ನೂರಾರು ಸಿನಿಮಾಗಳ ಸರದಾರ ವಜ್ರಮುನಿ ಒಂದು ಸಿನಿಮಾದಲ್ಲಿ ನಟಿಸಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?
Actor Vajramuni : ಖಳ ನಟನಾಗಿಯು ಯಾವ ಸ್ಟಾರ್ ನಾಯಕನಿಗೆ ಕಡಿಮೆ ಇಲ್ಲದಂತಹ ಅಭಿನಯ ಹಾಗೂ ಬೇಡಿಕೆಯನ್ನು ಹೊಂದಿದ್ದ ನಟ ವಜ್ರಮುನಿ ಅವರು ಒಂದು ಸಿನಿಮಾದಲ್ಲಿ ನಟಿಸಲು ಪಡೆಯುತ್ತಿದ್ದ ಸಂಭಾವನೆ ಎಷ್ಟು?
Actor Vajramuni : ಸ್ನೇಹಿತರೆ, ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ನಟ ರಾಕ್ಷಸ, ನಟ ಭಯಂಕರ ಎಂಬೆಲ್ಲ ಬಿರುದನ್ನು ಗಳಿಸುವ ಮೂಲಕ ತಮ್ಮ ಅದ್ಭುತ ಅಭಿನಯದ ಚಾಪಿನಿಂದಲೇ ಅದೆಷ್ಟೋ ಜನರ ಮನೆ ಗೆದ್ದಿದಂತಹ ದಿವಂಗತ ವಜ್ರಮುನಿ (Actor Vajramuni) ಅವರ ಹೆಸರು ಕೇಳಿದೊಡನೆ ಎಲ್ಲರಲ್ಲಿಯೂ ಒಂದು ವಿಶಿಷ್ಟವಾದ ಎನರ್ಜಿ ಉದ್ಭವವಾಗುತ್ತದೆ. ಹಾಗೆಯೇ ವಜ್ರಮುನಿಯವರ ವ್ಯಕ್ತಿತ್ವ ಕೂಡ ಅಷ್ಟೇ ವಿಶಿಷ್ಟವಾಗಿತ್ತು.
ವಜ್ರದಂತೆ ಗಟ್ಟಿಯಾದಂತಹ ವ್ಯಕ್ತಿತ್ವ ಜೊತೆಗೆ ಋಷಿಮುನಿಗಳಷ್ಟೇ ಒಂದೇ ಏಕಾಗ್ರತೆಯಿಂದ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುವಂತಹ ಛಲದಲ್ಲಿದಂತಹ ವ್ಯಕ್ತಿ. ಇಂತಹ ಅದ್ಭುತ ನಟ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದರು ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುತ್ತಿತ್ತು..
ಹೀಗೆ ಖಳ ನಟನಾಗಿಯು ಯಾವ ಸ್ಟಾರ್ ನಾಯಕನಿಗೆ ಕಡಿಮೆ ಇಲ್ಲದಂತಹ ಅಭಿನಯ ಹಾಗೂ ಬೇಡಿಕೆಯನ್ನು ಹೊಂದಿದ್ದ ವಜ್ರಮುನಿ ಅವರು ಒಂದು ಸಿನಿಮಾದಲ್ಲಿ ನಟಿಸಲು ಪಡೆಯುತ್ತಿದ್ದ ಸಂಭಾವನೆ ಎಷ್ಟು?
ಇವರ ಒಟ್ಟು ಆಸ್ತಿ ಎಷ್ಟಿದೆ ಎಂಬ ಎಲ್ಲ ಸಂಕ್ಷಿಪ್ತ ಮಾಹಿತಿಯನ್ನು ನಾವು ಇವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ವಜ್ರಮುನಿಯವರ ನಿಜವಾದ ಹೆಸರು ಸದಾನಂದ ಸಾಗರ್. ವಜ್ರಮುನಿ ಅವರು ತಮ್ಮ ಹೆಸರಿನಂತೆಯೇ ಸದಾಕಾಲ ಆನಂದದ ಸಾಗರದಲ್ಲಿ ಇರುತ್ತಿದ್ದಂತಹ ವ್ಯಕ್ತಿ.
ಇವರ ತಂದೆ ರುದ್ರಪ್ಪನವರು ಹಾಗೂ ಇವರ ತಮ್ಮ ದಯಾನಂದ ಸಾಗರ್. ಬೆಂಗಳೂರಿನಲ್ಲಿ ದಯಾನಂದ ಸಾಗರ್ ಅವರ ಹೆಸರನ್ನು ಕೇಳದೆ ಇರುವವರು ತುಂಬಾ ಅಪರೂಪ ಏಕೆಂದರೆ ದಯಾನಂದ ಸಾಗರ್ ಎಂಬ ವಿದ್ಯಾಸಂಸ್ಥೆ ಪ್ರಚೋದನೆಯನ್ನು ಪಡೆದುಕೊಂಡಿದೆ.
