ನೆನಪಿದ್ದಾರಾ ನಟಿ ಭಾನುಪ್ರಿಯ? ಗಂಡನನ್ನು ಕಳೆದುಕೊಂಡ ಮೇಲೆ ಪಾಪ ಇವರ ಪರಿಸ್ಥಿತಿ ಏನಾಗಿದೆ ನೋಡಿ!
ಸ್ಟಾರ್ ಕಲಾವಿದರಲ್ಲಿ ನಟಿ ಭಾನುಪ್ರಿಯ ಅವರು ಕೂಡ ಒಬ್ಬರು. ಹೌದು ಗೆಳೆಯರೇ ಬಣ್ಣದ ಬದುಕಿಗೆ ಪ್ರವೇಶ ಮಾಡಿದ ಅಲ್ಪಾವಧಿಯಲ್ಲಿ ಸ್ಟಾರ್ ಕಲಾವಿದರೊಂದಿಗೆ ತೆರೆ ಹಂಚಿಕೊಂಡು ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು ಈ ನಟಿ
ಸ್ನೇಹಿತರೆ, 80-90 ರ ದಶಕದಲ್ಲಿ ಕನ್ನಡ ಸಿನಿಮಾ ರಂಗಕ್ಕೆ (Kannada Film Industry) ಸಾಕಷ್ಟು ಅಪ್ರತಿಮ ಕಲಾವಿದರು ಎಂಟ್ರಿಕೊಟ್ಟು ಒಳ್ಳೊಳ್ಳೆ ಸಿನಿಮಾಗಳನ್ನು ಕೊಡುಗೆಯನ್ನಾಗಿ ನೀಡಿದರು.
ಅಂತಹ ಸ್ಟಾರ್ ಕಲಾವಿದರಲ್ಲಿ ನಟಿ ಭಾನುಪ್ರಿಯ (Actress Bhanupriya) ಅವರು ಕೂಡ ಒಬ್ಬರು. ಹೌದು ಗೆಳೆಯರೇ ಬಣ್ಣದ ಬದುಕಿಗೆ ಪ್ರವೇಶ ಮಾಡಿದ ಅಲ್ಪಾವಧಿಯಲ್ಲಿ ಸ್ಟಾರ್ ಕಲಾವಿದರೊಂದಿಗೆ ತೆರೆ ಹಂಚಿಕೊಂಡು ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡ ಈ ನಟಿ ಕನ್ನಡ (Kannada Cinema) ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಪಂಚ ಭಾಷೆಗಳಲ್ಲಿ ಅಭಿನಯಿಸುತ್ತಾ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.
3 ಮಕ್ಕಳ ತಂದೆಯನ್ನು 2ನೇ ಮದುವೆಯಾದ ನಟಿ ಜಯಪ್ರದಾ ಕೊನೆಗೆ ಒಂಟಿಯಾಗಿ ಜೀವನ ನಡೆಸುತ್ತಿರುವುದು ಯಾಕೆ ಗೊತ್ತಾ?
ಹೀಗೆ ಅದೊಂದು ಕಾಲದಲ್ಲಿ ಸಿನಿ ರಸಿಕರ ಮನದರಸಿಯಾಗಿದ್ದ ಭಾನುಪ್ರಿಯ ಸದ್ಯ ಗಂಡನ ಅಗಲಿಕೆಯಿಂದಾಗಿ ಖಿನ್ನತೆಗೆ ಒಳಗಾಗಿದ್ದು, ಒಂದೇ ಒಂದು ಡೈಲಾಗ್ ಅನ್ನು ಹೇಳಲಾಗದಂತಹ ಪರಿಸ್ಥಿತಿಯಲ್ಲಿ ಇದ್ದಾರೆ.
ಅಷ್ಟಕ್ಕೂ ಭಾನುಪ್ರಿಯ (Actress Bhanupriya Real Life Story) ಅವರಿಗೆ ಏನಾಗಿದೆ? ಅದೆಂತಹ ಕಷ್ಟವನ್ನು ಈ ನಟಿ ಅನುಭವಿಸುತ್ತಿದ್ದಾರೆ? ಎಂಬ ಎಲ್ಲ ಮಾಹಿತಿಯನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೆ ವಿಷ್ಣುವರ್ಧನ್ ಅವರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಪರ್ಫೆಕ್ಟ್ ಪೇರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದ ಭಾನುಪ್ರಿಯ ಅವರು ಸಿಂಹಾದ್ರಿಯ ಸಿಂಹ, ಕದಂಬ, ದೇವರ ಮಗ, ಮೇಷ್ಟ್ರು, ಛತ್ರಪತಿ ಸೇರಿದಂತೆ 155 ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸಿನಿ ರಸಿಕರನ್ನು ತಮ್ಮ ಅಪ್ರತಿಮಾ ಅಭಿನಯದ ಮೂಲಕವೇ ರಂಜಿಸಿದ್ದಾರೆ.
ಇನ್ನು ಅಲ್ಪಾವಧಿಯಲ್ಲಿಯೇ ಸ್ಟಾರ್ ನಟಿಯ ಪಟ್ಟಕ್ಕೇರಿದ ಭಾನುಪ್ರಿಯ ಅವರು ಯಾವುದೇ ಗಾಡ್ ಫಾದರ್ ಇಲ್ಲದೆ.. ಎಲ್ಲ ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಅವಕಾಶಗಳ ಸುರಿಮಳೆಯನ್ನು ಗಿಟ್ಟಿಸಿಕೊಂಡಂತಹ ನಟಿ.
