ಯಶಸ್ಸಿನ ಮೆಟ್ಟಿಲನ್ನು ಏರುತ್ತಿರುವಾಗಲೇ ಕೇವಲ 19ನೇ ವಯಸ್ಸಿಗೆ ನಟಿ ನಿವೇದಿತಾ ಜೈನ್ ದುರಂತ ಅಂತ್ಯ ಕಂಡದ್ದು ಹೇಗೆ?

ರಾಜರಾಜೇಶ್ವರಿನಗರದ ಭವ್ಯ ಬಂಗಲೆ ಒಂದರಿಂದ ಈ ಸುಂದರ ನಟಿ ನಿವೇದಿತಾ ಜೈನ್ ಹಾರಿ ಕೆಳಗೆ ಬೀಳುತ್ತಾಳೆ. ತಲೆ ಹಾಗೂ ದೇಹದ ಎಲ್ಲ ಭಾಗಗಳು ಫ್ಯಾಕ್ಚರ್ಗೆ ಒಳಗಾದ ಕಾರಣವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಆಕೆಯನ್ನು ದಾಖಲು ಮಾಡಲಾಯಿತು.

ಸ್ನೇಹಿತರೆ, ನಟಿ ನಿವೇದಿತಾ ಜೈನ್ ಎಂಬ ಹೆಸರು ಕೇಳುತ್ತಿದ್ದ ಹಾಗೆ ಕನ್ನಡದ ಸಾಕಷ್ಟು ಮನಮೋಹಕ ಸಿನಿಮಾಗಳು ನಮ್ಮೆಲ್ಲರ ತಲೆಗೆ ಬಂದುಬಿಡುತ್ತದೆ. ಹೌದು ಗೆಳೆಯರೇ ‘ಶಿವಸೈನ್ಯ’ ಎಂಬ ಸಿನಿಮಾದ (Shiva Sainya Kannada Movie) ಮೂಲಕ ತಮ್ಮ 18ನೇ ವಯಸ್ಸಿಗೆ ಬಣ್ಣದ ಲೋಕವನ್ನು ಪ್ರವೇಶ ಮಾಡಿದಂತಹ ನಿವೇದಿತ ಕೇವಲ ಒಂದು ವರ್ಷಗಳಲ್ಲಿ ಅಗಾಧವಾದ ಆಫರ್ಗಳನ್ನು ಪಡೆದುಕೊಂಡರು.

ನೀ ಮೂಡಿದ ಮಲ್ಲಿಗೆ, ಬಾಳಿದ ಮನೆ, ಪ್ರೇಮ ರಾಗ, ಹಾಡು ಗೆಳತಿ, ಬಾಳಿನ ದಾರಿ, ಸೂತ್ರಧಾರದಂತಹ ಫೇಮಸ್ ಸಿನಿಮಾಗಳಲ್ಲಿ (Sandalwood) ಅಭಿನಯಿಸಿ ತಮ್ಮ ವಿಶಿಷ್ಟ ಅಭಿನಯದ ಚಾಪನ್ನು ಕನ್ನಡಿಗರಿಗೆ ಮೂಡಿಸುವಲ್ಲಿ ಯಶಸ್ವಿಯಾದಂತಹ ನಟಿ.

ಅಣ್ಣಾವ್ರ ಜೊತೆ ಆ ಸಿನಿಮಾದಲ್ಲಿ ನಟಿ ಮಾಲಾಶ್ರೀ ಅಭಿನಯಿಸಬೇಕಿತ್ತು! ಆದರೆ ಮಾಲಾಶ್ರೀ ಅವರಿಂದಲೇ ಅವಕಾಶವನ್ನು ಕಸಿದುಕೊಂಡ ಆ ನಟಿ ಯಾರು, ಸಿನಿಮಾ ಯಾವುದು?