ಇನ್ನು ಸಿನಿಮಾ ಗಳಲ್ಲಿ ವಜ್ರಮುನಿ ಅವರು ಎಷ್ಟು ಕೋಪಿಷ್ಟ ದುಷ್ಟನ ಪಾತ್ರದಲ್ಲಿ ನಟಿಸುತ್ತಿದ್ದರೋ, ನಿಜ ಜೀವನದಲ್ಲಿ ಅದಕ್ಕೆ ತದ್ವಿರುದ್ಧವಾಗಿದಂತಹ ವ್ಯಕ್ತಿ.
ಹೌದು ಗೆಳೆಯರೇ ವಜ್ರಮುನಿ ಅವರಷ್ಟು ಕರುಣಾ, ಶಾಂತ ಸ್ವಭಾವಿಯನ್ನು ಮತ್ಯಾವ ನಟರಲ್ಲಿಯೂ ಕಾಣಲು ಸಾಧ್ಯವಿರುತ್ತಿರಲಿಲ್ಲ. ಹೀಗೆ ಒಂದು ದಿನ ವಜ್ರಮುನಿಯವರ ತನ್ನ ಸ್ನೇಹಿತರೊಂದಿಗೆ ಸೇರಿ ರಸ್ತೆಯಲ್ಲಿ ನಾಟಕಗಳನ್ನು ಮಾಡುತ್ತಿರುತ್ತಾರೆ. ಒಮ್ಮೆ ಇವರ ನಾಟಕವನ್ನು ನೋಡಲು ಗುಬ್ಬಿವೀರಣ್ಣ ಅವರೇ ಬಂದಿರುತ್ತಾರೆ. ಆ ದಿನ ಶಕುನಿ ಪಾತ್ರದಲ್ಲಿ ವಜ್ರಮುನಿಯವರನ್ನು ನೋಡಿ ಗುಬ್ಬಿವೀರಣ್ಣ ಅವರು ವಜ್ರಮುನಿಯವರನ್ನು ತಬ್ಬಿಕೊಂಡು ಅದೆಂತಹ ಅಭಿನಯ ಮಾಡ್ತಿಯಾ ಭಲೇಬಲೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಅಲ್ಲಿಂದ ಇನ್ನೂ ಅದ್ಭುತವಾಗಿ ಅಭಿನಯಿಸಬೇಕು ಎಂಬ ಛಲತೊಟ್ಟ ವಜ್ರಮುನಿಯವರಿಗೆ ಪ್ರಚಂಡ ರಾವಣನ ಪಾತ್ರ ಮಾಡುವಂತಹ ಅವಕಾಶ ಸಿಗುತ್ತದೆ. ಇದಕ್ಕೆ ಧೈರ್ಯದಿಂದ ಒಪ್ಪಿಕೊಂಡಂತಹ ವಜ್ರಮುನಿ ಪಾತ್ರದಲ್ಲಿ ಅಭಿನಯಿಸುವ ಮೊದಲು ರಾವಣ ಹೇಗಿದ್ದ? ಆತನ ಜೀವನ ಶೈಲಿ? ವರ್ಚಸ್ಸು, ಮಾತುಗಾರಿಕೆ ಎಲ್ಲ ಹೇಗಿತ್ತು? ಎಂಬುದನ್ನು ಪುಸ್ತಕಗಳನ್ನು ಓದುವ ಮೂಲಕ ತಿಳಿದುಕೊಂಡು ಆನಂತರ ನಾಟಕದಲ್ಲಿ ಅಭಿನಯಿಸಿದರು.
ಈ ಹಿಂದೆ ಶಕುನೀಯ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ವಜ್ರಮುನಿ ಅವರು ರಾವಣನ ಪಾತ್ರದ ಮೂಲಕ ಗೆದ್ದರು. ಹೀಗೆ ರಾವಣ, ಶಕುನಿ ಎಂಬ ಪಾತ್ರಗಳಿಂದ ಗುರುತಿಸಿಕೊಂಡಂತಹ ವಜ್ರಮುನಿಯವರು ಕನ್ನಡ ಸಿನಿಮಾದ (Kannada Cinema) ಕಡಕ್ ಖಳನಟನಾಗಿ ಹೊರಹೊಮ್ಮುತ್ತಾರೆ.
ಹೌದು ಗೆಳೆಯರೇ 1967 ರ ಪುಟ್ಟಣ್ಣ ಅವರ ‘ಸಾವಿರ ಮೆಟ್ಟಿಲು’ ಎಂಬ ಸಿನಿಮಾದ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ವಜ್ರಮುನಿ ಅವರು ಅನಂತರ ‘ಮಲ್ಲಮ್ಮನ ಪವಾಡ’ ಎಂಬ ಸಿನಿಮಾದ ಮೂಲಕ ಗುರುತಿಸಿಕೊಂಡರು.
ಯಶಸ್ಸಿನ ಮೆಟ್ಟಿಲನ್ನು ಏರುತ್ತಿರುವಾಗಲೇ ಕೇವಲ 19ನೇ ವಯಸ್ಸಿಗೆ ನಟಿ ನಿವೇದಿತಾ ಜೈನ್ ದುರಂತ ಅಂತ್ಯ ಕಂಡದ್ದು ಹೇಗೆ?
