ರಾಜ್ಯಕ್ಕೆ ಮುಖ್ಯಮಂತ್ರಿ ಆಗಬಹುದಾಗಿದ್ದ ಡಾ ರಾಜಕುಮಾರ್ ಅವರು ರಾಜಕೀಯಕ್ಕೆ ಬರದಿರಲು ಅಸಲಿ ಕಾರಣವೇನು ಗೊತ್ತಾ?
ಆಗಿನ ಕಾಲದಲ್ಲಿ ಡಾಕ್ಟರ್ ರಾಜಕುಮಾರ್ ಅವರು ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಬಹುದೊಡ್ಡ ಮಟ್ಟದಲ್ಲಿ ಹರಿದಾಡುತ್ತಿತ್ತು, ಆದರೆ ಇದೆಲ್ಲ ಗಾಳಿ ಮಾತಾಗಿತ್ತೇ ಹೊರತು ಅಣ್ಣಾವ್ರು ಯಾವತ್ತೂ ರಾಜಕೀಯದ ಬಗ್ಗೆ ಒಲವು ತೋರಲೇ ಇಲ್ಲ.
ನಟಸಾರ್ವಭೌಮ ವರನಟ ಕಲಾರಸಿಕ ಗಾನಗಂಧರ್ವ ಕನ್ನಡಿಗರ ಕಲಾ ರತ್ನ ಬಂಗಾರದ ಮನುಷ್ಯ ಹೀಗೆ ಕನ್ನಡಿಗರು ಅಣ್ಣವ್ರನ್ನು ಕರೆಯುತ್ತಿದ್ದದ್ದು ಒಂದು ಅಥವಾ ಎರಡು ಹೆಸರಿನಿಂದಲ್ಲ.. ಡಾಕ್ಟರ್ ರಾಜಕುಮಾರ್ (Dr Rajkumar) ಅವರಂತಹ ಕಲಾಕೌಸ್ತುಬಾ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಇದ್ದದ್ದು ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆ ಎಂದರೆ ತಪ್ಪಾಗಲಿಕ್ಕಿಲ್ಲ.
ಹೌದು ಗೆಳೆಯರೇ ಅಂದಿನ ಕಾಲದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಕೋಟ್ಯಾಂತರ ಜನರ ಹೃದಯ ಗೆದ್ದು ವರ್ಷ ಒಂದರಲ್ಲಿಯೇ 18ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುತ್ತ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಂತಹ ರಾಜಕುಮಾರ್ ಅವರು ಮಾಡಿದ ಪ್ರತಿಯೊಂದು ಸಿನಿಮಾಗಳು ಹಿಟ್ ಪಟ್ಟಿಗೆ ಸೇರುತ್ತಿತ್ತು.
ಆಗಿನ ಕಾಲದಲ್ಲೇ ಹೀಗೆ ಸಿನಿಮಾ ರಂಗದಲ್ಲಿ (Sandalwood Cinema) ಉನ್ನತ ಮಟ್ಟದ ಯಶಸ್ಸನ್ನು ಕಂಡಂತಹ ಅಣ್ಣಾವ್ರು ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಬಹುದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಆದರೆ ಗಾಳಿ ಸುದ್ದಿಗಳು ಡಾಕ್ಟರ್ ರಾಜಕುಮಾರ್ ರಾಜಕೀಯದ ನಂಟನ್ನು ಬೆಸೆದುಕೊಳ್ಳಲೇ ಇಲ್ಲ.
ಹಾಗಾದ್ರೆ ಅಣ್ಣಾವ್ರು ರಾಜಕೀಯ ಪ್ರವೇಶ ಮಾಡದಿರಲು ಮುಖ್ಯ ಕಾರಣವೇನು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ದುಡ್ಡಿನ ಆಸೆಗೆ ಪ್ರೇಮಿಯನ್ನೇ ಕೊಂದ ರಿವೇಂಜ್ ಸ್ಟೋರಿ ಯುಗಪುರುಷ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?
ಹೌದು ಆಗಿನ ಕಾಲದಲ್ಲಿ ಡಾಕ್ಟರ್ ರಾಜಕುಮಾರ್ ಅವರು ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಬಹುದೊಡ್ಡ ಮಟ್ಟದಲ್ಲಿ ಹರಿದಾಡುತ್ತಿತ್ತು, ಆದರೆ ಇದೆಲ್ಲ ಗಾಳಿ ಮಾತಾಗಿತ್ತೇ ಹೊರತು ಅಣ್ಣಾವ್ರು ಯಾವತ್ತೂ ರಾಜಕೀಯದ ಬಗ್ಗೆ ಒಲವು ತೋರಲೇ ಇಲ್ಲ. ಈ ಕುರಿತು ಸ್ಪಷ್ಟವಾದ ಮಾಹಿತಿ ಅಣ್ಣಾವ್ರ ಕುಟುಂಬಕ್ಕೆ ಮಾತ್ರ ತಿಳಿದೆ.
