸಿದರೆ ಸೆಕೆಂಡ್ ಹ್ಯಾಂಡ್ ಕಾರನ್ನು (Used Cars) ಖರೀದಿಸುವುದು ಉತ್ತಮ ಹೂಡಿಕೆಯ ಆಯ್ಕೆಯಾಗಿದೆ, ಆದರೆ ಇದರಲ್ಲಿ ಅಪಾಯಗಳಿವೆ. ನೀವು ಬಳಸಿದ ಕಾರಿಗೆ ಮಾರುಕಟ್ಟೆಯಲ್ಲಿರುವಾಗ, ಟೆಸ್ಟ್ ಡ್ರೈವ್ (Test Drive) ತೆಗೆದುಕೊಳ್ಳದಿರುವುದು ಅಥವಾ ಬೆಲೆಯ ಆಧಾರದ ಮೇಲೆ ಖರೀದಿಸುವುದು ಮುಂತಾದ ವಿಷಯಗಳನ್ನು ತಪ್ಪಿಸುವುದು ಮುಖ್ಯ.

Ads By Google
Share
Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Published by
Bengaluru, Karnataka, India
Edited By: Satish Raj Goravigere