ಹೀಗೆ ನಾಗರಹಾವು, ಮಯೂರ, ಬಹುದೂರ್ ಗಂಡು, ಭರ್ಜರಿ ಬೇಟೆ, ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲ್ ಸೇರಿದಂತೆ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಬೇಡಿಕೆ ಹೊಂದಿದ್ದಂತಹ ವಜ್ರಮುನಿ ಅವರು ಒಂದು ಸಿನಿಮಾದಲ್ಲಿ ನಟಿಸಲು ಆಗಿನ ಕಾಲಕ್ಕೆ ಬರೋಬ್ಬರಿ ಹತ್ತು ಸಾವಿರ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದರಂತೆ. ಇದು ಈಗಿನ 10 ರಿಂದ 15 ಲಕ್ಷ ರೂಪಾಯಿಗೆ ಸಮಾನ.
ಇನ್ನು ವಜ್ರಮುನಿಯವರ ಆಸ್ತಿ ವಿಚಾರದ ಕುರಿತು ನೋಡುವುದಾದರೆ ಬೆಂಗಳೂರು ಗ್ರಾಮಾಂತರದಲ್ಲಿ 40 ಎಕರೆ ಜಮೀನು ಇದ್ದು, ಅದರಲ್ಲಿ 20 ಎಕರೆ ಆಸ್ತಿಯನ್ನು ಬಿಡಿಎಗೆ ಕೊಟ್ಟಿದ್ದಾರೆ.
ನಟಿ ಭವ್ಯ ಅವಕಾಶ ಸಿಕ್ಕರೂ ಅಣ್ಣವ್ರೊಂದಿಗೆ ನಟಿಸದಿರಲು ಕಾರಣವೇನು ಗೊತ್ತೆ? ಈ ಅಸಲಿ ಸತ್ಯ ಎಷ್ಟೋ ಜನಕ್ಕೆ ಗೊತ್ತಿಲ್ಲ!
ಈ ಜಮೀನಿನಲ್ಲಿರುವ ಕೆಲಸಗಾರರು ರಾಗಿ ಬೆಳೆಯುತ್ತಾರೆ, ಹಸು ಸಾಕಾಣಿಕೆ ಮಾಡುತ್ತಿದ್ದಾರೆ, ಇನ್ನು ಸ್ವಲ್ಪ ಜಮೀನಿನಲ್ಲಿ ಗದ್ದೆ ಮಾಡುತ್ತಾರೆ. ಎಲ್ಲಾ ಕೆಲಸವನ್ನು ಸ್ವತಃ ವಜ್ರಮುನಿ ಅವರ ಇಬ್ಬರು ಮಕ್ಕಳು ನೋಡಿಕೊಳ್ಳುತ್ತಿದ್ದು, ಹತ್ತಾರು ಹಸು ಸಾಗಾಣಿಕೆಯಿಂದ ಬರುವಂತಹ ಸಗಣಿಯನ್ನು ಬಳಸಿ ಗೊಬ್ಬರವನ್ನು ತಯಾರಿಸುತ್ತಾರೆ.
ಅಲ್ಲದೆ ಗೋಬರ್ ಗ್ಯಾಸ್ ಪ್ಲಾಂಟ್ಟನ್ನು ಕೂಡ ಹೊಂದಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ಸ್ವತಃ ವಜ್ರಮುನಿಯವರ ಪತ್ನಿ ಒಂದು ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
Unknow Facts and Remuneration of Kannada Actor Vajramuni At that time
********************************************
5 tips for effective credit card use
ಸಮಯಕ್ಕೆ ಪಾವತಿಸಿ. ನಿಮ್ಮ ಕ್ರೆಡಿಟ್ ಕಾರ್ಡ್ (Credit Card) ಖಾತೆಯನ್ನು ಸಮಯಕ್ಕೆ ಪಾವತಿಸುವುದು ತಡವಾದ ಶುಲ್ಕಗಳು ಮತ್ತು ನಿಮ್ಮ ಖಾತೆಗೆ ಅನ್ವಯಿಸಲಾದ ಪೆನಾಲ್ಟಿ ಬಡ್ಡಿದರಗಳನ್ನು (Interest Rates) ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಕ್ರೆಡಿಟ್ ದಾಖಲೆಯನ್ನು (Credit History) ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.
ನಿಮ್ಮ ಕ್ರೆಡಿಟ್ ಮಿತಿಗಿಂತ (Credit Limit) ಕೆಳಗೆ ಇರಿ.
ಅನಗತ್ಯ ಶುಲ್ಕವನ್ನು ತಪ್ಪಿಸಿ.
ಕನಿಷ್ಠ ಪಾವತಿಗಿಂತ ಹೆಚ್ಚು ಪಾವತಿಸಿ.
ನಿಮ್ಮ ಖಾತೆಯ ನಿಯಮಗಳಲ್ಲಿನ ಬದಲಾವಣೆಗಳಿಗಾಗಿ ವೀಕ್ಷಿಸಿ.