ದುಡ್ಡಿನ ಆಸೆಗೆ ಪ್ರೇಮಿಯನ್ನೇ ಕೊಂದ ರಿವೇಂಜ್ ಸ್ಟೋರಿ ಯುಗಪುರುಷ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?

ವಿ ರವಿಚಂದ್ರನ್, ಖುಷ್ಬೂ, ಮೂನ್ ಮೂನ್ ಸೆನ್, ವಜ್ರಮುನಿ, ರಾಮಕೃಷ್ಣ ಸೇರಿದಂತೆ ಸಾಕಷ್ಟು ಸ್ಟಾರ್ ಕಲಾವಿದರು ಯುಗಪುರುಷ ಸಿನಿಮಾದಲ್ಲಿ ಅಭಿನಯಿಸಿದರು.

ಸ್ನೇಹಿತರೆ ರವಿಚಂದ್ರನ್ (Actor Ravichandran) ಅವರ ಯಶಸ್ವಿ ಸಿನಿಮಾಗಳ ಪಟ್ಟಿಯಲ್ಲಿ ಯುಗಪುರುಷ ಸಿನಿಮಾ (Yuga Purusha Movie) ಅಗ್ರಸ್ಥಾನದಲ್ಲಿ ನಿಲ್ಲುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ, ಒಂದೊಳ್ಳೆ ಪ್ರೇಮ ಕಥೆ (Love Story), ಡಿ ರಾಜೇಂದ್ರ ಬಾಬು ಅವರ ಅದ್ಭುತ ನಿರ್ದೇಶನ ಹಾಗೂ ಹಂಸಲೇಖ ಅವರ ಸಂಗೀತ ಸಂಯೋಜನೆ ಎಲ್ಲವೂ ಸಿನಿಮಾಗೆ ಹೇಳಿ ಮಾಡಿಸಿದಂತಿತ್ತು.

ಹೀಗೆ ರಿವೆಂಜ್ ಸ್ಟೋರಿ ಆಧರಿತ ಕಥಾವಸ್ತುವನ್ನು ಹೊಂದಿರುವಂತಹ ಈ ಕನ್ನಡ ಸಿನಿಮಾ (Kannada Cinema) ಬಿಡುಗಡೆಯಾದ ಸಮಯದಲ್ಲಿ ಎಷ್ಟು ಕೋಟಿ ಹಣವನ್ನು ತನ್ನ ಗಲ್ಲ ಪೆಟ್ಟಿಗೆಗೆ ಬಾಚಿಕೊಂಡಿತು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಬಿ ಸರೋಜಾ ದೇವಿ ಅವರ ಮೊದಲ ಸಿನಿಮಾ ಯಾವುದು ಮತ್ತು ಅವರು ಚಿತ್ರರಂಗಕ್ಕೆ ಬಂದಾಗ ವಯಸ್ಸು ಎಷ್ಟಿತ್ತು ಗೊತ್ತ?

ದುಡ್ಡಿನ ಆಸೆಗೆ ಪ್ರೇಮಿಯನ್ನೇ ಕೊಂದ ರಿವೇಂಜ್ ಸ್ಟೋರಿ ಯುಗಪುರುಷ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ? - Kannada News

ಹೌದು ಸ್ನೇಹಿತರೆ ಮೇ ನಾಲ್ಕನೇ ತಾರೀಕು 1989ರಂದು ತೆರೆಕಂಡಂತಹ ಈ ಯುಗಪುರುಷ ಸಿನಿಮಾದಲ್ಲಿ ಬಹು ದೊಡ್ಡ ತಾರಾ ಬಳಗವೇ ಸೇರ್ಪಡೆಯಾಗಿತ್ತು ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೇ ವಿ ರವಿಚಂದ್ರನ್, ಖುಷ್ಬೂ, ಮೂನ್ ಮೂನ್ ಸೆನ್, ವಜ್ರಮುನಿ, ರಾಮಕೃಷ್ಣ ಸೇರಿದಂತೆ ಸಾಕಷ್ಟು ಸ್ಟಾರ್ ಕಲಾವಿದರು ಯುಗಪುರುಷ ಸಿನಿಮಾದಲ್ಲಿ ಅಭಿನಯಿಸಿದರು.

ಚಿತ್ರರಂಗದಲ್ಲಿ ಮಿಂಚುತ್ತಿದ್ದ ನಟಿ ವಿನಯಾ ಪ್ರಸಾದ್ ಧಿಡೀರ್ ಎರಡನೇ ಮದುವೆಯಾಗಲು ಕಾರಣವೇನು ಗೊತ್ತಾ?

ಅದರಂತೆ ಡಿ ರಾಜೇಂದ್ರ ಬಾಬು ಅವರ ಅದ್ಭುತ ನಿರ್ದೇಶನ ಹಾಗೂ ಚಿ ಉದಯ್ ಶಂಕರ್ ಕಥೆ ಎಲ್ಲವೂ ಸಿನಿಮಾದ ಪ್ಲಸ್ ಪಾಯಿಂಟ್. ಇನ್ನು ಈ ಒಂದು ಚಿತ್ರವನ್ನು ಅನುರಾಧ ಸಿಂಗ್, ದುಶಾಂತ ಸಿಂಗ್ ಹಾಗೂ ಅಮೃತ ಸಿಂಗ್ ಎಂಬುವವರು ನಿರ್ಮಾಣ ಮಾಡಿದರು.