ಹೀಗೆ ಅಪಪ್ರಚಾರಗಳು ಕೇಳಿ ಬರುತ್ತಿದಂತಹ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ್ ಅಪ್ಪಾಜಿ ನೀವೇಕೆ ರಾಜಕೀಯಕ್ಕೆ ಹೋಗುತ್ತಿಲ್ಲ ಎಂದು ಪ್ರಶ್ನೆ ಮಾಡಿದಾಗ ಅಣ್ಣವರು “ಕಂದ ಬಬ್ರುವಾಹನ ಚಿತ್ರ ನೋಡಿದಿಯಾ? ಅದರಲ್ಲಿ ಅರ್ಜುನನ ವದೆಗೆ ಒಂದು ಬಾಣವನ್ನು ಮೀಸಲಿಟ್ಟಿರುತ್ತಾರೆ. ಅದರಲ್ಲಿ ಆತನ ಪ್ರಾಣಾಹಾನಿ ಬರೆದಿರುತ್ತದೆ. ಒಬ್ಬ ವ್ಯಕ್ತಿಯನ್ನು ಮಣಿಸಲು ನನ್ನನ್ನು ಬಾಣದ ರೀತಿ ಬಳಸಿಕೊಳ್ಳಲು ಬಯಸಿದರೆ ತಪ್ಪು.
ಈಗಿನ ಪ್ಯಾನ್ ಇಂಡಿಯಾ ಸಿನಿಮಾ ಬಿಡಿ, ಆಗಿನ ನಾಗರಹಾವು ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ?
ನನ್ನಿಂದ ಒಳ್ಳೆಯ ಕೆಲಸ ಮಾಡಿಸಿಕೊಳ್ಳುವ ಇಚ್ಛೆ ಇಲ್ಲ… ಒಮ್ಮೆ ಪ್ರಯೋಗಿಸಿದ ಬಾಣದಲ್ಲಿ ನನ್ನನ್ನು ಬಳಸಿ ಬಿಟ್ಟು ಬಿಡಲಿದ್ದಾರೆ ನನಗೆ ಬಾಣವಾಗಿ ಬಳಕೆಯಾಗಲು ಇಷ್ಟವಿಲ್ಲ ನನ್ನಿಂದ ಇತರರಿಗೆ ಒಳಿತಾಗಬೇಕೆ ಹೊರತು ಕೆಡಕಾಗಬಾರದು.
ಗಾಂಧಿಯಿಂದ ಈ ದೇಶ ಸರಿಪಡಿಸಲು ಆಗಲಿಲ್ಲ ಇನ್ನು ಈ ರಾಜಕುಮಾರನಿಂದ ಸರಿಯಾಗಲು ಸಾಧ್ಯವೇ?” ಎಂದು ಅಣ್ಣಾವ್ರು ಹೇಳಿದುಂಟು. ಹೀಗೆ ಮಹಾತ್ಮ ಗಾಂಧಿಯವರಿಂದ ಆಗದಂತಹ ಕೆಲಸ ನನ್ನಿಂದ ಮಾಡಲು ಸಾಧ್ಯವೇ ಎಂದರಂತೆ ಅಣ್ಣಾವರು..
ಚಿತ್ರರಂಗದಲ್ಲಿ ಮಿಂಚುತ್ತಿದ್ದ ನಟಿ ವಿನಯಾ ಪ್ರಸಾದ್ ಧಿಡೀರ್ ಎರಡನೇ ಮದುವೆಯಾಗಲು ಕಾರಣವೇನು ಗೊತ್ತಾ?
ನಾನ್ನೆಂದಿಗೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಕಡಾ ಖಂಡಿತವಾಗಿ ಅಣ್ಣಾವ್ರು ಹೇಳಿಬಿಟ್ಟಿದ್ದರು. ಅಷ್ಟೇ ಅಲ್ಲದೆ ನನ್ನ ಸೇವೆ ಅಗತ್ಯವಿದ್ದರೆ ಗೋಕಾಕ್ ಚಳುವಳಿಯಂತೆ ಕರ್ನಾಟಕದ ಜನತೆ ಕರೆಸಿಕೊಳ್ಳುತ್ತಾರೆ, ನನ್ನಿಂದ ಇತರರಿಗೆ ಉಪಯೋಗವಾಗಬೇಕೆ ಹೊರತು ಯಾವುದೇ ಸಣ್ಣ ಕೇಡು ಆಗಬಾರದೆಂದು ಬಯಸುತ್ತಿದ್ದಂತಹ ಮಹಾನ್ ಕಲಾವಿದ ನಮ್ಮ ನಿಮ್ಮೆಲ್ಲರ ಪ್ರೀತಿಯ ಅಣ್ಣಾವ್ರು.
Do you know the Reason for why Dr Rajkumar did not enter politics