Unknown Facts About Kannada Actress Nivedita Jain Real Life Story

ಹೀಗಿರುವಾಗ 1998 ಮೇ ತಿಂಗಳಿನಲ್ಲಿ ರಾಜರಾಜೇಶ್ವರಿನಗರದ (Rajarajeshwari Nagar) ಭವ್ಯ ಬಂಗಲೆ ಒಂದರಿಂದ ಈ ಸುಂದರ ನಟಿ ನಿವೇದಿತಾ ಜೈನ್ ಹಾರಿ ಕೆಳಗೆ ಬೀಳುತ್ತಾಳೆ. ತಲೆ ಹಾಗೂ ದೇಹದ ಎಲ್ಲ ಭಾಗಗಳು ಫ್ಯಾಕ್ಚರ್ಗೆ ಒಳಗಾದ ಕಾರಣವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ (Hospital) ಆಕೆಯನ್ನು ದಾಖಲು ಮಾಡಲಾಯಿತು.

ಅಲ್ಲಿಂದ ಮುಂದಿನ 24 ದಿನಗಳವರೆಗೆ ಕೋಮ ಸ್ಥಿತಿಯಲ್ಲಿದ್ದ ನಿವೇದಿತಾ ಜೈನ್ ಅತಿ ಚಿಕ್ಕ ವಯಸ್ಸಿಗೆ ನಮ್ಮೆಲ್ಲರಿಂದ ಅಗಲಿ ಇಹಲೋಕ ತ್ಯಜಿಸಿಬಿಟ್ಟರು.

ಹೌದು ಗೆಳೆಯರೇ 15 ವರ್ಷಕ್ಕೆ ಮಿಸ್ ಬೆಂಗಳೂರು (Miss Bangalore) ಟೈಟಲ್ ಅನ್ನು ತಮ್ಮ ಮುಡಿಗೇರಿಸಿಕೊಂಡಿದ್ದ ನಿವೇದಿತಾ 1996ರಲ್ಲಿ ಕನ್ನಡ ಸಿನಿಮಾರಂಗವನ್ನು (Kannada Film Industry) ಪ್ರವೇಶ ಮಾಡಿದರು.

ನಟಿ ಭವ್ಯ ಅವಕಾಶ ಸಿಕ್ಕರೂ ಅಣ್ಣವ್ರೊಂದಿಗೆ ನಟಿಸದಿರಲು ಕಾರಣವೇನು ಗೊತ್ತೆ? ಈ ಅಸಲಿ ಸತ್ಯ ಎಷ್ಟೋ ಜನಕ್ಕೆ ಗೊತ್ತಿಲ್ಲ!

ಹೀಗೆ ಡಾ. ರಾಜಕುಮಾರ್ ಅವರ ಬ್ಯಾನರ್ ನಾ ಅಡಿಯಲ್ಲಿ ಸಿನಿಮಾ ರಂಗ ಪ್ರವೇಶ ಮಾಡಿ ಯಶಸ್ಸನ್ನು ಗಳಿಸಿದ ಉದಾಹರಣೆ ಸಾಕಷ್ಟಿವೆ. ಅವರಲ್ಲಿ ನಿವೇದಿತ ಜೈನ್ ಕೂಡ ಒಬ್ಬರು.

Kannada Actress Nivedita Jainಹೌದು ಗೆಳೆಯರೇ ಇವರನ್ನು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ ಕೀರ್ತಿ ಡಾಕ್ಟರ್ ರಾಜ್ ಮನೆತನಕ್ಕೆ ಸಲ್ಲಲೇ ಬೇಕಾದ್ದು, ಹೀಗೆ 18ನೇ ವಯಸ್ಸಿಗೆ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಶಶಿಕುಮಾರ್, ಅಂಬರೀಷ್ ಹಾಗೂ ರಮೇಶ್ ಮುಂತಾದ ಕಲಾವಿದರೊಂದಿಗೆ ನಟಿಸಿದ ನಿವೇದಿತ ಜೈನ್ ಶೀಘ್ರವಾಗಿ ಕನ್ನಡದ (Kannada Cinema) ಬಹುಬೇಡಿಕೆಯ ನಟಿಯಾಗಿ ಬೆಳೆದು ನಿಂತರು. ಸೌಂದರ್ಯ, ಮಾಲಾಶ್ರೀರಂತಹ ದಿಗ್ಗಜ ತಾರೆಯರ ಮಧ್ಯೆ ನಿವೇದಿತಾ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು.

