Actress Bhavya : ಸ್ನೇಹಿತರೆ ನಟಿ ಭವ್ಯ 8೦ರ ದಶಕದಲ್ಲಿ ತಮ್ಮ ಅದ್ಭುತಪೂರ್ವ ಅಭಿನಯದ ಮೂಲಕ ತಮ್ಮದೇ ಆದ ವಿಶೇಷ ಛಾಪನ್ನು ಸಂಪಾದಿಸಿಕೊಂಡಂತಹ ನಟಿ ಎಂದರೆ ತಪ್ಪಾಗಲಾರದು.
ಹೌದು ಗೆಳೆಯರೇ ಎಂತಹ ಪಾತ್ರ ನೀಡಿದರು ಅದರೊಳಗೆ ಗಮನಾರ್ಹವಾಗಿ ಅಭಿನಯಿಸುತ್ತ ತಮ್ಮ ಮುಗ್ಧ ನಗು ಹಾಗು ಸೌಂದರ್ಯದ ಮೂಲಕವೇ ಅದೆಷ್ಟೋ ಪಡ್ಡೆ ಹುಡುಗರ ಮನದರಸಿ ಆಗಿದ್ದ ಭವ್ಯ ಅವರು ಅಂಬರೀಶ್, ವಿಷ್ಣುವರ್ಧನ್, ಅನಂತನಾಗ್, ಶಂಕರ್ ನಾಗ್ ಅವರಂತಹ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡು ಅಲ್ಪಾವಧಿಯಲ್ಲಿಯ ಕನ್ನಡ ಸಿನಿಮಾರಂಗದಲ್ಲಿ (Kannada Film Industry) ಸ್ಟಾರ್ ಪಟ್ಟಕ್ಕೇರಿದಂತಹ ನಟಿ.
ಹೀಗಿರುವಾಗ ಎಲ್ಲಾ ದೊಡ್ಡ ದೊಡ್ಡ ದಿಗ್ಗಜ ನಟನೊಂದಿಗೆ ನಟಿಸಿರುವ ನಟಿ ಭವ್ಯ (Actress Bhavya) ಅವಕಾಶಗಳು ಒದಗಿ ಬಂದರು ಅಣ್ಣವ್ರೊಂದಿಗೆ ನಟಿಸಲು ಮನಸ್ಸು ಮಾಡಲಿಲ್ಲವಂತೆ. ಅಷ್ಟಕ್ಕೂ ಯಾವ ಕಾರಣದಿಂದ ಭವ್ಯ ಅಣ್ಣವ್ರ (Dr Rajkumar) ಜೊತೆಗೆ ತೆರೆ ಹಂಚಿಕೊಳ್ಳಲಿಲ್ಲ?
ಇವರಿಬ್ಬರ ನಡುವೆ ಏನಾದರೂ ವೈಯಕ್ತಿಕ ಮನಸ್ತಾಪವಿತ್ತ ಎಂಬ ಎಲ್ಲಾ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಈ ಒಂದು ಕುತೂಹಲಕಾರಿ ಸಂಗತಿಯನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಸಾಮಾನ್ಯವಾಗಿ ನಟಿ ಭವ್ಯ ಅವರ ಹೆಸರು ಕೇಳುತ್ತಿದ್ದ ಹಾಗೆ ಜನನಾಯಕ, ಭೂಮಿ ತಾಯಾಣೆ, ಹೃದಯ ಗೀತೆ, ಪ್ರೇಮ ಜ್ಯೋತಿ, ಹೊಸ ಬಾಳುಗಳಂತಹ ಸಾಲು ಸಾಲು ಸಿನಿಮಾಗಳ ಪಟ್ಟಿ ನಮ್ಮೆಲ್ಲರ ನೆನಪಿಗೆ ಬಂದುಬಿಡುತ್ತದೆ, ಅಭಿನಯದ ಮೂಲಕವೇ ಆಗಿನ ಸಿನಿಮಾ ಇಂಡಸ್ಟ್ರಿಯಲ್ಲಿ (Sandalwood Cinema) ಬೇಡಿಕೆ ಗಿಟ್ಟಿಸಿಕೊಂಡಿದ್ದಂತಹ ಭವ್ಯ ಅವರು ಡಾಕ್ಟರ್ ರಾಜಕುಮಾರ್ ಜೊತೆ ನಟಿಸಲು ಮನಸ್ಸು ಮಾಡಿದಾಗಲೆಲ್ಲ ಒಂದಲ್ಲ ಒಂದು ಅಡೆತಡೆಗಳು ಎದುರಾಗುತ್ತಿದ್ದವಂತೆ.
ಸಾಕಷ್ಟು ಮದುವೆ ಪ್ರೋಪೋಸ್ ಗಳು ಬಂದರೂ ನಟಿ ತಾರಾ ಆಯ್ಕೆ ಮಾಡಿಕೊಂಡದ್ದು ಯಾರನ್ನ? ತಾರಾ ಅವರ ಪತಿ ಹೇಗಿದ್ದಾರೆ ಗೊತ್ತಾ?