Kannada Actor Ravichandran - Yuga Purusha Movie

ಇನ್ನು ನಾದಬ್ರಹ್ಮ ಹಂಸಲೇಖ ಅವರ ಅದ್ಭುತ ಸಂಗೀತ ಸಂಯೋಜನೆ ಈ ಸಿನಿಮಾಗಿತ್ತು, ಹೀಗೆ ಮ್ಯೂಸಿಕಲ್ ಹಿಟ್ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಂತಹ ಯುಗಪುರುಷ ಸಿನಿಮಾವು ಪುನರ್ಜನ್ಮದ ಕುರಿತಾದ ಕಥಾ ವಸ್ತುವನ್ನು ಹೊಂದಿದ್ದು, ಅಲ್ಲಿ ರಾಜನ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ತನ್ನ ಹಿಂದಿನ ಜನ್ಮದಲ್ಲಿ ಹೊಸದಾಗಿ ಮದುವೆಯಾದ ಹೆಂಡತಿಯಿಂದ ಕೊಲ್ಲಲ್ಪಟ್ಟ ನಾಯಕನ ಕಥೆ ಇದಾಗಿದ್ದು, ಹೊಸ ಜನ್ಮವನ್ನು ತೆಗೆದುಕೊಂಡ ನಂತರ ಮನುಷ್ಯನು ತನ್ನ ಹಿಂದಿನ ಜೀವನದ ಹೆಂಡತಿಯ ವಿರುದ್ಧ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬ ರಿವೆಂಜ್ ಸ್ಟೋರಿ ಈ ಚಿತ್ರದ್ದಾಗಿದೆ.

ಕನ್ನಡ ಹಾರರ್ ಸಿನಿಮಾ “ಶ್” ಚಿತ್ರ ಅಂದಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ಇನ್ನು ರಾಜ ಎಂಬ ಪಾತ್ರದಲ್ಲಿ ರವಿಚಂದ್ರನ್ ಅಭಿನಯಿಸಿದ್ದರೆ ಚಿತ್ರ ಪಾತ್ರಕ್ಕೆ ಖುಷ್ಬು ಜೀವ ತುಂಬಿದ್ದಾರೆ. ಅದರಂತೆ ಸಿನಿಮಾದಲ್ಲಿ ಬರುವಂತಹ ಕಾಮಿನಿಯ ಪಾತ್ರಕ್ಕೆ ಮೂನ್ ಮೂನ್ ಸೇನ್ ಅವರು ಅಭಿನಯಿಸಿದ್ದಾರೆ.

ಇನ್ನು ಶಾಂತದೇವಿಯ ಪಾತ್ರದಲ್ಲಿ ಲೀಲಾವತಿ ಅಮ್ಮನವರು ಅಭಿನಯಿಸಿದ್ದಾರೆ, ವಜ್ರಮುನಿಯವರ ಅತ್ಯದ್ಭುತ ಖಳನಟನೆ ಚಿತ್ರದಲ್ಲಿ ಮೂಡಿ ಬಂದಿತ್ತು. ಹೀಗೆ ಬಹು ದೊಡ್ಡ ತಾರಾ ಬಳಗದಲ್ಲಿ ಈ ಒಂದು ಸಿನಿಮಾ ತಯಾರಾಗಿ ಬಿಡುಗಡೆಗೊಂಡಂತಹ ಸಮಯದಲ್ಲಿ ಬ್ಲಾಕ್ಬಸ್ಟರ್ ನಲ್ಲಿ ದಾಖಲೆಯನ್ನು ಸೃಷ್ಟಿ ಮಾಡಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ.

ಈಗಿನ ಪ್ಯಾನ್ ಇಂಡಿಯಾ ಸಿನಿಮಾ ಬಿಡಿ, ಆಗಿನ ನಾಗರಹಾವು ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ?

ಹೌದು ಗೆಳೆಯರೇ ಸಿನಿಮಾ ಬಿಡುಗಡೆಯಾದ ಮೊದಲ ದಿನ ಬರೋಬ್ಬರಿ 20,000 ಹಣವನ್ನು ತನ್ನ ಗಲ್ಲ ಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ಹೌಸ್ ಫುಲ್ ಪ್ರದರ್ಶನವನ್ನು ಕಾಣಲಾರಂಭಿಸಿತು. ಹೀಗೆ ಬರೋಬ್ಬರಿ ಒಂದು ತಿಂಗಳುಗಳ ಕಾಲ ಚಿತ್ರ ತೆರೆಯ ಮೇಲೆ ರಾರಾಜಿಸಿ ಬರೋಬ್ಬರಿ 50 ಲಕ್ಷ ರೂಪಾಯಿ ಹಣವನ್ನು ಗಳಿಕೆ ಮಾಡಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

V Ravichandran Starrer Kannada Yuga Purusha Movie Collections

Follow us On

FaceBook Google News

V Ravichandran Starrer Kannada Yuga Purusha Movie Collections

Read More News Today