ಇನ್ಮುಂದೆ ತುಂಡು ಬಟ್ಟೆ ಧರಿಸೊಲ್ಲ ಎಂದಿದ್ದ ಯಜಮಾನ ಸಿನಿಮಾ ನಟಿ ಅರ್ಚನಾ ಚಿತ್ರರಂಗದಿಂದ ದೂರವಾದದ್ದು ಯಾಕೆ ಗೊತ್ತಾ?
ಮದುವೆಯಾದ ಬಳಿಕವೂ ಹಿರಿತೆರೆ ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ಭಾನುಪ್ರಿಯ ಅವರಿಗೆ ಗಂಡನ ಅಗಲಿಕೆ ಅಘಾತವಾದ ನೋವನ್ನು ತಂದೊಡ್ಡಿ ಬಿಡುತ್ತದೆ.
ಹಳ್ಳಿ ಮೇಷ್ಟ್ರು ಸಿನಿಮಾ ನಟಿ ಬಿಂದಿಯಾ ಚಿತ್ರರಂಗ ತೊರೆದಿದ್ದು ಯಾಕೆ? ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ?
ಹೌದು ಗೆಳೆಯರೇ, ಭಾನುಪ್ರಿಯವರು ಡಿಜಿಟಲ್ ಗ್ರಾಫಿಕ್ ಇಂಜಿನಿಯರ್ ಆದಂತಹ ಆದರ್ಶ ಕೌಶಲ್ ಎಂಬುವರೊಂದಿಗೆ 14 ಜೂನ್ 1998 ರಂದು ವೆಂಕಟೇಶ್ವರ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಕ್ಯಾಲಿಫೋರ್ನಿಯಾಗೆ ಹಾರಿದರು.
ಇವರ ಸಂಪೂರ್ಣ ಕುಟುಂಬವೂ ಅಲ್ಲಿಯೇ ನೆಲೆಸಿತು. 2002ರಲ್ಲಿ ನಟಿ ಭಾನುಪ್ರಿಯ ಹಾಗೂ ಕೌಶಲ್ ದಂಪತಿಗೆ ಒಂದು ಹೆಣ್ಣು ಮಗು ಜನಿಸುತ್ತದೆ. ಹೀಗೆ ಮಗುವಿನ ಆರೈಕೆಯಲ್ಲಿ ತೊಡಗಿಕೊಂಡ ಭಾನುಪ್ರಿಯ ಮಗಳು ಬೆಳೆದು ದೊಡ್ಡವಳಾದ ಮೇಲೆ ಮತ್ತೆ ಸಿನಿಮಾ ರಂಗಕ್ಕೆ ಮರಳುವ ಸಲುವಾಗಿ ಭಾರತಕ್ಕೆ ಬಂದರು.
ಚೆನ್ನೈನಲ್ಲಿ ಅಮ್ಮ ಮಗಳು ನೆಲೆಸಿದ್ದರೆ ಪತಿ ಕ್ಯಾಲಿಫೋರ್ನಿಯಾದಲ್ಲಿ ವಾಸವಿದ್ದರು. ಆದರೆ ದಿಡೀರ್ ಎಂದು 2018ರಲ್ಲಿ ಅವರ ಪತಿ ಹೃದಯಘಾತ ಸಮಸ್ಯೆಯಿಂದ ತೀರಿಕೊಂಡ ಬೆನ್ನಲ್ಲೇ ನಟಿ ಭಾನುಪ್ರಿಯ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ.
ನೂರಾರು ಸಿನಿಮಾಗಳ ಸರದಾರ ವಜ್ರಮುನಿ ಒಂದು ಸಿನಿಮಾದಲ್ಲಿ ನಟಿಸಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?
ಹೌದು ಕಳೆದ ಕೆಲವು ದಿನಗಳ ಹಿಂದೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ನನಗೆ ಮೆಮೊರಿ ಲಾಸ್ ಆಗುತ್ತಿದೆ, ಯಾವುದು ಡೈಲಾಗನ್ನು ಕೂಡ ನೆನಪಿಟ್ಟುಕೊಂಡು ಹೇಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಿನಿಮಾರಂಗದಿಂದ ನಾನು ದೂರ ಉಳಿಯಬೇಕಿದೆ ಎಂಬ ಹೇಳಿಕೆಯನ್ನು ನೀಡಿದರು.
ಈ ಕಾರಣದಿಂದಾಗಿ ಇದ್ದಂತಹ ಕೆಲವು ಸಿನಿಮಾಗಳ ಅವಕಾಶವು ಭಾನುಪ್ರಿಯ ಅವರ ಕೈತಪ್ಪಿ ಹೋಗುತ್ತಿದ್ದು, ವಯಸ್ಸಾಗುತ್ತಿರುವ ಕಾರಣದಿಂದ ಭಾನುಪ್ರಿಯ ಅವರು ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.
Do You Know the Actress Bhanupriya Real Life Story
Follow us On
Google News |