ಹೌದು ಗೆಳೆಯರೇ ಮೊದಲಿಗೆ ಡಾಕ್ಟರ್ ರಾಜಕುಮಾರ್ ಹಾಗೂ ಭವ್ಯ ಅವರ ವಯಸ್ಸಿನ ಅಂತರ ಮುಖ್ಯ ಕಾರಣವಾಯಿತು. ಡಾಕ್ಟರ್ ರಾಜಕುಮಾರ್ ಅವರಿಗೆ ಆಗ 50ರ ಹರೆಯ ಹಾಗೆ ಭವ್ಯ ಅವರಿಗೆ ಕೇವಲ 20 ವರ್ಷ ವಯಸ್ಸಾಗಿತ್ತು.
ಹೀಗೆ ಬರೋಬ್ಬರಿ 30 ವಯಸ್ಸಿನ ಅಂತರವಿರುವ ಹುಡುಗಿಯನ್ನು ಸಿನಿಮಾದಲ್ಲಿ ಹಾಕಿಕೊಂಡರೆ ಜನರು ಬೇರೆಯದ್ದೇ ರೀತಿ ಭಾವಿಸುತ್ತಾರೆ ಎಂಬುದು ಪಾರ್ವತಮ್ಮನವರ ಯೋಜನೆಯಾಗಿತ್ತು.
ಹೀಗಾಗಿ ಭವ್ಯ ಹಾಗೂ ಡಾಕ್ಟರ್ ರಾಜಕುಮಾರ್ ಅವರಿಗೆ ಸರಿಹೊಂದುವಂತಹ ಸಾಕಷ್ಟು ಪಾತ್ರಗಳು ಬಂದರೂ ಕೂಡ ವಯಸ್ಸಿನ ಅಂತರದಿಂದ ನಟಿಸಲಾಗುತ್ತಿರಲಿಲ್ಲ. ಇನ್ನು ಆಗಿನ ಕಾಲದಲ್ಲಿ ಭವ್ಯವರು ಹೆಚ್ಚಿನ ಯುವ ಮತ್ತು ಬಬ್ಲಿ ಬಬ್ಲಿ ಪಾತ್ರದಲ್ಲಿ ಅಭಿನಯಿಸಿದ ಪ್ರಖ್ಯಾತಿ ಪಡೆದುಕೊಂಡಿರುತ್ತಾರೆ. ಆದರೆ ಡಾಕ್ಟರ್ ರಾಜಕುಮಾರ್ ಅವರು ಐತಿಹಾಸಿಕ ಪ್ರಬುದ್ಧ ಮತ್ತು ಗಂಭೀರ ಪಾತ್ರಗಳ ಮೂಲಕ ಹೆಚ್ಚು ಕಾಣಿಸಿಕೊಂಡಿದ್ದರು.
ಹೀಗಾಗಿ ಇವರಿಬ್ಬರ ಸಿನಿ ಕ್ಯಾರೆಕ್ಟರ್ಗಳಿಗೂ ಹೋಲಿಕೆ ಇಲ್ಲದ ಕಾರಣ ಭವ್ಯ ಅವರು ಪ್ರಬುದ್ಧವಾದ ಪಾತ್ರಗಳಿಗೆ ಜೀವ ತುಂಬ ಬಲ್ಲರು ಎಂಬ ನಂಬಿಕೆ ನಿರ್ದೇಶಕ ನಿರ್ಮಾಪಕರಿಗಿರುತ್ತಿರಲಿಲ್ಲ.
ಇನ್ನು ಕೆಲ ಸಂದರ್ಭದಲ್ಲಿ ಇಬ್ಬರು ಆಗಿನ ಕಾಲದ ಪೀಕ್ನಲ್ಲಿದ್ದ ಕಲಾವಿದರಾದ ಕಾರಣ ಡೇಟ್ಸ್ ಸರಿ ಬರುತ್ತಿರಲಿಲ್ಲ. ಇದು ಇಬ್ಬರ ಕಾಂಬಿನೇಷನ್ ತೆರೆಯ ಮೇಲೆ ಕಾಣದಿರಲು ಕಾರಣವಾಗಿದೆ.
ಹೌದು ಗೆಳೆಯರೇ ಡಾ.ರಾಜ್ ಹಾಗೂ ಭವ್ಯ ಅವರ ಜೋಡಿಗಾಗಿಯೇ ಕಥೆ ಬರೆದಿದ್ದರೂ, ಸ್ಕ್ರಿಪ್ಟ್ ಹಾಗೂ ಕಥಹಂದರ ಎಲ್ಲವು ಓಕೆ ಆದರೂ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಸಿನಿಮಾ ತೆರೆಗೆ (Kannada Cinema) ಬರಲು ಸಾದ್ಯವಾಗುತ್ತಿರಲಿಲ್ಲವಂತೆ….
ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ಗಂಡನಿಂದಲೇ ಮೋಸ ಹೋದ ನಟಿ ಸಾಕ್ಷಿ ಶಿವಾನಂದ್ ಈಗ ಹೇಗಿದ್ದಾರೆ ಗೊತ್ತಾ?
What is the real reason Behind Kannada Actress Bhavya did not act with Dr Rajkumar
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.