48 ವರ್ಷ ವಯಸ್ಸಾದರೂ ನಟಿ ನಗ್ಮಾ ಮದುವೆಯಿಂದ ದೂರ ಸರಿದಿರುವುದು ಯಾಕೆ? ಆಕೆ ಪ್ರೀತಿಸುತ್ತಿದ್ದ ಆ ಸ್ಟಾರ್ ನಟ ಯಾರು ಗೊತ್ತಾ?

ಇಂತಹ ಅದ್ಭುತ ನಟಿಯ ಸಾವು ಚಿತ್ರರಂಗವನ್ನು ನಡುಗಿಸಿತ್ತು, ಅಸಂಖ್ಯಾತ ಅಭಿಮಾನಿಗಳು ಈಕೆಯನ್ನು ನೋಡುವುದಕ್ಕೆ ಮನೆ ಮುಂದೆ ಹಾಗೂ ಮಲ್ಯ ಆಸ್ಪತ್ರೆ ಮುಂದೆ ಜಮಾಯಿಸಿದರು.

ಚಿತ್ರರಂಗದ ತಿರಸ್ಕಾರ ಅಥವಾ ಮಾಡಲಿಂಗ್ ಲೋಕದ ಸೋಲು ಇವರನ್ನು ಖಿನ್ನತೆಗೆ ದೂಡಿತಾ? ಅಥವಾ ಬೇರೆ ಯಾವುದೋ ಕಾರಣಗಳಿಂದಾಗಿ ಪ್ರಾಣ ಕಳೆದುಕೊಂಡ್ರಾ? ಗೊತ್ತಿಲ್ಲ.

ಅವತ್ತು ಕೆಳಗೆ ಬಿದ್ದಂತಹ ನಿವೇದಿತಾ ಮೇಲೇಳಲೇ ಇಲ್ಲ. ಹೀಗೆ ಕೆಲವು ವರದಿಗಳ ಪ್ರಕಾರ ನಿವೇದಿತಾ ಜೈನ್ ಮನೆಯ ಮಹಡಿಯಿಂದ ಜಾರಿ ಬಿದ್ದು ದುರಂತ ಅಂತ್ಯ ಕಂಡರು ಎಂಬ ಉಲ್ಲೇಖವಿದೆ.

ಸಾಕಷ್ಟು ಮದುವೆ ಪ್ರೋಪೋಸ್ ಗಳು ಬಂದರೂ ನಟಿ ತಾರಾ ಆಯ್ಕೆ ಮಾಡಿಕೊಂಡದ್ದು ಯಾರನ್ನ? ತಾರಾ ಅವರ ಪತಿ ಹೇಗಿದ್ದಾರೆ ಗೊತ್ತಾ?

ಹೀಗೆ ವಿಧಿಯ ಮುಂದೆ ಎಂತಹ ಸ್ಟಾರ್ ಸೆಲೆಬ್ರಿಟಿಗಳು ತಲೆಬಾಗಲೇಬೇಕು ಎಂಬುದಕ್ಕೆ ನಮ್ಮ ಕನ್ನಡ ಸಿನಿಮಾರಂಗದ (Kannada Cinema Field) ಸ್ಟಾರ್ ಸೆಲೆಬ್ರಿಟಿಗಳ ದುರಂತ ಅಂತ್ಯದ ಪಟ್ಟಿಗೆ ನಟಿ ನಿವೇದಿತ ಜೈನ್ ಕೂಡ ಸೇರ್ಪಡೆಯಾದರು.

Unknown Facts About Kannada Actress Nivedita Jain Real Life Story

Related Stories